Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ತಾರುಣ್ಯವನ್ನು ಹೆಚ್ಚಿಸುವ ಇಂತಹ ಪಾನೀಯವನ್ನು ಮಿಸ್ ಮಾಡಬೇಡಿ!
ನೀವು ಸೂಪರ್ ಮಾರ್ಕೆಟ್ ಗೆ ಹೋದರೆ 'ಗೆಟ್ ಸ್ಮಾರ್ಟ್' 'ಬಿ ಸ್ಟ್ರಾಂಗ್' 'ಲೂಸ್ ವೈಟ್' ಹೀಗೆ ಮೂಡ್ ಸರಿಮಾಡಲು, ತಾರುಣ್ಯ ಕಾಪಾಡಿಕೊಳ್ಳಲು ಎಂದೆಲ್ಲಾ ಇರುವ ಜ್ಯೂಸ್ ಅಥವಾ ಡ್ರಿಂಕ್ಸ್ ಗಳನ್ನು ನೋಡಿರಬಹುದು. ಆದರೆ ಇದು ಹೇಳಿದಷ್ಟು ಸುಲಭವಲ್ಲ. ತೂಕ ಕಳೆದುಕೊಳ್ಳಿ ಅಥವಾ ಶಕ್ತಿ ವೃದ್ಧಿಸಿಕೊಳ್ಳಿ ಎಂದು ಬರೆದಿರುವ ಡ್ರಿಂಕ್ಸ್‌ಗಳೆಲ್ಲಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುತ್ತವೆ ಮತ್ತು ಇದು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ. ಇಲ್ಲಿ ನಾವು ಮೆದುಳಿಗೆ ಶಕ್ತಿವರ್ಧಕ ನೀಡುವ ಡ್ರಿಂಕ್ಸ್ ಬಗ್ಗೆ ಮಾಹಿತಿ ನೀಡಿದ್ದೇವೆ.
ಈ ಪಾನೀಯ ನಿಮಗೆ ನಿಮ್ಮ ಐಕ್ಯೂ ಮಟ್ಟ ಉತ್ತಮವಾಗುತ್ತಿದೆ ಎಂದೆನಿಸುವಂತೆ ಮಾಡುತ್ತದೆ.ಇದು ಯಾವುದೇ ಒಂದು ಕಂಪನಿಯಿಂದ ಉತ್ಪತ್ತಿ ಮಾಡಿರುವುದಲ್ಲ, ಆದರೆ ಇವುಗಳು ಆರೋಗ್ಯಯುತವಾದ ಆಯ್ಕೆಗಳು ಎನ್ನಬಹುದು. ನಿಮ್ಮ ಮೆದುಳಿಗೆ ಅನುಕೂಲವಾಗುವಂತೆ ಯಾವ ರೀತಿಯ ಪಾನೀಯಗಳಿಂದ ದೂರವಿರಬೇಕು ಎಂಬುದು ಕೂಡ ಅಷ್ಟೇ ಮುಖ್ಯ. ಸ್ವಲ್ಪ ಮಟ್ಟಿನ ಆಲ್ಕೋಹಾಲ್ ತೆಗೆದುಕೊಳ್ಳುವುದು ಅನುಕೂಲಕರ ಎನಿಸಬಹುದು, ಆದರೆ ಅಧಿಕ ಆಲ್ಕೋಹಾಲ್ ಸೇವನೆಯಿಂದ ಲಿವರ್‌ನ ಮೇಲೆ ಕೆಟ್ಟ ಪರಿಣಾಮ ಬೀರುವುದು ಮಾತ್ರವಲ್ಲ ಮೆದುಳು ಕೂಡ ಸಂಚಿತಗೊಳ್ಳುವ ಸಾಧ್ಯತೆ ಇರುತ್ತದೆ.
ಸಕ್ಕರೆ ಅಂಶ ಹೆಚ್ಚಿರುವ ಪಾನೀಯ ಕೇವಲ ಹೃದಯ ಮತ್ತು ಸೊಂಟದ ಸುತ್ತಳತೆಗೆ ಮಾತ್ರ ಹಾನಿಕಾರಕವಲ್ಲ, ಇದು ಪ್ರಮುಖ ನರಗಳ ಸಮಸ್ಯೆ ತರುವುದರ ಜೊತೆಗೆ ಜ್ಞಾಪಕಶಕ್ತಿ ಮತ್ತು ಏಕಾಗ್ರತೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಕೃತಕ ಸಿಹಿಯನ್ನು ಬೆರೆಸಿರುವ ಪಾನೀಯದಿಂದಾಗಿ ಮೆದುಳಿನಲ್ಲಿ ಕಲ್ಮಶಗಳು ಸೇರಿ ಸಾಮಾನ್ಯ ಅರಿವನ್ನು ಕೂಡ ಹೋಗಲಾಡಿಸುತ್ತದೆ.ಅಧ್ಯಯನದ ಮೂಲಕ ಇವು ಕ್ಯಾನ್ಸರ್ ಮತ್ತು ವಿಕೃತ ಕಾಯಿಲೆಗಳು ಬರಲು ಕಾರಣ ಎಂಬುದನ್ನು ಕಂಡುಹಿಡಿಯಲಾಗಿದೆ. ಆದ್ದರಿಂದ ನಿಮ್ಮ ಮೊಬೈಲ್ ನಲ್ಲಿ ಬ್ರೈನ್ ಗೇಮ್ಸ್ ಅಥವಾ ಹಳೆಯ ಕಾಲದ ಪದಬಂಧ ಆಡುವುದರ ಜೊತೆಗೆ ಈ ಕೆಳಗೆ ನೀಡಿರುವ ಪಾನೀಯವನ್ನು ಸೇವಿಸುವುದರ ಮೂಲಕ ನಿಮ್ಮ ಮೆದುಳನ್ನು ಚುರುಕುಗೊಳಿಸಿಕೊಳ್ಳಿ.

ದಾಳಿಂಬೆ ಪಾನೀಯ
ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ನಿಮ್ಮ ಬುದ್ದಿಶಕ್ತಿ ಹೆಚ್ಚಿಸಿಕೊಳ್ಳಬಹುದು. ಇದು ನಿಮ್ಮ ಜ್ಞಾಪಕ ಶಕ್ತಿ ಮತ್ತು ಚತುರತೆಯನ್ನು ಹೆಚ್ಚಿಸುತ್ತದೆ.

ಚಹಾ
ಬ್ಲಾಕ್ ಟೀ ಅಥವಾ ಗ್ರೀನ್ ಟೀ ಯಾವುದನ್ನೇ ಸೇವಿಸಿ. ಚಹಾ ಸೇವನೆ ನಿಮ್ಮ ಮೆದುಳನ್ನು ಚುರುಕುಗೊಳಿಸಲು ಸಹಾಯಕ. ಹಸಿರು ಚಹಾದಲ್ಲಿ ಕಂಡು ಬರುವ epigallocatechin 3 gallate ಮೆದುಳಿನ ಜೀವಕೋಶಗಳನ್ನು ಅಧಿಕಗೊಳಿಸಿ, ಬುದ್ದಿ ಶಕ್ತಿ ಹೆಚ್ಚಿಸುತ್ತದೆ.

ಡಾರ್ಕ್ ಚಾಕೊಲೇಟ್
ಕೊಕೊದಲ್ಲಿರುವ ಫ಼್ಲವೊನಲ್ಸ್ ರಕ್ತ ಕಣಗಳನ್ನು ಹೆಚ್ಚಿಸಿ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಇದರಿಂದ ಮೆದುಳು ಹಾನಿಗೊಳಗಾಗುವುದು ಕಡಿಮೆಯಾಗುತ್ತದೆ. ಹಾಟ್ ಚಾಕೊಲೇಟ್ ಕುಡಿಯುವುದರಿಂದ ಪಾರ್ಶ್ವವಾಯುವನ್ನು ತಡೆಯಬಹುದು.

ಬೆರ್ರಿ ಸ್ಮೂಥೀಸ್
ಬ್ಲಾಕ್ ಬೆರ್ರಿ ಮತ್ತು ಬ್ಲೂ ಬೆರ್ರಿ ಹಣ್ಣುಗಳನ್ನು ಬಳಸಿನೋಡಿ.ಇವುಗಳು ನರಗಳ ಚಟುವಟಿಕೆ ಹೆಚ್ಚಿಸಿ ಮೆದುಳನ್ನು ಚುರುಕುಗೊಳಿಸಿ ಮಾನಸಿಕ ಅಸಮತೋಲನ ತಪ್ಪಿಸುತ್ತದೆ. ತಿಳುವಳಿಕೆಯ ಜೊತೆ ಜ್ಞಾಪಕ ಶಕ್ತಿ ಕೂಡ ಅಧಿಕವಾಗುತ್ತದೆ.

ದಾಲ್ಚಿನ್ನಿ ಮತ್ತು ಅರಿಶಿನದ ಚಹಾ
ದಿನನಿತ್ಯ ಬಳಸುವ ಬೇರೆ ಬೇರೆ ಗಿಡಮೂಲಿಕೆಗಳ ಜೊತೆಗೆ ದಾಲ್ಚಿನ್ನಿಯಲ್ಲಿರುವ proanthocyanidin ಮತ್ತು cinnamaldehyde, ಎಂಬ ಸಂಯುಕ್ತಗಳು ಮೆದುಳಿನಲ್ಲಿ ಪ್ರೋಟೀನ್ ಕಡಿಮೆಗೊಳಿಸಿ ಬುದ್ದಿಮಾಂದ್ಯತೆ ಹೊಂದುವುದನ್ನು ತಡೆಯುತ್ತದೆ.
ಅರಿಶಿನದಲ್ಲಿ ಇರುವ ಸಿರ್ಕುಮಿನ್ ಎಂಬ ಸಂಯುಕ್ತವು ಬುದ್ದಿಮಾಂದ್ಯತೆಯನ್ನು ತಡೆಯುವ ಗುಣವನ್ನು ಹೊಂದಿದೆ. ಮರೆವಿನ ಕಾಯಿಲೆಯನ್ನು ತಡೆಯಲು ಇದರೊಂದಿಗೆ ಆಲಿವ್ ಎಣ್ಣೆಯನ್ನು ಬೆರೆಸಿ ಬಳಸಿ.

ಮಿತವಾದ ಮಧ್ಯಸೇವನೆ
ಅಧ್ಯಯನಗಳು ತಿಳಿಸುವ ಪ್ರಕಾರ ವೈನ್, ಬಿಯರ್ ಅಥವಾ ವೋಡ್ಕಾ ಯಾವುದೇ ಮಧ್ಯ ಸೇವನೆಯಿರಲಿ, ಮಿತವಾಗಿ ಸೇವಿಸುವುದರಿಂದ ಮೆದುಳಿನ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಆದರೆ ಅದು ೦.೦೦7 ಗಿಂತ ಹೆಚ್ಚಿರಬಾರದು ಮಿತವಾದ ಮಧ್ಯಸೇವನೆ

ನೀರು
ಶೇಖಡಾ 70 ರಷ್ಟು ನೀರಿನಿಂದಾಗಿ ದೇಹದ ಕಲ್ಮಶಗಳು ಹೊರಹೋಗಿ, ಚರ್ಮವು ಕಾಂತಿಯುತವಾಗುವುದರ ಜೊತೆಗೆ ನೀರು ಮೆದುಳಿಗೆ ಆಮ್ಲಜನಕವನ್ನು ಒದಗಿಸುತ್ತದೆ. ಆದ್ದರಿಂದಲೇ ನೀವು ನಿರ್ಜಲೀಕರಣಗೊಂಡಾಗ ಏನನ್ನೂ ಯೋಚಿಸಲು ಸಾಧ್ಯವಿಲ್ಲ ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.ಇದು ಮೆದುಳು ನೀರು ಬೇಕು ಎಂಬುದನ್ನು ವ್ಯಕ್ತಪಡಿಸುವ ರೀತಿ.

ರೆಡ್ ವೈನ್
ಸಂಶೋಧನೆಗಳು ರೆಡ್ ವೈನ್ ನಲ್ಲಿರುವ ಪೋಲಿಪೆನೋಲ್ಸ್ ಮೆದುಳಿನ ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ.ವೈನ್ ಅನ್ನು ಮಿತವಾಗಿ ಸೇವಿಸುವುದರಿಂದ ಆರೋಗ್ಯಕರ ಮೆದುಳು ನಿಮ್ಮದಾಗುತ್ತದೆ.

ಬೀಟ್ ರೂಟ್,ಕ್ಯಾರೆಟ್ ಮತ್ತು ಸೇಬು ಹಣ್ಣಿನ ಜ್ಯೂಸ್
ಈ ಮೂರನ್ನು ಮಿಕ್ಸ್ ಮಾಡಿ ಜ್ಯೂಸ್ ಮಾಡಿ.ಇದು ನಿಮಗೆ ಒಳ್ಳೆಯ ಬಣ್ಣ ನೀಡುವುದರ ಜೊತೆಗೆ ವಿಟಮಿನ್ಸ್, ಖನಿಜಾಂಶಗಳು ಹೇರಳವಾಗಿ ದೊರೆಯುತ್ತದೆ. ಬೀಟ್ರೂಟ್ ಮೆದುಳಿನಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿ ಮಾಡುತ್ತದೆ,ಇದರಿಂದ ರಕ್ತಸಂಚಲನ ಸರಾಗವಾಗುತ್ತದೆ. ಕ್ಯಾರೆಟ್ ನಲ್ಲಿರುವ ಬೀಟ ಕ್ಯರೊಟೀನ್ ಕಣ್ಣಿಗೆ ಅನುಕೂಲಕರ ಜೊತೆಗೆ ಮೆದುಳಿನ ಅವನತಿಯನ್ನು ಕೂಡ ಕಡಿಮೆ ಮಾಡುತ್ತದೆ.
ಸೇಬುಹಣ್ಣು ಅಲ್ಜಮೀರ್ (ಮರೆವಿನ ಕಾಯಿಲೆ) ಇರುವವರಿಗೆ ಸಹಾಯಕ.ದಿನಕ್ಕೊಂದು ಸೇಬುಹಣ್ಣು ವೈದ್ಯರಿಂದ ದೂರವಿರುವಂತೆ ಮಾಡುತ್ತದೆ ಎಂಬುದು ನಿಮಗೆ ತಿಳಿದೇ ಇದೆ.

ತೆಂಗಿನ ಹಾಲು ಮತ್ತು ತೆಂಗಿನ ನೀರು
ತೆಂಗಿನ ಕಾಯಿಯಲ್ಲಿ ಬಳಸಲು ಬರುವ ಎಲ್ಲಾ ವಸ್ತುಗಳು ದೇಹದ ಆರೋಗ್ಯಕ್ಕೆ ಅನುಕೂಲಕರವಾದುದು.ಅದರಲ್ಲೂ ಮೆದುಳಿಗೆ ಇದು ಅತಿ ಹೆಚ್ಚು ಸಹಾಯಕ. ಆರಂಭಿಕ ಡೈಮೆನ್ಶಿಯವನ್ನು ಈ ತೆಂಗಿನ ಹಾಲನ್ನು ಬಳಸುವುದರಿಂದ ತಡೆಯಬಹುದು. ನಿರ್ಜಲೀಕರಣವನ್ನು ತಡೆಯುವುದರ ಜೊತೆಗೆ ಇದರಿಂದ ವಿಟಮಿನ್,ರಕ್ತ ಸಂಚಲನ ಮತ್ತು ಖನಿಜಾಂಶಗಳು ಅಧಿಕವಾಗಿ ಸಿಗುತ್ತದೆ.



Click it and Unblock the Notifications
