Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಆಯುರ್ವೇದದಲ್ಲಿ ತುಳಸಿಯು ಏಕೆ ಮಹತ್ವಪೂರ್ಣ?
ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಉದ್ದೇಶವಿದೆ. ಪೂಜೆ ಪುನಸ್ಕಾರಗಳಿಗೆ ಹೀಗೆ ಪ್ರತಿಯೊಂದು ಧಾರ್ಮಿಕ ಆಚರಣೆಗಳಲ್ಲಿ ತುಳಸಿಯ ಪಾತ್ರ ಹಿರಿದು. ತುಳಸಿ ಕೇವಲ ಸಸ್ಯವಾಗಿರದೇ ಪವಿತ್ರವಾದ ಸಂಪತ್ತಾಗಿದೆ. ಇದನ್ನು ಹೋಲಿ ಬೇಸಿಲ್ ಎಂದೂ ಕರೆಯುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಹತ್ತಾರು ಬಗೆಯ ತುಳಸಿ ಗಿಡಗಳು
ತುಳಸಿ ಕೇವಲ ಪೂಜೆಗೆ ಮಾತ್ರ ಉಪಯುಕ್ತವಾದುದಲ್ಲ ಇದರಲ್ಲಿರುವ ಔಷಧೀಯ ಗುಣಗಳೂ ಹಿರಿದು. ತುಳಸಿಯಲ್ಲಿ ಅನೇಕ ಆಯುರ್ವೇದ ಅಂಶಗಳಿದ್ದು ಜಗತ್ತಿನಾದ್ಯಂತ ಇದರ ಪಾತ್ರ ಮಹತ್ತರವಾದುದು. ರೋಗಗಳನ್ನು ಶಮನಗೊಳಿಸುವಲ್ಲಿ ತುಳಸಿಯ ಪಾತ್ರ ಅತೀ ಮುಖ್ಯವಾದುದು.
ಇಂದಿನ ಲೇಖನದಲ್ಲಿ ಈ ಆಯುರ್ವೇದೀಯ ಸಸ್ಯದ ಪ್ರಭಾವಕಾರಿ ಗುಣವನ್ನು ನಿಮ್ಮ ಮಂದಿಡುತ್ತಿದ್ದೇವೆ. ಇದರಿಂದ ನಿಮಗೆ ತಿಳಿಯಬಹುದು ತುಳಸಿ ಅಥವಾ ಇತರ ಯಾವುದೇ ಸಸ್ಯ ಸಂಪತ್ತು ರೋಗಗಳನ್ನು ಗುಣಪಡಿಸುವಲ್ಲಿ ಏಕೆ ಮಹತ್ವಪೂರ್ಣವಾದುದು ಎಂದು ತಿಳಿಯಬಹುದು. ತುಳಸಿಯನ್ನು "ಮೂಲಿಕೆಗಳ ರಾಣಿಯೆಂದೇ" ಕರೆಯುತ್ತಾರೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬಹುಪಯೋಗಿ ಔಷಧಗಳ ಸಂಜೀವಿನಿ 'ತುಳಸಿ'

ಜ್ವರವನ್ನು ಶಮನ ಮಾಡುತ್ತದೆ:
ತುಳಸಿಯು ಜ್ವರವನ್ನು ಶಮನ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಮಲೇರಿಯಾದಂತಹ ಅತಿ ಭಯಾನಕ ಜ್ವರವನ್ನು ಶಮನ ಮಾಡುವುದು ತುಳಸಿಗೆ ಚಿಟಿಕೆಯಷ್ಟು ಸಣ್ಣದಾದ ಕಾರ್ಯವಾಗಿದೆ. ಸೋಂಕಿನಿಂದ ಹರಡುವ ಯಾವುದೇ ಜ್ವರವನ್ನು ಇದು ಕ್ಷಣದಲ್ಲಿ ಶಮನ ಮಾಡುತ್ತದೆ. ತುಳಸಿಯ ಡಿಕಾಕ್ಷನ್ ಅನ್ನು ಸೇವಿಸುವುದು ಜ್ವರದ ತೀವ್ರತೆಯನ್ನು ಕಡಿಮೆ ಮಾಡಿ ನಿಮಗೆ ಆರಾಮವನ್ನು ನೀಡುತ್ತದೆ. ಈ ಕಷಾಯಕ್ಕೆ ಸಕ್ಕರೆ ಮತ್ತು ಹಾಲು ಬೆರೆಸಿ ಸ್ವಲ್ಪ ಸ್ವಲ್ಪವಾಗಿ ಸೇವಿಸುವುದು ಜ್ವರಕ್ಕೆ ತೀವ್ರ ಉಪಶಮನವನ್ನು ನೀಡುತ್ತದೆ.

ಮಧುಮೇಹಕ್ಕೆ ನೆರವು:
ಹಲವಾರು ಜನರು ತುಳಸಿಯನ್ನು ಇನ್ನೊಂದು ಮಹತ್ವಕಾರಿ ಪ್ರಯೋಜನಕ್ಕೂ ಬಳಸುತ್ತಾರೆ. ತುಳಸಿಯಲ್ಲಿರುವ ಒಂದು ಶಕ್ತಿಶಾಲಿ ಅಂಶವಾದ ಯುಜೋನಲ್ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿ ಹೃದಯವನ್ನು ಕಾಪಾಡುತ್ತದೆ. ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಗುಣ ಕೂಡ ಇದಕ್ಕಿದೆ. ಪ್ರತೀ ದೀನ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಅಗೆಯುವುದು ಹೆಚ್ಚಿನ ಕಾಯಿಲೆಗಳಿಂದ ನಿಮ್ಮ ಹೃದಯವನ್ನು ಕಾಪಾಡುತ್ತದೆ.

ಕೆಮ್ಮು:
ನಿರಂತರ ಕೆಮ್ಮು ನಿಮ್ಮ ವೈರಿಯಾಗಿದ್ದಲ್ಲಿ ತುಳಸಿಯ ಸಹಾಯವನ್ನು ನಿಮಗೆ ಪಡೆದುಕೊಳ್ಳಬಹುದು. ಹೆಚ್ಚಿನ ಕೆಮ್ಮು ಸಿರಪ್‌ಗಳಲ್ಲಿ ಅತೀ ಮುಖ್ಯವಾದ ಸಾಮಾಗ್ರಿಯಾಗಿ ತುಳಸಿಯನ್ನು ಬಳಸುತ್ತಾರೆ. ಬ್ರಾಂಕೈಟೀಸ್ ಮ್ಯೂಕಸ್ ಮತ್ತು ಅಸ್ತಮಾವನ್ನು ಇದು ಶಮನ ಮಾಡುವುದರಿಂದ ಕೆಮ್ಮಿಗೆ ತುರ್ತು ಪರಿಹಾರವನ್ನು ತುಳಸಿ ನೀಡುತ್ತದೆ. ಶೀತ ಹಾಗೂ ಫ್ಲೂನಿಂದ ಕೂಡ ನಿಮಗೆ ನಿರಂತರ ಆರಾಮ ದೊರಕುತ್ತದೆ.

ಉಸಿರಾಟ ತೊಂದರೆಗಳು:
ಉಸಿರಾಟ ತೊಂದರೆಗಳಿಂದ ಬಳಲುತ್ತಿರುವವರಿಗೆ ಸಂಜೀವಿನಿಯಾಗಿದೆ ತುಳಸಿ. ಜೇನು ಮತ್ತು ಶುಂಠಿಯನ್ನು ಸೇರಿಸಿ ತಯಾರುಮಾಡಲಾದ ತುಳಸಿ ಕಷಾಯ ಬ್ರಾಂಕೈಟೀಸ್, ಅಸ್ತಮಾ, ಇನ್‌ಫ್ಲುಯೆಂಜಾ, ಕೆಮ್ಮು ಮತ್ತು ಶೀತಕ್ಕೆ ರಾಮಬಾಣವಾಗಿದೆ. ತುಳಸಿ ಎಲೆಗಳು, ಲವಂಗ ಹಾಗೂ ಉಪ್ಪು ಬೆರೆಸಿ ತಯಾರು ಮಾಡಲಾದ ಕಷಾಯ ಇನ್‌ಫ್ಲುಯೆಂಜಾಗೆ ಶೀಘ್ರ ಪರಿಹಾರವನ್ನು ನೀಡುತ್ತದೆ. ಅರ್ಧ ಲೀಟರ್ ನೀರಿನಲ್ಲಿ ನೀರು ಉಳಿಯುವವರೆಗೆ ಅವುಗಳನ್ನು ಕುದಿಸಬೇಕು ನಂತರ ಸೇರಿಸಿ ಅದನ್ನು ಸೇವಿಸಿ.

ತಲೆನೋವು:
ನಿರಂತರವಾಗಿ ಎಲ್ಲರನ್ನೂ ಕಾಡುವ ಒಂದು ಸಮಸ್ಯೆಯಾಗಿದೆ ತಲೆನೋವು. ತುಳಸಿ ಎಲೆಗಳನ್ನು ಶ್ರೀಗಂಧದ ಪೇಸ್ಟ್‌ನಲ್ಲಿ ಅರೆದು ನಂತರ ನೆತ್ತಿಗೆ ಅದನ್ನು ಹಚ್ಚುವುದರಿಂದ ನೆತ್ತಿ ತಂಪಾಗಿ ತಲೆನೋವು ನಿವಾರಣೆಯಾಗುತ್ತದೆ. ತುಳಸಿ ತುಂಬಾ ಪರಿಣಾಮಕಾರಿಯಾಗಿರುವುದರಿಂದ ಅದನ್ನು ಎಲ್ಲಿ ಮತ್ತು ಹೇಗೆ ಬಳಸಬೇಕು ಎಂಬುದನ್ನು ನೀವು ತಿಳಿದುಕೊಳ್ಳುವುದು ಒಳಿತು.



Click it and Unblock the Notifications