Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಋತುಚಕ್ರ ಕುರಿತಾದ ಮೂಢನಂಬಿಕೆಗಳು ಒಳ್ಳೆಯದೇ ಅಥವಾ ಕೆಟ್ಟದ್ದೇ?
ಸಮೀರ ಆಕೆಯ ಬಾಸ್‌ಗೆ ಕರೆ ಮಾಡಿ ರಜಾ ಬೇಕೆಂದು ಕೇಳಿದಳು. ಏಕೆ ?ಇದು ಆಕೆಯ ಮುಟ್ಟಿನ ಮೊದಲ ದಿನವಾಗಿತ್ತು ಮತ್ತು ಇತರ ಮಹಿಳೆಯರಂತೆ ಆಕೆಯೂ ಕೂಡ ಬಳಲಿಕೆ ಹೊಂದಿದ್ದಳು. ಆಫೀಸು ಅಥವಾ ಪಾರ್ಟಿಗೆ ಹಾಜರಾಗಲು ಆಕೆಗೆ ಇಷ್ಟವಿರಲಿಲ್ಲ. ಹಾಗೆಯೇ ಆಕೆ ಶಾಪಿಂಗ್, ವ್ಯಾಯಾಮ ಇವುಗಳಾವುದಕ್ಕೂ ಹೋಗಲು ಬಯಸಲಿಲ್ಲ. ಮುಟ್ಟಿನ ಬಗ್ಗೆ ಕೆಲವು ಕಟ್ಟು ಕಥೆಗಳಿವೆ ಅವುಗಳನ್ನು ಪ್ರತಿಯೊಬ್ಬ ಮಹಿಳೆಯೂ ತಿಳಿದುಕೊಳ್ಳಲೇಬೇಕು.
ಮುಟ್ಟು ದೇಹವನ್ನು ದುರ್ಬಲಗೊಳಿಸುತ್ತದೆ
ಇದು ಸತ್ಯವಲ್ಲ. ನಿಮ್ಮ ದೇಹ ರಕ್ತ ಕಳೆದುಕೊಳ್ಳುವುದರಿಂದ ದುರ್ಬಲವಾಗುವುದಿಲ್ಲ. ದೇಹವು ದಿನದಲ್ಲಿ 150 ಎಂಎಲ್ ಅಂದರೆ ಐದು ಆರು ಚಮಚ ರಕ್ತವನ್ನು ಕಳೆದುಕೊಳ್ಳುತ್ತದೆ. ಆದರೆ ನಿಮಗೆ ರಕ್ತಹೀನತೆ ಇದ್ದರೆ ಅಂತಹ ಕಷ್ಟವಾಗಬಹುದು. ಋತುಚಕ್ರದ ಕುರಿತು ಹಿಂದೂ ಸಂಪ್ರದಾಯದ ಪ್ರಚಲಿತ ಕಲ್ಪನೆಗಳು

ಮುಟ್ಟಿನ ರಕ್ತ ಕೆಟ್ಟದ್ದು
ಇದು ಪ್ರತಿಯೊಬ್ಬ ಸ್ತ್ರೀ ಯೂ ಅರಿತುಕೊಳ್ಳಬೇಕು. ಮುಟ್ಟಿನ ರಕ್ತ ಸಾಮಾನ್ಯವಾದುದು. ಇದು ಯಾವುದೇ ರೀತಿಯ ವಾಸನೆ, ಅಥವಾ ಬೇರೆ ರೀತಿಯಲ್ಲಿರುವುದಿಲ್ಲ. ಬ್ಯಾಕ್ಟೀರಿಯ ಬರದಂತೆ ತಡೆಯಲು ಆಗಾಗ ಪ್ಯಾಡ್ ಬದಲಾಯಿಸಿ. ತಾಜಾ ಅನುಭವವನ್ನು ಪಡೆಯಿರಿ ಮತ್ತು ಸ್ವಚ್ಛತೆಗೆ ಮಾನ್ಯತೆ ಕೊಡಿ.
ವ್ಯಾಯಾಮ ಬೇಡ
ಇದೊಂದು ಮೂಡ ನಂಬಿಕೆ. ನೀವು ನಿಮಗೆ ಬೇಕಾದ ವರ್ಕ್ ಔಟ್ ಮಾಡಬಹುದು. ಆದರೆ ನೀವು ಯೋಗ ಮಾಡುತ್ತಿದ್ದಲ್ಲಿ ತುಂಬಾ ಸ್ಟ್ರೆಚಿಂಗ್ ಇರುವ ಮತ್ತು ಹೆಚ್ಚು ಉಸಿರಾಟದ ಆಸನಗಳನ್ನು ಮಾಡಬೇಡಿ.
ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದಿರುವುದು ಸೂಕ್ತ
ಹೌದು ನಿಮಗೆ ಅಹಿತಕರ ಎಂದೆನಿಸಿದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದಿರುವುದು ಸೂಕ್ತ. ಆದರೆ ನೀವು ನಿಮ್ಮ ಸಂಗಾತಿ ಬಯಸಿದರೆ ಯಾವುದೇ ಚಿಂತೆ ಬೇಡ. ನಿಮಗೆ ತುಂಬಾ ಹೊಟ್ಟೆ ನೋವು ಇದ್ದಲ್ಲಿ ಅದು ಸೆಕ್ಸ್ ನಲ್ಲಿ ತೊಡಗಿಕೊಳ್ಳುವುದರಿಂದ ದೂರವಾಗುತ್ತದೆ.
ಮುಟ್ಟಿನ ಸೆಳೆತ (ಕ್ರಾಂಪ್ಸ್)
ಸಾಕಷ್ಟು ಸ್ತ್ರೀಯರು ಮುಟ್ಟಿನ ಸೆಳೆತ ಅನುಭವಿಸುತ್ತಾರೆ. ಮೊದಲ ದಿನ ಅತಿಯಾದ ನೋವು ಸಾಮಾನ್ಯ,ಇದನ್ನು ನೀವು ಚಾಕೊಲೇಟ್ ತಿನ್ನುವುದರ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಆದರೆ ನೋವು ನಂತರದ ದಿನಗಳಲ್ಲೂ ಮುಂದುವರೆದರೆ ಸ್ತ್ರೀ ರೋಗ ತಜ್ಞರನ್ನು ಭೇಟಿ ನೀಡುವುದು ಸೂಕ್ತ.
ರಿಲಾಕ್ಸ್ ಮಾಡಿ, ಮುಟ್ಟಿನಲ್ಲಿ ಬಸಿರಾಗುವುದಿಲ್ಲ
ಇದೊಂದು ಕಟ್ಟುಕತೆ. ಮುಟ್ಟು ಸಂತಾನೋತ್ಪತ್ತಿ ವ್ಯಯಸ್ಥೆ ನಿಲ್ಲಿಸುವುದಿಲ್ಲ. ಮುಟ್ಟಿನ ಸಮಯದಲ್ಲೂ ಕೂಡ ಮಹಿಳೆಯರು ಗರ್ಭಧರಿಸುವ ಸಾಧ್ಯತೆ ಇದೆ. ಹಾಗಾಗಿ ಬೇಡದ ಬಸಿರನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವುದು ಸೂಕ್ತ.
ಕೂದಲನ್ನು ತೊಳೆಯಬಾರದು
ಇದಕ್ಕೆ ಯಾವುದೇ ಕಾರಣವಿಲ್ಲ. ಮುಟ್ಟಿನ ದಿನಗಳಲ್ಲಿ ತಲೆಗೆ ಸ್ನಾನ ಮಾಡುವುದರಿಂದ ಯಾವುದೇ ತೊಂದರೆಯಿಲ್ಲ.ಕೂದಲಿಗೆ ಬಣ್ಣ ಹಚ್ಚಿಕೊಳ್ಳಿ, ಸ್ಪಾ ಗೆ ಹೋಗಿ, ಕೂದಲು ಕಟ್ ಮಾಡಿಸಿಕೊಳ್ಳಿ, ಸ್ಟ್ರೈಟ್ ಮಾಡಿಸಿಕೊಳ್ಳಿ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ.
ತಿನ್ನಬೇಡಿ
ಇದೂ ಕೂಡ ಒಂದು ಮೂಡ ನಂಬಿಕೆ ಎನ್ನಬಹುದು. ಈ ಸಮಯದಲ್ಲಿ ಏನು ಬೇಕಾದರೂ ತಿನ್ನಬಹುದು.ಈ ಐದು ದಿನಗಳು ಯಾವುದೇ ರೀತಿಯ ಆಹಾರ ಕ್ರಮ ಬದಲಾವಣೆ ಮಾಡಬೇಕೆಂದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
