Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಕಿಡ್ನಿಯ ಆರೋಗ್ಯಕ್ಕೆ 11 ಸೂಪರ್ ಫುಡ್ಸ್
ಮಾರ್ಚ್ ತಿಂಗಳಿನ ಎರಡನೇ ಗುರುವಾರವನ್ನು ವಿಶ್ವ ಕಿಡ್ನಿ ದಿನವೆಂದು ಆಚರಿಸಲಾಗುವುದು. ನಮ್ಮ ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಿ, ರಕ್ತವನ್ನು ಶುದ್ಧೀಕರಿಸುವ ಕೆಲಸ ಕಿಡ್ನಿಯದು. ಆದ್ದರಿಂದ ಆರೋಗ್ಯಕರ ಕಿಡ್ನಿ ಆರೋಗ್ಯಕ್ಕೆ ಅವಶ್ಯಕ. ಕಿಡ್ನಿಗೆ ಹಾನಿಯುಂಟಾದರೆ ವ್ಯಕ್ತಿ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ. ಕಿಡ್ನಿಯನ್ನು ಬದಲಾಯಿಸಿದರೆ ಸ್ವಲ್ಪ ಕಾಲ ಬದುಕಬಹುದು, ತನಗೆ ಹೊಂದುವ ಕಿಡ್ನಿ ಸಿಗಬೇಕು, ವೈದ್ಯಕೀಯ ವೆಚ್ಛವನ್ನು ಭರಿಸುವ ಸಾಮರ್ಥ್ಯ ಇರಬೇಕು ಅಂತವರು ಮಾತ್ರ ಕಿಡ್ನಿ ಹಾಳಾದರೆ ಸ್ವಲ್ಪ ಕಾಲ ಬದುಕಬಹುದು.
ಕಿಡ್ನಿಯ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಕಿಡ್ನಿ ಹಾಳಾಗದಂತೆ ತಡೆಯಬಹುದು. ಉದಾಹರಣೆಗೆ ಆಹಾರಕ್ರಮ, ಮದ್ಯಪಾನದಿಂದ ದೂರವಿರುವುದು, ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು. ಇನ್ನು ಮದುಮೇಹವಿದ್ದರೂ ಕಿಡ್ನಿಯ ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆವಹಿಸಿಬೇಕು. ಏಕೆಂದರೆ ಮಧುಮೇಹ ಹೆಚ್ಚಾದರೆ ಕಿಡ್ನಿಯ ಆರೋಗ್ಯ ಹಾಳಾಗುವುದು.
ಇಲ್ಲಿ ನಾವು ಕಿಡ್ನಿಯ ಆರೋಗ್ಯ ಹೆಚ್ಚಿಸುವ ಆಹಾರಗಳೆಂದು ವೈಜ್ಞಾನಿಕವಾಗಿ ಸಾಬೀತಾದ ಸೂಪರ್ ಫುಡ್ಸ್ ಬಗೆ ಹೇಳಿದ್ದೇವೆ ನೋಡಿ:

ಬೆಳ್ಳುಳ್ಳಿ
ಕೊಲೆಸ್ಟ್ರಾಲ್ ಹೆಚ್ಚಾದರೆ ಕಿಡ್ನಿ ಮೇಲೆ ಒತ್ತಡ ಬೀಳುವುದರಿಂದ ಕಿಡ್ನಿ ಹಾಳಾಗುತ್ತದೆ. ಬೆಳ್ಳುಳ್ಳಿಯಲ್ಲಿ anatioxidants ಅಧಿಕವಿದ್ದು ದೇಹದಲ್ಲಿರುವ ಬೇಡದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.

ಬೆರ್ರಿ ಹಣ್ಣುಗಳು
ಬೆರ್ರಿಗಳು ಎಲ್ಲಾ ರೀತಿಯಲ್ಲೂ ಆರೋಗ್ಯಕ್ಕೆ ಒಳ್ಳೆಯದು. ಈ ಬೆರ್ರಿ ಹಣ್ಣುಗಳಲ್ಲಿ ಮುಖ್ಯವಾಗಿ anti-inflammatory ಅಂಶವಿರುವುದರಿಂದ ಕಿಡ್ನಿಯ ಕಾರ್ಯಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ಕಿಡ್ನಿಯನ್ನು ರಕ್ಷಣೆ ಮಾಡುತ್ತದೆ.

ಕೆಂಪು ಬಣ್ಣದ ದುಂಡು ಮೆಣಸು
ದುಂಡು ಮೆಣಸು ಕಿಡ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕೆಂಪು ದುಂಡು ಮೆಣಸನ್ನು ಕಿಡ್ನಿ ಸಮಸ್ಯೆ ಇರುವವರು ತಪ್ಪದೆ ತಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ, ಅ, ಬಿ6, ಫಾಲಿಕ್ ಆಸಿಡ್, ನಾರಿನಂಶವಿದೆ. ಕಿಡ್ನಿಯ ಆರೋಗ್ಯಕ್ಕೆ ಇವೆಲ್ಲಾ ಅತ್ಯಾವಶ್ಯಕ.

ಮೊಳಕೆ ಬರಿಸಿದ ಕಾಳುಗಳು
ಮೊಳಕೆ ಬರಿಸಿದ ಕಾಳುಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿ ತಿಂದರೆ ಕಿಡ್ನಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಎಲೆಕೋಸು
ಕಿಡ್ನಿಯ ಆರೋಗ್ಯಕ್ಕೆ ಎಲೆಕೋಸು ತುಂಬಾ ಒಳ್ಳೆಯದು. ಇದನ್ನು ಕಿಡ್ನಿಯ ಆರೋಗ್ಯ ಹೆಚ್ಚಿಸುವ ನೈಸರ್ಗಿಕವಾದ ಔಷಧೀಯಾಗಿ ಬಳಸಲಾಗುವುದು.

ಸೇಬು
ಸೇಬಿಗೆ ಕ್ಲೆನ್ಸಿಂಗ್ ಗುಣವಿದೆ. ಇದನ್ನು ತಿಂದರೆ ಎಲ್ಲಾ ರೀತಿಯಲ್ಲೂ ಆರೋಗ್ಯಕರ. ಕೆಲವರು ಸೇವಿನ ಸಿಪ್ಪೆಯನ್ನು ಬಿಸಾಡುತ್ತಾರೆ. ಆದರೆ ಸೇಬಿನ ಸಿಪ್ಪೆಯಲ್ಲಿ ನಾರಿನಂಶ ನಾರಿನಂಶ ಅಧಿಕವಿದೆ.

ಈರುಳ್ಳಿ
ಈರುಳ್ಳಿ ಕಿಡ್ನಿಯಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ. ಈರುಳ್ಳಿಯನ್ನು ಹಸಿ ಅಥವಾ ಸುಟ್ಟು ತಿಂದರೆ ತುಂಬಾ ಒಳ್ಳೆಯದು.

ಕೆಂಪು-ಕಪ್ಪು ದ್ರಾಕ್ಷಿ
ಈ ದ್ರಾಕ್ಷಿ ತಿನ್ನಲು ಸ್ವಲ್ಪ ಹುಳಿಯಾಗಿದ್ದರೂ ಕಿಡ್ನಿಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದರಿಂದ ಕಿಡ್ನಿಯ ಹಾಗೂ ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಚೆರ್ರಿ ಹಣ್ಣು
ಚೆರ್ರಿ ಹಣ್ಣು ತಿಂದರೆ ದೇಹದಲ್ಲಿರುವ ಪೊಟಾಷ್ಯಿಯಂ ಪ್ರಮಾಣವನ್ನು ಕಡಿಮೆ ಮಾಡಿ ಕಿಡ್ನಿಯ ಆರೋಗ್ಯವನ್ನು ಹೆಚ್ಚಿಸುತ್ತದೆ.

ಮೊಟ್ಟೆಯ ಬಿಳಿ
ಮೊಟ್ಟೆಯಲ್ಲಿರುವ ಅಮೈನೋ ಆಸಿಡ್ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಕಿಡ್ನಿಯ ಆರೋಗ್ಯ ಹೆಚ್ಚಿಸುವ ಸೂಪರ್ ಫುಡ್ .

ಮೀನು
ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶ ಅಧಿಕವಿರುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.



Click it and Unblock the Notifications