Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚುಮುಚುಮು ಚಳಿಗೊಂದು ಬೆಚ್ಚನೆಯ ಕಷಾಯ
ಚಳಿಗಾಲ ಅಂದ್ರೆ ಬೆಚ್ಚಗೆ ಇರಬೇಕು.. .ಬೆಚ್ಚಗೆ ಇರಬೇಕು ಅಂದ್ರೆ ನಾವು ದೇಹಕ್ಕೆ ತೆಗೆದುಕೊಳ್ಳುವ ಆಹಾರ ಕೂಡ ಅಷ್ಟೇ ಇಂಪಾರ್ಟೆಂಟ್ ಆಗುತ್ತೆ. ಕಾಫಿ, ಟೀ ಸೇವನೆ ಯಾವ ಕಾಲಕ್ಕೂ ಹಿತವಾದುದ್ದಲ್ಲ. ಹಾಗಂತ ಜ್ಯೂಸ್ ಕುಡಿಯೋಣ ಅಂದ್ರೆ ಈ ಥಂಡಿಯ ವಾತಾವರಣದಲ್ಲಿ ಹೇಗಪ್ಪಾ ಕುಡಿಯೋದು ಅನ್ನಿಸುತ್ತೆ. ಇನ್ನು ಇತರೆ ಫ್ಲೇವರ್ಡ್ ಜ್ಯೂಸ್, ಕೂಲ್‌ಡ್ರಿಂಕ್ ಯಾವುದೂ ಕೂಡ ರುಚಿಸೋದಿಲ್ಲ ಸಮಯ ಇದಲ್ಲ. ರುಚಿಸಿದ್ರೂ ಆರೋಗ್ಯಕ್ಕೆ ಹಿತವಲ್ಲ. ಚಳಿಗಾಲ ಅಂದ್ರೆ ಬಿಸಿಬಿಸಿಯಾಗಿ ಏನಾದ್ರೂ ತಿನ್ನಬೇಕು, ಕುಡಿಬೇಕು ಅನ್ನಿಸುತ್ತೆ. ಇಂತಹ ಚಳಿಯ ವಾತಾವರಣಕ್ಕೆ ನಿಮ್ಮ ಆರೋಗ್ಯಕ್ಕೂ ಹಿತವೆನಿಸಿ, ನಿಮ್ಮ ಬಾಯಿಗೂ ರುಚಿ ಅನ್ನಿಸುವ ಸ್ಪೆಷಲ್ ಕಷಾಯದ ರೆಸಿಪಿಯೊಂದು ಇಲ್ಲಿದೆ ನೋಡಿ..

ಕಷಾಯ ಮಾಡಲು ಬೇಕಾಗುವ ಸಾಮಗ್ರಿಗಳು
. ಜೀರಿಗೆ - ಎರಡು ಸ್ಪೂನ್
. ಕೊತ್ತುಂಬರಿ ಬೀಜ - ಎರಡು ಸ್ಪೂನ್
. ಮೆಂತೆ - ಒಂದು ಸ್ಪೂನ್
. ಅರಿಶಿನ - ಕಾಲು ಸ್ಪೂನ್
. ಕಾಳುಮೆಣಸಿನ ಪುಡಿ ಇಲ್ಲವೇ ಪೆಪ್ಪರ್ ಪುಡಿ - ಮೂರು ಸ್ಪೂನ್
. ಶುಂಠಿ - ಒಂದು ಚಿಕ್ಕ ತುಂಡು
. ಅಂಬೆಶುಂಠಿ ಅಥ್ವಾ ಮಾವಿನಶುಂಠಿ- ಒಂದು ಚಿಕ್ಕ ತುಂಡು
. ತುಳಸಿ-ನಾಲ್ಕರಿಂದ ಐದು ಎಲೆಗಳು
. ಬೆಲ್ಲ - ಒಂದು ಬೆಲ್ಲದ ನೆಲ್ಲಿಕಾಯಿಯಷ್ಟು ದೊಡ್ಡ ತುಂಡು
. ಕೆಂಪು ಕಲ್ಲುಸಕ್ಕರೆ- ಬೆಲ್ಲದ ಗಾತ್ರದಷ್ಟೇ
. ಪುದೀನಾ - ನಾಲ್ಕರಿಂದ ಐದು ಎಲೆಗಳು
. ಏಲಕ್ಕಿ - ಎರಡು
. ಲವಂಗ - ಮೂರು
. ಕಸ್ತೂರಿ ಮೇಥಿ - ಎರಡರಿಂದ ಮೂರು ದಳಗಳು
. ಕೇಸರಿ - ಎರಡರಿಂದ ಮೂರು ದಳಗಳು
. ಬಾದಾಮಿ - ಐದು
. ಹಾಲು - ಒಂದು ಲೀಟರ್
ಮಾಡುವ ವಿಧಾನ
ಮೊದಲು ಒಂದು ಲೀಟರ್ ಹಾಲನ್ನು ಕಾಯಿಸಿಟ್ಟುಕೊಳ್ಳಿ.. ಬೇಕಾಗುವ ಸಾಮಾಗ್ರಿಯ ಪಟ್ಟಿಯಲ್ಲಿ ತಿಳಿಸಿರುವ ಪ್ರಮಾಣದಷ್ಟು ಜೀರಿಗೆ, ಮೆಂತ್ಯೆ, ಕೊತ್ತುಂಬರಿ ಬೀಜ, ಕಾಳುಮೆಣಸು, ಏಲಕ್ಕಿ, ಲವಂಗ, ಕಸ್ತೂರಿಮೇಥಿ, ಕೇಸರಿ, ಬಾದಾಮಿ, ಇವಿಷ್ಟನ್ನು ಮಿಕ್ಸಿಗೆ ಹಾಕಿ ಪುಡಿ ಮಾಡ್ಕೊಳ್ಳಿ. ಅಂಬೆಶುಂಠಿ ಅಥ್ವಾ ಮಾವಿನಶುಂಠಿ ಮತ್ತು ಶುಂಠಿಯನ್ನು ಸ್ವಲ್ಪ ರಸಬಿಟ್ಟುಕೊಳ್ಳುವಂತೆ ಜಜ್ಜಿಕೊಳ್ಳಿ. ಕಲ್ಲುಸಕ್ಕರೆ ಮತ್ತು ಬೆಲ್ಲವನ್ನೂ ಕುಟ್ಟಿ ಪುಡಿಮಾಡ್ಕೊಳ್ಳಿ. ಇಲ್ಲ ಅಂದ್ರೆ ಅದು ಹಾಲಿನಲ್ಲಿ ಕರಗಲು ಸಮಯ ತೆಗೆದುಕೊಳ್ಳುತ್ತೆ. ಹಾಗಂತ ಮಾಡಲೇಬೇಕು ಅಂತ ಏನಿಲ್ಲ. ಕರಗುವವರೆಗೆ ಹಾಲನ್ನು ಕುದಿಸಿದ್ರೂ ಯಾವುದೇ ಸಮಸ್ಯೆಯಾಗೋದಿಲ್ಲ. ಪುದೀನಾ ಮತ್ತು ತುಳಸಿ ದಳಗಳನ್ನು ಕ್ಲೀನ್ ಮಾಡಿ ಒಮ್ಮೆ ನೀರಿನಲ್ಲಿ ತೊಳೆದು ಸ್ವಚ್ಛ ಮಾಡಿಕೊಳ್ಳಿ.
ಬಿಸಿ ಹಾಲಿಗೆ ಮಿಕ್ಸಿ ಮಾಡಿದ ಪುಡಿ ಸೇರಿಸಿ ಕುದಿಸಿ.. ಮಸಾಲೆಯ ಕಷಾಯ ಪುಡಿ ಮಿಶ್ರಣ ಹಾಲಿನ ಬಣ್ಣವನ್ನು ಸ್ವಲ್ಪ ಬದಲಿಸುತ್ತೆ. ಒಂದು ನಿಮಿಷದ ನಂತ್ರ ಅದಕ್ಕೆ ಕಲ್ಲುಸಕ್ಕರೆ ಮತ್ತು ಬೆಲ್ಲವನ್ನು ಸೇರಿಸಿ ಕುದಿಯಲು ಬಿಡಿ. ನಂತ್ರ ಜಜ್ಜಿದ ಶುಂಠಿ ಮತ್ತು ಮಾವಿನಶುಂಠಿಯನ್ನು ಮಿಕ್ಸ್ ಮಾಡಿ ಕುದಿಸಿ. ಕಷಾಯಕ್ಕೊಂದು ವಿಶೇಷ ಫ್ಲೇವರ್ ನೀಡುವಲ್ಲಿ ಇದು ಬಹಳ ಸಹಕಾರಿ. ನಂತ್ರ ತುಳಸಿ ಮತ್ತು ಪುದೀನಾ ದಳಗಳನ್ನು ಹಾಕಿ ಕಷಾಯವನ್ನು 4 ರಿಂದ ಐದು ನಿಮಿಷ ಕುದಿಯಲು ಬಿಡಿ..
ಈಗಾಗಲೇ ಕಷಾಯ ಹಳದಿ ಬಣ್ಣಕ್ಕೆ ತಿರುಗಿರುತ್ತೆ. ಆದ್ರೆ ಅರಿಶಿನಪುಡಿ ಌಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿರುವುದರಿಂದಾಗಿ ಕಷಾಯಕ್ಕೆ ಅರಿಶಿನವನ್ನು ಬಳಕೆ ಮಾಡೋದು ಒಳಿತು. ಹಾಗಾಗಿ ಈ ಕಷಾಯಕ್ಕೂ ಅರಿಶಿನದ ಪುಡಿಯನ್ನು ಸೇರಿಸಿ.. ಒಂದು ಚಮಚ ಬಳಸಿ ಕಷಾಯವನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಕಷಾಯವನ್ನು ಸೋಸಿಕೊಳ್ಳಿ.. (ತೀರಾ ಖಾರ ಬೇಡ ಅನ್ನುವವರು ಕಡಿಮೆ ಕಷಾಯದ ಪುಡಿಯನ್ನು ಬಳಕೆ ಮಾಡ್ಬಹುದು) ಬಿಸಿಬಿಸಿಯಾಗಿರುವಾಗಲೇ ಕಷಾಯವನ್ನು ಸವಿದು ಬಿಡಿ.. ಪ್ರತಿ ದಿನ ಬೆಳಿಗ್ಗೆ ಈ ಕಷಾಯ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತೆ.
*ಕೇವಲ ಚಳಿಗಾಲಕ್ಕಾಗಿ ಮಾತ್ರವಲ್ಲ, ಕಾಯಿಲೆ ನಿವಾರಕವೂ ಹೌದು
ಕಾಫಿ, ಟೀ ಗಿಂತ ನಿಮ್ಮ ಆರೋಗ್ಯಕ್ಕೆ ಹಿತವೆನಿಸುವ ಕಷಾಯ ಇದು. ಕೇವಲ ಚಳಿಗಾಲಕ್ಕಾಗಿ ಮಾತ್ರವಲ್ಲ ಗಂಟಲು ಕಟ್ಟಿದ ಅನುಭವವಾದಾಗ.ಜ್ವರ, ನೆಗಡಿ. ಆವರಿಸಿದಾಗ ಕೂಡ ಈ ಕಷಾಯ ಸೇವನೆ ಒಳಿತು.. ಮೈ ಬೆಚ್ಚಗಿಡುವ ಸಾಮರ್ಥ್ಯ ಈ ಕಷಾಯಕ್ಕಿದೆ. ಪ್ರತಿಯೊಬ್ಬರ ಮನೆಯಲ್ಲೂ ತಯಾರಿಸ್ಬಹುದಾದ ಸಿಂಪಲ್ ಕಷಾಯ ಇದು..
*ಕೆಲವು ಪದಾರ್ಥಗಳು ಇಲ್ಲದೇ ಇದ್ರೂ ಕಷಾಯ ಮಾಡ್ಬಹುದು
ಕೇಸರಿ, ಬಾದಾಮಿ, ಮಾವಿನಕಾಯಿಶುಂಠಿ ಇವು ಕಷಾಯಕ್ಕೇ ಬೇಕೇಬೇಕಾಗಿರುವ ಪದಾರ್ಥಗಳಲ್ಲ. ಈ ಮೂರು ಪದಾರ್ಥಗಳು ಇಲ್ಲದೇ ಇದ್ದಾಗ್ಲೂ ಕಷಾಯ ತಯಾರಿಸ್ಬಹುದು. ಅಷ್ಟೇ ಅಲ್ಲ ಕೆಂಪುಕಲ್ಲುಸಕ್ಕರೆ ಇಲ್ಲದೇ ಇದ್ದಾಗ ಬೆಲ್ಲದ ಪ್ರಮಾಣವನ್ನು ಹೆಚ್ಚಿಸಿಕೊಂಡು ಕಷಾಯ ತಯಾರಿಸಿದ್ರೂ ಕೂಡ ಕಷಾಯ ಅದ್ಭುತವಾಗಿರುತ್ತೆ.
*ಫ್ರೆಷ್ ಆಗಿರುವ ಪದಾರ್ಥಗಳನ್ನೇ ಬಳಕೆ ಮಾಡಿ
ತುಳಸಿದಳ ಮತ್ತು ಪುದೀನಾ ದಳಗಳನ್ನು ಫ್ರೆಷ್ ಆಗಿರುವುದನ್ನೇ ಬಳಕೆ ಮಾಡಿ..ಕಷಾಯದಲ್ಲಿ ಯಾವುದೇ ಎಸೆನ್ಶಿಯಲ್‌ಗಳನ್ನು ಬಳಕೆ ಮಾಡ್ಬೇಡಿ.. ಅಷ್ಟೇ ಅಲ್ಲ, ಯಾವುದೇ ಪ್ರಿಸರ್‌ವೇಟಿವ್ ಪದಾರ್ಥಗಳನ್ನು ಬಳಕೆ ಮಾಡ್ಬೇಡಿ.. ಶುಂಠಿಯ ಪೇಸ್ಟ್‌ಗಳೆಲ್ಲ ಮಾರುಕಟ್ಟೆಯಲ್ಲಿ ಸಿಗುತ್ತೆ. ಅವುಗಳನ್ನು ತಂದು ಕಷಾಯಕ್ಕೆ ಬಳಕೆ ಮಾಡದೇ ಇರೋದು ಒಳಿತು. ಬದಲಾಗಿ ಶುದ್ಧವಾಗಿರುವ ಶುಂಠಿಯನ್ನು ಕುಟ್ಟಿ ಹಸಿಶುಂಠಿಯನ್ನೇ ಬಳಕೆ ಮಾಡೋದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೇದು.. ಇಲ್ಲವೇ ಶುಂಠಿಯನ್ನು ನೀವೇ ಒಣಗಿಸಿ ಪುಡಿ ಮಾಡಿ ಇಟ್ಕೊಂಡಿದ್ರೆ ಅದನ್ನು ಬಳಕೆ ಮಾಡ್ಬಹುದು. ಇನ್ನು ತುಳಸಿ ಮತ್ತು ಪುದೀನಾ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಇಟ್ಟಿಕೊಂಡಿರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
