Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಪೋಷಕಾಂಶ ಭರಿತ ಆಹಾರ- ಇದುವೇ ಆರೋಗ್ಯದ ಗುಟ್ಟು
"ಆರೋಗ್ಯವೇ ಮಹಾಭಾಗ್ಯ" ಆರೋಗ್ಯವೊಂದಿದ್ದರೆ, ನಮ್ಮ ಜೀವನದಲ್ಲಿ ನಾವು ಏನು ಬೇಕಾದರು ಸಾಧಿಸಬಹುದು. ಅದನ್ನು ಗಳಿಸಲು ಪ್ರಕೃತಿಯು ನಮಗೆ ಹಲವಾರು ಆಹಾರ ಪದಾರ್ಥಗಳನ್ನು ನಮಗಾಗಿ ನೀಡಿದೆ. ಈ ಆಹಾರ ಪದಾರ್ಥಗಳು ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತವೆ, ಜೊತೆಗೆ ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸಿ, ಕಾಯಿಲೆಗಳಿಂದ ಗುಣಮುಖ ಮಾಡುತ್ತವೆ.
ಪ್ರತಿಯೊಬ್ಬರು ತಮಗೆ ಒಪ್ಪುವಂತಹ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ಏಕೆಂದರೆ ಎಲ್ಲಾ ಆಹಾರ ಪದಾರ್ಥಗಳು ಎಲ್ಲರಿಗೂ ಒಪ್ಪಿಗೆಯಾಗುವುದಿಲ್ಲ. ಇದು ವ್ಯಕ್ತಿ ಮತ್ತು ಆತನಿಗಿರುವ ಕಾಯಿಲೆ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಅವುಗಳನ್ನೆಲ್ಲ ಗಮನಿಸಿ, ನಂತರ ನೀವು ಸೇವಿಸ ಬೇಕಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ. ಅದಕ್ಕೆ ಹೇಳುವುದು "ಊಟ ಬಲ್ಲವನಿಗೆ ರೋಗವಿಲ್ಲ" ಎಂದು. ಪುರುಷರ ಆಕರ್ಷಕ ಮೈಕಟ್ಟಿಗೆ ಸತ್ವಯುತ ಆಹಾರ
ಕೆಲವೊಂದು ಆಹಾರ ಪದಾರ್ಥಗಳು, ಕೆಲವೊಂದು ನಿರ್ದಿಷ್ಟ ರೋಗಗಳನ್ನು ಗುಣಪಡಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಅದಕ್ಕೆ ಸೂಕ್ತವಾದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವು ತಜ್ಞರ ಸಲಹೆಯನ್ನು ಸಹ ಪಡೆಯಬಹುದು. ಎಲ್ಲಾ ವಿನಾಯಿತಿಗಳನ್ನು ಮರೆತುಬಿಡಿ, ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವೊಂದು ಆಹಾರವನ್ನು ಯಾವುದೇ ನೆಪ ಹೇಳದೆ ಸೇವಿಸಲು ಆರಂಭಿಸಿ. ಇದರಿಂದ ನಿಮ್ಮ ಒಟ್ಟಾರೆ ಆರೋಗ್ಯವು ಸುಧಾರಿಸುತ್ತದೆ. ನೀವು ಕಾಯಿಲೆ ಬೀಳುವುದು ತಪ್ಪುತ್ತದೆ. ಅಂತಹ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಸ್ವಲ್ಪ ತಾಳಿ, ಒಪ್ಪೊತ್ತಿನ ಊಟ ಬಿಡುವ ಮೊದಲು ಇತ್ತ ಗಮನಿಸಿ

ಒಣ ಹಣ್ಣುಗಳು
ಇವುಗಳಲ್ಲಿ ಅಗತ್ಯ ಪ್ರಮಾಣದ ಕೊಬ್ಬಿನ ಆಮ್ಲಗಳು ಅಧಿಕವಾಗಿರುತ್ತವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಮ್ಮ ದೇಹದಿಂದ ನಿವಾರಿಸಿ, ನಿಮ್ಮ ದೇಹ ಮತ್ತು ಹೃದಯವನ್ನು ಆರೋಗ್ಯವಾಗಿಡುತ್ತವೆ. ಅಲ್ಲದೆ ನಿಮ್ಮ ಮಾನಸಿಕ ಏಕಾಗ್ರತೆಯನ್ನು ಹೆಚ್ಚಿಸಿ, ದೇಹದ ಊತವನ್ನು ಕಡಿಮೆ ಮಾಡುತ್ತವೆ. ಬಾದಾಮಿಗಳು ನಿಮ್ಮ ದೇಹವು ಕರುಳುಗಳಿಂದ ರಕ್ತದ ಮೂಲಕ ವಿಟಮಿನ್‌ಗಳನ್ನು ಹೀರಿಕೊಳ್ಳಲು ಸಹಕರಿಸುತ್ತದೆ.

ಆಲೂಗಡ್ಡೆಗಳು
ಯಾವುದೇ ಕಾರಣಕ್ಕು ಆಲೂಗಡ್ಡೆಗಳನ್ನು ಸೇವಿಸಿದರೆ ದೇಹದ ತೂಕ ಹೆಚ್ಚಿಸುತ್ತವೆ ಎಂದು ಉದಾಸೀನ ಮಾಡಬೇಡಿ. ಇವು ಸಹ ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತವೆ. ಇವುಗಳಲ್ಲಿ ಕೇವಲ ಕಾರ್ಬೋಹೈಡ್ರೇಟ್‌ಗಳಲ್ಲದೆ, ವಿಟಮಿನ್ ಸಿ ಮತ್ತು ಬಿ ಕಾಂಪ್ಲೆಕ್ಸ್‌ನಂತಹ ಹಲವಾರು ವಿಟಮಿನ್‌ಗಳು ಸಹ ಇರುತ್ತವೆ. ಆಲೂಗಡ್ಡೆಗಳಲ್ಲಿ, ಸಮೃದ್ಧವಾದ ಕಬ್ಬಿಣಾಂಶ ಮತ್ತು ಮೆಗ್ನಿಷಿಯಂ ಸಹ ಇರುತ್ತವೆ.

ಕೊಬ್ಬಿನ ಆಮ್ಲಗಳು
ಸಾಲ್ಮನ್, ಟುನಾ, ಮ್ಯಾಕ್ರೆಲ್‌ನಂತಹ ಮೀನುಗಳಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು, ಸೆಲೆನಿಯಂ, ಮೆಗ್ನಿಷಿಯಂ, ಪೊಟಾಶಿಯಂ ಮತ್ತು ಪ್ರೋಟೀನ್‌ಗಳು ಸಹ ಅಧಿಕವಾಗಿರುತ್ತವೆ. ಈ ಮೀನುಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇವುಗಳು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲನ್ನು ಕಡಿಮೆ ಮಾಡುವುದರ ಜೊತೆಗೆ ಇದರಲ್ಲಿ ವಿಟಮಿನ್ ಬಿ ಕಾಂಪ್ಲೆಕ್ಸ್ ಇರುವುದರಿಂದಾಗಿ ಇವು ಮೂಳೆಗಳನ್ನು ಸದೃಢಗೊಳಿಸುತ್ತವೆ ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಕ್ಲ್ಯಾಮ್‌ಗಳು ಮತ್ತು ಕಪ್ಪೆ ಚಿಪ್ಪುಗಳು
ಎಲ್ಲಾ ಬಗೆಯ ಕಪ್ಪೆ ಚಿಪ್ಪುಗಳು, ಕ್ಲ್ಯಾಮ್‌ಗಳು ಮತ್ತು ಓಯಿಸ್ಟರ್‌ಗಳು ಸಮೃದ್ಧವಾದ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಸತು, ಪೊಟಾಶಿಯಂ ಮತ್ತು ಇನ್ನಿತರ ಖನಿಜಾಂಶಗಳು ಇರುತ್ತವೆ. ಇದರ ಜೊತೆಗೆ ಇವುಗಳಲ್ಲಿ, ಕ್ಯಾಲ್ಸಿಯಂ ಮತ್ತು ಅಗತ್ಯ ಪ್ರಮಾಣದ ಕೊಬ್ಬಿನ ಆಮ್ಲಗಳು ಹೆಚ್ಚಾಗಿ ಇರುತ್ತವೆ. ಇವು ಮೂಳೆ ಮತ್ತು ಹೃದಯಕ್ಕೆ ಒಳ್ಳೆಯದು.

ಕೇಲ್
ಕೇಲ್ ಎಂಬ ಸೊಪ್ಪು ಸಮೃದ್ಧ ಪೋಷಕಾಂಶಗಳ ಆಗರ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ ಕಾಂಪ್ಲೆಕ್ಸ್ ಅಧಿಕ ಪ್ರಮಾಣದಲ್ಲಿರುತ್ತವೆ. ಈ ವಿಟಮಿನ್‌ಗಳ ಜೊತೆಗೆ ಕೇಲ್‌ನಲ್ಲಿ ಮೆಗ್ನಿಷಿಯಂ ಮತ್ತು ಪೊಟಾಶಿಯಂ ಅಧಿಕ ಪ್ರಮಾಣದಲ್ಲಿರುತ್ತವೆ. ಇದರಿಂದ ಆರೋಗ್ಯಕರ ಮೂಳೆಗಳು, ಆರೋಗ್ಯಕರ ಹೃದಯ ಮತ್ತು ರೋಗ ನಿರೋಧಕ ಶಕ್ತಿ ನಿಮ್ಮದಾಗುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯು ಅಧಿಕ ಕೊಲೆಸ್ಟ್ರಾಲ್ ನಿವಾರಿಸಲು ಮತ್ತು ಅಧಿಕ ರಕ್ತದೊತ್ತಡ ನಿವಾರಿಸಲು ಹೇಳಿ ಮಾಡಿಸಿದ ಆಹಾರ ಪದಾರ್ಥವಾಗಿರುತ್ತದೆ. ಇದರಲ್ಲಿ ಅಲ್ಲಿಸಿನ್ ಎಂಬ ಅಂಶವಿರುತ್ತದೆ. ಇದು ಆರೋಗ್ಯಕರ ಹೃದಯವನ್ನು ನಿರ್ಮಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ನಿವಾರಿಸುತ್ತದೆ.ಇದರ ಜೊತೆಗೆ ಬೆಳ್ಳುಳ್ಳಿಗಳಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ನಿಮ್ಮ ಮೂಳೆಗಳನ್ನು ಆರೋಗ್ಯವಂತವಾಗಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.



Click it and Unblock the Notifications
