ನೆನೆಸಿಟ್ಟ ಧಾನ್ಯ, ಬೀಜ ಸೇವಿಸಿದರೆ ಹತ್ತಾರು ಅನುಕೂಲಗಳು

By manu

ಮೊಳಕೆ ಬರಿಸಿದ ಹೆಸರು ಕಾಳಿನಿಂದ ಹಲವು ಖಾದ್ಯಗಳನ್ನು ಮನೆಯಲ್ಲಿ ಆಗಾಗ ತಯಾರಿಸುತ್ತಾರೆ. ಅದರಲ್ಲೂ ಗರ್ಭಿಣಿಯರಿಗೆ ಮತ್ತು ಅಶಕ್ತರಿಗೆ ಮೊಳಕೆ ಬರಿಸಿದ ಹೆಸರುಕಾಳಿನ ಆಹಾರಗಳು ಹೆಚ್ಚಿನ ಚೈತನ್ಯವನ್ನು ನೀಡುತ್ತವೆ. ಹೆಸರು ಕಾಳು ಮಾತ್ರವಲ್ಲ, ಇನ್ನೂ ಹಲವಾರು ಧಾನ್ಯ ಮತ್ತು ಬೀಜಗಳನ್ನು ನೀರಿನಲ್ಲಿ ಕೊಂಚಕಾಲ ನೆನೆಸಿಟ್ಟು ಬಳಿಕ ಸೇವಿಸುವುದನ್ನು ಗಮನಿಸಬಹುದು.

ಹೆಚ್ಚಿನವರು ನೆನೆಸಿಟ್ಟ ಈ ಕಾಳುಗಳನ್ನು ಬಳಿಕ ಜಗಿಯಲು ಸುಲಭ, ಜೀರ್ಣಿಸಿಕೊಳ್ಳಲು ಸುಲಭ ಎಂದು ನಂಬಿದ್ದಾರೆ. ಇಷ್ಟೇ ಅಲ್ಲ, ನೆನೆಸಿಟ್ಟ ಕಾಳುಗಳು ಆರೋಗ್ಯಕ್ಕೆ ಇನ್ನೂ ಹಲವಾರು ವಿಧದಲ್ಲಿ ಪೂರಕವಾಗಿವೆ. ಈ ಲೇಖನ ಓದಿದ ಬಳಿಕ ಖಂಡಿತಾ ನಿಮ್ಮ ಮನೆಯಲ್ಲಿರುವ ಯಾವುದಾದರೂ ಬೀಜವನ್ನು ನೆನೆಸಿಡಲು ಖಂಡಿತಾ ಪ್ರಯತ್ನಿಸುತ್ತೀರಿ ಎಂಬ ನಂಬಿಕೆ ನಮಗಿದೆ. ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಸಾಮಾನ್ಯವಾಗಿ ಎಲ್ಲಾ ಕಾಳುಗಳಲ್ಲಿ ಫೈಟಿಕ್ ಆಮ್ಲ, ಟ್ಯಾನಿನ್ ಮತ್ತು ಇತರ ವಿಷಕಾರಿ ವಸ್ತುಗಳು ಇರುತ್ತವೆ. ಆದ್ದರಿಂದಲೇ ಕೆಲವು ಕಾಳುಗಳು ಮತ್ತು ಬೀಜಗಳನ್ನು ನಾವು ಹಾಗೇ ತಿನ್ನುವಂತಿಲ್ಲ (ಹೆಸರು ಕಾಳು ಸಹಾ). ಏಕೆಂದರೆ ಇವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಅದರಲ್ಲೂ ಫೈಟಿಕ್ ಆಮ್ಲ ಮತ್ತು ಟ್ಯಾನಿನ್ ಕಣಗಳಿಗೆ ಅಲರ್ಜಿಯಿರುವವರಿಗೆ ಇದು ಮಾರಕವಾಗಬಲ್ಲುದು. ನೆನೆಸಿಡುವ ಮೂಲಕ ಕಾಳು ಮತ್ತು ಬೀಜಗಳ ಒಳಭಾಗಗಳು ಗಟ್ಟಿಯಾದ ದಳಗಳು ಮೃದುವಾಗಿ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ನೆನೆಸಿಟ್ಟ ಅವಧಿಯಲ್ಲಿ ಈ ದಳಗಳಲ್ಲಿರುವ ವಿಷಕಾರಿ ವಸ್ತುಗಳು ಕರಗಿ ನೀರಿನಲ್ಲಿ ಬೆರೆತು ಹೊರಹೋಗುವ ಮೂಲಕ ಇವುಗಳಿಂದಾಗಬಹುದಾಗಿದ್ದ ತೊಂದರೆ ಇಲ್ಲವಾಗುತ್ತದೆ.

ನಮ್ಮ ಜೀರ್ಣಾಂಗಗಳು ಹೆಚ್ಚಿನ ಕಾಳು ಮತ್ತು ಧಾನ್ಯಗಳನ್ನು ಹಾಗೆಯೇ ಜೀರ್ಣಿಸಿಕೊಳ್ಳಲಾರವು. ಇದು ಹಕ್ಕಿಗಳಿಗೆ ಮಾತ್ರ ಸಾಧ್ಯ. ಇದಕ್ಕೆ ಅಪವಾದವೆಂಬಂತೆ ಕೆಲವರು ಒಣಬೀಜಗಳನ್ನು ಸಮರ್ಥವಾಗಿ ಜೀರ್ಣಿಸಿಕೊಳ್ಳಬಲ್ಲರು. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಒಂದೆರಡು ಬಾರಿ ಜೀರ್ಣಿಸಿಕೊಂಡಿದ್ದರೂ ಅದಕ್ಕಾಗಿ ಜೀರ್ಣಾಂಗಗಳು ಎಷ್ಟು ಶ್ರಮಪಡಬೇಕಾಗಿತ್ತು ಎಂಬುದು ನಮಗೆ ಅರಿವಿರುವುದಿಲ್ಲ.

ಆದರೆ ಸತತವಾಗಿ ಈ ಅಭ್ಯಾಸವನ್ನು ಮುಂದುವರೆಸುವ ಮೂಲಕ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಫೈಟಿಕ್ ಆಮ್ಲವನ್ನು ಸೇರಿಸಿ ದೇಹಕ್ಕೆ ನಿಧಾನಕ್ಕೆ ವಿಷವುಣಿಸುತ್ತಾ ಹೋಗುತ್ತೇವೆ. ಇಂದಿನ ಲೇಖನದಲ್ಲಿ ಕಾಳುಗಳನ್ನು ಮತ್ತು ಬೀಜಗಳನ್ನು ನೆನೆಸಿಟ್ಟು ಬಳಿಕ ಸೇವಿಸಿದರೆ ದೊರಕುವ ಪ್ರಯೋಜನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ಫೈಟಿಕ್ ಆಮ್ಲವನ್ನು ನಿವಾರಿಸುತ್ತದೆ

ಫೈಟಿಕ್ ಆಮ್ಲವನ್ನು ನಿವಾರಿಸುತ್ತದೆ

ಒಣಕಾಳುಗಳನ್ನು ಬಹುಕಾಲದವರೆಗೆ ಕೆಡದಂತೆ ರಕ್ಷಿಸಿಡಲು ನಿಸರ್ಗ ಒದಗಿಸಿರುವ ಈ ವ್ಯವಸ್ಥೆ ಕಾಳುಗಳು ಗಟ್ಟಿಯಾಗಿರಲು ಕಾರಣ. ಕಾಳುಗಳ ಹೊರಭಾಗದಲ್ಲಿ ಫೈಟಿಕ್ ಆಮ್ಲವೆಂಬ ದ್ರವ ಆವರಿಸಿ ಒಣಗಿರುತ್ತದೆ. ಇದನ್ನು ದಾಟಿ ಆರ್ದ್ರತೆ ಅಥವಾ ಕ್ರಿಮಿಕೀಟಗಳಿಗೆ ಒಳಪ್ರವೇಶ ಮಾಡಲು ಸಾಧ್ಯವಿಲ್ಲ. ಈ ಆಮ್ಲ ನೀರಿನಲ್ಲಿ ಕರಗುತ್ತದೆ. ಇದನ್ನು ಕರಗಿಸದೇ ತಿಂದರೆ ಜೀರ್ಣಾಂಗಗಳಿಗೆ ನೇರವಾಗಿ ಆಮ್ಲವನ್ನು ಉಣಿಸಿದಂತಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಫೈಟಿಕ್ ಆಮ್ಲವನ್ನು ನಿವಾರಿಸುತ್ತದೆ

ಫೈಟಿಕ್ ಆಮ್ಲವನ್ನು ನಿವಾರಿಸುತ್ತದೆ

ಇದು ಜಠರರಸವನ್ನು ಇನ್ನಷ್ಟು ಆಮ್ಲೀಯವಾಗಿಸಿ ಜೀರ್ಣಕ್ರಿಯೆಯ ತೀಕ್ಷ್ಣತೆಯನ್ನು ಹೆಚ್ಚಿಸಿ ಜಠರದ ಒಳಭಾಗವನ್ನೇ ಸುಡಲು ಆರಂಭಿಸುತ್ತದೆ. ಅಷ್ಟೇ ಅಲ್ಲ, ಆಹಾರದ ಮೂಲಕ ಲಭ್ಯವಾಗುವ ಪೋಷಕಾಂಶಗಳು, ಅದರಲ್ಲೂ ವಿಶೇಷವಾಗಿ ಖನಿಜಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ. ನೀರಿನಲ್ಲಿ ನೆನೆಸುವ ಮೂಲಕ ಈ ಆಮ್ಲ ನೀರಿನಲ್ಲಿ ಕರಗಿ ಬಸಿಯುವ ಮೂಲಕ ನಿವಾರಣೆಯಾಗುತ್ತದೆ.

ಹೊಟ್ಟೆಯಲ್ಲಿ ಉರಿಯನ್ನು ಉಂಟಾಗುವುದನ್ನು ತಡೆಯುತ್ತದೆ

ಹೊಟ್ಟೆಯಲ್ಲಿ ಉರಿಯನ್ನು ಉಂಟಾಗುವುದನ್ನು ತಡೆಯುತ್ತದೆ

ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾದರೆ ಅದು ಕರುಳುಗಳಿಗೂ ವ್ಯಾಪಿಸಿ ಸೂಕ್ಷ್ಮ ಅಂಗಗಳಿಗೆ ಉರಿಯುಂಟುಮಾಡುತ್ತದೆ. Irritable Bowel Syndrome ಎಂಬ ಹೆಸರಿನ ಈ ತೊಂದರೆಯಿಂದ ಕರುಳಿನಲ್ಲಿ ಹುಣ್ಣುಗಳಾಗುವ ಸಾಧ್ಯತೆಯೂ ಇದೆ.

ಹೊಟ್ಟೆಯಲ್ಲಿ ಉರಿಯನ್ನು ಉಂಟಾಗುವುದನ್ನು ತಡೆಯುತ್ತದೆ

ಹೊಟ್ಟೆಯಲ್ಲಿ ಉರಿಯನ್ನು ಉಂಟಾಗುವುದನ್ನು ತಡೆಯುತ್ತದೆ

ಹಾಗಾಗಿ ಕಾಳುಗಳನ್ನು ನೆನೆಸಿಟ್ಟು ಸೇವಿಸುವ ಮೂಲಕ ಈ ತೊಂದರೆಗೆ ಒಳಗಾಗುವುದನ್ನು ತಪ್ಪಿಸಬಹುದು. ಅದರಲ್ಲೂ ಹೊಟ್ಟೆಯಲ್ಲಿ ತೊಂದರೆ ಇರುವ (ಗ್ಯಾಸ್ಟ್ರಿಕ್ ತೊಂದರೆ) ರೋಗಿಗಳಿಗೆ ಈ ಉರಿ ಅತಿಹೆಚ್ಚು ತೊಂದರೆ ನೀಡುತ್ತದೆ. ನೆನೆಸಿಟ್ಟ ಕಾಳುಗಳ ಸೇವನೆ ಈ ತೊಂದರೆಯಿಂದ ರಕ್ಷಣೆ ನೀಡುತ್ತದೆ.

ಟ್ಯಾನಿನ್‌ಗಳನ್ನು ನಿವಾರಿಸುತ್ತದೆ

ಟ್ಯಾನಿನ್‌ಗಳನ್ನು ನಿವಾರಿಸುತ್ತದೆ

ಕಾಫಿಯಲ್ಲಿ ಕೆಫೀನ್ ಇದ್ದರೆ ಟೀಯಲ್ಲಿ ಏನಿದೆ ಎಂದು ಕೇಳಿದಾಗ ಟಿಫೀನ್ ಎಂದು ಹೇಳಿದ ಬೀಚಿಯವರ ನಗೆಹನಿಗೆ ತಕ್ಕಂತೆ ಟೀಯಲ್ಲಿರುವ ವಿಷಪದಾರ್ಥ ಟ್ಯಾನಿನ್. ಇದು ಕಾಳುಗಳಲ್ಲಿಯೂ ಇದೆ. ಅದರೆ ಕೆಲವರಿಗೆ ಇದು ಅಲರ್ಜಿಕಾರಕವಾಗಿದ್ದು ವಿಶೇಷವಾಗಿ ಜೀರ್ಣಾಂಗಗಳಿಗೆ ಮತ್ತು ದೇಹದ ಇತರ ವ್ಯವಸ್ಥೆಗಳಿಗೆ ತೊಂದರೆ ನೀಡುತ್ತವೆ. ಕಾಳುಗಳನ್ನು ನೆನೆಸಿಡುವ ಮೂಲಕ ಮತ್ತು ಬಳಿಕ ನೆನೆಸಿದ ನೀರನ್ನು ನಿವಾರಿಸುವ ಮೂಲಕ ಟ್ಯಾನಿನ್ ಸಹಾ ನಿವಾರಣೆಯಾಗಿ ಈ ಎಲ್ಲಾ ತೊಂದರೆಗಳಿಂದ ಮುಕ್ತಿ ನೀಡುತ್ತದೆ.

ಕರುಳುಗಳ ಕ್ಷಮತೆ ಹೆಚ್ಚಿಸುತ್ತದೆ

ಕರುಳುಗಳ ಕ್ಷಮತೆ ಹೆಚ್ಚಿಸುತ್ತದೆ

ಯಾವುದೇ ಸುದ್ದಿ ಇಲ್ಲದೇ ಇರುವುದೇ ಒಳ್ಳೆಯ ಸುದ್ದಿ ಎಂದು ಹಿರಿಯರು ಹೇಳುತ್ತಾರೆ. ಈ ಮಾತು ನಮ್ಮ ಜೀರ್ಣಾಂಗಗಳಿಗೂ ಅನ್ವಯಿಸುತ್ತದೆ. ಏಕೆಂದರೆ ನಾವು ಸೇವಿಸುವ ನೂರಾರು ತರಹದ ಆಹಾರಗಳಲ್ಲಿ ದೇಹಕ್ಕೆ ಉತ್ತಮವಾದವು ಎಷ್ಟಿವೆಯೋ ಹೆಚ್ಚೂ ಕಡಿಮೆ ವಿಷಕಾರಿಯಾದವೂ ಅಷ್ಟೇ ಇವೆ. ಇವನ್ನು ಬೇರ್ಪಡಿಸಿ ಉತ್ತಮವಾದುದನ್ನು ಜೀರ್ಣಿಸಿಕೊಂಡು ವಿಷಕಾರಿ ವಸ್ತುಗಳನ್ನು ಹೂರಹಾಕುವುದು ಕರುಳುಗಳ ಜವಾಬ್ದಾರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕರುಳುಗಳ ಕ್ಷಮತೆ ಹೆಚ್ಚಿಸುತ್ತದೆ

ಕರುಳುಗಳ ಕ್ಷಮತೆ ಹೆಚ್ಚಿಸುತ್ತದೆ

ನೆನೆಸದ ಕಾಳುಗಳನ್ನು ಸೇವಿಸಿದಾಗ ಕರುಳುಗಳ ಮೇಲಿನ ಭಾರ ಇನ್ನಷ್ಟು ಹೆಚ್ಚುತ್ತವೆ. ಇದು ಕರುಳುಗಳಲ್ಲಿ ಉರಿ ಮತ್ತು ಅತಿಹೆಚ್ಚು ಕೆಲಸಮಾಡಿ ಬಳಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ಈ ಅಂಗಗಳ ಸಾಮರ್ಥ್ಯಕ್ಕೂ ಮೀರಿ ವಿಷಕಾರಿ ವಸ್ತುಗಳು ಬಂದರೆ ಅಂಗಗಳು ಕೈಚೆಲ್ಲಿ ಅಜೀರ್ಣವಾಗುವ ಸಾಧ್ಯತೆಯೂ ಇದೆ. ಕಾಳುಗಳನ್ನು ನೆನೆಸಿಟ್ಟು ಸೇವಿಸುವ ಮೂಲಕ ಮೂಲದಲ್ಲಿಯೇ ಈ ತೊಂದರೆಯನ್ನು ಇಲ್ಲವಾಗಿಸಿ ಕರುಳುಗಳ ಮೇಲಿನ ಭಾರವನ್ನು ಕಡಿಮೆಗೊಳಿಸಬಹುದು.

ಖನಿಜಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

ಖನಿಜಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

ನೆನೆಸಿಡದ ಕಾಳುಗಳಲ್ಲಿರುವ ಫೈಟಿಕ್ ಆಮ್ಲ ದೇಹ ಖನಿಜಗಳನ್ನು ಹೀರಿಕೊಳ್ಳದಂತೆ ತಡೆಯುತ್ತದೆ. ಪರಿಣಾಮವಾಗಿ ನಿಮ್ಮ ಆಹಾರದಲ್ಲಿ ಸತು, ಕಬ್ಬಿಣ, ಮೆಗ್ನೀಶಿಯಂನಂತಹ ಉತ್ತಮ ಖನಿಜಗಳಿದ್ದರೂ ನಮ್ಮ ಜೀರ್ಣಾಂಗಗಳು ಇವನ್ನು ಹೀರಿಕೊಳ್ಳುವಲ್ಲಿ ಅಸಮರ್ಥವಾಗುತ್ತವೆ. ಬಾಯಿಗೆ ಬಂದ ತುತ್ತು ಹೊಟ್ಟೆಗಿಲ್ಲವಾಗುತ್ತದೆ.

ಫೈಟಿಕ್ ಆಮ್ಲ ಹೆಚ್ಚಿರುವ ಫಲಗಳು

ಫೈಟಿಕ್ ಆಮ್ಲ ಹೆಚ್ಚಿರುವ ಫಲಗಳು

ಸಾಮಾನ್ಯವಾಗಿ ಬಹುಕಾಲ ಕೆಡದೇ ಇರುವ ಎಲ್ಲಾ ಫಲಗಳಲ್ಲಿ ಫೈಟಿಕ್ ಆಮ್ಲ ಇದೆ. ಅಕ್ರೋಟು, ಬಾದಾಮಿ, ಗೋಡಂಬಿ ಮೊದಲಾದವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಎಳ್ಳು, ಕುಂಬಳ ಬೀಜ, ಅಗಸೆ ಬೀಜ, ಸೂರ್ಯಕಾಂತಿ ಬೀಜ, ಧಾನ್ಯಗಳಾದ ಓಟ್ಸ್, ಬಾರ್ಲಿ ಮತ್ತು ಗೋಧಿ ಮೊದಲಾದವುಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿವೆ. ಒಂದು ವೇಳೆ ಈ ಕಾಳು ಮತ್ತು ಧಾನ್ಯಗಳ ಖಾದ್ಯವನ್ನು ತಯಾರಿಸುವುದಾದರೆ ಅದನ್ನು ಕೆಲವು ಘಂಟೆಗಳ ಮಟ್ಟಿಗಾದರೂ ನೆನೆಸಿಡುವುದು ಅಗತ್ಯ.

ಧಾನ್ಯ ಮತ್ತು ಬೀಜಗಳನ್ನು ನೆನೆಸಿಡುವ ವಿಧಾನ

ಧಾನ್ಯ ಮತ್ತು ಬೀಜಗಳನ್ನು ನೆನೆಸಿಡುವ ವಿಧಾನ

ಈ ಧಾನ್ಯಗಳ ಅತ್ಯುತ್ತಮ ಪ್ರಯೋಜನ ಪಡೆಯಬೇಕಾದರೆ ತಿನ್ನುವ ಮುನ್ನ ನೆನೆಸಿಡುವುದು ಅಗತ್ಯ. ಇದಕ್ಕಾಗಿ ಅಗಲವಾದ ಪಾತ್ರೆಯಲ್ಲಿ ಮೊದಲು ನಾಲ್ಕಾರು ಬಾರಿ ಧಾನ್ಯಗಳನ್ನು ತೊಳೆದುಕೊಂಡು ಬಳಿಕ ಧಾನ್ಯಗಳು ಮುಳುಗಿ ಕೊಂಚ ಮೇಲೆ ಬರುವಷ್ಟು ನೀರು ಸೇರಿಸಿ. ಇದಕ್ಕೆ ಎರಡು ದೊಡ್ಡಚಮಚ ಉಪ್ಪು ಸೇರಿಸಿ ಕಲಕಿ ಮುಚ್ಚಳ ಮುಚ್ಚಿ ಸುಮಾರು ಆರು ಗಂಟೆಗಳ ವರೆಗೆ ನೆನೆಯಲು ಬಿಡಿ. ರಾತ್ರಿ ನೆನೆಸಿ ಬೆಳಿಗ್ಗೆದ್ದ ಬಳಿಕ ಬಳಸುವುದು ಇನ್ನೂ ಉತ್ತಮ.

ಧಾನ್ಯ ಮತ್ತು ಬೀಜಗಳನ್ನು ನೆನೆಸಿಡುವ ವಿಧಾನ

ಧಾನ್ಯ ಮತ್ತು ಬೀಜಗಳನ್ನು ನೆನೆಸಿಡುವ ವಿಧಾನ

ಇದರ ನಂತರ ನೀರನ್ನು ಸೋಸಿ ಇನ್ನೆರಡು ಬಾರಿ ತೊಳೆದು ಉಪ್ಪಿನ ಅಂಶವನ್ನು ನಿವಾರಿಸಿ. ಒಂದು ವೇಳೆ ಈ ಕಾಳುಗಳನ್ನು ಸಿದ್ಧ ರೂಪದಲ್ಲಿ ಬಳಿಕ ಬಳಸಬೇಕೆಂದಿದ್ದರೆ ಮೈಕ್ರೋವೇವ್ ಅವನ್ ನಲ್ಲಿ ಸುಮಾರು ನೂರೈವತ್ತು ಡಿಗ್ರಿಗಳಲ್ಲಿ ಸುಮಾರು ಒಂದು ನಿಮಿಷ ಬಿಸಿಮಾಡಿ ಒಣಗಿಸಿ ಬಾಟಲಿಯಲ್ಲಿ ಸಂಗ್ರಹಿಸಿ ಫ್ರಿಜ್ಜಿನಲ್ಲಿಡಿ. ಅಂದೇ ಉಪಯೋಗಿಸುವುದಾದರೆ ಬೇಯಿಸಿ ಖಾದ್ಯಗಳಿಗೆ ಉಪಯೋಗಿಸಬಹುದು.

ಏಕದಳ ಧಾನ್ಯಗಳನ್ನು ನೆನೆಸುವ ವಿಧಾನ

ಏಕದಳ ಧಾನ್ಯಗಳನ್ನು ನೆನೆಸುವ ವಿಧಾನ

ಗೋಧಿ, ಬಾರ್ಲಿ ಮತ್ತು ಓಟ್ಸ್ ಮೊದಲಾದ ಏಕದಳಧಾನ್ಯಗಳಲ್ಲಿ ಫೈಟಿಕ್ ಆಮ್ಲ ಹೆಚ್ಚಿದ್ದು ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ನೆನೆಸಿಟ್ಟರೂ ಇದು ಸುಲಭವಾಗಿ ತೊಲಗದ ಕಾರಣ ನೆನೆಸಿಟ್ಟ ನೀರಿನಲ್ಲಿ ಒಂದು ದೊಡ್ಡ ಚಮಚ ಶಿರ್ಕಾ ಅಥವಾ ಲಿಂಬೆರಸವನ್ನು ಸೇರಿಸಿ. ಇದರಿಂದ ಫೈಟಿಕ್ ಆಮ್ಲದ ಕವಚ ಶಿಥಿಲವಾಗಿ ಸುಲಭವಾಗಿ ನಿವಾರಣೆಯಾಗಲು ಸಾಧ್ಯವಾಗುತ್ತದೆ.

Story first published: Monday, November 9, 2015, 15:02 [IST]
X
Desktop Bottom Promotion