Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನಾರೋಗ್ಯವನ್ನು ಸ್ಪಷ್ಟಪಡಿಸುವ ಅಪಾಯಕಾರಿ ಲಕ್ಷಣಗಳು
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಅಪ್ಪಟವಾದ ಸತ್ಯವಾಗಿದೆ. ಏಕೆಂದರೆ ಆರೋಗ್ಯವಿಲ್ಲದ ಯಾವುದೇ ಐಶ್ವರ್ಯ ಇದ್ದೂ ಪ್ರಯೋಜನವಿಲ್ಲದಂತಾಗುತ್ತದೆ. ಆರೋಗ್ಯ ಎರಡು ಪ್ರಕಾರದಲ್ಲಿವೆ. ಮಾನಸಿಕ ಮತ್ತು ದೈಹಿಕ ಆರೋಗ್ಯ. ಇವೆರಡೂ ಒಂದಕ್ಕೊಂದು ಪೂರಕವಾಗಿವೆ. ಮಾನಸಿಕ ಆರೋಗ್ಯಕ್ಕೆ ದೃಢಮನಸ್ಸು ಮುಖ್ಯವಾಗಿದೆ. ಆದರೆ ದೈಹಿಕ ಆರೋಗ್ಯ ಮಾತ್ರ ನಮ್ಮ ಕಾಳಜಿ, ಆಹಾರ, ವ್ಯಾಯಮ, ಔಷಧಿ, ನಿದ್ದೆ ಮೊದಲಾದ ಹಲವಾರು ವಿಷಯಗಳ ಮೇಲೆ ಅವಲಂಬಿತವಾಗಿದೆ. ಜನಸಾಮಾನ್ಯರ ಸಾಮಾನ್ಯ ದೌರ್ಬಲ್ಯವೆಂದರೆ ದೈಹಿಕ ಚಟುವಟಿಕೆಯನ್ನು ಆದಷ್ಟೂ ಕಡಿಮೆಗೊಳಿಸುವುದು. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!
ಉದಾಹರಣೆಗೆ ಒಂದು ಸ್ಥಳ ತಲುಪಲು ಇಪ್ಪತ್ತು ನಿಮಿಷ ಬಸ್ಸಿಗೆ ಕಾದು ತಲುಪುತ್ತೇವೆಯೇ ವಿನಃ ಇಪ್ಪತ್ತು ನಿಮಿಷ ನಡೆದೇ ತಲುಪಬಹುದಾಗಿದ್ದ ಸ್ಥಳಕ್ಕೆ ನಡೆಯಲು ಮನಸ್ಸು ಮಾಡುವುದಿಲ್ಲ. ಇಂತಹ ನೂರಾರು ಕಾರಣಗಳಿಂದ ನಮ್ಮ ದೇಹ ಶಿಥಿಲವಾಗುತ್ತಾ ಹೋಗುತ್ತದೆ. ಈ ಶಿಥಿಲತೆ ಅನಾರೋಗ್ಯದ ರೂಪದಲ್ಲಿ ಮುಂದೆಂದಾದರೂ ಪ್ರಕಟವಾಗುತ್ತದೆ. ಆದರೆ ದೇಹ ಇಂತಹ ಒಂದು ತೊಂದರೆ ಎದುರಾಗಲಿದೆ ಎಂದು ಕೆಲವು ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರೆ ಮುಂದಾಗುವ ದೊಡ್ಡ ತೊಂದರೆಯಿಂದ ಖಂಡಿತಾ ಪಾರಗಲು ಸಾಧ್ಯ. ಹೋಟೆಲ್ ಊಟ ಆರೋಗ್ಯಕ್ಕೆ ಮಾರಕ ಹೇಗೆ?
ಒಂದು ವೇಳೆ ನಿಮ್ಮ ನಿತ್ಯದ ಚಟುವಟಿಕೆಯಲ್ಲಿ ಇಳಿಕೆ ಕಂಡುಬಂದಿದ್ದರೆ ವೈದ್ಯರ ಬಳಿ ತಪಾಸಣೆಗೊಳಪಡುವುದು ಅಗತ್ಯ. ನಮ್ಮ ಸೋಮಾರಿತನವನ್ನು ದೇಹದ ವ್ಯವಸ್ಥೆ ಬೇರೊಂದು ರೂಪದಲ್ಲಿ ಬಳಸಿಕೊಳ್ಳುವ ಕಾರಣ ಸ್ಥೂಲಕಾಯ, ಸುಸ್ತು, ಮಲವಿಸರ್ಜನೆಯ ವೇಲೆ ರಕ್ತಸೋರುವುದು, ವಿಪರೀತವಾದ ಗಾಢಬಣ್ಣದ ಮೂತ್ರ ಮೊದಲಾದ ತೊಂದರೆಗಳು ಎದುರಾಗುತ್ತವೆ. ಇವೆಲ್ಲವೂ ದೇಹದ ಅನಾರೋಗ್ಯದ ಲಕ್ಷಣಗಳಾಗಿದ್ದು ದೇಹ ನಮಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ನೀಡುತ್ತಿರುವ ಸೂಚನೆಗಳಾಗಿವೆ. ಇವನ್ನು ಅಲಕ್ಷಿಸುವುದು ಆರೋಗ್ಯವನ್ನೇ ಪಣಕ್ಕಿಟ್ಟಂತೆ. ಈ ಬಗ್ಗೆ ಹಲವು ಅಮೂಲ್ಯ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ:

ಗಾಢವಾಗಿರುವ ಮೂತ್ರದ ಬಣ್ಣ
ಬೆಳಗ್ಗಿನ ಪ್ರಥಮ ಮೂತ್ರದ ಬಣ್ಣವನ್ನು ಗಮನಿಸಿ. ಇದಕ್ಕೆ ಪಾರದರ್ಶಕ ಗಾಜಿನ ಲೋಟ ಬಳಸಿ ಬಣ್ಣವನ್ನು ಸೂಕ್ಷ್ಮವಾಗಿ ಗಮನಿಸಿ. ಒಂದು ವೇಳೆ ಇದರ ಬಣ್ಣ ಗಾಢವಾಗಿದ್ದರೆ ಇದು ನಮ್ಮ ಅಂಗಗಳಲ್ಲಿ ಯಾವುದಾದರೊಂದು ಅಂಗ ನಿಧಾನವಾಗಿ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಿರುವ ಸೂಚನೆಯಾಗಿದೆ. ತಿಳಿಹಳದಿಯಿದ್ದಷ್ಟೂ ಆರೋಗ್ಯಕರ ಎಂದು ತಿಳಿದುಕೊಳ್ಳಬೇಕು, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗಾಢವಾಗಿರುವ ಮೂತ್ರದ ಬಣ್ಣ
ಹಳದಿ ಬಣ್ಣವೇ ಗಾಢವಾಗಿದ್ದರೆ ನಿಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗಿದೆ ಎಂದು ತಿಳಿಯಬೇಕು. ಇದರ ಹೊರತಾಗಿ ಬೇರೆ ಯಾವುದೇ ಬಣ್ಣವಿದ್ದರೂ ಅದು ಅನಾರೋಗ್ಯದ ಸ್ಪಷ್ಟ ಸೂಚನೆಯಾಗಿದೆ.

ನಿದ್ರೆ ಬಾರದಿರುವುದು ಅಥವಾ ಹೆಚ್ಚಾಗುವುದು
ಪ್ರತಿಯೊಬ್ಬರಿಗೂ ದಿನಕ್ಕೆ ಸುಮಾರು ಎಂಟು ಗಂಟೆಗಳ ಗಾಢ ನಿದ್ರೆಯ ಅವಶ್ಯಕತೆ ಇದೆ. ಒಂದು ವೇಳೆ ಇದಕ್ಕೂ ಹೆಚ್ಚು ಅಥವ ಆರು ಗಂಟೆಗೂ ಕಡಿಮೆ ಅವಧಿಯ ಕಾಲ ನಿಮಗೆ ನಿದ್ದೆ ಆವರಿಸುತ್ತಿದ್ದಲ್ಲಿ ಇದು ನಿಮ್ಮ ಅನಾರೋಗ್ಯದ ಸ್ಪಷ್ಟ ಸೂಚನೆಯಾಗಿದೆ.

ಎತ್ತರ ಕಡಿಮೆಯಾದಂತೆ ಅನ್ನಿಸುವುದು
ಯಾವುದಾದರೂ ಕಾರಣಕ್ಕೆ ನಿಮ್ಮ ದೇಹ ಕೊಂಚವೇ ಗಿಡ್ಡವಾದಂತೆ ಅನ್ನಿಸುತ್ತದೆಯೇ? ನಡುವಯಸ್ಸು ದಾಟಿದ ಬಳಿಕ ಈ ಅನುಮಾನ ಮೂಡುವುದು ಸಹಜ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎತ್ತರ ಕಡಿಮೆಯಾದಂತೆ ಅನ್ನಿಸುವುದು
ನಿಮ್ಮ ಅಳತೆಗೆ ಸರಿಹೊಂದುತ್ತಿದ್ದ ಪ್ಯಾಂಟ್ ಈಗ ಕೊಂಚ ಹೊರಬಂದಂತೆ ಅನ್ನಿಸಿದರೆ ಇದು ಮೂಳೆಗಳ ಟೊಳ್ಳಾಗುವಿಕೆಯ ಕಾರಣ (osteoporosis) ಮೂಳೆಗಳು ಕೊಂಚವೇ ಸವೆದು ಶರೀರದ ಭಾರ ತಡೆದುಕೊಳ್ಳಲಾಗದೇ ಕುಗ್ಗುತ್ತವೆ. ಇದನ್ನು ಸ್ಪಷ್ಟಪಡಿಸಿಕೊಳ್ಳಲು ಮೂಳೆತಜ್ಞರಲ್ಲಿ ಭೇಟಿ ನೀಡುವುದು ಅವಶ್ಯ.

ತೂಕ ಹೆಚ್ಚಾಗುವುದು
ಸ್ಥೂಲಕಾಯದ ವ್ಯಕ್ತಿಗಳ ಸೊಂಟದ ಸುತ್ತಳತೆಯೇ ಅನಾರೋಗ್ಯದ ಸ್ಪಷ್ಟ ಲಕ್ಷಣವಾಗಿದೆ. ಸೊಂಟ, ತೊಡೆ, ನಿತಂಬ, ಹೊಟ್ಟೆಯ ಭಾಗದ ಬೊಜ್ಜು ಹೃದಯದ ಮೇಲೆ ಹೆಚ್ಚಿನ ಒತ್ತಡ ನೀಡುವುದರಿಂದ ನಿಮ್ಮ ಆರೋಗ್ಯ ಸಂಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತೂಕ ಹೆಚ್ಚಾಗುವುದು
ಈ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಮುಖ್ಯವಾಗಿ ಇದರಿಂದ ಹೊರಬರಲು ಮಾನಸಿಕ ದೃಢತೆ ಬೆಳೆಸಿಕೊಂಡರೆ ಉಳಿದ ಕೆಲಸವೆಲ್ಲಾ ತನ್ನಿಂತಾನೇ ಆಗುತ್ತದೆ.

ಸದಾ ಸುಸ್ತು ಆವರಿಸಿರುವುದು
ಇಡಿಯ ದಿನ ಸುಸ್ತು ಆವರಿಸಿರುತ್ತದೆಯೇ? ಕೊಂಚ ನಡೆದಾಡಿದರೂ ಕುಳಿತುಕೊಳ್ಳಲು ಅವಸರವಾಗುತ್ತದೆಯೇ? ಇದಕ್ಕೆ ನೀವು ಅಂದುಕೊಂಡಿದ್ದಕ್ಕಿಂತಲೂ ಗಂಭೀರವಾದ ಕಾರಣಗಳಿರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸದಾ ಸುಸ್ತು ಆವರಿಸಿರುವುದು
ಅನಾರೋಗ್ಯಕರ ಆಹಾರಕ್ರಮ, ಥೈರಾಯ್ಡ್ ಗ್ರಂಥಿಯ ತೊಂದರೆ ಅಥವಾ ರಕ್ತಹೀನತೆಯ ಕಾರಣಗಳಿರಬಹುದು. ಇದಕ್ಕೆ ವೈದ್ಯರಿಂದ ಸೂಕ್ತ ಪರೀಕ್ಷೆಗಳನ್ನು ನಡೆಸಿ ಕಾರಣವನ್ನು ಕಂಡುಕೊಳ್ಳುವುದು ಅಗತ್ಯ.

ಚರ್ಮದಲ್ಲಿ ಕಲೆಗಳು ಮತ್ತು ನೆರಿಗೆಗಳು ಮೂಡುತ್ತವೆ
ದೇಹದ ಅನಾರೋಗ್ಯವನ್ನು ಚರ್ಮ ವಿವಿಧ ರೀತಿಯಲ್ಲಿ ಸ್ಪಷ್ಟಪಡಿಸುತ್ತದೆ. ಚಿಕ್ಕ ಚಿಕ್ಕ ಕಲೆಗಳಾಗುವುದು, ಕಪ್ಪಗಾಗುವುದು, ನೆರಿಗೆ ಮೂಡುವುದು, ಪಕಳೆ ಏಳುವುದು, ಬಿರಿ ಬಿಡುವುದು ಮೊದಲಾದ ತೊಂದರೆಗಳು ದೇಹದ ಯಾವುದೋ ತೊಂದರೆಯ ಅಡ್ಡಪರಿಣಾಮಗಳಾಗಿವೆ. ಕೆಲವು ಆಹಾರಗಳ ಅಲರ್ಜಿಯೂ ಆಗಿರಬಹುದು. ಯಾವುದಕ್ಕೂ ವೈದ್ಯರಿಂದ ತಪಾಸಣೆಗೊಳಪಡುವುದು ಮುಖ್ಯ.

ಮಾಸಿಕ ಋತುಚಕ್ರ ಏರುಪೇರಾಗುವುದು
ಆಧುನಿಕ ಮಹಿಳೆಯರಲ್ಲಿ ಈ ತೊಂದರೆ ಹೆಚ್ಚಾಗಿ ಕಂಡುಬರುತ್ತಿದೆ. ನಿಗದಿತ ಸಮಯಕ್ಕೆ ರಜಾದಿನ ಬರದೇ ಇದ್ದರೆ ಇದು ಗರ್ಭಿಣಿಯಾಗಿರುವ ಸೂಚನೆಯೂ ಆಗಿರಬಹುದು ಅಥವಾ ಅನಾರೋಗ್ಯದ ಕಾರಣ ಹಾರ್ಮೂನುಗಳ ಏರುಪೇರಿನಿಂದಾಗಿ ಎದುರಾಗುವ Polycystic Ovary Syndrome (PCOS) ಸಹಾ ಆಗಿರಬಹುದು. ರಜಾದಿನ ಮೂರಕ್ಕಿಂತ ಹೆಚ್ಚು ದಿನ ಬಾರದೇ ಇದ್ದರೆ ಪರೀಕ್ಷೆಗೆ ಒಳಪಡುವುದು ಉತ್ತಮ.



Click it and Unblock the Notifications