ಬೇಸಿಗೆಯಲ್ಲಿ ದೇಹದ ತೇವಾಂಶ ಕಾಪಾಡಲು ಸಹಾಯಕವಾಗುವ 13 ತರಕಾರಿಗಳು

By Arpitha Rao

ಬೇಸಿಗೆಯ ಧಗೆ ಎಂದರೆ ಎಂತವರಿಗೂ ಸುಸ್ತು ತರಿಸಿ ಸದಾ ಜಡ ಬಡಿದವರಂತೆ ಮಾಡಿಬಿಡುತ್ತದೆ.ಕೆಲಸಕ್ಕೆ ಹೋಗುವವರಿಗಂತೂ ಬೆವರು ಇಳಿಯುವುದು ಖಂಡಿತ.ಇಂತಹ ಸಮಯದಲ್ಲಿ ತಂಪಾಗಿ,ತಾಜಾತನದಿಂದ ಇರಬೇಕು ಎಂಬುದು ಎಲ್ಲರ ಇಚ್ಛೆಯಾಗಿರುತ್ತದೆ.

ನೀವು ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಕೇವಲ ದೇಹದ ಒಳಗೆ ತಂಪಾಗಿಸಿಕೊಳ್ಳಲು ಮಾತ್ರವಲ್ಲ ಹೊರಗೂ ಕೂಡ ಸುಸ್ತನ್ನು ಹೋಗಲಾಡಿಸಿ ತಾಜಾತನ ನೀಡುವ ಹಣ್ಣು,ತರಕಾರಿಗಳನ್ನು ಬಳಸಬೇಕು.ನಾವಿಲ್ಲಿ ಬೇಸಿಗೆಯ ಧಗೆಯಲ್ಲಿ ಬಳಸಬೇಕಾದ ಆಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ನೀರು

ನೀರು

ನೀರಿಗಿಂತ ಮುಖ್ಯವಾದುದು ಸಹಾಯಕವಾದುದು ಬೇಸಿಗೆಯಲ್ಲಿ ಇನ್ನಾವುದೂ ಇಲ್ಲ ಎನ್ನಬಹುದು.ಸಾಧ್ಯವಾದಾಗೆಲ್ಲ ನೀರನ್ನು ಹೆಚ್ಚು ಬಳಸಿರಿ.ದೇಹವು ತೇವಾಂಶವನ್ನು ಕಳೆದುಕೊಳ್ಳಲು ಮುಖ್ಯ ಕಾರಣ ನೀವು ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯದಿರುವುದು.ತಜ್ಞರು ಹೇಳುವ ಪ್ರಕಾರ ಪ್ರತಿಯೊಬ್ಬರೂ ದಿನಕ್ಕೆ ಎರಡು ಲೀಟರ್ ನಷ್ಟು ನೀರನ್ನು ಕುಡಿಯಬೇಕು.(ನಿಮಗೆ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಸೇವಿಸಿ) ಇದರಿಂದ ದೇಹವು ತೇವಾಂಶ ಕಳೆದುಕೊಳ್ಳುವುದಿಲ್ಲ.

ಸೌತೆಕಾಯಿ

ಸೌತೆಕಾಯಿ

ನೀರು ಬೇಸಿಗೆಯಲ್ಲಿ ದೇಹವನ್ನು ತಾಜಾವಾಗಿರಿಸಲು ಸಹಾಯಕವಾದರೂ ಕೂಡ ಇದರೊಂದಿಗೆ ಬೇರೆಬೇರೆ ಆಹಾರಗಳು ಕೂಡ ದೇಹದ ತೇವಾಂಶವನ್ನು ಕಾಪಾಡಲು ಸಹಕರಿಸುತ್ತದೆ.ಅಂತಹ ತರಕಾರಿಯಲ್ಲಿ ಸೌತೆಕಾಯಿ ಕೂಡ ಒಂದು.ಸೌತೆಕಾಯಿ ಶೇಖಡಾ 97 ರಷ್ಟು ನೀರನ್ನು ಹೊಂದಿರುತ್ತದೆ.ಇದರ ಸಲಾಡ್ ತಿನ್ನುವುದರಿಂದ ದೇಹಕ್ಕೆ ಅಗತ್ಯ ನೀರಿನಂಶ ಸೇರುತ್ತದೆ,ಇದರಿಂದ ದೇಹ ತಂಪಾಗಿರುತ್ತದೆ.

ಸೌತೆಕಾಯಿಯನ್ನು ಅನೇಕ ವಿಧಾನದಲ್ಲಿ ಸೇವಿಸಬಹುದು.ಸೌತೆಕಾಯಿ ಸೂಪ್,ಸ್ಮೋಥೀ, ಜ್ಯೂಸ್ ಹೀಗೆ ವಿವಿಧ ರೀತಿಯಲ್ಲಿ ಇದನ್ನು ಸೇವಿಸಬಹುದು.

ಐಸ್ ಬರ್ಗ್ ಲೆಟ್ಯೂಸ್

ಐಸ್ ಬರ್ಗ್ ಲೆಟ್ಯೂಸ್

ಇದು ಆರೋಗ್ಯಕರವಾದ ನಾರಿನಂಶ ಹೊಂದಿರದ ತರಕಾರಿಯಾಗಿರಬಹುದು.ಆದರೆ ಸೌತೆ ಕಾಯಿಯಲ್ಲಿ ಇರುವಂತೆಯೇ ದೇಹಕ್ಕೆ ನೀರಿನಂಶವನ್ನು ಒದಗಿಸುವ ಒಳ್ಳೆಯ ಅಂಶ ಇದರಲ್ಲಿದೆ.ನೀವು ಸಲಾಡ್ ನಲ್ಲಿ ಇದನ್ನು ಅಧಿಕವಾಗಿ ಬಳಸಬಹುದು,ಇದರಿಂದ ನಿಮ್ಮ ದೇಹಕ್ಕೆ ಅಗತ್ಯ ನೀರಿನಂಶ ಸೇರುವುದರ ಜೊತೆಗೆ ನೀವು ಸುಂದರವಾಗಿ ಕಾಣುವಂತೆ ಕೂಡ ಲೆಟ್ಯೂಸ್ ಮಾಡುತ್ತದೆ.ನೀವು ಸ್ಯಾಂಡ್ವಿಚ್ ಮಾಡಿಕೊಳ್ಳುವಾಗ ಕೂಡ ಇದನ್ನು ಬಳಸಬಹುದು ಇದರಿಂದ ರುಚಿ ಹೆಚ್ಚುತ್ತದೆ.

ಮೂಲಂಗಿ

ಮೂಲಂಗಿ

ಮೂಲಂಗಿಯಲ್ಲಿ ನೀರಿನಂಶ ಹೇರಳವಾಗಿ ದೊರಕುವುದರಿಂದ ಇದು ನಿಮ್ಮ ದೇಹವನ್ನು ಹೆಚ್ಚು ಸಮಯ ತಾಜಾವಾಗಿ ಇಡುತ್ತದೆ.ಇದು ಜ್ಯೂಸಿ ಆಗಿರುವುದರಿಂದ ಇದಕ್ಕೆ ನೀವು ಅಡುಗೆ ತಯಾರಿಸುವಾಗ ಮಯೋನೀಸ್ ಸೇರಿಸುವ ಅಗತ್ಯವೇ ಬರುವುದಿಲ್ಲ.ಮೂಲಂಗಿ ಜೊತೆಗೆ ಲೆಟ್ಯೂಸ್ ಎಲೆಗಳು,ತುರಿದ ಕ್ಯಾರೇಟ್ ಇವುಗಳನ್ನೆಲ್ಲ ಸೇರಿಸಿ ಸಲಾಡ್ ಅಥವಾ ಯಾವುದೇ ರೀತಿಯ ಅಡುಗೆ ಮಾಡಿ ಸೇವಿಸಬಹುದು.

ಟೊಮೇಟೊ

ಟೊಮೇಟೊ

ಬೇಸಿಗೆ ಅಥವಾ ಚಳಿಗಾಲ ಯಾವುದೇ ಆಗಿರಲಿ ಪೌಷ್ಟಿಕ ತಜ್ಞರು ಟೊಮೇಟೊ ಹೆಚ್ಚು ಬಳಸಲು ಹೇಳುತ್ತಾರೆ.ಇದರಲ್ಲಿರುವ ನೀರಿನ ಅಂಶ ದೇಹವನ್ನು ತಾಜಾವಾಗಿ,ತೇವಾಂಶ ಭರಿತವಾಗಿ ಇರಿಸುತ್ತದೆ.ಟೊಮೇಟೊದಲ್ಲಿರುವ ಲಿಕೊಪೇನ್ ಎಂಬ ಉತ್ಕರ್ಶಣ ಅಂಶವು ಮುಖವನ್ನು ಹೊಳೆಯುವಂತೆ ಮಾಡುವುದರ ಜೊತೆಗೆ ಸುಕ್ಕುಗಟ್ಟದಂತೆ ನೋಡಿಕೊಳ್ಳುತ್ತದೆ.ನೀವು ಟೊಮೇಟೊವನ್ನು ಸ್ನಾಕ್ಸ್ ಗೆ,ಅಡುಗೆಗೆ,ಸಲಾಡ್ ಗೆ ಹೀಗೆ ಬೇಕಾದ ರೀತಿಯಲ್ಲಿ ಬಳಸಬಹುದು.

ಕ್ಯಾಪ್ಸಿಕಂ

ಕ್ಯಾಪ್ಸಿಕಂ

ಬೇಸಿಗೆಯ ಧಗೆಯನ್ನು ನೀಗಲು ಕ್ಯಾಪ್ಸಿಕಂ ಹೇರಳ ನೀರಿನಂಶ ಹೊಂದಿರುವ ತರಕಾರಿ.ಕೆಂಪು ಮತ್ತು ಹಳದಿ ಕ್ಯಾಪ್ಸಿಕಂಗಿಂತ ಹಸಿರು ಕ್ಯಾಪ್ಸಿಕಂ ಹೆಚ್ಚು ನೀರಿನಂಶ ಹೊಂದಿರುತ್ತದೆ.ಇದನ್ನು ಯಾವುದೇ ರೀತಿ ಗ್ರೇವಿ,ಸಲಾಡ್ ಇನ್ನಿತರ ಅಡುಗೆಯಲ್ಲಿ ಬಳಸಿ ಸೇವಿಸಬಹುದು.

ಹೂ ಕೋಸು

ಹೂ ಕೋಸು

ಇದು ಬಣ್ಣದಲ್ಲಿ ಬಾಡಿದಂತೆ ಕಾಣಬಹುದು ಆದರೆ ಇದನ್ನು ಸೇವಿಸುವುದರಿಂದ ನಿಮ್ಮ ದೇಹ ಬಾಡದಂತೆ ತಡೆಯುತ್ತದೆ.ಹೂ ಕೊಸಿನಲ್ಲಿ ಶೇಖಡಾ 93 ರಷ್ಟು ನೀರಿನಂಶ ಇರುತ್ತದೆ.ಇದು ನಿಮ್ಮನ್ನು ಬೇಸಿಗೆಯಲ್ಲಿ ತಾಜಾವಾಗಿ ಇರುವುದಕ್ಕೆ ಮಾತ್ರವಲ್ಲ,ಕ್ಯಾನ್ಸರ್ ಇನ್ನಿತರ ಕಾಯಿಲೆಗಳು ಬರದಂತೆ ಕೂಡ ತಡೆಯುತ್ತದೆ.

ಕಲ್ಲಂಗಡಿ ಹಣ್ಣು

ಕಲ್ಲಂಗಡಿ ಹಣ್ಣು

ಬೇಸಿಗೆ ಬಿಸಿಲು,ಧಗೆ ಎಂದ ತಕ್ಷಣ ಕಲ್ಲಂಗಡಿ ಹಣ್ಣನ್ನು ಯಾರೂ ಮರೆಯಲಾರರು.ಇದರ ಗುಲಾಬಿ ಕೆಂಪು ಮಿಶ್ರಿತ ಬಣ್ಣವೇ ಹಾಗಿದೆ ಇದನ್ನು ಬೇಡ ಎನ್ನಲು ಸಾಧ್ಯವೇ ಇಲ್ಲ.ಟೊಮೇಟೊದಲ್ಲಿರುವಂತೆಯೇ ಕಲ್ಲಂಗಡಿ ಹಣ್ಣಿನಲ್ಲಿ ಕೂಡ ಲಿಕೊಪೇನ್ ಅಂಶವಿದ್ದು ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದೆ.

ಪಾಲಾಕ್ ಸೊಪ್ಪು

ಪಾಲಾಕ್ ಸೊಪ್ಪು

ಪಾಲಾಕ್ ಸೊಪ್ಪಿನಲ್ಲಿ ಲೆಟ್ಯೂಸ್ ಎಲೆಗಳಷ್ಟು ನೀರಿನಂಶವಿರುವುದಿಲ್ಲ,ಆದರೆ ಲೆಟ್ಯೂಸ್ ಸೊಪ್ಪು ಹೆಚ್ಚು ದುಬಾರಿ ಆಗಿರುವುದರಿಂದ ಎಲ್ಲರೂ ಲೆಟ್ಯೂಸ್ ಕೊಂಡುಕೊಳ್ಳಲು ಕಷ್ಟವಾಗಬಹುದು.ಪಾಲಾಕ್ ಸೊಪ್ಪು ಸ್ವಲ್ಪ ಕಡಿಮೆ ಬೆಲೆಯಲ್ಲಿ ದೊರಕುವುದರಿಂದ ಇದನ್ನು ಬಳಸಿ ದೇಹವನ್ನು ತಾಜಾವಾಗಿ ಇಟ್ಟುಕೊಳ್ಳಬಹುದು.

ಸ್ಟಾರ್ ಹಣ್ಣು

ಸ್ಟಾರ್ ಹಣ್ಣು

ಸ್ಟಾರ್ ಹಣ್ಣು ಕೇವಲ ನಿಮ್ಮ ನೀರಡಿಕೆ(ಆಸರು)ಯನ್ನು ಕಡಿಮೆ ಮಾಡುವುದು ಮಾತ್ರವಲ್ಲ,ಇದು ನಿಮ್ಮ ದೇಹಕ್ಕೆ ನೀರಿನಂಶ ನೀಡುತ್ತದೆ.ಇದು ಪೈನಾಪಲ್ ನಂತೆಯೇ ಇದ್ದರೂ ಕೂಡ ಹುಳಿ ಅಂಶ ಹೆಚ್ಚಿರುತ್ತದೆ.ಇದನ್ನು ಹೇರಳವಾಗಿ ತಿನ್ನುವುದರಿಂದ ದೇಹ ತಾಜಾವಾಗಿರುತ್ತದೆ.ಆದರೆ ಮೂತ್ರಪಿಂಡದ ತೊಂದರೆ ಇರುವವರು ಇದರಲ್ಲಿ ಅಧಿಕ ಪ್ರಮಾಣದಲ್ಲಿ ಅಕ್ಸಾಲಿಕ್ ಆಮ್ಲ ಇರುವುದರಿಂದ ಇದನ್ನು ಅಧಿಕವಾಗಿ ಸೇವಿಸುವುದು ಒಳ್ಳೆಯದಲ್ಲ.

ಸ್ಟ್ರಾಬೆರಿ

ಸ್ಟ್ರಾಬೆರಿ

ಭಾರತೀಯ ಮಾರುಕಟ್ಟೆಯಲ್ಲಿ ಬೇಸಿಗೆಯಲ್ಲಿ ಸ್ಟ್ರಾಬೆರಿ ಹಣ್ಣು ದೊರಕುವುದು ಕಷ್ಟ.ಆದರೆ ನಿಮಗೆ ದೊರಕಿ ನೀವು ಇದನ್ನು ಉಪಯೋಗಿಸಿದರೆ ತಾಜಾತನ ದೊರಕುವುದು ಖಂಡಿತ.ಇದು ಸಿಹಿಯಾಗಿರುವುದರ ಜೊತೆಗೆ ದೇಹವನ್ನು ತೇವಾಂಶವಾಗಿಡಲು ಸಹಕರಿಸುತ್ತದೆ.ಪ್ರತಿದಿನ ಸಾಕಷ್ಟು ಸ್ಟ್ರಾಬೆರಿ ತಿಂದು ಆರೋಗ್ಯಯುತವಾಗಿರಿ.

ಬ್ರೋಕೊಲಿ

ಬ್ರೋಕೊಲಿ

ಬೇಸಿಗೆ ಧಗೆ ನೀಗಿಸಲು ಕ್ರಂಚಿ ಆಗಿರುವ ಬ್ರೊಕೋಲಿ ಸಹಕಾರಿ.ಇದರಲ್ಲಿ ನೀರಿನಂಶದ ಜೊತೆಗೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿರುತ್ತದೆ.ದೇಹದಲ್ಲಿ ಕ್ಯಾನ್ಸರ್ ಕಣಗಳನ್ನು ಹೋಗಲಾಡಿಸಲು ಇದು ಸಹಕಾರಿ.

ಕರಬೂಜ

ಕರಬೂಜ

ಮಾರುಕಟ್ಟೆಯಲ್ಲಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ನಂತರದಲ್ಲಿ ದೊರಕುವ ಹಣ್ಣು ಕರಬೂಜ.ಕಾಲು ಭಾಗದಷ್ಟು ಕರಬೂಜವನ್ನು ತಿಂದರೆ ದಿನಕ್ಕೆ ಬೇಕಾದ ವಿಟಮಿನ್ ಸಿ,ಎ ಮತ್ತು ದಿನಕ್ಕೆ ಬೇಕಾದ 50 ಕ್ಯಾಲೋರಿ ದೊರಕುತ್ತದೆ.

Story first published: Thursday, April 17, 2014, 15:05 [IST]
X
Desktop Bottom Promotion