Latest Updates
-
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು? -
ಬಿಸಿಗಾಳಿಯ ಆರ್ಭಟ: ನಿಮ್ಮ ಬೆಳಗಿನ ವ್ಯಾಯಾಮದ ದಿನಚರಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ
ಸುಖಮಯ ಜೀವನಕ್ಕಾಗಿ ಬೆಳಗಿನ ಉಪಹಾರ ಭರ್ಜರಿಯಾಗಿರಲಿ!
ಆಹಾರ ಸೇವಿಸುವುದು ನಮ್ಮ ಜೀವನದ ಬಹುಮುಖ್ಯ ಅಂಶಗಳಲ್ಲಿ ಒಂದು. ಇದು ನಮ್ಮ ಜೀವನದ ಅಗತ್ಯವು ಸಹ ಹೌದು. ಅದರಲ್ಲಿಯೂ ಉಪಾಹಾರ ಸೇವಿಸುವುದು ನಮ್ಮ ಅತ್ಯಗತ್ಯಗಳಲ್ಲಿ ಒಂದು. ಉಪಾಹಾರ ಎಷ್ಟು ಮುಖ್ಯ ಎಂದು ನೀವು ಸಾವಿರ ಬಾರಿ ಕೇಳಿರಬಾರದು. ಆದರೆ ನೀವು ಎಲ್ಲಿಯವರೆಗೆ ಉಪಾಹಾರಕ್ಕೆ ಮಹತ್ವವನ್ನು ನೀಡುವುದಿಲ್ಲವೋ, ಅಲ್ಲಿಯವರೆಗೆ ಈ ಮಾತುಗಳನ್ನು ಕೇಳುತ್ತಲೆ ಇರುತ್ತೀರಿ. ಆಫೀಸಿಗೆ ಲೇಟಾಗುತ್ತದೆ ಎಂದು ಒಬ್ಬರು, ಕ್ಲಾಸಿಗೆ ಲೇಟಾಗುತ್ತಿದೆ ಎಂದು ವಿದ್ಯಾರ್ಥಿಗಳು, ಮನೆಯಲ್ಲಿ ಕೆಲಸ ಜಾಸ್ತಿ ಇದೆ ಎಂದು ಗೃಹಿಣಿಯರು, ನಾನಾ ಕಾರಣಗಳಿಗಾಗಿ ವಯಸ್ಸಾದವರು ಉಪಾಹಾರವನ್ನು ಸೇವಿಸುವುದನ್ನು ಬೇಕೆಂದು ಮರೆಯುತ್ತಾರೆ.
ಇತ್ತೀಚೆಗೆ 35 ರಿಂದ 54 ವರ್ಷದ ಒಳಗಿನವರಲ್ಲಿ ಶೇ.18 ರಷ್ಟು ಗಂಡಸರು ಮತ್ತು ಶೇ.13 ರಷ್ಟು ಮಹಿಳೆಯರು ಉಪಾಹಾರವನ್ನು ತ್ಯಜಿಸುತ್ತಾರೆ ಎಂದು ಮಾರ್ಕೆಟ್ ರಿಸರ್ಚ್ ಕಂಪನಿಯಾದ ಎನ್‌ಪಿಡಿ ಗ್ರೂಪ್ ಸಂಸ್ಥೆಯ ಅಧ್ಯಯನದಲ್ಲಿ ದೃಢಪಟ್ಟಿದೆ. ಈ ಅಧ್ಯಯನವನ್ನು 2011 ರಲ್ಲಿ ಮಾಡಲಾಗಿತ್ತು.
ಉಪಾಹಾರವನ್ನು ತ್ಯಜಿಸಬಾರದು ಎಂದು ಎಲ್ಲರೂ ಹೇಳುತ್ತಾರೆಯೇ ಹೊರತು, ಉಪಾಹಾರವನ್ನು ತ್ಯಜಿಸಿ ಎಂದು ಎಲ್ಲಿಯೂ ಹೇಳಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಬನ್ನಿ ಉಪಾಹಾರವನ್ನು ತ್ಯಜಿಸಿದರೆ ಅದರಿಂದ ನಮ್ಮ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ತಿಳಿದುಕೊಳ್ಳೋಣ ಬನ್ನಿ...

ಭಾರೀ ಪ್ರಮಾಣ ಸೇವಿಸುವುದನ್ನು ತಡೆಯುತ್ತದೆ
ಸ್ಥೂಲಕಾಯಕ್ಕೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಪ್ರಮುಖ ಕಾರಣವಾಗಿದೆ. ಇದಕ್ಕೆ ಮೂಲ ನಮ್ಮ ಹೊಟ್ಟಿ ಹಸಿವಿನ ಮೂಲಕ ನೀಡುವ ಸೂಚನೆಗಳು. ಆಹಾರ ಕಂಡ ಕೂಡಲೇ ಈ ಸೂಚನೆಗಳು ಭುಗಿಲೆದ್ದು ಅಪಾರ ಪ್ರಮಾಣದಲ್ಲಿ ಮಧ್ಯಾಹ್ನದ ಅಥವಾ ದಿನದ ಇತರ ಹೊತ್ತಿನ ಆಹಾರಗಳನ್ನು ಸೇವಿಸಲು ಪ್ರಚೋದಿಸುತ್ತವೆ.

ಭಾರೀ ಪ್ರಮಾಣ ಸೇವಿಸುವುದನ್ನು ತಡೆಯುತ್ತದೆ
ಒಂದು ವೇಳೆ ಬೆಳಗಿನ ಉಪಾಹಾರದ ಪ್ರಮಾಣ ಸಾಕಷ್ಟಿದ್ದಿದ್ದರೆ ಇತರ ಹೊತ್ತಿನ ಆಹಾರದ ಪ್ರಮಾಣವೂ ಸೂಕ್ತವಾಗಿರುತ್ತದೆ. ಈಗ ದೇಹದ ತೂಕವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ದೇಹದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ
ರಾತ್ರಿಯ ಉಪವಾಸದ ಬಳಿಕ ದೇಹದ ಜೀವರಸಾಯನಿಕ ಕ್ರಿಯೆಗಳಿಗೆ ಉತ್ತಮ ಪ್ರಮಾಣದ ಪೌಷ್ಟಿಕಾಂಶಗಳ ಅಗತ್ಯವಿದೆ. ಒಂದು ವೇಳೆ ಉಪಾಹಾರ ಇಲ್ಲದೇ ಇದ್ದರೆ ಅಥವಾ ಸಾಕಷ್ಟು ಪ್ರಮಾಣದಲ್ಲಿ ಇಲ್ಲದೇ ಇದ್ದರೆ, ಅಥವಾ ಅನಗತ್ಯವಾದುದು ಬಹಳ ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕರೆ (ಸಿದ್ಧ ಆಹಾರಗಳ ಮೂಲಕ ಸೇವಿಸುವ ಕೊಬ್ಬು) ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದೇಹದ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ
ದೇಹದ ಜೀವರಸಾಯನಿಕ ಕ್ರಿಯೆಗಳು ಸರಾಗವಾಗಿ ಆಗಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮ ದೀರ್ಘಾವಧಿಯಲ್ಲಿ ವಿಪರೀತವಾಗಬಹುದು.

ಅರಿವು ಪಡೆಯುವ ಕ್ಷಮತೆ ಹೆಚ್ಚುತ್ತದೆ
ಒಂದು ಸಂಶೋಧನೆಯ ಪ್ರಕಾರ ಮುಂಜಾನೆಯ ಉಪಾಹಾರವನ್ನು ಸೂಕ್ತ ಪ್ರಮಾಣದಲ್ಲಿ ಮತ್ತು ಕ್ಲುಪ್ತಕಾಲದಲ್ಲಿ ಸೇವಿಸಿರುವವರು ಇತರರಿಗಿಂತ ದಿನದ ಚಟುವಟಿಕೆ, ಕಲಿಯುವಿಕೆಯಲ್ಲಿ ಚುರುಕತನ ತೋರುತ್ತಾರೆ. ಇದು ಜಾಣ್ಮೆಯನ್ನು ಹೆಚ್ಚಿಸಲು, ಕಾರ್ಯದಲ್ಲಿ ದಕ್ಷತೆ ಹೆಚ್ಚಿಸಲು ನೆರವಾಗುತ್ತದೆ.

ಇಡಿಯ ದಿನ ಸಂತೋಷದ ಮನೋಭಾವವಿರುತ್ತದೆ
ಬೆಳಿಗಿನ ಉಪಾಹಾರ ನಿಮ್ಮ ಇಡಿಯ ದಿನದ ಮನೋಭಾವ ಧನಾತ್ಮಕವಾಗಿರಲು ನೆರವಾಗುತ್ತದೆ. ಡಾ. ರಾಜಕುಮಾರ್ ರವರು ಪ್ರತಿದಿನ ಬೆಳಿಗ್ಗೆ ಯೋಗಾಭ್ಯಾಸದ ಬಳಿಕ ಉತ್ತಮ ಪ್ರಮಾಣದ ಉಪಾಹಾರ ಸೇವಿಸುತ್ತಿದ್ದರು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇಡಿಯ ದಿನ ಸಂತೋಷದ ಮನೋಭಾವವಿರುತ್ತದೆ
ತಮ್ಮ ಇಷ್ಟದ ತಟ್ಟೆ ಇಡ್ಲಿಯನ್ನು ಇತರರಿಗಿಂತ ಕೊಂಚ ಹೆಚ್ಚಿಗೇ ಸೇವಿಸುತ್ತಿದ್ದುದು ಅವರ ಕಾರ್ಯದಲ್ಲಿ ನೆರವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ನಿಮ್ಮ ತೂಕ ಸೂಕ್ತ ಮಟ್ಟದಲ್ಲಿರಲು ನೆರವಾಗುತ್ತದೆ
ನಿಮ್ಮ ದೇಹದ ತೂಕವನ್ನು ಹೆಚ್ಚಿಸಲು ಮಧ್ಯಾಹ್ನದ ಮತ್ತು ರಾತ್ರಿಯ ಊಟಗಳು ಹೆಚ್ಚಿನ ದೇಣಿಗೆ ನೀಡುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನಿಮ್ಮ ತೂಕ ಸೂಕ್ತ ಮಟ್ಟದಲ್ಲಿರಲು ನೆರವಾಗುತ್ತದೆ
ಆದ್ದರಿಂದ ಬೆಳಗಿನ ಉಪಾಹಾರವನ್ನು ಹೆಚ್ಚಿಸಿ ಮಧ್ಯಾಹ್ನದ ಮತ್ತು ರಾತ್ರಿಯ ಊಟವನ್ನು ಕನಿಷ್ಟಕ್ಕಿಳಿಸುವುದು ಜಾಣರು ಅನುಸರಿಸುವ ತಂತ್ರವಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಬೆಳಗಿನ ಉಪಾಹಾರದಲ್ಲಿ ಹಣ್ಣು, ತರಕಾರಿ, ಲಿಂಬೆ, ನೀರು, ಸಾಕಷ್ಟು ನಾರು ಇರುವ ಅಹಾರಗಳು, ಹಾಲು ಮೊದಲಾದವುಗಳನ್ನು ಸೇವಿಸಿದವರ ದೇಹದ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುವುದು ಕಂಡುಬಂದಿದೆ.



Click it and Unblock the Notifications