Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ದಾಹವನ್ನು ತಣಿಸಲು 10 ಸರಳ ವಿಧಾನಗಳು
ನಮಗೆ ದಾಹವಾದಾಗ ಹಲವಾರು ಪಾನೀಯಗಳ ಮೊರೆ ಹೋಗುವುದು ನಮ್ಮ ಅಭ್ಯಾಸ, ಇದರಲ್ಲಿ ನೀರಿಗೆ ಮೊದಲ ಪ್ರಾಶಸ್ತ್ಯ. ಮಾರುಕಟ್ಟೆಯಲ್ಲಿ ನಮ್ಮ ದಾಹವನ್ನು ತಣಿಸುವ ಹಲವಾರು ಪಾನೀಯಗಳು ಬಂದು ಕುಳಿತಿವೆ. ಆದರೆ ದುಃಖಕರವಾದ ವಿಚಾರವೆಂದರೆ ಈ ತಳಕು ಬಳುಕಿನ ಪಾನೀಯಗಳು ದಾಹ ತಣಿಸುವ ನೆಪದಲ್ಲಿ ನಮಗೆ ಅನಾರೋಗ್ಯವನ್ನು ತರುತ್ತವೆ. ಆದರೆ ಹಾಗೆಂದು ಅವುಗಳಿಗೆ ಬೇಡಿಕೆಯೇನು ತಗ್ಗಿಲ್ಲ. ನಮ್ಮ ದಾಹವನ್ನು ತಣಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ಸಹ ವರ್ಧಿಸುವ ಪಾನೀಯಗಳಿಗಾಗಿ ನಾವು ಏನು ಮಾಡಬೇಕು.
ಸಾಮಾನ್ಯವಾಗಿ ನಮ್ಮ ದೇಹವು ಉಸಿರಾಟ, ಬೆವರು ಮತ್ತು ಮೂತ್ರದ ಮೂಲಕ ನೀರಿನಂಶವನ್ನು ಕಳೆದುಕೊಳ್ಳುತ್ತದೆ. ಆದರೆ ಬೇಸಿಗೆಯ ಅವಧಿಯಲ್ಲಿ ಈ ಪ್ರಮಾಣವು ದುಪ್ಪಟ್ಟಾಗುತ್ತದೆ. ಆಗ ನಾವು ವಿಧಿಯಿಲ್ಲದೆ ದೇಹದಲ್ಲಿ ನೀರಿನಂಶವನ್ನು ಸಮತೋಲನದಲ್ಲಿಡಲು ಪ್ರಯತ್ನಿಸಬೇಕಾಗುತ್ತದೆ. ಏಕೆಂದರೆ ದೇಹದಲ್ಲಿರುವ ಕೋಶಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ಸರಿಯಾಗಿ ಪೂರೈಕೆಯಾಗಬೇಕೆಂದರೆ, ನಮ್ಮ ದೇಹದಲ್ಲಿ ನೀರಿನಂಶವು ಸಹ ಸರಿಯಾದ ಪ್ರಮಾಣದಲ್ಲಿರಬೇಕು.
ನಮ್ಮ ದೇಹದಲ್ಲಿ ನೀರಿನ ಅಂಶವನ್ನು ಉಳಿಸಿಕೊಳ್ಳಲು ನಾವು ಸೇವಿಸುವುದು ಎರಡು ಅಂಶಗಳು ಒಂದು ನೀರು, ಇನ್ನೊಂದು ಪಾನೀಯಗಳು. ಇವೆರಡು ನಮ್ಮ ದೇಹದ ನೀರಿನಂಶವನ್ನು ನಿರ್ಧರಿಸುವ ಅಂಶಗಳು, ಬನ್ನಿ ಅವುಗಳ ಕುರಿತು ಒಂದು ನೋಟ ಹರಿಸೋಣ.

ನೀರು
ಇದು ಬಾಯಾರಿಕೆಯನ್ನು ತಣಿಸಲು ಇರುವ ಅತ್ಯಂತ ಸುಲಭವಾದ ಮಾರ್ಗ. ಮನೆಯಲ್ಲಿ ಅಥವಾ ಅಂಗಡಿಯಲ್ಲಿ ದೊರೆಯುವ ಎಲ್ಲಾ ಲಘು ಪಾನೀಯಗಳಿಗೆ ಪ್ರಧಾನವಾಗಿ ನೀರನ್ನೆ ಬಳಸುತ್ತಾರೆ. ಯಾವಾಗಲು ಒಳ್ಳೆಯ ನೀರನ್ನು, ಸರಿಯಾದ ಪ್ರಮಾಣದಲ್ಲಿ ಕುಡಿಯುವ ಕ್ರಮವನ್ನು ರೂಢಿಸಿಕೊಳ್ಳಿ. ಆಗ ನೋಡಿ ನಿಮ್ಮ ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು, ಅದು ಅಂತರಿಕವಾಗಿ ಮತ್ತು ಬಾಹ್ಯವಾಗಿ ನಿಮಗೆ ಕಂಡು ಬರುತ್ತದೆ.

ನಿಂಬೆಹಣ್ಣಿನ ಪಾನಕ
ನೀರಿನ ಜೊತೆಗೆ ಸಕ್ಕರೆ, ನಿಂಬೆಹಣ್ಣಿನ ರಸ ಮತ್ತು ಚಿಟಿಕೆ ಉಪ್ಪನ್ನು ಸೇರಿಸಿ ಮಾಡುವ ನಿಂಬೆಹಣ್ಣಿನ ಪಾನಕ ಅಥವಾ ಜ್ಯೂಸ್, ಬಾಯಾರಿದವರಿಗೆ ಅಮೃತದಂತೆ ಕಾಣುತ್ತದೆ. ಇದು ಕೇವಲ ನಿಮ್ಮ ದಾಹವನ್ನು ಮಾತ್ರ ತೀರಿಸುವುದಿಲ್ಲ. ಜೊತೆಗೆ ನಿಮ್ಮ ದೇಹವು ಬೆವರುವಿಕೆಯಿಂದಾಗಿ ಕಳೆದುಕೊಂಡ ಉಪ್ಪನ್ನು ಸಹ ಮರಳಿ ಪಡೆಯಲು ನೆರವಾಗುತ್ತದೆ. ನಿಂಬೆಹಣ್ಣಿನ ಪಾನಕದಂತೆಯೇ, ಕಿತ್ತಳೆ ರಸವು ಸಹ ನಿಮ್ಮ ದಾಹವನ್ನು ತಣಿಸುವ ಮತ್ತೊಂದು ಪಾನೀಯವಾಗಿದೆ.

ಐಸ್ ಟೀ
ತಣ್ಣಗೆ ಕೊರೆಯುವ ಐಸ್ ಟೀಯನ್ನು, ಐಸ್ ಕ್ಯೂಬ್‍ಗಳ ಮೇಲೆ ಸುರಿದು ನೀಡಿದರೆ ಆಹಾ! ಬಾಯಾರಿದ ಬಾಯಿಯು ಮತ್ತೊಂದು ಬೇಕು ಎಂದು ಕೇಳುತ್ತದೆ. ಇದಕ್ಕೆ ನಿಂಬೆ, ಪುದಿನಾದ ರುಚಿಗಳನ್ನು ಬೆರೆಸಿದರೆ ರುಚಿ ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಬೇಸಿಗೆಯ ಧಗೆಯನ್ನು ತಣಿಸಲು ಇಂತಹ ತಣ್ಣಗಿನ ಪಾನೀಯಗಳನ್ನು ಸೇವಿಸುವುದು ಮುದ ನೀಡುತ್ತದೆ.

ಶುಂಠಿಯ ಪಾನೀಯ
ಶುಂಠಿಯ ಕಟುವಾದ ರುಚಿಯು ಬಹುತೇಕ ಜನರಿಗೆ ಹಿಡಿಸದೆ ಇರಬಹುದು. ಆದರೆ ಇದನ್ನು ಇಷ್ಟಪಡುವವರು ಮಾತ್ರ ಶುಂಠಿಯನ್ನು ತಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ತಪ್ಪದೆ ಬಳಸುತ್ತಾರೆ. ಭಾರತೀಯರು, ಅರಬ್ಬರು ಮತ್ತು ಚೀನಿಯರು ಇದನ್ನು ತಮ್ಮ ಆಹಾರ ಪದಾರ್ಥಗಳಲ್ಲಿ ನಿಯಮಿತವಾಗಿ ಬಳಸುತ್ತಾರೆ. ಇದರ ವಿವಿಧ ಪ್ರಯೋಜನಗಳು ನಮ್ಮ ದೇಹವು ರೋಗರುಜಿನಗಳ ಮೇಲೆ ಹೋರಾಡಲು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ. ಇನ್ನು ನಿಮಗೆ ಬಾಯಾರಿದಾಗ ಇದರಿಂದ ತಯಾರಿಸುವ ಪಾನೀಯವು ನಿಮ್ಮ ದಾಹವನ್ನು ತಣಿಸುತ್ತದೆ. ಈಗ ಇದು ಕ್ಯಾನ್‍ಗಳಲ್ಲೂ ಸಹ ಲಭ್ಯವಿದೆ.

ಎಳೆನೀರು
ಬಾಯಾರಿದಾಗ, ಸುಡುವ ಬಿಸಿಲು ಇದ್ದಾಗ ಯಾವ ಪಾನೀಯ ಕುಡಿಯುವುದು ಎಂಬ ಪ್ರಶ್ನೆ ಏಕೆ? ಹೋಗಿ ಒಂದು ಎಳೆ ನೀರನ್ನು ಕುಡಿಯಿರಿ. ಇದು ನಿಮ್ಮ ದಾಹವನ್ನು ಮಾತ್ರ ತಣಿಸುವುದಿಲ್ಲ, ಜೊತೆಗೆ ನಿಮ್ಮ ಜೀರ್ಣಾಂಗ ವ್ಯೂಹದ ಕಾರ್ಯ ವೈಖರಿಯನ್ನು ಸುಗಮಗೊಳಿಸುತ್ತದೆ ಮತ್ತು ತ್ವಚೆಗೆ ಕಾಂತಿಯನ್ನು ಸಹ ನೀಡುತ್ತದೆ.

ಕಬ್ಬಿನ ಹಾಲು
ತಂಪಾದ, ಶಕ್ತಿದಾಯಕವಾದ ಮತ್ತು ಚೇತೋಹಾರಿಯಾದ ಕಬ್ಬಿನ ಹಾಲು ದಾಹಕ್ಕೆ ಹೇಳಿ ಮಾಡಿಸಿದ ಪಾನೀಯ. ಇದಕ್ಕೆ ಸ್ವಲ್ಪ ಶುಂಠಿಯನ್ನು ಹಾಕಿ, ಇದರಿಂದ ಕಬ್ಬಿನ ಹಾಲಿನ ರುಚಿಗೆ ಸ್ವಲ್ಪ ಕಟುವಾದ ಸ್ವಾದ ಬರುತ್ತದೆ. ಈ ರಸದಲ್ಲಿರುವ ಸ್ವಾಭಾವಿಕ ಸಕ್ಕರೆಯು ಬೇಸಿಗೆಯ ದಿನಗಳಲ್ಲಿ ನಿಮಗೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ.

ಸೌತೆಕಾಯಿ
ಇದು ಬೇಸಿಗೆಯ ಧಗೆಗೆ ರಾಮಬಾಣ. ನಿಮ್ಮ ದಾಹವನ್ನು ತೀರಿಸಲು ಸೌತೆಕಾಯಿಗಿಂತ ಒಳ್ಳೆಯ ಕಾಯಿ ಮತ್ತೊಂದಿಲ್ಲ. ಸಿಪ್ಪೆ ಮತ್ತು ಕಹಿಯನ್ನು ತೆಗೆದು ಕತ್ತರಿಸಿ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ತಿನ್ನಿ ಸಾಕು. ಎಂತಹ ಬಾಯಾರಿಕೆಯು ತಣ್ಣಗಾಗಿ ಬಿಡುತ್ತದೆ. ಕುತೂಹಲಕಾರಿ ವಿಚಾರವೆಂದರೆ ಇದು ತರಕಾರಿಯಲ್ಲ, ಹಣ್ಣು. ಇದರಲ್ಲಿ ನೀರಿನಂಶವಿರುವುದರಿಂದ ಪ್ರತಿ ಬಾರಿ ಇದನ್ನು ಕಚ್ಚಿದಾಗಲು, ನಿಮ್ಮ ಬಾಯಾರಿಕೆಯು ದೂರ ಸರಿಯುತ್ತದೆ.

ಕಲ್ಲಂಗಡಿ
ಇದು ಸಹ ಮತ್ತೊಂದು ಬೇಸಿಗೆ ಹಣ್ಣು. ಕೆಂಪಗೆ ಇರುವ ಈ ಹಣ್ಣಿನಲ್ಲಿ ಸಕ್ಕರೆ ಮತ್ತು ನೀರಿನ ಪ್ರಮಾಣವು ಅಧಿಕವಾಗಿರುತ್ತದೆ. ಪ್ರತಿ ಬಾರಿ ಸೇವಿಸುವಾಗ ಇದರಲ್ಲಿ ಸ್ವಾದ ಮತ್ತು ಶಕ್ತಿಯನ್ನು ನೀವು ಪಡೆಯಬಹುದು. ಇದನ್ನು ಹಾಗೆಯೇ ಸೇವಿಸಬಹುದು ಅಥವಾ ರಸವಾಗಿ ಸಹ ಸೇವಿಸಬಹುದು. ಆದರೆ ಹೇಗೆ ಸೇವಿಸಿದರು ಸ್ವಾದ ಮಾತ್ರ ಹಾಗೆಯೇ ಇರುತ್ತದೆ.

ಮಜ್ಜಿಗೆ
ಹುದುಗು ಬಂದ ಅಥವಾ ಹೆಪ್ಪುಗಟ್ಟಿದ ಹಾಲು ನಿಮ್ಮ ಜೀರ್ಣಕ್ರಿಯೆಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಉಪಯೋಗಕಾರಿಯಾದ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡುತ್ತದೆ. ಮಜ್ಜಿಗೆಯನ್ನು ನಿಮ್ಮ ಇಚ್ಛೆಗೆ ತಕ್ಕಂತೆ ಹಾಗೆಯೇ ಅಥವಾ ಉಪ್ಪು ಹಾಕಿಕೊಂಡು ಅಥವಾ ಸಿಹಿಯಾಗಿ ಮಾಡಿಕೊಂಡು ಸಹ ಸೇವಿಸಬಹುದು. ಇದರ ಮತ್ತೊಂದು ವಿಶೇಷವೆಂದರೆ ಇದನ್ನು ಊಟದ ಜೊತೆಗೆ ಸಹ ಬೆರೆಸಿಕೊಂಡು ತಿನ್ನಬಹುದು. ಇದರಿಂದ ಜೀರ್ಣ ಕ್ರಿಯೆ ಹೆಚ್ಚಾಗುತ್ತದೆ.

ಸಲಾಡ್‍ಗಳು
ತಿನ್ನಲು ರುಚಿ ರುಚಿಯಾದ, ತಾಜಾ ಸಲಾಡ್‍ಗಳು ಬಾಯಾರಿಕೆಯನ್ನು ಹೋಗಲಾಡಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಅದು ಲೆಟ್ಯೂಸ್, ಸೌತೆಕಾಯಿ, ಜುಚ್ಚಿನಿ, ದಪ್ಪ ಮೆಣಸಿನ ಕಾಯಿ, ಕ್ಯಾರಟ್, ಬೀಟ್‍ರೂಟ್, ಬ್ರೊಕೊಲಿ ಅಥವಾ ಇನ್ನಿತರ ಯಾವುದೇ ಹಣ್ಣು-ತರಕಾರಿಯ ಸಮ್ಮಿಶ್ರಣವಾದರು ಸರಿ, ಅದರ ಮೇಲೆ ಒಣ ಹಣ್ಣು ಮತ್ತು ವಿನಿಗರ ಬೆರೆಸಿ ತಿಂದರೆ ಬಾಯಾರಿಕೆಯು ತಣಿಯುತ್ತದೆ. ಆರೋಗ್ಯವು ವೃದ್ಧಿಯಾಗುತ್ತದೆ. ಈ ಸಲಾಡ್‍ಗಳ ಒಂದು ಚಮಚವು ನಿಮ್ಮ ಬಾಯಿಯಲ್ಲಿ ನೀರೂರಿಸುವುದರ ಜೊತೆಗೆ ಹೊಟ್ಟೆಯಲ್ಲೂ ಸಹ ನೀರನ್ನು ಬಿಡುಗಡೆ ಮಾಡುತ್ತವೆ. ಇನ್ನು ಇದರ ರುಚಿಯು ನಿಮ್ಮ ರುಚಿಗ್ರಂಥಿಗಳಿಗೆ ಹಬ್ಬವನ್ನುಂಟು ಮಾಡುತ್ತವೆ.



Click it and Unblock the Notifications