Latest Updates
-
ಉರಿ ಬಿಸಿಲು, ತೇವಾಂಶದ ಕಾಟ: ಎಸಿ ಇಲ್ಲದಿದ್ದರೂ ಫಿಟ್ ಆಗಿರಲು 12 ನಿಮಿಷದ ಸರಳ ವರ್ಕೌಟ್! -
ರಕ್ಷಾಬಂಧನ ಶಾಪಿಂಗ್ ಎಚ್ಚರ: ನಿಮ್ಮ ಹಣ ಕದಿಯಲು ಕಾಯುತ್ತಿದ್ದಾರೆ ಸೈಬರ್ ವಂಚಕರು! -
ಭಾರಿ ಮಳೆ, ಬಿರುಗಾಳಿ ಎಚ್ಚರಿಕೆ: ನಿಮ್ಮ ಅಪಾರ್ಟ್ಮೆಂಟ್ ಸುರಕ್ಷಿತವಾಗಿಡಲು ಈ 30 ನಿಮಿಷದ ಪ್ಲಾನ್ ಫಾಲೋ ಮಾಡಿ -
ಮುಂಬೈನಲ್ಲಿ ಮೋಮೋಸ್ ತಿಂದ 16 ಮಂದಿಗೆ ಫುಡ್ ಪಾಯಿಸನಿಂಗ್: ಹೊರಬಂತು ಶಾಕಿಂಗ್ ಸತ್ಯ, ಸುರಕ್ಷಿತವಾಗಿರುವುದು ಹೇಗೆ? -
ರಕ್ಷಾಬಂಧನ ವಿಶೇಷ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಪ್ರಯಾಣಕ್ಕೂ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಖೇಲೋ ಇಂಡಿಯಾ ಸಂವಾದ ವೀಕ್ಷಿಸುವಾಗ ಜಡತ್ವ ಬೇಡ: 12 ನಿಮಿಷಗಳ ಈ ಸಿಂಪಲ್ ವರ್ಕೌಟ್ ಟ್ರೈ ಮಾಡಿ! -
ಆಗಸ್ಟ್ 27 ಅಥವಾ 28? ರಾಖಿ ಹಬ್ಬದ ಗೊಂದಲಕ್ಕೆ ಇಲ್ಲಿದೆ ಬೆಸ್ಟ್ ಪ್ಲಾನ್! -
ಗುಡುಗು-ಸಿಡಿಲು ಮಳೆ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು 15 ನಿಮಿಷಗಳ ತುರ್ತು ಕ್ರಮಗಳು -
ರಕ್ಷಾಬಂಧನಕ್ಕೆ ಸಿಹಿ ಖರೀದಿಸ್ತಿದ್ದೀರಾ? ಈ ತಪ್ಪು ಮಾಡಿದ್ರೆ ಆರೋಗ್ಯಕ್ಕೆ ಕುತ್ತು, ನಕಲಿ ಸ್ವೀಟ್ಸ್ ಪತ್ತೆ! -
ರಕ್ಷಾಬಂಧನಕ್ಕೆ ಚಿನ್ನ ಖರೀದಿಸುವ ಮುನ್ನ ಎಚ್ಚರ! ಇಂದಿನ ದರ ಮತ್ತು ಲಾಭದಾಯಕ ಟಿಪ್ಸ್ ಇಲ್ಲಿದೆ
ಅರಿಶಿನ ಸೇರಿಸಿದ ಬಿಸಿ ಹಾಲು-ಆಯಸ್ಸು ನೂರು!
ಇಂದಿನ ಆಧುನಿಕ ಜಗತ್ತು ಎಷ್ಟೇ ಮುಂದುವರಿದಿದ್ದರೂ ವೈದ್ಯ ಲೋಕ ಅಚ್ಚರಿಯ ಸಂಶೋಧನೆಗಳನ್ನು ಮಾಡುತ್ತಾ ಸಾಧನೆಯನ್ನು ನಡೆಸುತ್ತಿದ್ದರೂ ಹಳ್ಳಿ ಮದ್ದೇ ಕೆಲವೊಂದು ರೋಗಗಳಿಗೆ ಥಟ್ಟನೆಯ ಪರಿಣಾಮವನ್ನು ನೀಡುತ್ತವೆ. ಅದಕ್ಕೇ ತಾನೇ ಕೆಲವೊಂದು ವೈದ್ಯಕೀಯ ಚಿಕಿತ್ಸೆಗಳಲ್ಲಿ ಇಂದಿಗೂ ಹಳ್ಳಿಮದ್ದನ್ನು ಬಳಸಿ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ. ವೈದ್ಯ ಲೋಕಕ್ಕೆ ಸವಾಲಾಗಿದ್ದ ಎಷ್ಟೋ ಸಮಸ್ಯೆಗಳನ್ನು ಹಳ್ಳಿಮದ್ದು ಗುಣಪಡಿಸಿದೆ.
ಹೌದು, ಹಿಂದಿನ ಕಾಲದಲ್ಲಿ ಶೀತ, ನೆಗಡಿ, ಜ್ವರ, ಹೊಟ್ಟೆನೋವು, ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆನೋವು ಮೊದಲಾದ ಎಲ್ಲಾ ಸಾಮಾನ್ಯ ತೊಂದರೆಗಳಿಗೆ ಅಜ್ಜಿ ನೀಡುವ ಔಷಧಿ ಒಂದೇ-ಅದೇ ಅರಿಶಿನ ಸೇರಿಸಿದ ಬಿಸಿ ಹಾಲು. ಹಾಲು ಮತ್ತು ಅರಿಶಿನ ಎರಡೂ ಉತ್ತಮವಾದ ಪ್ರತಿಜೀವಕ (antibiotic) ಗಳಾಗಿವೆ. ಇವೆರಡರ ಜೋಡಿ ವಿವಿಧ ತೊಂದರೆಗಳನ್ನು ಯಶಸ್ವಿಯಾಗಿ ನಿವಾರಿಸುವುದು ಮಾತ್ರವಲ್ಲ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತವೆ. ದೇಹದಲ್ಲಿ ಹೇಗೋ ಪ್ರವೇಶ ಪಡೆದಿರುವ ಅತಿ ಸೂಕ್ಷ್ಮ ಕ್ರಿಮಿಗಳನ್ನೂ ಆಹಾರದ ಮೂಲಕ ಹೊಟ್ಟೆ ಸೇರಿರುವ ವಿಷಕಾರಿ ವಸ್ತುಗಳನ್ನೂ ಹೊರಹಾಕಲು ಸಹಕರಿಸುತ್ತವೆ. ಬನ್ನಿ ಈ ಅದ್ಭುತ ನೈಸರ್ಗಿಕ ಪೇಯದ ಹೆಚ್ಚಿನ ಉಪಯೋಗಗಳನ್ನು ನೋಡೋಣ...

ಉಸಿರಾಟದ ಸಮಸ್ಯೆಗಳನ್ನು ನೀಗಿಸುತ್ತದೆ
ಉಸಿರಾಟದ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಈ ಪೇಯ ಹೊಂದಿದ್ದು ಬ್ಯಾಕ್ಟೀರಿಯಾ ಮತ್ತು ವೈರಸ್ ಉಂಟುಮಾಡುವ ಕೆಲವೊಂದು ಸೋಂಕುಗಳನ್ನು ನಿವಾರಿಸುತ್ತದೆ. ಜೀರ್ಣಶಕ್ತಿಯ ಅಸಮಾನತೆಯನ್ನು ಇದು ಹೋಗಲಾಡಿಸುತ್ತದೆ.

ರಕ್ತ ಶುದ್ಧತೆ
ಅರಿಶಿನ ಹಾಲು, ಆಯುರ್ವೇದ ಸಂಪ್ರದಾಯದಲ್ಲಿ ಅತ್ಯುತ್ತಮ ರಕ್ತ ಶುದ್ಧೀರಣ/ ಕ್ಲಿನ್ಸರ್ ಎಂದು ಪರಿಗಣಿಸಲಾಗುತ್ತದೆ. ಇದು ದೇಹದಲ್ಲಿ ರಕ್ತ ಪರಿಚಲನೆಯ ಪುನಶ್ಚೇತನಗೊಳಿಸಲು ಮತ್ತು ವರ್ಧಿಸಲು ಸಹಾಯ ಮಾಡಬಹುದು. ಇದು ದುಗ್ಧನಾಳ ವ್ಯವಸ್ಥೆ ಮತ್ತು ಎಲ್ಲಾ ರಕ್ತನಾಳಗಳು ಶುದ್ಧೀಕರಿಸಲು ಕೂಡ ಅತ್ಯವಶ್ಯಕ.

ಮೂಳೆಗಳ ದೃಢತೆಗೆ
ಅರಿಶಿನ ಹಾಲು, ಮೂಳೆಗಳು ಆರೋಗ್ಯಕರ ಮತ್ತು ಬಲವಾಗಿ ಇರಿಸಿಕೊಳ್ಳಲು ಸಹಾಯ ಮಾಡುವ ಕ್ಯಾಲ್ಸಿಯಂನ ಒಂದು ಉತ್ತಮ ಮೂಲವಾಗಿದೆ. ಭಾರತದ ಕ್ರಿಕೆಟ್ ದಂತಕಥೆಯಾದ ಸಚಿನ್ ತೆಂಡೂಲ್ಕರ್, ಉತ್ತಮ ಮೂಳೆ ಆರೋಗ್ಯಕ್ಕೆ ಅರಿಶಿನ ಹಾಲನ್ನೇ ದಿನವೂ ಕುಡಿಯುತ್ತಾರೆ. ಅರಿಶಿನ ಹಾಲು ಮೂಳೆ ಸವೆತ ಮತ್ತು ಸಂಧಿವಾತ ಕಡಿಮೆ ಮಾಡುತ್ತದೆ.

ಶೀತ ಮತ್ತು ಕೆಮ್ಮಿಗೆ ಉಪಚಾರ
ಅರಿಶಿನ ಹಾಲು ವೈರಸ್ ವಿರೋಧಿ ಮತ್ತು ಬ್ಯಾಕ್ಟೀರಿಯ ನಿರೋಧಕ ಗುಣಗಳನ್ನು ಹೊಂದಿರುವ ಕಾರಣ, ಕೆಮ್ಮು ಮತ್ತು ಶೀತಕ್ಕೆ ಒಂದು ಉತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ. ಇದು ನೋಯುತ್ತಿರುವ ಗಂಟಲು, ಕೆಮ್ಮು ಮತ್ತು ಶೀತಕ್ಕೆ ತ್ವರಿತ ಪರಿಹಾರ ನೀಡುತ್ತದೆ.

ಸುಖ ನಿದ್ರೆಗಾಗಿ
ನಿದ್ರೆಯ ಸಮಸ್ಯೆ ನಿಮ್ಮನ್ನು ಕಾಡುತ್ತಿದೆ ಎಂದಾದಲ್ಲಿ ಮಲಗುವ ಮುನ್ನ ಅರಶಿನ ಬೆರೆಸಿದ ಹಾಲನ್ನು ಸೇವಿಸಿರಿ. ನಿಮಗೆ ಬೇಗ ನಿದ್ರೆ ಬರುತ್ತದೆ.

ಸಂಧಿವಾತ
ಅರಿಶಿನ ಹಾಲು, ಸಂಧಿವಾತವನ್ನು ಹೋಗಲಾಡಿಸಲು ಮತ್ತು ಸಂಧಿವಾತಕ್ಕೆ ಕಾರಣವಾದ ಊತವನ್ನು ನಿವಾರಿಸಲು ಸಹಾಯಮಾಡುತ್ತದೆ. ಕೀಲು ಮತ್ತು ಸ್ನಾಯುಗಳಲ್ಲಿನ ನೋವುಗಳನ್ನೂ ಸಹ ನಿವಾರಿಸುವಲ್ಲಿ ಸಹಕಾರಿಯಾಗಿದೆ.

ಅರಿಶಿನದ ಹಾಲು ತಯಾರಿಸುವ ಬಗೆ
ಸುಲಭ ವಿಧಾನ: ಒಂದು ಲೋಟ ಹಸುವಿನ ಹಾಲಿಗೆ ಸುಮಾರು ಅರ್ಧ ಚಮಚದಿಂದ ಒಂದು ಚಮಚದಷ್ಟು ಅರಿಶಿನ ಪುಡಿ ಹಾಕಿ ಕುದಿಯಲು ಪ್ರಾರಂಭವಾದ ಬಳಿಕ ಇಳಿಸಿ ತಣಿಯಲು ಬಿಡಿ. ರುಚಿಗಾಗಿ ಕೊಂಚ ಜೇನನ್ನೂ ಸೇರಿಸಬಹುದು. ಸಾಂಪ್ರಾದಾಯಿಕ ವಿಧಾನ: ಹಸಿಯಾಗಿರುವ ಅರಿಶಿನದ ಕೊಂಬಿನ ಸುಮಾರು ಒಂದು ಇಂಚಿನಷ್ಟು ತುಂಡನ್ನು ಜಜ್ಜಿ ಕುದಿಯುತ್ತಿರುವ ಹಾಲಿನಲ್ಲಿ ಸೇರಿಸಿ. ಈಗ ಉರಿಯನ್ನು ಅತಿಚಿಕ್ಕದಾಗಿ ಮಾಡಿ ಮುಚ್ಚಳ ಮುಚ್ಚದೇ ಸುಮಾರು ಹದಿನೈದು ನಿಮಿಷ ಕುದಿಸಿ. ಬಳಿಕ ಅರಿಶಿನದ ತುಂಡನ್ನು ಸೋಸಿ ತೆಗೆಯಿರಿ. ಈ ಹಾಲನ್ನು ತಣಿದ ಬಳಿಕವೇ ಕುಡಿಯಿರಿ. ಈ ಹಾಲನ್ನು ಮತ್ತೆ ಬಿಸಿ ಮಾಡಬಾರದು.



Click it and Unblock the Notifications