Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಒಣ ಏಪ್ರಿಕಾಟ್‍ಗಳಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳು
ಒಣ ಏಪ್ರಿಕಾಟ್‍ಗಳನ್ನು ಏಪ್ರಿಕಾಟ್ ಹಣ್ಣುಗಳನ್ನು ಒಣಗಿಸುವ ಮೂಲಕ ಪಡೆದುಕೊಳ್ಳಲಾಗುತ್ತದೆ. ಈ ಒಣಗಿಸುವ ಪ್ರಕ್ರಿಯೆಯಲ್ಲಿ ಹಣ್ಣಿಗೆ ಯಾವುದೇ ಹಾನಿಯನ್ನು ಉಂಟುಮಾಡದೆ ಕೇವಲ ನೀರಿನಂಶ ಮಾತ್ರ ಒಣಗುವಂತೆ ಮಾಡಲಾಗುತ್ತದೆ.
ಕಿತ್ತಳೆಯ ಬಗ್ಗೆ ಕೆಲ ಆಸಕ್ತಿಕರ ಅಂಶಗಳು
ಅಲ್ಲದೆ ಇದರಲ್ಲಿರುವ ಯಾವುದೇ ಪೋಷಕಾಂಶಗಳು ಹಾಳಾಗದಂತೆ ಕಾಪಾಡಲಾಗುತ್ತದೆ. ಇದರ ಪರಿಣಾಮವಾಗಿ ಅದರಲ್ಲಿರುವ ಯಾವುದೇ ಪೋಷಕಾಂಶಗಳು ಹಾಳಾಗದೆ, ನಮಗೆ ಮತ್ತಷ್ಟು ಪ್ರಯೋಜನಗಳು ಲಭ್ಯವಾಗುತ್ತವೆ.
ಈ ಏಪ್ರಿಕಾಟ್‍ಗಳಲ್ಲಿ ಕ್ಯಾಲ್ಸಿಯಂ, ಪೊಟಾಶಿಯಂ, ರಂಜಕ, ವಿಟಮಿನ್ ಎ, ಕಬ್ಬಿಣಾಂಶ ಮತ್ತು ವಿಟಮಿನ್ ಸಿ ಗಳು ಲಭ್ಯವಿವೆ. ಒಂದು ಕಪ್ ಒಣ ಏಪ್ರಿಕಾಟ್‍ಗಳಿಂದ 158 ಮೈಕ್ರೊಗ್ರಾಮ್‍ಗಳಷ್ಟು ವಿಟಮಿನ್ ಎಯು ನಮಗೆ ದೊರಕುತ್ತದೆ.
ಈ ಒಣ ಹಣ್ಣುಗಳು ನಮ್ಮ ದೇಹಕ್ಕೆ ಅಗತ್ಯವಾಗಿರುವ ರೋಗ ನಿರೋಧಕ ಶಕ್ತಿಯನ್ನು ಒದಗಿಸುವುದರ ಜೊತೆಗೆ ಹಲವು ರೋಗಗಳನ್ನು ಸಹ ತಡೆಯಲು ನೆರವಾಗುತ್ತದೆ. ಹಾಗಾದರೆ ಏಪ್ರಿಕಾಟ್‍ಗಳಿಂದ ನಮಗೆ ದೊರೆಯುವ ಆರೋಗ್ಯಕರವಾದ 15 ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಕಣ್ತುಂಬ ನಿದ್ದೆಗಾಗಿ ಇಲ್ಲಿದೆ 10 ಸೂಕ್ತ ಸಲಹೆಗಳು!

ಅನಿಮಿಯಾ:
ಅನಿಮಿಯಾ ಎಂದರೆ ರಕ್ತ ಹೀನತೆಯ ಕಾಯಿಲೆ. ಒಣ ಏಪ್ರಿಕಾಟ್‍ಗಳು ಅನಿಮಿಯಾದ ಮೇಲೆ ಹೋರಾಡಲು ಅತ್ಯಗತ್ಯವಾಗಿರುವ ಕಬ್ಬಿಣಾಂಶದ ಮೂಲವಾಗಿದೆ. ಇದರ ಜೊತೆಗೆ ಏಪ್ರಿಕಾಟ್‍ನಲ್ಲಿ ತಾಮ್ರವು ಸಹ ಇದ್ದು, ಅದು ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತದೆ. ಋತು ಚಕ್ರದ ಅವಧಿಯಲ್ಲಿ ಅಧಿಕ ರಕ್ತ ಸ್ರಾವದಿಂದ ಬಳಲುವ ಹೆಂಗಸರು ತಮ್ಮ ದಿನ ನಿತ್ಯದ ಆಹಾರದಲ್ಲಿ ಏಪ್ರಿಕಾಟ್‍ಗಳನ್ನು ಸೇವಿಸುವುದರಿಂದ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. ಇದರಿಂದ ಅವರ ರಕ್ತದಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಹೆಚ್ಚಾಗಿ ಅವರ ರಕ್ತ ಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ.

ಮಲಬದ್ಧತೆ;
ಒಣ ಏಪ್ರಿಕಾಟ್‍ಗಳಲ್ಲಿ ಪೆಕ್ಟಿನ್ ಎಂಬ ಅಂಶವು ಕಂಡು ಬರುತ್ತದೆ. ಜೊತೆಗೆ ಇವುಗಳಲ್ಲಿ ಸೆಲ್ಯೂಲೋಸ್ ಎಂಬ ಅಂಶವು ಸಹ ಕಂಡು ಬರುತ್ತದೆ. ಇವುಗಳು ಮಲವನ್ನು ಮೆದುಗೊಳಿಸುವ ಶಕ್ತಿಯನ್ನು ಹೊಂದಿವೆ. ಈಗಾಗಿ ಇದು ಮಲಬದ್ಧತೆಗೆ ಅತ್ಯಂತ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಮಲಬದ್ಧತೆಯ ಸಂದರ್ಭದಲ್ಲಿ ಸೆಲ್ಯೂಲೋಸ್ ಒಂದು ಕರಗದ ನಾರಿನಂತೆ ಕಾರ್ಯನಿರ್ವಹಿಸಿದರೆ, ಪೆಕ್ಟಿನ್ ನಮ್ಮ ದೇಹದಲ್ಲಿನ ನೀರಿನ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸುತ್ತದೆ.

ಜೀರ್ಣಕ್ರಿಯೆ;
ಒಣ ಏಪ್ರಿಕಾಟ್‍ಗಳನ್ನು ಊಟಕ್ಕೆ ಮೊದಲು ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ಉದ್ದೀಪಿಸಬಹುದು. ಏಕೆಂದರೆ ಈ ಏಪ್ರಿಕಾಟ್‍ಗಳಲ್ಲಿ ಅಲ್ಕಾಲಿ ಎಂಬ ಅಂಶವಿದ್ದು, ಇದು ಉದರದಲ್ಲಿ ಬಿಡುಗಡೆಯಾಗುವ ಆಮ್ಲಗಳನ್ನು ತಟಸ್ಥಗೊಳಿಸುವ ಶಕ್ತಿಯನ್ನು ಹೊಂದಿದೆ.

ಜ್ವರ;
ಒಣ ಏಪ್ರಿಕಾಟ್‍ಗಳು ಜ್ವರವನ್ನು ಕಡಿಮೆ ಮಾಡಲು ಉಪಯೋಗಕ್ಕೆ ಬರುತ್ತವೆ. ಸ್ವಲ್ಪ ಪ್ರಮಾಣದ ಜೇನು ತುಪ್ಪವನ್ನು ನೀರಿನೊಂದಿಗೆ ಬೆರೆಸಿ ಅದಕ್ಕೆ ಏಪ್ರಿಕಾಟ್‍ಗಳನ್ನು ಸೇರಿಸಿ ಒಂದು ದ್ರಾವಣವನ್ನು ತಯಾರಿಸಿಕೊಂಡು ಸೇವಿಸಿ. ಇದರಿಂದ ನಿಮ್ಮ ಬಾಯಾರಿಕೆಯು ಸಹ ಪರಿಹಾರವಾಗುತ್ತದೆ.

ತ್ವಚೆ;
ತುರಿಕೆ, ಸನ್‍ಬರ್ನ್, ಕಜ್ಜಿ ಮತ್ತು ಹುರುಪುಗಳನ್ನು ನಿವಾರಿಸಲು ಒಣ ಏಪ್ರಿಕಾಟ್‍ಗಳ ರಸವನ್ನು ಬಳಸಬಹುದು. ಜೊತೆಗೆ ಇದರಿಂದ ಮೊಡವೆ ಮುಂತಾದ ತ್ವಚೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಏಪ್ರಿಕಾಟ್‍ನ ಸ್ಕ್ರಬ್ ಅನ್ನು ತ್ವಚೆಯ ಎಕ್ಸ್‌ಫೋಲಿಯೇಷನ್ ಮಾಡಲು ಸಹ ಬಳಸಲಾಗುತ್ತದೆ.

ಜೀರ್ಣಾಂಗ ವ್ಯೂಹವನ್ನು ಸ್ವಚ್ಛಗೊಳಿಸಲು:
ಒಣ ಏಪ್ರಿಕಾಟ್‍ಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ನಿವಾರಿಸಿಕೊಳ್ಳಬಹುದು. ಏಕೆಂದರೆ ಏಪ್ರಿಕಾಟ್‍ಗಳು ನಮ್ಮ ದೇಹದ ಕಶ್ಮಲಗಳನ್ನು ಮೆದುಗೊಳಿಸಿ, ಜೀರ್ಣಾಂಗ ವ್ಯೂಹ ಸರಾಗವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದು ದೇಹದಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚಿಸುವ ರಸಗಳನ್ನು ಬಿಡುಗಡೆಯಾಗಲು ಸಹಕರಿಸುತ್ತದೆ ಮತ್ತು ಜೀರ್ಣಾಂಗ ವ್ಯೂಹದಲ್ಲಿ ಹೆಚ್ಚಿನ ಅಲ್ಕಾಲೀನ್ ವಾತಾವರಣವನ್ನು ನಿರ್ಮಿಸಲು ನೆರವಾಗುತ್ತದೆ.

ಗರ್ಭಿಣಿಯರಿಗೆ
ಹಿಂದಿನ ಕಾಲದಿಂದಲು ಗರ್ಭಿಣಿಯರಿಗೆ ಏಪ್ರಿಕಾಟ್‍ಗಳನ್ನು ಮನೆಮದ್ದಾಗಿ ನೀಡುತ್ತ ಬರಲಾಗಿದೆ. ಇದು ಬಂಜೆತನ,ರಕ್ತಸ್ರಾವ ಮತ್ತು ಸೆಳೆತಗಳನ್ನು ನಿವಾರಿಸಲು ನೆರವಾಗುತ್ತದೆ. ಒಣ ಏಪ್ರಿಕಾಟ್‍ನ ಪೇಸ್ಟ್ ಜನನಾಂಗದ ಇನ್‍ಫೆಕ್ಷನ್ ಅನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಗರ್ಭಿಣಿಯರು ಮತ್ತು ಬಾಣಂತಿಯರು ಏಪ್ರಿಕಾಟ್‍ಗಳನ್ನು ನಿಯಮಿತವಾಗಿ ಸೇವಿಸಬೇಕು. ಒಣ ಏಪ್ರಿಕಾಟ್‍ಗಳು ಗರ್ಭಿಣಿಯರಿಗೆ ಸಿಹಿ ತಿನಿಸು ಅಥವಾ ಕುರುಕಲು ತಿಂಡಿಗಳಿಗೆ ಪರ್ಯಾಯವಾದ ಆಹಾರವಾಗಿ ಉಪಯೋಗಕ್ಕೆ ಬರುತ್ತದೆ. ಇದನ್ನು ಸೇವಿಸುವುದರಿಂದ ಅವರ ಆರೋಗ್ಯವು ಸಹ ಸುಧಾರಿಸುತ್ತದೆ.

ಹೃದಯದ ಬಡಿತವನ್ನು ಕ್ರಮಬದ್ಧಗೊಳಿಸುತ್ತದೆ:
ಒಣ ಏಪ್ರಿಕಾಟ್‍ಗಳಲ್ಲಿ ಯಥೇಚ್ಛವಾದ ಪೊಟಾಶಿಯಂ ಅಂಶವು ಅಡಗಿರುತ್ತದೆ. ಪೊಟಾಶಿಯಂ ಎಂಬುದು ಒಂದು ಉತ್ತಮ ಖನಿಜ ಮತ್ತು ಎಲೆಕ್ಟ್ರೋಲೈಟ್ ಆಗಿದ್ದು, ಇದು ನಮ್ಮ ದೇಹದಲ್ಲಿನ ದ್ರವಗಳ ಸಮತೋಲನ ಮಾಡಲು ನೆರವಾಗುತ್ತದೆ. ಹೀಗೆ ಇದು ನಮ್ಮ ದೇಹದ ಸ್ನಾಯುಗಳ ಕಾರ್ಯವನ್ನು ಸುಗಮಗೊಳಿಸಿ, ಹೃದಯದ ಬಡಿತವನ್ನು ಸುಲಲಿತಗೊಳಿಸುತ್ತದೆ.

ಉತ್ತಮ ದೃಷ್ಟಿ:
ಒಣ ಏಪ್ರಿಕಾಟ್‍ಗಳಲ್ಲಿ ವಿಟಮಿನ್ ಎಯಂತಹ ಪೋಷಕಾಂಶಗಳು ಯಥೇಚ್ಛವಾಗಿ ಇವೆ. ಇದರಿಂದ ನಮ್ಮ ದೃಷ್ಟಿಯು ಮತ್ತಷ್ಟು ಸುಧಾರಿಸುತ್ತದೆ. ವಿಟಮಿನ್ ಎಯು ಒಂದು ಪ್ರಬಲವಾದ ಅಂಟಿ ಆಕ್ಸಿಡೆಂಟ್ ಆಗಿದ್ದು, ಇದು ನಮ್ಮ ದೇಹದಲ್ಲಿರುವ ಫ್ರೀ ರಾಡಿಕಲ್ಸ್‌ಗಳನ್ನು ಹೊಡೆದೊಡಿಸುತ್ತದೆ ಮತ್ತು ದೇಹದ ಜೀವ ಕೋಶಗಳ ಮತ್ತು ಅಂಗಾಂಶಗಳ ಆರೋಗ್ಯವನ್ನು ಕಾಪಾಡುತ್ತದೆ. ಫ್ರೀ ರಾಡಿಕಲ್‍ಗಳು ಹಾನಿಗೊಳಗಾಗುವುದರಿಂದ ನಮ್ಮ ಕಣ್ಣಿನ ಮಸೂರಗಳು ಹಾನಿಗೊಳಗಾಗಿ, ನಮ್ಮ ಕಣ್ಣಿಗೆ ಪೊರೆಗಳು ಬರುವ ಸಂಭವವಿರುತ್ತದೆ. ಒಣ ಏಪ್ರಿಕಾಟ್‍ಗಳನ್ನು ಸೇವಿಸುವುದರ ಮೂಲಕ ಕಣ್ಣಿನ ಪೊರೆಗಳು ಬರುವುದನ್ನು ತಡೆಯಬಹುದು.

ಹಿಮೊಗ್ಲೋಬಿನ್:
ಒಣ ಏಪ್ರಿಕಾಟ್‍ಗಳನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಹಿಮೊಗ್ಲೋಬಿನ್ ಪ್ರಮಾಣವು ಹೆಚ್ಚಾಗುತ್ತದೆ. ಇದು ಅನಿಮಿಯಾದ ವಿರುದ್ಧ ಹೋರಾಡಲು ನಮಗೆ ನೆರವಾಗುತ್ತದೆ. ಇದಕ್ಕೆ ಮುಖ್ಯಕಾರಣ ಏಪ್ರಿಕಾಟ್‍ಗಳಲ್ಲಿ ಕಬ್ಬಿಣಾಂಶ ಮತ್ತು ತಾಮ್ರದಂತಹ ಖನಿಜಾಂಶಗಳು ಲಭ್ಯವಿದ್ದು, ಇವು ಹಿಮೊಗ್ಲೋಬಿನ್ ಉತ್ಪಾದಿಸಲು ನೆರವಿಗೆ ಬರುತ್ತವೆ.

ಅಸ್ತಮಾವನ್ನು ನಿವಾರಣೆ ಮಾಡಲು:
ಒಣ ಏಪ್ರಿಕಾಟ್‍ಗಳನ್ನು ಸೇವಿಸುವುದರಿಂದ ನಮಗೆ ಹಲವಾರು ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ. ಇವು ನಮ್ಮನ್ನು ಅಸ್ತಮಾ, ಕ್ಷಯ ಮತ್ತು ಗೂರಲು ಮುಂತಾದ ರೋಗಗಳಿಂದ ಕಾಪಾಡುತ್ತದೆ.

ತ್ವಚೆಯ ಕಾಂತಿ ಹೆಚ್ಚಿಸಲು:
ಒಣ ಏಪ್ರಿಕಾಟ್‍ನ ಎಣ್ಣೆಯು ಅತ್ಯುತ್ತಮವಾದ ಸ್ಕಿನ್ ಕೇರ್ ಉತ್ಪನ್ನವಾಗಿ ನೆರವಾಗುತ್ತದೆ. ಇದನ್ನು ಹಚ್ಚಿಕೊಳ್ಳುವುದರಿಂದ ತ್ವಚೆಯು ಉತ್ತಮ ಕಾಂತಿಯನ್ನು ಪಡೆಯುತ್ತದೆ. ಜೊತೆಗೆ ಇದು ಕಿವಿ ಸೋರುವಿಕೆಗು ಸಹ ಉತ್ತಮ ಔಷಧಿಯಾಗಿರುತ್ತದೆ.



Click it and Unblock the Notifications
