Latest Updates
-
Ugadi Wishes 2026: ಯುಗಾದಿ 2026ರ ಶುಭಾಶಯಗಳು! ಸ್ನೇಹಿತರು, ಕುಟುಂಬದವರಿಗೆ ಕಳುಹಿಸಲು ಇಲ್ಲಿವೆ 50+ ಸಂದೇಶಗಳು -
ಹಬ್ಬಕ್ಕೆ ಮಾಡಿ ಗೋಧಿ ಪಾಯಸ: ಚೂರು ಉಳಿಯದಂತೆ ಖಾಲಿ ಮಾಡೋಡು ಖಚಿತ! -
ಈರುಳ್ಳಿ ಬೇಡ.. ಬೆಳ್ಳುಳ್ಳಿ ಬೇಡ..!! ಬ್ರಾಹ್ಮಣ ಶೈಲಿಯ ವೆಜ್ ಕುರ್ಮಾ ಮಾಡೋದು ಹೇಗೆ? ಇಲ್ಲಿದೆ ಸೀಕ್ರೆಟ್ -
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ -
Happy Ugadi 2026: ಯುಗಾದಿ ಶುಭಾಶಯಗಳು! ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಿ ಈ ಹಾರ್ಟ್ ಟಚಿಂಗ್ ಶುಭಾಶಯ, ಮೆಸೇಜ್ಗಳು -
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ! -
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ನಿಮ್ಮ ಹೊಟ್ಟೆಯ ಆರೋಗ್ಯಕ್ಕಾಗಿ 10 ಅತ್ಯುತ್ತಮ ಆಹಾರಗಳು
ನಾವೆಲ್ಲರೂ ಏಕೆ ಕೆಲಸ ಮಾಡುತ್ತಿದ್ದೇವೆ ಎಂಬ ಪ್ರಶ್ನೆಗೆ ಹೊಟ್ಟೆಪಾಡಿಗಾಗಿ ಎಂಬ ಉತ್ತರವೇ ಹೆಚ್ಚಾಗಿ ಸಿಗುತ್ತದೆ. ಅಂದರೆ ಜೀವವಿರುವವರೆಗೂ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಪೂರೈಸಲು ಆಹಾರವನ್ನು ಜೀರ್ಣಿಸಿಕೊಳ್ಳಲು ನಮಗೆ ಜಠರದ ಅಗತ್ಯವಿದೆ. ಇದೇ ಕಾರಣದಿಂದಾಗಿ ಹೊಟ್ಟೆ ನಮ್ಮ ದೇಹದ ಅತಿ ಪ್ರಮುಖ ಅಂಗಗಳಲ್ಲೊಂದಾಗಿದೆ. ನಮ್ಮ ಜೀರ್ಣಾಂಗ ವ್ಯವಸ್ಥೆಯ ಕೇಂದ್ರವಾಗಿರುವ ಹೊಟ್ಟೆ ವಿಸ್ಮಯಗಳ ಆಗರವಾಗಿದೆ. ಉದಾಹರಣೆಗೆ ಉದರದಲ್ಲಿ ಪ್ರಸವಿಸುವ ಜಠರರಸ ಒಂದು ಪ್ರಬಲ ಆಮ್ಲವಾಗಿದ್ದು ಚಿಕ್ಕ ಪುಟ್ಟ್ ಬ್ಲೇಡ್, ಅಲ್ಯೂಮಿನಿಯಂ ಫಾಯಿಲ್ ನಂತಹ ಲೋಹಗಳನ್ನೂ ಕರಗಿಸುವಷ್ಟು ಸಮರ್ಥವಾಗಿದೆ.
ಕಾಲಕಾಲಕ್ಕೆ ಆಹಾರ ಹೊಟ್ಟೆ ಸೇರದೇ ಇದ್ದರೆ ಈ ಆಮ್ಲ ಜಠರದ ಒಳಪದರವನ್ನೇ ಸುಡಲು ತೊಡಗುತ್ತದೆ. ಇದೇ ಕಾರಣಕ್ಕಾಗಿ ನಮಗೆ ಕನಿಷ್ಟ ದಿನದಲ್ಲಿ ಮೂರು ಹೊತ್ತು ಊಟ ಮಾಡಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಸ್ಥೂಲಕಾಯ ಎಲ್ಲರನ್ನೂ ಆವರಿಸಿಕೊಳ್ಳುತ್ತಿದೆ. ಅದರಲ್ಲೂ ಪ್ರಮುಖವಾಗಿ ಹೊಟ್ಟೆ ಮತ್ತು ಸೊಂಟದ ಸುತ್ತವೇ ಹೆಚ್ಚಾಗಿ ದಪ್ಪನಾಗುತ್ತಿದ್ದಾರೆ. ಹೊಟ್ಟೆಯನ್ನು ಆರೋಗ್ಯಕರವನ್ನಾಗಿರಿಸಿಕೊಳ್ಳುವಲ್ಲಿ ಎರಡು ವಿಧಗಳಿವೆ. ಮೊದಲನೆಯದು ಆಹಾರದಲ್ಲಿ ನಿಯಂತ್ರಣ ಹಾಗೂ ಎರಡನೆಯದಾಗಿ ಸೂಕ್ತ ವ್ಯಾಯಾಮಗಳು. ಸುಂದರ ಕಾಯಕ್ಕಾಗಿ 8 ಶಕ್ತಿಯುತ ವ್ಯಾಯಾಮಗಳು
ಈ ಲೇಖನದಲ್ಲಿ ಆಹಾರವನ್ನು ನಿಯಂತ್ರಿಸುವ ಮೂಲಕ ಹೊಟ್ಟೆಯನ್ನು ಸುಸ್ಥಿತಿಗೆ ಮರಳಿ ತಂದು ಉತ್ತಮ ಕಟಿ ಹಾಗೂ ಆರೋಗ್ಯವನ್ನು ಹೊಂದಲು ಹಲವು ಆಹಾರಗಳನ್ನು ಸೂಚಿಸಲಾಗಿದೆ. ಈ ಆಹಾರಗಳು ಹಲವಾರು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದ್ದು ಜೀರ್ಣಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಕರಿಸುತ್ತವೆ. ಹಿಂದಿನ ವರ್ಷಗಳಲ್ಲಿ ಸೇವಿಸಿದ್ದ ಕೆಟ್ಟ ಆಹಾರದಿಂದಾಗಿ ದೇಹದಲ್ಲಿ ಉಳಿದಿರಬಹುದಾದ ವಿಷಕಾರಿ ವಸ್ತುಗಳನ್ನು ನೈಸರ್ಗಿಕವಾಗಿ ಹೊರಹಾಕಲು ಸಹಕರಿಸುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸಿ ಮಲಬದ್ಧತೆಯನ್ನು ತಡೆಯುತ್ತದೆ. ಉದರಕ್ಕೆ ಅತ್ಯುತ್ತಮವಾದ ಹತ್ತು ಆಹಾರಗಳು ಇಲ್ಲಿವೆ: ವಾರದೊಳಗೆ ಹೊಟ್ಟೆಯ ಕೊಬ್ಬು ಕರಗಲು ಹೀಗೆ ಮಾಡಿ!

ಮೊಸರು
ಕೀಟಗಳಂತೆಯೇ ಬ್ಯಾಕ್ಟೀರಿಯಾಗಳಲ್ಲೂ ಎರಡು ವಿಧಗಳಿವೆ. ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾ. ಮೊಸರಿನ ಪ್ರತಿ ಬಿಂದುವಿನಲ್ಲಿಯೂ ಲಕ್ಷಾಂತರ ಒಳ್ಳೆಯ ಬ್ಯಾಕ್ಟೀರಿಯಾಗಳಿದ್ದು ನಮ್ಮ ಹೊಟ್ಟೆ ಮಾಡುವ ಅರ್ಧಕ್ಕಿಂತಲೂ ಹೆಚ್ಚು ಕೆಲಸವನ್ನು ಅವು ಈಗಾಗಲೇ ಮಾಡಿರುವುದರಿಂದ ಹೊಟ್ಟೆಯ ಕೆಲಸ ಸುಲಭವಾಗುತ್ತದೆ. ಪರಿಣಾಮವಾಗಿ ಮೊಸಲು ಅತಿ ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ಆರೋಗ್ಯ ವೃದ್ಧಿಸುತ್ತದೆ.

ಕೊಬ್ಬುರಹಿತ ಮಾಂಸ
ನಮ್ಮ ಕರುಳುಗಳ ಉದ್ದ ಅತ್ತ ಸಸ್ಯಾಹಾರಿಗಳಷ್ಟು ಉದ್ದವಾಗಿಯೂ ಇಲ್ಲ, ಇತ್ತ ಮಾಂಸಾಹಾರಿ ಪ್ರಾಣಿಗಳಷ್ಟು ಚಿಕ್ಕದಾಗಿಯೂ ಇಲ್ಲ. ಹಾಗಾಗಿ ನಾವು ಹಸಿಹುಲ್ಲನ್ನು ತಿನ್ನಲಾರೆವು, ಮಾಂಸವನ್ನು ಹಸಿಯಾಗಿಯೂ ಸೇವಿಸಲಾರೆವು. ಇದೇ ಕಾರಣದಿಂದಾಗಿ ನಮಗೆ ಆಹಾರವನ್ನು ಬೇಯಿಸಿ ತಿನ್ನಬೇಕಾಗುತ್ತದೆ. ಸಾಧಾರಣವಾಗಿ ಮಾಂಸದ ಜೊತೆ ಚರ್ಬಿ ಅಥವಾ ಕೊಬ್ಬು ಜೊತೆಯಲ್ಲಿಯೇ ಬರುವುದರಿಂದ ಬೇಯಿಸಿದಾಗ ಈ ಕೊಬ್ಬು ಕರಗಿ ಹೊಟ್ಟೆ ಸೇರುತ್ತದೆ. ಕೆಟ್ಟ ಕೊಲೆಸ್ಟರಾಲ್ ಆದ ಈ ಕೊಬ್ಬು ಬಳಿಕ ರಕ್ತ ಸೇರಿ ಆರೋಗ್ಯಕ್ಕೆ ಮಾರಕವಾಗುತ್ತದೆ. ಬದಲಿಗೆ ಕೊಬ್ಬು ಇಲ್ಲದ ಮಾಂಸ ಆರೋಗ್ಯಕ್ಕೆ ಉತ್ತಮವಾಗಿದೆ. ಎಲ್ಲಾ ಸಾಗರದ ಮಾಂಸಾಹಾರ, ಚರ್ಮರಹಿತ ಕೋಳಿ ಮಾಂಸ ಉತ್ತಮ ಆದರೆ ಕೆಂಪು ಮಾಂಸಗಳಾದ ಕುರಿ, ದನ ಮೊದಲಾದ ಮಾಂಸಗಳು ಜೀರ್ಣಿಸಿಕೊಳ್ಳಲು ಸುಲಭವಾದರೂ ಅದರೊಂದಿಗೆ ಬರುವ ಚರ್ಬಿಯಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಪಾರ ಪ್ರಮಾಣದಲ್ಲಿರುವುದರಿಂದ ಸೇವಿಸುವ ಪ್ರಮಾಣ ಮಾತ್ರ ಕಡಿಮೆ ಇರಬೇಕು. ಹಾಗೂ ಮೆದುಳಿನಲ್ಲಿ (ಭೇಜಾ ಫ್ರೈ) ಅತ್ಯಧಿಕ ಪ್ರಮಾಣದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಇರುವುದರಿಂದ ಇದರ ಸೇವನೆಯನ್ನು ವರ್ಜಿಸುವುದೇ ನಮ್ಮ ಹೃದಯಗಳಿಗೆ ಒಳ್ಳೆಯದು.

ಬಾಳೆಹಣ್ಣು
ವರ್ಷವಿಡೀ ಅಗ್ಗವಾಗಿ ಸಿಗುವ ಹಣ್ಣು ಎಂದರೆ ಬಾಳೆಹಣ್ಣು. ಒಂದು ಸೇಬು ವೈದ್ಯರನ್ನು ದೂರವಿರಿಸುವುದು ಎಂಬ ಮಾತಿಗೆ ಪೂರಕವಾಗಿ ದಿನಕ್ಕೆರಡು ಬಾಳೆಹಣ್ಣು ಸಹಾ ವೈದ್ಯರನ್ನು ದೂರವಿಡುವುದು ಎಂದರೂ ಸರಿ. ಏಕೆಂದರೆ ಬಾಳೆಹಣ್ಣಿನಲ್ಲಿ ಸುಲಭವಾಗಿ ಜೀರ್ಣವಾಗುವ ಹಲವು ಪೋಷಕಾಂಶಗಳಿದ್ದು ಆರೋಗ್ಯವನ್ನು ವರ್ಧಿಸುತ್ತವೆ. ಅಪಾರ ಪ್ರಮಾಣದಲ್ಲಿ ಕರಗುವ ನಾರು ಇದ್ದು ಮಲಬದ್ದತೆಯನ್ನು ತಡೆಯುತ್ತವೆ.

ಕಿತ್ತಳೆ ಹಣ್ಣು
ಕಿತ್ತಳೆಯಲ್ಲಿ ಅಪಾರ ಪ್ರಮಾಣದ ವಿಟಮಿನ್ ಸಿ ಜೊತೆಗೆ ಕರಗುವ ನಾರು ಇದೆ. ಇವೆರಡರ ಜೋಡಿ ಹೊಟ್ಟೆಗೆ ಅತ್ಯುತ್ತಮವಾಗಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತವೆ ಹಾಗೂ ಮಲಬದ್ದತೆಯನ್ನು ತಡೆಯುತ್ತವೆ. ವಿಟಮಿನ್ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ರಕ್ಷಿಸುತ್ತದೆ.

ನವಣೆ (Quinoa)
ನವಣೆ ಅಥವಾ ಸಾವಕ್ಕಿ ಎಂದು ಕರೆಯಲಾಗುವ ಈ ಕಾಳುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಮೈನೋ ಆಮ್ಲಗಳಿವೆ. ಈ ಆಮ್ಲಗಳು ಜಠರರಸದಲ್ಲಿ ಸುಲಭವಾಗಿ ಜೀರ್ಣಗೊಂಡು ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳನ್ನು ನೀಡುತ್ತವೆ. ಇದುವರೆಗೆ ಕಡೆಗಣನೆಗೆ ಒಳಗಾಗಿದ್ದ ಈ ಅದ್ಭುತ ಕಾಳುಗಳನ್ನು ನಿಮ್ಮ ಪ್ರತಿದಿನದ ಆಹಾರಗಳಲ್ಲಿ ಅಳವಡಿಸುವ ಮೂಲಕ ಇನ್ನೂ ಹಲವು ಪ್ರಯೋಜನಗಳನ್ನು ಪಡೆಯಬಹುದು.

ಲಿಂಬೆ
ಲಿಂಬೆಹಣ್ಣಿನಲ್ಲಿರುವ ಸಿಟ್ರಸ್ ಆಮ್ಲ ಸಹಾ ಜಠರರಸದಲ್ಲಿ ಸುಲಭವಾಗಿ ಜೀರ್ಣವಾಗಿ ಇನ್ನುಳಿದ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಸಹಕರಿಸುತ್ತದೆ. ಲಿಂಬೆರಸವನ್ನು ಸೇರಿಸಿದ ನೀರು ಜೀರ್ಣಾಂಗ ವ್ಯವಸ್ಥೆಯಲ್ಲಿನ ಕಲ್ಮಶಗಳನ್ನು ಹೊರಹಾಕಲು ಸಹಕರಿಸುತ್ತದೆ.

ಶುಂಠಿ
ಶುಂಠಿಯಲ್ಲಿ ಪ್ರಮುಖವಾಗಿ ನಿಯಾಸಿನ್ (Niacin (B3)) ಎಂಬ ಪೋಷಕಾಂಶವಿದೆ. ಇದೇ ಕಾರಣದಿಂದಾಗಿ ಶುಂಠಿ ಕೊಂಚ ಖಾರವಾಗಿರುತ್ತದೆ. ಈ ಪೋಷಕಾಂಶ ಕಡಿಮೆ ಪ್ರಮಾಣದಲ್ಲಿದ್ದರೆ ಜಠರರಸದೊಡಲು ಸುಲಲಿತವಾಗಿ ಮಿಳಿತಗೊಂಡು ಹೊಟ್ಟೆಯ ಹಲವು ತೊಂದರೆಗಳನ್ನು ನಿವಾರಿಸುತ್ತದೆ. ಆದರೆ ಈ ಪ್ರಮಾಣ ಹೆಚ್ಚಾದರೆ ಹೊಟ್ಟೆಗೆ ಮಾರಕವಾಗುವ ಕಾರಣ ಒಂದು ಚಮಚಕ್ಕಿಂತ ಹೆಚ್ಚಿನ ಪ್ರಮಾಣದ ಶುಂಠಿಯ ರಸವನ್ನು ಸೇವಿಸಬಾರದು. ಶುಂಠಿಯ ಉತ್ತಮ ಗುಣಗಳಿಂದಾಗಿ ಪ್ರಾಚೀನ ಕಾಲದಿಂದಲೂ ಹೊಟ್ಟೆಯ ತೊಂದರೆಗಳಿಗಾಗಿ ಎಲ್ಲಡೆ ಬಳಸಲ್ಪಡುತ್ತಿದೆ.

ದೊಣ್ಣೆಮೆಣಸು
ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ದೊಣ್ಣೆಮೆಣಸಿನಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳು ಹಾಗೂ ಫೈಟೋ ನ್ಯೂಟ್ರಿಯೆಂಟ್ ಗಳೆಂಬ ಪೋಷಕಾಂಶಗಳಿವೆ. ಈ ಕಾರಣದಿಂದಾಗಿ ತರಕಾರಿಯಂತೆ ಬಳಸಿದ ದೊಣ್ಣೆಮೆಣಸು ಹೊಟ್ಟೆಯ ಹಲವು ತೊಂದರೆಗಳನ್ನು ಹಾಗೂ ಸೋಂಕುಗಳನ್ನು ನಿವಾರಿಸಬಲ್ಲದು.

ಹಸಿರು ಸೊಪ್ಪುಗಳು
ಪಾಲಕ್, ಬಸಲೆ, ಕೇಲ್ (kale) ಮೊದಲಾದ ಹಸಿರುಸೊಪ್ಪುಗಳಲ್ಲಿ ಉತ್ತಮ ಪ್ರಮಾಣದ ಸತು, ವಿಟಮಿನ್ನುಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿವೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿ ಕರಗದ ನಾರು ಇದ್ದು ಮಲಬದ್ದತೆಯನ್ನು ತಡೆಯುತ್ತವೆ. ನಿಮ್ಮ ಆಹಾರದಲ್ಲಿ ಹಸಿಯಾಗಿ ತಿನ್ನಬಹುದಾದ ಯಾವುದೇ ಹಸಿರು ಸೊಪ್ಪುಗಳನ್ನು ಅಳವಡಿಸುವ ಮೂಲಕ ನಿಮ್ಮ ಜೀರ್ಣಶಕ್ತಿ ಉತ್ತಮಗೊಳ್ಳುವುದು ಮಾತ್ರವಲ್ಲ, ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ.

ಇಡಿಯ ಗೋಧಿ
ಸಾಮಾನ್ಯವಾಗಿ ಹುಗ್ಗಿಯಂತಹ ಸಿಹಿ ಪದಾರ್ಥ ತಯಾರಿಸಲು ಬಿಟ್ಟರೆ ಇಡಿಯ ಗೋಧಿಯನ್ನು ನಾವು ಬಳಸುವುದೇ ಇಲ್ಲ. ಮಾರುಕಟ್ಟೆಯಲ್ಲಿ ದೊರಕುವ ಮೈದಾ ಮತ್ತು ಗೋಧಿಹಿಟ್ಟನ್ನು ಬಳಸುತ್ತೇವೆ. ಆರೋಗ್ಯದ ದೃಷ್ಟಿಯಿಂದ ಮೈದಾ ಸರ್ವಥಾ ಒಳ್ಳೆಯ ಆಹಾರವಲ್ಲ. ಏಕೆಂದರೆ ಗೋಧಿಯ ಹೊರಕವಚ ಮತ್ತು ಬೀಜಾಂಕುರವಾಗುವ ಮೊಳಕೆಯನ್ನೇ ಕಳಚಿ ಕೇವಲ ಒಳಭಾಗದ ಬಿಳಿಯ ಹಿಟ್ಟನ್ನು ಮಾತ್ರ ಪುಡಿಮಾಡಿ ಮೈದಾ ರೂಪದಲ್ಲಿ ನೀಡಲಾಗುತ್ತದೆ. ಇದರಲ್ಲಿ ನಾರು ಇಲ್ಲದೇ ಇರುವುದರಿಂದ ಕರುಳುಗಳಲ್ಲಿ ಮಲಬದ್ಧತೆ ಉಂಟಾಗುತ್ತದೆ. ಬದಲಿಗೆ ಗೋಧಿಹಿಟ್ಟನ್ನು ಬಳಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇಡಿಯ ಗೋಧಿಯ ವ್ಯಂಜನಗಳನ್ನು ಆಗಾಗ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಎಲ್ಲಾ ಪೋಷಕಾಂಶ ಹಾಗೂ ಕರಗದ ನಾರು ದೊರಕುವುದರಿಂದ ಇದು ಹೊಟ್ಟೆಗೆ ಅತ್ಯಂತ ಉತ್ತಮವಾದ ಆಹಾರವಾಗಿದೆ.



Click it and Unblock the Notifications











