Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಪ್ರಥಮ ಚಿಕಿತ್ಸೆ ದಿನಾಚರಣೆ: ಇಂತಹ ಟಿಪ್ಸ್ ನೆನಪಿರಲಿ
ಪ್ರಥಮ ಚಿಕಿತ್ಸೆ ಎಂಬುದು ಮನುಷ್ಯನಿಗೆ ಸಂಜೀವಿನಿಯಂತಹ ಚಿಕಿತ್ಸೆಯಾಗಿರುತ್ತದೆ. ಎಷ್ಟೋ ಬಾರಿ ಪ್ರಥಮ ಚಿಕಿತ್ಸೆಗಳು ಮನುಷ್ಯನ ಜೀವನದ ಅಳಿವು ಮತ್ತು ಉಳಿವನ್ನು ನಿರ್ಧರಿಸಿ ಬಿಡುತ್ತವೆ. ಇಂತಹ ಚಿಕಿತ್ಸೆಗಳ ಕುರಿತು ಎಲ್ಲರೂ ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಪ್ರಥಮ ಚಿಕಿತ್ಸೆಯನ್ನು ಕೆಲವೊಮ್ಮೆ ಒಬ್ಬರು ಇನ್ನೊಬ್ಬರಿಗೆ ನೀಡಬಹುದು. ಇನ್ನೂ ಕೆಲವೊಮ್ಮೆ ನಾವೇ ಸ್ವತಃ ಮಾಡಿಕೊಳ್ಳಬಹುದು.
ಈ ಅಂಕಣದಲ್ಲಿ ನೀವು ಶೀಘ್ರವಾಗಿ ಮತ್ತು ತುರ್ತಾಗಿ ನೀಡಬಹುದಾದ ಪ್ರಥಮ ಚಿಕಿತ್ಸೆಗಳ ಸಲಹೆಯನ್ನು ಕುರಿತು ತಿಳಿದುಕೊಳ್ಳಲಿದ್ದೀರಿ. ಇಂತಹ ಹಲವು ಬಗೆಯ ಪ್ರಥಮ ಚಿಕಿತ್ಸೆಗಳನ್ನು ಮತ್ತು ಅವುಗಳನ್ನು ನೀಡಬಹುದಾದ ಪರಿಸ್ಥಿತಿಗಳ ಕುರಿತು ಇಂದು ನಾವು ತಿಳಿಸಿಕೊಡುತ್ತೇವೆ. ಈ ಪ್ರಥಮ ಚಿಕಿತ್ಸೆಯನ್ನು ಮನೆಯಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಎರಡೂ ಕಡೆ ನೀಡಬಹುದು.
ಇದಕ್ಕಾಗಿ ನೀವು ಮಾರುಕಟ್ಟೆಯಲ್ಲಿ ದೊರೆಯುವ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮೇಲೆಯೇ ಅವಲಂಬಿಸಬೇಕಾಗಿಲ್ಲ, ಬದಲಿಗೆ ಮನೆಯಲ್ಲಿಯೇ ದೊರೆಯುವ ಕೆಲವೊಂದು ವಸ್ತುಗಳನ್ನು ಬಳಸಿಕೊಂಡು ಈ ಪ್ರಥಮ ಚಿಕಿತ್ಸೆಯನ್ನು ನೀವು ಸುಟ್ಟ ಗಾಯಗಳಿಗೆ ನೀಡಿಕೊಳ್ಳಬಹುದು...

ಪ್ರಜ್ಞೆ ತಪ್ಪಿದಾಗ ಮತ್ತು ಉಸಿರಾಡದೆ ಇದ್ದಾಗ
ಪ್ರಜ್ಞೆ ತಪ್ಪಿದ ವ್ಯಕ್ತಿಯನ್ನು ಮೊದಲು ನೆಲದ ಮೇಲೆ ಮುಖವನ್ನು ಕೆಳಗೆ ಮಾಡಿ ಮಲಗಿಸಿ. ಆತನ ಎದೆಯ ಮಧ್ಯ ಭಾಗದಲ್ಲಿ ಆತನಿಗೆ ನಿಧಾನವಾಗಿ ಒತ್ತಿ. ಈ ಒತ್ತುವಿಕೆಯಿಂದ ಆತನ ಹೃದಯದಲ್ಲಿ ರಕ್ತ ಪರಿಚಲನೆ ಎಂದಿನಂತೆ ಆರಂಭಗೊಳ್ಳುತ್ತದೆ. ಆದರೆ ಈ ಪ್ರಥಮ ಚಿಕಿತ್ಸೆಯನ್ನು ನೀಡಿದ ಮೇಲೆ ವೈದ್ಯರಿಂದ ಪರೀಕ್ಷಿಸುವುದನ್ನು ಮರೆಯಬೇಡಿ.

ಉಸಿರುಗಟ್ಟಿಸುವಿಕೆ
ಇದು ಸಾಮಾನ್ಯವಾಗಿ ಊಟ ಮಾಡುವಾಗ ಮಾತನಾಡುವುದರಿಂದ ಅಥವಾ ನಗುವುದರಿಂದ ಸಂಭವಿಸುತ್ತದೆ. ಆಗ ಬೆನ್ನ ಮೇಲೆ ಚೆನ್ನಾಗಿ ತಡವಿ. ಇದರಿಂದ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿರುವ ಆಹಾರವು ಅನ್ನ ನಾಳದಲ್ಲಿ ಸರಾಗವಾಗಿ ಇಳಿದು ಹೋಗುತ್ತದೆ.

ರಕ್ತ ಸ್ರಾವವನ್ನು ತಡೆಯಲು
ಗಾಯದ ಮೇಲೆ ಒತ್ತಡ ಹಾಕಿ, ಬಿಗಿಯಾಗಿ ಹಿಡಿದುಕೊಳ್ಳಿ. ಇದರಿಂದ ರಕ್ತ ಸ್ರಾವ ನಿಲ್ಲುತ್ತದೆ. ಜೊತೆಗೆ ಗಾಯವು ಸಹ ಬೇಗ ಒಣಗುತ್ತದೆ. ಇದು ರಕ್ತ ಸ್ರಾವವನ್ನು ಬೇಗ ತಡೆಯುತ್ತದೆ.

ಸುಟ್ಟ ಗಾಯಗಳು
ಸುಟ್ಟ ಗಾಯದ ಮೇಲೆ ಐಸ್ ಕ್ಯೂಬ್ ಅಥವಾ ಟೂಥ್ ಪೇಸ್ಟ್ ಅನ್ನು ತಕ್ಷಣ ಇಡಿ ಅಥವಾ ಲೇಪಿಸಿ. ಇದು ಗುಳ್ಳೆಗಳು ಬರದಂತೆ ತಡೆಯುತ್ತದೆ. ಇದು ತುಂಬಾ ಪ್ರಯೋಜನಕಾರಿಯಾದ ಪ್ರಥಮ ಚಿಕಿತ್ಸೆಗಳಲ್ಲಿ ಒಂದಾಗಿದೆ.

ಮೂಳೆ ಮುರಿತ
ಮುರಿದ ಭಾಗವನ್ನು ಯಾವುದೇ ಕಾರಣಕ್ಕು ಅಲುಗಾಡಿಸಬೇಡಿ. ಇದರಿಂದ ಪರಿಸ್ಥಿತಿ ಮತ್ತಷ್ಟು ಹಾಳಾಗುತ್ತದೆ. ಮೂಳೆ ಮುರಿದ ಭಾಗವನ್ನು ಅಲುಗಾಡದಂತೆ ಬಟ್ಟೆಯಲ್ಲಿ ಕಟ್ಟಿಕೊಂಡು, ಊತ ಬರುವ ಮೊದಲು ವೈದ್ಯರ ಬಳಿಗೆ ತಪಾಸಣೆಗೆ ಹೋಗಿ.

ಹೃದಯಾಘಾತ
ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯು ಆ ಕ್ಷಣದಲ್ಲಿ ಕುಳಿತಿರುವಂತೆ ನೋಡಿಕೊಳ್ಳಿ. ಇದರಿಂದ ಹೃದಯದ ಮೇಲೆ ಮತ್ತಷ್ಟು ಒತ್ತಡ ಬೀಳುವುದು ತಪ್ಪುತ್ತದೆ. ರೋಗಿಗೆ ಪ್ರಥಮ ಚಿಕಿತ್ಸೆಯನ್ನು ನೀಡುತ್ತಿರುವುದು ಆತನ ಒಳ್ಳೆಯದಕ್ಕೆ ಎಂಬುದನ್ನು ಮನವರಿಕೆ ಮಾಡಿಕೊಡಿ. ಅದಷ್ಟು ಅವರ ಉದ್ವಿಗ್ನತೆಯನ್ನು ಕಡಿಮೆ ಮಾಡಿ.



Click it and Unblock the Notifications