Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ದೇಹದ ಸುವ್ಯವಸ್ಥೆಯ ಮೂಲವೇ ಉಪ್ಪು ಏಕೆ?
ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬೇರೆ ಬಂಧುವಿಲ್ಲ ಎಂಬ ನಾಣ್ಣುಡಿ ಜನಜನಿತವಾಗಿದೆ. ಇಲ್ಲಿ ಉಪ್ಪಿಗಿರುವ ವೈಶಿಷ್ಟ್ಯವನ್ನು ನಾವು ತಿಳಿದುಕೊಳ್ಳಬಹುದು. ನೀವು ಮಾಡುವ ಯಾವುದೇ ಪದಾರ್ಥಗಳಲ್ಲಿ ಉಪ್ಪು ಇಲ್ಲ ಅಥವಾ ಉಪ್ಪಿನ ಪ್ರಮಾಣ ಕಡಿಮೆಯಾಗಿದೆ ಎಂದಾದಲ್ಲಿ ಅದು ಬೀರುವ ಪ್ರಭಾವ ಎಷ್ಟರ ಮಟ್ಟಿನದು ಎಂಬುದರ ಅರಿವು ನಿಮಗಿರಬಹುದು. ಖಾದ್ಯದ ವಿಚಾರದಲ್ಲಿ ರುಚಿಗೆ ಪ್ರಧಾನವಾಗಿರುವ ಉಪ್ಪು ದೇಹದ ಒಳಾಂಗಣ ವ್ಯವಸ್ಥೆಯಲ್ಲೂ ಅಷ್ಟೇ ಮುಖ್ಯವಾದುದು.
ಉಪ್ಪು ಸೇರಿದಂತೆ ನಮ್ಮ ದೇಹವು ಎಲೆಕ್ಟ್ರೋಲೈಟ್ಸ್‌ಗಳನ್ನು ಆವಂಬಿಸಿದೆ. ಇದು ನಮ್ಮ ದೇಹದ ಬಹಳಷ್ಟು ಕಾರ್ಯಗಳನ್ನು ನಿಯಂತ್ರಿಸಬಲ್ಲುದು. ನಮ್ಮ ನರಗಳಿಗೆ ಉಪ್ಪು ಅತ್ಯವಶ್ಯಕವಾದ ಅಂಶವಾಗಿದೆ. ಇದು ಸ್ನಾಯು ಸಂಕೋಚನಕ್ಕೆ ಉತ್ತೇಜನವನ್ನು ನೀಡುವುದರಿಂದ ಸ್ನಾಯು ಸೆಳೆತ ಕಡಿಮೆಯಾಗುತ್ತದೆ. ರಕ್ತಪ್ರವಾಹದಲ್ಲಿ ಕ್ಯಾಲ್ಶಿಯಂ ಮತ್ತು ಇತರ ಖನಿಜಗಳನ್ನು ಇದು ಇರಿಸುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ನಮಗೆ ಉಂಟುಮಾಡುವ ಉಪ್ಪಿನ ಕುರಿತಾದ ಇನ್ನಷ್ಟು ಮಾಹಿತಿಗಳನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ನೀಡುತ್ತಿದ್ದೇವೆ.

ಗಂಟಲು ನೋವು
ಉಪ್ಪು ನೀರಿನ ದ್ರಾವಣದಲ್ಲಿ, (ಅಂದರೆ ಒಂದು ಟೇಬಲ್ ಚಮಚ ಉಪ್ಪನ್ನು ಬೆಚ್ಚಗಿನ ನೀರಿನಲ್ಲಿ ಕರಗಿಸಿರುವ ದ್ರಾವಣ) ಗಂಟಲಿನ ಭಾಗಕ್ಕೆ ತಗಲಿಸಿಕೊಂಡು ಮುಕ್ಕಳಿಸಿದರೆ ಗಂಟಲು ಕೆರೆಯುವುದು ಶಮನವಾಗುತ್ತದೆ. ಹಾಗೆಯೇ ಅದು ಹಲ್ಲು ನೋವು ಮತ್ತು ಉಸಿರಾಟದ ಹಾದಿಯು ಸಂಕುಚಿತವಾಗಿದ್ದರೆ ಮತ್ತು ಗಲಗ್ರಂಥಿಯ ಉರಿಯೂತ (ಟಾನ್ಸಿಲ್ಸ್) ಇದ್ದರೆ ಪರಿಹಾರ ಸಿಗುತ್ತದೆ.

ಜೀರ್ಣಕ್ರಿಯೆ
ನೀವು ಅಜೀರ್ಣದಿಂದ ಬಳಲುತ್ತಿದ್ದರೆ ಕಲ್ಲುಪ್ಪು ಮತ್ತು ತಾಜಾ ಪುದೀನ ಎಲೆಗಳನ್ನು ಲಸ್ಸಿಗೆ ಬೆರಸಿ ಕುಡಿಯಿರಿ.

ಶರೀರದ ಚರ್ಮದ ಮೇಲೆ ಉಜ್ಜುವುದು
ಐದು ಟೇಬಲ್ ಚಮಚ ಸಮುದ್ರ ಉಪ್ಪಿನ ಜೊತೆ ಒಂದು ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣಮಾಡಿ. ಈ ಮಿಶ್ರಣಕ್ಕೆ ಒಂದು ಅರ್ಧ ಲಿಂಬೆ ಹಣ್ಣಿನ ರಸವನ್ನು ಹಾಕಿ ಸೇರಿಸಿಕೊಂಡು ನಿಮ್ಮ ಶರೀರದ ಎಲ್ಲಾ ಚರ್ಮದ ಭಾಗಗಳಿಗೆ ಹಚ್ಚಿಕೊಳ್ಳಿ. ಕೆಲವು ನಿಮಿಷ ಮೆಲ್ಲಗೆ ಉಜ್ಜಿಕೊಳ್ಳಿ ಮತ್ತು ಸ್ನಾನ ಮಾಡುವ ಮೊದಲು ಹತ್ತು ನಿಮಿಷಗಳ ಕಾಲ ಹಾಗೇ ಬಿಟ್ಟಿರಿ.

ತಲೆಹೊಟ್ಟು
ಒಂದೆರಡು ಟೀ ಚಮಚ ಸಮುದ್ರ ಉಪ್ಪನ್ನು ತೆಗೆದುಕೊಂಡು ನಿಮ್ಮ ನೆತ್ತಿಯ ಮೇಲೆ ಹರಡಿಕೊಳ್ಳಿ. ಕೈ ಬೆರಳುಗಳನ್ನು ಒದ್ದೆಮಾಡಿಕೊಂಡು ಮೆಲ್ಲಗೆ ಮಸ್ಸಾಜ್ ಮಾಡಿಕೊಳ್ಳಿ. ನಂತರ ನಿಮ್ಮ ತಲೆಗೂದಲನ್ನು ಒಂದು ಲಘು ಶ್ಯಾಂಪೂ ಬಳಸಿ ತೊಳೆದುಕೊಳ್ಳಿ. ಹೀಗೆ ತಿಂಗಳಿಗೊಮ್ಮೆ ನಿಮ್ಮ ನೆತ್ತಿಯ ಮೇಲ್ಮೈ ಸುಲಿದುಹೋಗದಂತೆ ಮತ್ತು ನಿಮ್ಮ ತಲೆಗೂದಲು ಎತ್ತಿ ಕಾಣುವಹಾಗೆ ಮಾಡಿಕೊಳ್ಳಿ.

ಸುಟ್ಟ ಗಾಯಗಳು
ಸುಟ್ಟ ಗಾಯಗಳ ಮೇಲೆ ಉಪ್ಪನ್ನು ಸವರಿ 5 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ನೀರಿನಲ್ಲಿ ತೊಳೆಯಿರಿ.

ಸ್ನಾಯು ಸೆಳೆತ
ಸ್ನಾಯು ಸೆಳೆತಬಂದಾಗ ಒಂದು ಲೀಟರ್ ನೀರಿಗೆ 2 - 3 ಟೀ ಚಮಚ ಸಕ್ಕರೆ, 1/2 ಟೀ ಚಮಚ ಉಪ್ಪು ಮತ್ತು ಸ್ವಲ್ಪ ಲಿಂಬೆ ಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಕಲಕಿ. ಈ ಮಿಶ್ರಣವನ್ನು ಸ್ವಲ್ಪ ಸಮಯದ ಅಂತರಗಳಲ್ಲಿ ಕುಡಿಯುತ್ತ ಬಂದರೆ ಸ್ನಾಯು ಎಳೆತ ಶಮನವಾಗುತ್ತದೆ.

ಊದಿಕೊಂಡ ಪಾದಗಳು
ಒಂದು ಹಿಡಿ ಉಪ್ಪನ್ನ್ನು ಒಂದು ತವದ ಮೇಲೆ ಹಾಕಿ ಕಾಯಿಸಿ ಒಂದು ಬಟ್ಟೆಯಲ್ಲಿ ಕಟ್ಟಿ. ಈ ಉಪ್ಪಿನ ಕಟ್ಟನ್ನು ನಿಮ್ಮ ಪಾದಗಳ ಮೇಲೆ 20 ನಿಮಿಷಗಳಕಾಲ ಶಾಖ ತಗಲುವಂತೆ ಇಟ್ಟುಕೊಳ್ಳಿ. ಕಟ್ಟು ತಣ್ಣಗಾದರೆ ಮತ್ತೆ ಬಿಸಿಮಾಡಿಕೊಂಡು ಬಳಸಿ.

ಸಂಧಿವಾತ ನೋವು
ಬಿಸಿಯಾಗಿರುವ ನೀರನ್ನು ಒಂದು ಬಕೆಟ್ಟಿನಲ್ಲಿ ತೆಗೆದುಕೊಂಡು ಒಂದು ಹಿಡಿ ಉಪ್ಪನ್ನು ಹಾಕಿ ಅದರಲ್ಲಿ ನಿಮ್ಮ ಸ್ವಲ್ಪ ಕಾಲ ಕಾಲುಗಳನ್ನು ಅದ್ದಿಟ್ಟುಕೊಂಡರೆ ನಿಮ್ಮ ಸಂಧಿವಾತ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ಮಾಂಸ ಖಂಡದೊಳಗೆ ಬೆಳೆದ ಕಾಲ್ಬೆರಳ ಉಗುರುಗಳು
ಒಂದು ಬಕೆಟ್ ಪೂರ್ತಿ ಬೆಚ್ಚಗಿರುವ ನೀರಿಗೆ ಒಂದು ಹಿಡಿ ಅಡಿಗೆ ಉಪ್ಪನ್ನು ಸೇರಿಸಿ. ನಿಮ್ಮ ಕಾಲುಗಳನ್ನು 15 ನಿಮಿಷಗಳ ಕಾಲ ಬಕೆಟ್ಟಿನ್ನಲ್ಲಿರುವ ನೀರಿನಲ್ಲಿ ನೆನೆಸಿ ನಂತರ ಬಟ್ಟೆಯಲ್ಲಿ ಒರಸಿಕೊಳ್ಳಿ. ಈಗ ಉಗುರಿನ ಭಾಗ ಮೆತ್ತಗಿರುತ್ತದೆ ಮತ್ತು ಉಗುರನ್ನು ಕಾಲ್ಬೆರಳ ಉಗುರು ಕತ್ತರಿಸುವ ಕತ್ತರಿಯಿಂದ ಕತ್ತರಿಸಿ.

ಕಣ್ಣಿನ ರೆಪ್ಪೆಮೇಲೆ ಬರುವ ಗುಡ್ಡೆ
ಸುಮಾರು 2 ಟೀ ಚಮಚ ಉಪ್ಪನ್ನು ಕಾವಲಿಯ ಮೇಲೆ ಕಾಯಿಸಿ ಒಂದು ಮೆತ್ತಗಿರುವ ಬಟ್ಟೆಯಲ್ಲಿ ಕಟ್ಟಿ. ಇದನ್ನು ನಿಮ್ಮ ಕಣ್ಣಿನ ರೆಪ್ಪೆಯ ಮೇಲೆ ಎದ್ದಿರುವ ಗುಡ್ಡೆಯ ಮೇಲೆ ಮೆಲ್ಲಗೆ ಒತ್ತಿಟ್ಟುಕೊಳ್ಳಿ. ಹಾಗೆಯೇ ತಿಳಿಯಾದ ಉಪ್ಪಿನ ನೀರನ್ನು ಕಣ್ಣುಗಳಿಗೆ ಚುಮುಕಿಸಿದಾಗ ನಿಮ್ಮ ಕಣ್ಣು ಮತ್ತು ಗುಡ್ಡೆಗಳ ಮೇಲೆ ನೀವು ನಿರೀಕ್ಷಿಸಿದ ಒಳ್ಳೆಯ ಪರಿಣಾಮ ಬೀರುವುದು.

ಜ್ವರ
ತಣ್ಣಗಿರುವ ನೀರಿಗೆ ಉಪ್ಪು ಸೇರಿಸಿ ಒಂದು ಮೆತ್ತಗಿರುವ ಬಟ್ಟೆಯನ್ನು ನೆನೆಸಿ ಹಣೆಯಮೇಲೆ ಹರಡಿ ಜ್ವರದ ತಾಪ ಇಳಿಯಲು ಬಳಸಿ. ಇದೇ ರೀತಿ ಪ್ರತಿ ಕೆಲವು ನಿಮಿಷ ಮತ್ತೆ ಮತ್ತೆ ಮಾಡಿದರೆ ಪರಿಣಾಮಕಾರಿ ಪರಿಹಾರ ಲಭಿಸುತ್ತದೆ.

ಉಗುರುಗಳಿಗೆ ಹೊಳಪುಕೊಡುವ ವಿಧಾನ
ಸಮುದ್ರ ಉಪ್ಪು, ಅಡಿಗೆ ಸೋಡಾ ಮತ್ತು ಲಿಂಬೆ ರಸ ಎಲ್ಲವನ್ನು ಮಿಶ್ರಣಮಾಡಿ ಅದರಿಂದ ನಿಮ್ಮ ಉಗುರುಗಳ ಮೇಲೆ ಮಸಾಜ್ ಮಾಡಿ. ಮೃದು ಮತ್ತು ಹೊಳೆಯುವ ಉಗುರು ಬೇಕಾಗಿದ್ದಲ್ಲಿ ಹೀಗೆ ವಾರಕೊಮ್ಮೆ ಮಾಡಿ.

ಬಾಯಿ ಹುಣ್ಣು
ಅರ್ಧ ಚಮಚ ಉಪ್ಪನ್ನು ಬಾಯಿ ಹುಣ್ಣಿನ ಮೇಲೆ ಸವರಿ! ಹಾಗೆ ಸವರಿದಾಗ ತೀವ್ರವಾಗಿ ಉರಿ ಕಾಣಿಸಿಕೊಂಡರೆ ಎಂದು ಹೆದರಿಕೊಳ್ಳಬೇಡಿ. ಅದೇ ಸ್ಥಿತಿಯಲ್ಲಿ ಕೆಲವು ನಿಮಿಷ ಉರಿ ಸಹಿಸಿಕೊಂಡು ಒಳ್ಳೆಯ ನೀರಿನಿಂದ ಬಾಯಿ ಮುಕ್ಕಳಿಸಿ. ಈ ಕಾರ್ಯವನ್ನು ಪ್ರತಿದಿನ ನೀವು ಹಲ್ಲು ಉಜ್ಜಿಕೊಳ್ಳುವ ಮೊದಲು ಮಾಡಿ.



Click it and Unblock the Notifications