Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮೆಡಿಕಲ್‌ಗಳ ಔಷಧಿ ಸೇವಿಸುವ ಮುಂಚೆ ಸ್ವಲ್ಪ ಆಲೋಚಿಸಿ!
ಕೆಲವು ಔಷಧಿಗಳನ್ನು ನಾವು ವೈದ್ಯರ ಸಲಹೆಯಿಲ್ಲದೇ ಖರೀದಿಸಿ ಯಾವುದೇ ಅಳುಕಿಲ್ಲದೇ ಬಳಸುತ್ತೇವೆ. ಉದಾಹರಣೆಗೆ ಶೀತವಾದರೆ ವಿಕ್ಸ್, ಮೈ ಕೈ ನೋವಾದರೆ ಪ್ಯಾರಾಸೆಟಮಾಲ್ ಮಾತ್ರೆ. ಏಕೆಂದರೆ ಇವನ್ನು ಬಳಸಿದವರು ತಮಗೆ ಆರಾಮವಾಗಿರುವುದನ್ನು ಬೇರೆಯವರಿಗೂ ಉಚಿತ ಸಲಹೆಯ ಮೂಲಕ ಹೇಳುತ್ತಾ ಬಂದಿದ್ದಾರೆ.
ಔಷಧಿ ಅಂಗಡಿಯವರೇ ಕೆಲವೊಮ್ಮೆ ರೋಗಿಯ ರೋಗಲಕ್ಷಣಗಳನ್ನು ತಿಳಿದು ಸೂಕ್ತವಾದ ಮಾತ್ರೆಗಳನ್ನು ನೀಡುವುದುಂಟು. ಈ ಔಷಧಿಗಳು ಪೂರ್ಣವಾಗಿ ಸುರಕ್ಷಿತ ಎಂದು ನಂಬಿ ಜನರು ಮನೆಯಲ್ಲಿ ಕೊಂಚ ದಾಸ್ತಾನು ಇರಿಸಿಕೊಂಡಿರುತ್ತಾರೆ. ಆದರೆ ಕೆಲವು ಔಷಧಿಗಳ ನಿರಂತರ ಸೇವನೆ ನಿಮ್ಮನ್ನು ಅನಾರೋಗ್ಯಕ್ಕೆ ತಳ್ಳಬಹುದು. ಇದಕ್ಕೆ ಜ್ವಲಂತ ಉದಾಹರಣೆ ಎಂದರೆ ಬ್ಯಾರಲ್ಗಾನ್ (baralgan) ಎಂಬ ಮಾತ್ರೆ.
ಆದರೆ ನಾವು ಸೇವಿಸುವ ಮಾತ್ರೆ ಮತ್ತಿತರ ಔಷಧಿಗಳು ನಮ್ಮ ತೂಕದ ಹೆಚ್ಚಳಕ್ಕೆ ಇನ್ನಷ್ಟು ಕಾರಣವಾಗುತ್ತದೆ ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು. ಸಾಮಾನ್ಯವಾಗಿ ತಲೆನೋವು, ಜ್ವರ, ಶೀತ, ಹೊಟ್ಟೆ ನೋವು, ಇನ್ನಿತರ ಸಣ್ಣ ಪುಟ್ಟ ನೋವುಗಳಿಗೆ ಮಾರುಕಟ್ಟೆಯಲ್ಲಿ, ಮೆಡಿಕಲ್‌ಗಳಲ್ಲಿ ಸುಲಭವಾಗಿ ದೊರೆಯುವ ಔಷಧಿಗಳನ್ನು, ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸರ್ವೇಸಾಮಾನ್ಯ. ಈ ಬಗ್ಗೆ ದೇಹಲಿಯ ಸೈಕಾಲಜಿಸ್ಟ್ & ಸೈಕೋಅನಾಲಿಟಿಕಲ್ ಚಿಕಿತ್ಸಕ ಡಾಕ್ಟರ್ ಪುಲ್ಕಿತ್ ಶರ್ಮ ಅವರು ಇಂತಹ ಔಷಧಿಗಳಿಂದ ದೇಹದ ತೂಕದ ಮೇಲೆ ಪರಿಣಾಮ ಬೀರುವ ಆರು ಮುಖ್ಯ ಔಷಧಿಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದಾರೆ, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...

ಖಿನ್ನತೆ ದೂರಮಾಡುವ ಔಷಧಿ
ಖಿನ್ನತೆ ದೂರಮಾಡುವ ಔಷಧಿ ತೂಕದ ಮೇಲೆ ಅಪಾರವಾದ ಪರಿಣಾಮವನ್ನು ಬೀರುತ್ತದೆ. ಕೆಲವರಿಗೆ ಖಿನ್ನತೆಯ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ತೂಕ ಹೆಚ್ಚುತ್ತದೆ ಮತ್ತು ಇನ್ನು ಕೆಲವರಿಗೆ ಇದು ತೂಕ ಕಡಿಮೆ ಮಾಡಿಬಿಡಬಹುದು. ಮೋನೊಅಮೈನ್ ಆಕ್ಸಿಡೇಸ್ ಪ್ರತಿರೋಧಕಗಳು ಮತ್ತು ಟ್ರೈಸೈಕ್ಲಿಕ್ ಎಂಬ ಪ್ರತಿರೋಧಕಗಳು ತೂಕವನ್ನು ಹೆಚ್ಚಿಸುತ್ತವೆ ಎಂಬುದು ಸಾಬೀತಾಗಿದೆ ಎನ್ನಲಾಗುತ್ತದೆ.

ಗರ್ಭ ನಿರೋಧಕಗಳು
ಗರ್ಭ ನಿರೋಧಕಗಳನ್ನು ಬಳಸುವ ಸಾಕಷ್ಟು ಜನರು ಅಧಿಕ ತೂಕವನ್ನು ಪಡೆಯುವ ಸಂಭವವಿದೆ. ಗರ್ಭನಿರೋಧಕ ಬಳಸುವವರ ತೂಕ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆಯಾದರೂ ಸಂಶೋಧನೆಯ ಮೂಲಕ ಇನ್ನೂ ಸಾಬೀತಾಗಿಲ್ಲ. ಆದ್ದರಿಂದ ಗರ್ಭನಿರೋಧಕಗಳು ತೂಕ ಹೆಚ್ಚುತ್ತವೆ ಎಂಬುದು ಇನ್ನೂ ಸರಿಯಾಗಿ ನಿರ್ಧರಿತವಾಗಿಲ್ಲ.

ನಿದ್ರೆ ಮಾತ್ರೆಗಳು
ಇತ್ತೀಚಿನ ದಿನಗಳಲ್ಲಿ ದೊರೆಯುವ ನಿದ್ರೆ ಮಾತ್ರೆಗಳು ಹಿಂದೆ ದೊರೆಯುವ ಸ್ಲೀಪಿಂಗ್ ಮಾತ್ರೆಗಳಿಗೆ ಹೋಲಿಸಿದರೆ ಸುರಕ್ಷಿತ ಎನ್ನಲಾಗುತ್ತದೆ. ಮಾತ್ರೆಯಲ್ಲಿ ಮೆಲಟೋನಿನ್ ಅಂಶವಿದ್ದರೆ ಅದು ತೂಕ ಹೆಚ್ಚಿಸುತ್ತದೆ. ನೀವು ಇನ್ಸೋಮೇನಿಯ ಕಾಯಿಲೆಯಿಂದ ಬಳಲುತ್ತಿದ್ದರೆ ಮಾತ್ರೆ ತೆಗೆದುಕೊಳ್ಳುವುದಕ್ಕಿಂತ ಕಾಗ್ನೆಟಿವ್ ಬಿಹೇವಿಯರ್ ಥೆರಪಿ ಮಾಡಿಸಿಕೊಳ್ಳುವುದು ಒಳ್ಳೆಯದು.

ಮೈಗ್ರೇನ್ ಔಷಧಿ
ಮೈಗ್ರೇನ್ ಮೆಡಿಸಿನ್ ತೆಗೆದುಕೊಳ್ಳುವುದರಿಂದ ತೂಕ ಹೆಚ್ಚುತ್ತದೆ ಎನ್ನಲಾಗುತ್ತದೆ. ಆದರೆ ಮೈಗ್ರೇನ್‌ಗೆ ಬಳಸುವ ಔಷಧಿಗಳಲ್ಲಿ ತೂಕ ಹೆಚ್ಚುವುದಕ್ಕಿಂತ ತೂಕ ಕಡಿಮೆ ಮಾಡುವ ಅಂಶ ಹೆಚ್ಚಿರುತ್ತದೆ. ಅದರೂ ಕೂಡ ತೂಕ ಕಡಿಮೆ ಮಾಡುವುದರ ಜೊತೆಗೆ ಇತರ ಅಡ್ಡ ಪರಿಣಾಮಗಳನ್ನೂ ತರಬಹುದಾದ ಈ ಔಷಧಿ ಸೇವಿಸುವುದನ್ನು ತಪ್ಪಿಸಿ.

ಸ್ಟೀರಾಯಿಡ್ಸ್
ಸ್ಟೀರಾಯಿಡ್ಸ್ ಸಾಮಾನ್ಯವಾಗಿ ತೂಕ ಹೆಚ್ಚಿಸುತ್ತದೆ. ಆದಾಗ್ಯೂ ತೂಕ ಹೆಚ್ಚಳವು ನೀವು ಬಳಸುವ ಪ್ರಮಾಣದ ಮೇಲೆ ಅವಲಂಭಿತವಾಗಿದೆ. ಸ್ಟೀರಾಯಿಡ್ಸ್ ಮಾತ್ರೆಗಳನ್ನು ಅಧಿಕವಾಗಿ ಬಳಸಿದಲ್ಲಿ ಬೇಡದ ಜಾಗದಲ್ಲಿ ಹೆಚ್ಚು ಕೊಬ್ಬು ಶೇಖರಣೆ ಮಾಡುತ್ತದೆ.

ಡಯಾಬಿನಸ್,ಇನ್ಸುಲೇಸ್ (ಕ್ಲೋರ್ ಪ್ರೋಪಮೈಡ್)
ಈ ಔಷಧಿಗಳು ಕೆಲವರಲ್ಲಿ ತೂಕ ಹೆಚ್ಚಿಸಬಹುದು ಅಥವಾ ಕೆಲವರಲ್ಲಿ ತೂಕ ಕಡಿಮೆ ಮಾಡಬಹುದು. ಆದ್ದರಿಂದ ತಜ್ಞರಿಂದ ಸರಿಯಾದ ಮಾಹಿತಿ ಪಡೆದು ಈ ಔಷಧಿಗಳನ್ನು ತೆಗೆದುಕೊಳ್ಳುವುದು ಒಳಿತು ಜೊತೆಗೆ ಸರಿಯಾದ ಆಹಾರ ಮತ್ತು ವ್ಯಾಯಾಮಗಳನ್ನೂ ಮಾಡಬೇಕು.



Click it and Unblock the Notifications










