Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಪಾನ್ ಬೀಡಾದ ಸಿಹಿ 'ಗುಲ್ಕಂದ್' ಆರೋಗ್ಯದ ಕೀಲಿಕೈ!
ಗುಲ್ಕಂದ್ ಎಂದರೆ ಪಾನ್ ಬೀಡಾದಲ್ಲಿ ಸಿಹಿ ಮತು ಸುವಾಸನೆ ಮೂಡಿಸಲು ಸೇರಿಸುವ ಒಂದು ಪದಾರ್ಥ. ಇದರ ಹೊರತಾಗಿ ಗುಲ್ಕಂದ್ ಬಳಕೆ ಇನ್ನೆಲ್ಲೂ ಸಾಮಾನ್ಯವಾಗಿ ಕೇಳಿಬರುವುದಿಲ್ಲ. ಆದರೆ ಪ್ರತ್ಯೇಕವಾಗಿ ಪರಿಗಣಿಸಿದಾಗ ಇದೊಂದು ಉತ್ತಮ ಔಷಧಿಯ ರೂಪದಲ್ಲಿಯೂ ಬಳಸಬಹುದು. ಮುಖ್ಯವಾಗಿ ಅಜೀರ್ಣ, ನಾರಿಲ್ಲದ ಕಳಪೆ ಆಹಾರದ ಸೇವನೆ ಮೊದಲಾದ ಕಾರಣಗಳಿಂದ ಉಂಟಾಗುವ ಮಲಬದ್ಧತೆ ಮತ್ತು ಆಮ್ಲೀಯತೆಯನ್ನು ತಕ್ಷಣ ಕಡಿಮೆಮಾಡುತ್ತದೆ.
ಅತಿಯಾದ ಮದ್ಯಪಾನ, ಮಾನಸಿಕ ಒತ್ತಡ, ಉದ್ವೇಗ, ಅತಿಯಾದ ಧೂಮಪಾನ ಮೊದಲಾದ ಕಾರಣಗಳಿಂದಲೂ ಉಂಟಾಗುವ ಆಮ್ಲೀಯತೆಯನ್ನು ಗುಲ್ಕಂದ್ ನಿವಾರಿಸಲು ಸಮರ್ಥವಾಗಿದೆ. ಇನ್ನುಳಿದಂತೆ ಆಮ್ಲೀಯತೆಗೆ ಅತಿ ಖಾರದ, ಅತಿಯಾದ ಎಣ್ಣೆ ಇರುವ ಆಹಾರಗಳು, ಆಹಾರವನ್ನು ಕ್ಲುಪ್ತಕಾಲಕ್ಕೆ ಸೇವಿಸದೇ ಇರುವುದು, ಅತಿ ಹೆಚ್ಚಾಗಿ ತಿನ್ನುವುದು, ಬೇಗಬೇಗನೇ ತಿನ್ನುವುದು ಮೊದಲಾದವೆಲ್ಲಾ ಕಡಿಮೆ ಪ್ರಕೋಪದ ಆಮ್ಲೀಯತೆ ಮತ್ತು ಹುಳಿತೇಗಿಗೆ ಕಾರಣವಾಗುತ್ತವೆ. ಈ ಉರಿಗೂ ಗುಲ್ಕಂದ್ ಸೇವನೆ ಉತ್ತಮ ಪರಿಹಾರ ನೀಡುತ್ತದೆ. ಬನ್ನಿ, ಇದರ ಇತರ ಆರೋಗ್ಯಕರ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಆಮ್ಲೀಯತೆಗೆ ಸೂಕ್ತ ಔಷಧಿಯಾಗಿದೆ
ಗುಲ್ಕಂದ್ ಎಂದರೆ ಯಾವುದೋ ಸ್ವರ್ಗದಿಂದ ಇಳಿದುಬಂದ ಔಷಧಿಯಲ್ಲ. ಗುಲಾಬಿ ಹೂವಿನ ದಳಗಳನ್ನು ಸಕ್ಕರೆಯ ಪಾಕದಲ್ಲಿ ಕರಗಿಸಿ ಮಾಡಿರುವ ದ್ರವ್ಯ. ಆಮ್ಲೀಯತೆಗೆ ತಕ್ಷಣ ಪರಿಹಾರ ನೀಡುವ ಈ ಅದ್ಭುತ ಔಷಧಿ ಆಯುರ್ವೇದದ ಔಷಧಿಗಳಲ್ಲಿಯೇ ಅತ್ಯಂತ ಸಿಹಿಯುಳ್ಳದ್ದಾಗಿದೆ. ಊಟದ ಬಳಿಕ ಒಂದು ಚಮಚ ಗುಲ್ಕಂದ್ ಅನ್ನು ಹಾಗೇ ಅಥವಾ ನೀರಿನೊಂದಿಗೆ ಬೆರೆಸಿ ಕುಡಿಯಬಹುದು.

ಜಡತ್ವವನ್ನು ಕಡಿಮೆಗೊಳಿಸುತ್ತದೆ
ಸಾಮಾನ್ಯವಾಗಿ ಊಟವಾದ ಬಳಿಕ ಜಡತ್ವ ಆವರಿಸುತ್ತದೆ. ಕೊಂಚ ಹೊತ್ತಿಗಾದರೆ ಪರವಾಗಿಲ್ಲ, ಇಡಿಯ ದಿನ ಈ ಜಡತ್ವ ಆವರಿಸಿದ್ದರೆ? ಇದಕ್ಕೆ ಗುಲ್ಕಂದ್ ಉತ್ತಮ ಪರಿಹಾರವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಜಡತ್ವವನ್ನು ಕಡಿಮೆಗೊಳಿಸುತ್ತದೆ
ಜೊತೆಗೇ ತುರಿಕೆ, ಸ್ನಾಯುಗಳ ನೋವು, ಸುಸ್ತು, ಬಿಸಿ ಮತ್ತು ಸೆಖೆಯಲ್ಲಿ ಅತಿ ಹೆಚ್ಚು ಹೊತ್ತು ಕಳೆಯುವ ಮೂಲಕ ದಣಿದ ಶರೀರ ಮೊದಲಾದವುಗಳಿಗೂ ಗುಲ್ಕಂದ್ ಉತ್ತಮವಾಗಿದೆ. ಅಲ್ಲದೇ ನೀರಿನಲ್ಲಿ ಕದಡಿ ಕುಡಿಯುವ ಮೂಲಕ ರಕ್ತವನ್ನು ಶುದ್ಧೀಕರಿಸುತ್ತದೆ ಹಾಗೂ ಕಣ್ಣಿನ ದೃಷ್ಟಿ ಮತ್ತು ಸ್ಮರಣಶಕ್ತಿಯನ್ನೂ ಹೆಚ್ಚಿಸುತ್ತದೆ.

ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮಗಳಿಂದ ರಕ್ಷಿಸುತ್ತದೆ
ಕೆಲವು ಬಗೆಯ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆಯ ರೂಪದಲ್ಲಿ ರೇಡಿಯೋಥೆರಪಿ ಮತ್ತು ಖೀಮೋಥೆರಪಿಗಳನ್ನು ನಡೆಸಿದ ಬಳಿಕ ಹಲವಾರು ಅಡ್ಡಪರಿಣಾಮಗಳು ಎದುರಾಗುತ್ತವೆ. (ತಲೆ ಬೋಳಾಗುವುದು ಇದರಲ್ಲಿ ಒಂದು). ಗುಲ್ಕಂದ್ ಈ ಅಡ್ಡಪರಿಣಾಮಗಳಿಗೆ ಅಡ್ಡಗೋಡೆಯಾಗಿ ನಿಂತು ಶರೀರವನ್ನು ರಕ್ಷಿಸುತ್ತದೆ.

ಕರುಳಿನ ಹುಣ್ಣಿನಿಂದ ರಕ್ಷಿಸುತ್ತದೆ
ಕೆಲವೊಮ್ಮೆ ಆಹಾರದಲ್ಲಿ ಆಮ್ಲೀಯತೆ ಹೆಚ್ಚುವ ಕಾರಣ ಜೀರ್ಣಾಂಗಗಳ ಒಳಪದರ ಅಪಾರವಾಗಿ ಬಾಧೆಗೊಳಗಾಗುತ್ತವೆ. ಅದರಲ್ಲೂ ಸೂಕ್ಷ್ಮಭಾಗಗಳು ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತವೆ. ಜಠರದಿಂದ ಸಣ್ಣಕರುಳಿಗೆ ಆಹಾರ ದಾಟುವ ಸ್ಥಳದಲ್ಲಿ (duodenun) ಈ ಪ್ರಭಾವ ಅತಿಯಾಗಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕರುಳಿನ ಹುಣ್ಣಿನಿಂದ ರಕ್ಷಿಸುತ್ತದೆ
ಜೊತೆಗೆ ಈ ಸ್ಥಳದಲ್ಲಿ ಹುಣ್ಣುಗಳಾಗುವ ಸಾಧ್ಯತೆ ಹೆಚ್ಚುತ್ತದೆ. (duodenal ulcer) ಬಳಿಕ ಕರುಳುಗಳ ಒಳಭಾಗ ಮತ್ತು ಜೀರ್ಣಾಂಗಗಳ ಅಷ್ಟೂ ಒಳಭಾಗದಲ್ಲಿ ಹುಣ್ಣುಗಳಾಗುವ ಸಾಧ್ಯತೆ ಇರುತ್ತದೆ. ಗುಲ್ಕಂದ್ ಈ ಆಮ್ಲವನ್ನು ನಿರ್ಜೀವಗೊಳಿಸಿ ಈ ಎಲ್ಲಾ ತೊಂದರೆಗಳಿಂದ ರಕ್ಷಿಸುತ್ತದೆ.

ಅತಿಮೂತ್ರದಿಂದ ರಕ್ಷಿಸುತ್ತದೆ
ಕೆಲವರಲ್ಲಿ ಮೂತ್ರಕೋಶದ ಸಾಮರ್ಥ್ಯ ಕೆಲವು ಕಾರಣಗಳಿಂದ ಕಡಿಮೆಗಾಗಿದ್ದು ಪದೇ ಪದೇ ಮೂತ್ರಕ್ಕೆ ಅವಸರವಾಗುತ್ತದೆ. ಇವರಿಗೆ ಗುಲ್ಕಂದ್ ಉತ್ತಮವಾಗಿದೆ. ಇದು ಮೂತ್ರಕೋಶದ ಸಾಮರ್ಥ್ಯ ಹೆಚ್ಚಿಸಿ ಈ ತೊಂದರೆಯಿಂದ ಕಾಪಾಡುತ್ತದೆ. ಮಹಿಳೆಯರಿಗೆ ಕಾಡುವ ಮಾಸಿಕ ರಜಾದಿನಗಳ ನೋವು, ಬಿಳಿಸೆರಗು ಮೊದಲಾದ ತೊಂದರೆಗಳಿಂದಲೂ ರಕ್ಷಿಸುತ್ತದೆ.

ಜೀರ್ಣಕ್ರಿಯೆ ಹೆಚ್ಚಿಸುತ್ತದೆ
ಊಟದ ಬಳಿಕ ಗುಲ್ಕಂದ್ ಸೇವಿಸುವ ಮೂಲಕ ಜೀರ್ಣಕ್ರಿಯೆಯನ್ನು ಹೆಚ್ಚಿಸಬಹುದು. ಇದರ ಪರಿಣಾಮವಾಗಿ ವಾಂತಿ, ವಾಕರಿಕೆ ಮೊದಲಾದ ತೊಂದರೆಗಳನ್ನು ನಿವಾರಿಸಬಹುದು. ಅಲ್ಲದೇ ಬೆವರಿನಲ್ಲಿ ದುರ್ಗಂಧ ಮತ್ತು ಮೊಡವೆಗಳು ಮೂಡುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಬಾಯಿಹುಣ್ಣಿಗೂ ಉತ್ತಮವಾಗಿದೆ
ಬಾಯಿಯ ಒಳಭಾಗ, ಅಂದರೆ ನಾಲಿಗೆಯ ಮೇಲೆ, ತುಟಿ ಮತ್ತು ಕೆನ್ನೆಗಳ ಒಳಭಾಗದ ಚರ್ಮದಲ್ಲಿ ಆವರಿಸುವ ಹುಣ್ಣುಗಳು (mouth ulcers) ಗುಲ್ಕಂದ್ ನೀರನ್ನು ಮುಕ್ಕಳಿಸಿ ಸೇವಿಸುವ ಮೂಲಕ ಕಡಿಮೆಯಾಗುತ್ತವೆ. ಅಲ್ಲದೇ ಒಸಡು ಮತ್ತು ಹಲ್ಲುಗಳು ಸಹಾ ದೃಢಗೊಳ್ಳುತ್ತವೆ. ಅಲ್ಲದೇ ಇದನ್ನು ಸೇವಿಸುವ ಮೂಲಕ ಪುರುಷತ್ವ ಹೆಚ್ಚುತ್ತದೆ. ಉತ್ತಮ ಕಾಮೋತ್ತೇಜಕವೂ ಆಗಿರುವ ಗುಲ್ಕಂದ್ ದಂಪತಿಯರಿಗೂ ಉತ್ತಮವಾಗಿದೆ.

ಹೃದಯ ಬಡಿತದ ಏರುಪೇರು ಸರಿಪಡಿಸುತ್ತದೆ
ಹೃದಯದ ಹಲವಾರು ತೊಂದರೆಗಳಿಗೂ ಗುಲ್ಕಂದ್ ಉತ್ತಮವಾಗಿದೆ. ಇದು ಹೃದಯದ ತೊಂದರೆಗೆ ನೀಡಿರುವ ಔಷಧಿಗಳ ಪರಿಣಾಮ ಸರಿಯಾಗಿ ಆಗುವಲ್ಲಿ ಸಹಕರಿಸುತ್ತದೆ. ಜೊತೆಗೇ ಹೃದಯ ಬಡಿತದ ಏರುಪೇರುಗಳನ್ನು, ಅತಿ ರಕ್ತದ ಒತ್ತಡ ಮತ್ತು ಅತಿಯಾದ ಒತ್ತಡದ ಮೂಲಕ ಸಂಭವಿಸುವ ಹೃದಯಾಘಾತವನ್ನೂ ತಪ್ಪಿಸುತ್ತದೆ.

ಮೂಗಿನಿಂದ ರಕ್ತ ಬರುವುದನ್ನು ತಪ್ಪಿಸುತ್ತದೆ
ಕೆಲವರಿಗೆ ಸಾಮಾನ್ಯವಾಗಿ ಸೆಖೆಗಾಲದಲ್ಲಿ ಮೂಗಿನೊಳಗಿನಿಂದ ರಕ್ತ ಬರುತ್ತದೆ. ಇದಕ್ಕೆ ಕಾರಣವೇನೆಂದರೆ ಮೂಗಿನ ಒಳಭಾಗದ ಚರ್ಮ (ಕೂದಲು ಇರುವ ಚರ್ಮ ಮುಗಿಯುವಲ್ಲಿ) ಅತಿ ತೆಳುವಾಗಿದ್ದು ಸೆಖೆಯ ಕಾರಣ ಸುಲಭವಾಗಿ ಹರಿಯುತ್ತದೆ. ಗುಲ್ಕಂದ್ ಸೇವನೆಯಿಂದ ಈ ಭಾಗದಲ್ಲಿ ಉತ್ತಮ ಪೋಷಣೆ ದೊರೆತು ರಕ್ತ ಹರಿಯುವ ಸಾಧ್ಯತೆ ಕಡಿಮೆಯಾಗುತ್ತದೆ. ಅಲ್ಲದೇ ಹಸ್ತ ಮತ್ತು ಪಾದಗಳಲ್ಲಿ ಉರಿ, ಸೂಜಿ ಚುಚ್ಚಿದಂತಾಗುವುದು, ಮಾನಸಿಕ ಒತ್ತಡ ಮೊದಲಾದ ತೊಂದರೆಗಳಿಂದ ಕಾಪಾಡುತ್ತದೆ. ಅಲ್ಲದೇ ನರವ್ಯವಸ್ಥೆಯನ್ನು ಉತ್ತಮಪಡಿಸಲೂ ನೆರವಾಗುತ್ತದೆ.

ಮಲಬದ್ಧತೆಯಿಂದ ರಕ್ಷಿಸುತ್ತದೆ
ನಾರು ಇಲ್ಲದ ಅಹಾರದ ಸೇವನೆಯಿಂದ ಬಹಿರ್ದೆಶೆ ಬಹಳ ತಡವಾಗಿ ಆಗುತ್ತಿದ್ದರೆ ಗುಲ್ಕಂದ್ ಸೇರಿಸಿದ ನೀರನ್ನು ಕುಡಿಯುವ ಮೂಲಕ ಬಹಿರ್ದೆಶೆ ಸುಲಭವಾಗುತ್ತದೆ.

ಆಹಾರಗಳ ಸಿಹಿಯನ್ನೂ ಹೆಚ್ಚಿಸುತ್ತದೆ
ಮೇಲಿನ ಎಲ್ಲಾ ಪರಿಣಾಮಗಳನ್ನು ಒಂದೆರಡು ಬಾರಿ ಸೇವಿಸುವ ಮೂಲಕ ಪಡೆಯಲು ಸಾಧ್ಯವಿಲ್ಲ. ನಿಯಮಿತವಾಗಿ ಸೇವಿಸುವ ಮೂಲಕ ಮಾತ್ರ ಪಡೆಯಬಹುದು. ಆದ್ದರಿಂದ ಇದನ್ನು ಹಾಗೇ ಸೇವಿಸುವ ಬದಲು ಹೇಗೂ ಸಕ್ಕರೆ ಸೇರಿಸಬೇಕಾದ ಸಿಹಿ ಮತ್ತು ಇತರ ಪದಾರ್ಥಗಳಲ್ಲಿ ಸಕ್ಕರೆಯ ಅಥವಾ ಬೆಲ್ಲದ ಬದಲಿಗೆ ಸೇರಿಸಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಪಡೆಯಬಹುದು. ಇನ್ನೊಂದು ವಿಧಾನವೆಂದರೆ ರಾತ್ರಿ ಕುಡಿಯುವ ಹಾಲಿನಲ್ಲಿ ಗುಲ್ಕಂದ್ ಸೇರಿಸಿ ಕುಡಿಯುವುದು.

ಗುಲ್ಕಂದ್ ಸೇವನೆಯ ಮಿತಿ
ಇದರಲ್ಲಿ ಸಕ್ಕರೆ ಅಪಾರ ಪ್ರಮಾಣದಲ್ಲಿರುವ ಕಾರಣ ಇದರ ಸೇವನೆ ಮಧುಮೇಹಿಗಳಿಗೆ ಸಲ್ಲದು. ಅತಿ ಹೆಚ್ಚು ಪೋಷಕಾಂಶ ಮತ್ತು ಶಕ್ತಿ ನೀಡುವ ಕಾರಣ ಸ್ಥೂಲದೇಹಿಗಳಿಗೂ ಇದು ಸೂಕ್ತವಲ್ಲ. ಆದರೆ ಸ್ಥೂಲದೇಹಿಗಳು ತಮ್ಮ ನಿತ್ಯದ ಸಕ್ಕರೆಯ ಬದಲಿಗೆ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಉಪಯುಕ್ತವಾಗಬಲ್ಲುದು.
Image courtesy - en.wikipedia.org
Author Dforest



Click it and Unblock the Notifications











