Latest Updates
-
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು!
ಜೀವನ ಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು
"ಖಾಯಿಲೆಗಳು ಮನುಷ್ಯನಿಗೆ ಬರದೇ ಇನ್ನೇನು ಮರಕ್ಕೆ ಬರುತ್ತದೆಯೇ" ಎಂದು ಸುಲಭದಲ್ಲಿ ಕೇಳಿ ಬಿಡುತ್ತೇವೆ. ಆದರೆ ಅದೆಷ್ಟೋ ರೋಗಗಳು ನಮ್ಮನ್ನು ಆವರಿಸಿ ವಾಸಿಯೇ ಆಗದೆ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತವೆ. ನಮ್ಮನ್ನು ಇನ್ನಷ್ಟು ಕೃಶರನ್ನಾಗಿಸುತ್ತದೆ. ಹೀಗೆ ರೋಗ ದೇಹವನ್ನು ಸೇರಿದ ಮೇಲೆ ಯಾವ ಹಿತವಚನಗಳು ತಾನೇಮನಸ್ಸಿಗೆ ನಾಟಿತು?
ಮನುಷ್ಯನನ್ನು ಭಯ ಬೀಳಿಸುವ ಭಯಾನಕ ಖಾಯಿಲೆಗಳಲ್ಲಿ ಕ್ಯಾನ್ಸರ್ ಕೂಡ ಒಂದು! ಪ್ರಪಂಚದಾದ್ಯಂತ ಮೂಲೆ ಮೂಲೆಗಳಲ್ಲಿಯೂ ಕ್ಯಾನ್ಸರ್ ಪೀಡಿತರನ್ನು ಕಾಣಬಹುದು. ಈ ರೋಗಕ್ಕಂತೂ ವಯಸ್ಸಿನ ವ್ಯಾಪ್ತಿಯೇ ಇಲ್ಲ ಬಿಡಿ. ಎಲ್ಲಾ ವಯಸ್ಸಿನವರಲ್ಲಿಯೂ ಇತ್ತೀಚಿಗೆ ಈ ಖಾಯಿಲೆ ಸಾಮಾನ್ಯವೆನಿಸಿಬಿಟ್ಟಿದೆ.
ವೈದ್ಯರ ಪ್ರಕಾರ, ಕ್ಯಾನ್ಸರನ್ನು ದೂರವಿಡಲು ನಮ್ಮ ಮನಸ್ಸು ಹಾಗೂ ದೇಹವನ್ನು ಸದಾ ಚಟುವಟಿಕೆಯಿಂದ ಹಾಗೂ ಆರೋಗ್ಯದಿಂದಿರುವಂತೆ ನೋಡಿಕೊಳ್ಳಬೇಕು.
ಆದ್ದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರೋಟಿನ್, ಖನಿಜ ಹಾಗೂ ಜೀವಸತ್ವವುಳ್ಳ ಆಹಾರವನ್ನು ಸೇವಿಸಬೇಕು. ಇಂದು ನಮಗೆಲ್ಲರಿಗೂ ತೂಕವನ್ನು ಇಳಿಸುವ/ ನಿಯಂತ್ರಿಸುವ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳನ್ನು ಸೇವಿಸುವ ಅನಿವಾರ್ಯತೆಯಿದೆ!
ನಮ್ಮ ಸರಿಯಾದ ಆಹಾರ ಕ್ರಮವು, ಕ್ಯಾನ್ಸರ್ ರೋಗವನ್ನು ತಡೆಯುತ್ತದೆ ಹಾಗೂ ಕ್ಯಾನ್ಸರ್ ಜೀವಕೋಶಗಳ ಹುಟ್ಟನ್ನು ನಾಶಗೊಳಿಸುತ್ತದೆ. ಇಂತಹ ಕ್ಯಾನ್ಸರ್ ಎಂಬ ಮಾರಕ ರೋಗವನ್ನು ತಡೆಯಬಲ್ಲ ಕೆಲವು ಆಹಾರಗಳ ಬಗ್ಗೆ ನಿಮಗೊಂದು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನೇರಳಾತೀತ ಕಿರಣಗಳಿಂದ ಆದಷ್ಟು ದೂರವಿರಿ
ಸೂರ್ಯನ ನೇರಳಾತೀತ ಕಿರಣಗಳಿಂದ ಆದಷ್ಟು ದೂರವಿರಿ. ಇದು ಕ್ಯಾನ್ಸರ್ ಬಳ್ಳಿಯನ್ನು ಬೆಳೆಸಬಹುದು!
ಕ್ಯಾನ್ಸರಿಗೆ ಮೂಲ ಕಾರಣವಾಗಿರುವ ಹಾಗೂ ಇತ್ತೀಚಿಗೆ ಜನರಲ್ಲಿ ಭಯಂಕರ ಭಯವನ್ನು ಹುಟ್ಟಿಸಿರುವ ಶ್ವಾಸಕೋಶದ ಕ್ಯಾನ್ಸರನ್ನು ಧೂಮಪಾನದಿಂದ ದೂರವಿರುವುದರಿಂದ ತಡೆಯಬಹುದು. ಧೂಮಪಾನದಂತಹ ಕೆಟ್ಟ ಚಟವನ್ನು ಬಿಡದಿದ್ದಲ್ಲಿ ಮಾರಕ ರೋಗಕ್ಕೆ ನಾವೇ ಆಹ್ವಾನವನ್ನಿಟ್ಟಂತೆ!

ಬ್ರೆಜಿಲ್ ನಟ್ಸ್
ಬ್ರೆಜಿಲ್ ನಟ್ಸ್/ ಬೀಜ ಖನಿಜವನ್ನು ಹೊಂದಿರುವ ಸೆಲೆನಿಯಂ ನ ಶ್ರೀಮಂತ ರೂಪ. ಇದು ಕ್ಯಾನ್ಸರ್ ಕೋಶಗಳನ್ನು ನಾಶಮಾಡುತ್ತದೆ . ಬ್ರೆಜಿಲ್ ನಟ್ ನ್ನು ಸ್ವಲ್ಪವೇ ತಿಂದರೂ ಕ್ಯಾನ್ಸರ್ ನ್ನು ತಡೆಯುತ್ತದೆ .

ಬ್ರೊಕೋಲಿ
ಬ್ರೊಕೋಲಿ/ ಕೋಸುಗಡ್ಡೆಯನ್ನು ತಿನ್ನಲು ಎಲ್ಲರೂ ಸೇವಿಸಲು ಇಷ್ಟಪಡುವುದಿಲ್ಲ. ಆದರೆ ನಿಮಗೆ ಕ್ಯಾನ್ಸರಿನಿಂದ ದೂರವಿರಬೇಕೆಂದಿದ್ದರೆ ವಾರಕ್ಕೊಮ್ಮೆಯಾದರೂ ಈ ಹಸಿರು ತರಕಾರಿಯನ್ನು ಸೇವಿಸಿ.

ಪಾರಂಪರಿಕವಾಗಿ ಆವರಿಸುತ್ತಿರುವ ಖಾಯಿಲೆ
ಕ್ಯಾನ್ಸರನ್ನು ಸಾಮಾನ್ಯವಾಗಿ ವಂಶ ಪಾರಂಪರಿಕವಾಗಿ ಬರುತ್ತದೆ ಎನ್ನುತ್ತಾರೆ ಆದರೆ ಇದು ಇಂದು ಪ್ರತಿ ಮೂರನೇ ವ್ಯಕ್ತಿಯನ್ನು ಆವರಿಸುತ್ತಿರುವ ಖಾಯಿಲೆ. ಆದರೂ ಮುಂಜಾಗ್ರತೆಯನ್ನು ಕೈಗೊಂಡು ಪಾರಂಪರಿಕ ಕ್ಯಾನ್ಸರಿನಿಂದಲೂ ಸಹ ದೂರವುಳಿಯಬಹುದು!

ರಾಸಾಯನಿಕಗಳು
ನೀವು ಕೆಲಸಮಾಡುವ ಸ್ಥಳವೂ ಕೂಡ ಕ್ಯಾನ್ಸರ್ ನಂತಹ ಖಾಯಿಲೆಗೆ ಕಾರಣವಾಗಬಹುದು. ನೀವು ಕೆಲಸ ಮಾಡುವ ಸ್ಥಳದಲ್ಲಿ ಧೂಳು, ಹೊಗೆ ಹಾಗೂ ರಾಸಾಯನಿಕಗಳು ನಿಮ್ಮ ಖಾಯಿಲೆಗೆ ಮೊದಲಾಗಬಹುದು. ದಿನವೂ ವ್ಯಾಯಾಮದಂತಹ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಉತ್ತಮ. ಹೃದಯದ, ತೂಕ ನಿಯಂತ್ರಿಸುವ ಹಾಗೂ ಇತರ ವ್ಯಾಯಾಮಗಳು ಕ್ಯಾನ್ಸರ್ ಹತ್ತಿರ ಬರದಂತೆ ತಡೆಯಬಲ್ಲವು. ವಾಕಿಂಗ್, ಈಜಾಡುವುದು ಮೊದಲಾದ ವ್ಯಾಯಾಮಗಳೂ ಕೂಡ ಕ್ಯಾನ್ಸರನ್ನು ತಡೆಯಬಲ್ಲವು.

ವಿದ್ಯುತ್ಕಾಂತೀಯ ಅಲೆಗಳು
ವಿದ್ಯುತ್ಕಾಂತೀಯ ಅಲೆಗಳ ಅತೀ ಹೆಚ್ಚು ಪ್ರಭಾವದ ಎಕ್ಷರೇಗಳು, ದೇಹವನ್ನು ವಿಕಿರಣಗಳಿಗೆ ಒಡ್ಡುವಿಕೆ ಮತ್ತು ಇತರ ಅಯಾನೀಕರಿಸುವ ವಿಕಿರಣ ರೂಪಗಳು ಕೂಡ ಕ್ಯಾನ್ಸರ್ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ . ಆದ್ದರಿಂದ, ಈ ವಿದ್ಯುತ್ಕಾಂತೀಯ ಅಲೆಗಳನ್ನು ತಡೆಯುವುದು ಒಳ್ಳೆಯದು.

ಗರ್ಭನಿರೋಧಕಗಳು
ಒರಲ್ ಕಾಂಟ್ರಾಸ್ಪೆಕ್ಟೀವ್ (Oral contraceptives) - ಮಹಿಳೆಯರಲ್ಲಿ ಲಿವರ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ನ್ನು ಉಂಟುಮಾಡುವ ಸಾಧ್ಯತೆಗಳು ಹೆಚ್ಚು. Oral contraceptives ಈಸ್ಟ್ರೋಜನ್ ಮತ್ತು ಪ್ರೊಜೆಸ್ಟನ್ ನ ಸಂಯೋಜನೆಯಾಗಿದ್ದು ಒವ್ಯೂಲೇಶನ್ (ovulation) ನ್ನು ತಡೆಯುತದೆ.

ಬೊಜ್ಜು,
ತೂಕ ಸಮಸ್ಯೆಯಾದ ಬೊಜ್ಜು, ಮೂತ್ರಪಿಂಡ , ಕರುಳಿನ ಮತ್ತು ಗುದನಾಳದ ಕ್ಯಾನ್ಸರ್ ಗೆ ಕಾರಣವಾಗಬಹುದು. ಕ್ಯಾನ್ಸರ್ ತಡೆಯಲು, ನಿಮ್ಮ ತೂಕ ನಿಯಂತ್ರಣ ಮಾಡಿ ದೈಹಿಕವಾಗಿ ಸಕ್ರಿಯವಾಗಿರಬೇಕು.

ನಿದ್ರೆ
ದಿನದಲ್ಲಿ 8 ರಿಂದ 10 ಗಂಟೆಗಳ ಅವಧಿ ನಿದ್ರಿಸುವುದು ಅತ್ಯಗತ್ಯ. ತಜ್ಞರ ಪ್ರಕಾರ ಚೆನ್ನಾಗಿ ನಿದ್ರಿಸುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಯಾವುದೇ ಸಮಸ್ಯೆಗಳೂ ಕಾಣಿಸಿಕೊಳ್ಳುವುದಿಲ್ಲ.

ಮಾನಸಿಕ ಅಸಮತೋಲನ
ಮಾನಸಿಕ ಅಸಮತೋಲನ, ಮಾನಸಿಕ ಒತ್ತಡ, ಕ್ಯಾನ್ಸರ್ ಹಾಗೂ ಇನ್ನೂ ಹಲವಾರು ಆರೋಗ್ಯ ಸಮಸ್ಯೆಯನ್ನು ಹುಟ್ಟುಹಾಕುತ್ತವೆ. ಆದ್ದರಿಂದ ನಿಮ್ಮ ಮಾನಸಿಕತೆಯ ಸಮತೋಲನವನ್ನು ಸದಾ ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯ.

ಅಧಿಕ ಉಪ್ಪು
ಆಹಾರಕ್ಕೆ ರುಚಿ ಸಿಗಬೇಕಾದರೆ ಅದರಲ್ಲಿ ಉಪ್ಪು ಬೆರೆತಿರಲೇಬೇಕು. ಆದರೆ ಉಪ್ಪನ್ನು ಅತಿಯಾಗಿ ಸೇವಿಸಿದರೆ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಆದ್ದರಿಂದ ಮಿತವಾಗಿ ಉಪ್ಪನ್ನು ಬಳಸುವುದು ಒಳಿತು.

ಮದ್ಯಪಾನ
ದಿನವೂ ಮದ್ಯಪಾನ ಮಾಡುವ ಕೆಟ್ಟ ಚಟವನ್ನು ರೂಢಿಸಿಕೊಂಡವರು ಕ್ಯಾನ್ಸರ್ ನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ! ಆದ್ದರಿಂದ ನಿಮ್ಮನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಲು ಮದ್ಯಪಾನದಿಂದ ದೂರವಿರಿ.

ಡ್ರೈ ಕ್ಲೀನ್ ಮಾಡಿಸಿದ ಬಟ್ಟೆ ಧರಿಸಿದರೆ
ನಾವು ಧರಿಸುವ ಕೆಲವು ಬಟ್ಟೆಗಳನ್ನು ಡ್ರೈ ಕ್ಲೀನ್ ಮಾಡಿಸುವುದು ಅನಿವಾರ್ಯ. ಆದರೆ ಇದರಿಂದಲೂ ಕ್ಯಾನ್ಸರ್ ಸಮಸ್ಯೆಯುಂಟಾದರೆ? ಹೌದು, ಆಗಾಗ ಬಟ್ಟೆಯನ್ನು ಡ್ರೈ ಕ್ಲೀನ್ ಮಾಡಿಸುವುದು ಒಳ್ಳೆಯದಲ್ಲ. ಆದ್ದರಿಂದ ಡ್ರೈ ಕ್ಲೀನ್ ಮಾಡುವ ಅಗತ್ಯವಿಲ್ಲದ ಬಟ್ಟೆಗಳನ್ನೇ ಹೆಚ್ಚಾಗಿ ಕೊಂಡುಕೊಳ್ಳಿ.

ಜೈವಿಕ ಆಹಾರದ ಸೇವನೆ
ಜೈವಿಕ ಆಹಾರದ ಸೇವನೆ ಕ್ಯಾನ್ಸರ್ ನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾವಯವ ಆಹಾರಗಳು, ಉದಾಹರಣೆಗೆ ಜೈವಿಕ ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ. ಇದು ಎಲ್ಲಾ ರೋಗಗಳಿಂದಲೂ ನಿಮ್ಮನ್ನು ದೂರವಿಡುತ್ತದೆ.

ಗ್ರೀನ್ ಟೀ
ಚಹವನ್ನು, ಅದರಲ್ಲೂ ಗ್ರೀನ್ ಟೀಯನ್ನು ಸೇವಿಸುವುದು ಕ್ಯಾನ್ಸರ್ ನ್ನು ತಡೆಯಲು ಅತ್ಯಂತ ಒಳ್ಳೆಯದು.

ದಾಳಿಂಬೆ
ದಾಳಿಂಬೆ ರಸದಂತಹ ಕೆಂಪು ರಸಾಯನವು ಕ್ಯಾನ್ಸರ್ ರೋಗವನ್ನು ತಡೆಯಲು ಸಹಾಯ ಮಾಡುತ್ತದೆ . ಈ ಹಣ್ಣುಗಳಲ್ಲಿರುವ ಪಾಲಿಫಿನೋಲ್ (polyphenols), ಐಸೊಫ್ಲವೊನ್ (isoflavones) ಮತ್ತು ಎಲೆಜಿಕ್ (ellagic) ಆಮ್ಲ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತವೆ .

ರೋಗ ನಿರೋಧಕ ವ್ಯವಸ್ಥೆ ಕಡಿಮೆ ಆದಾಗ
ನಿಮ್ಮಲ್ಲಿ ರೋಗ ನಿರೋಧಕ ವ್ಯವಸ್ಥೆ ಕಡಿಮೆ ಆದಾಗ ಸೋಂಕುಗಳು ಉಂಟಾಗುತ್ತವೆ. ಇದನ್ನು ಉತ್ತಮ ರೀತಿಯಲ್ಲಿ, ಆರೋಗ್ಯಕರ ಆಹಾರವನ್ನು ಸೇವಿಸುವುದರ ಮೂಲಕ ತಡೆಗಟ್ಟಬಹುದು. ಆದ್ದರಿಂದ ನಿಮಗೆ ಯಾವುದೇ ಕಾಯಿಲೆ ಉಂಟಾದಾಗ ಸರಿಯಾದ ಸಮಯದಲ್ಲಿ ಸರಿಯಾದ ಔಷಧಿಗಳನ್ನು ತೆಗೆದುಕೊಳ್ಳಬೇಕು. ಹಾಗೆಯೇ ಅದಕ್ಕೆ ತಕ್ಕಂತೆ ಆಹಾರವನ್ನೂ ಸೇವಿಸಬೇಕು.

ಆರೋಗ್ಯಕರವಾದ ಜೀವನ
ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನಿಮ್ಮಲ್ಲಿಯೇ ಪರಿಹಾರಗಳಿವೆ ಅವುಗಳನ್ನು ಕಂಡುಕೊಂಡು ಹಾಗೆಯೇ ಆಹಾರ ಕ್ರಮಗಳನ್ನು ಪಾಲಿಸಿದರೆ ಯಾವುದೇ ಖಾಯಿಲೆ ನಿಮ್ಮ ಬಳಿ ಸುಳಿಯುವುದಿಲ್ಲ ಏನಂತೀರಿ?



Click it and Unblock the Notifications











