Latest Updates
-
ಮಳೆಗಾಲದಲ್ಲಿ ದಂಪತಿಗಳ ಬಾಂಧವ್ಯ ಗಟ್ಟಿಯಾಗಬೇಕೆ? ಮದುವೆ ಮತ್ತು ಬಜೆಟ್ ಪ್ಲಾನಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ದೆಹಲಿ ನೀರಿನ ಬಿಕ್ಕಟ್ಟು: ಮನೆಯಲ್ಲಿ ನೀರು ಉಳಿಸಿ, ಗಿಡಗಳನ್ನು ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಡೈರಿ ಉತ್ಪನ್ನಗಳ ಸ್ಮಾರ್ಟ್ ಆಯ್ಕೆ: ವಿಶ್ವ ಹಾಲು ದಿನದ ವಿಶೇಷ ಸಲಹೆಗಳು -
ಬೆಂಗಳೂರು ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಸ್ಟೈಲಿಶ್ ಆಗಿ ಕಾಣಲು ಈ ವೈರಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಸೈಕಲ್ ದಿನ: ಫಿಟ್ನೆಸ್ ಕಾಯ್ದುಕೊಳ್ಳಲು ಮತ್ತು ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿದೆ ಬೆಸ್ಟ್ ಟಿಪ್ಸ್ -
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ!
ನೈಟ್ ಶಿಫ್ಟ್ ಮಾಡಿದರೆ ಕ್ಯಾನ್ಸರ್ ಬರುವುದೇ?
ಕ್ಯಾನ್ಸರ್ ಎಂಬ ಮಾರಕ ರೋಗ ತರುವ ಕೆಲವೊಂದು ಕಾರಣಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಸಿಗರೇಟ್ ಎಳೆದರೆ ಶಾಶ್ವಕೋಶದ ಕ್ಯಾನ್ಸರ್, ಗುಟುಕ ತಿಂದರೆ ಬಾಯಿಯಲ್ಲಿ ಕ್ಯಾನ್ಸರ್, ಸೂರ್ಯನ ನೇರಳಾತೀತ ಕಿರಣಗಳು ಬಿದ್ದರೆ ಸ್ಕಿನ್ ಕ್ಯಾನ್ಸರ್ ಹೀಗೆ ಕ್ಯಾನ್ಸರ್ ಗೆ ಕಾರಣವಾಗುವ ಸಾಕಷ್ಟು ಅಂಶಗಳ ಬಗ್ಗೆ ಓದಿರುತ್ತೇವೆ.
ಆದರೆ ಕ್ಯಾನ್ಸರ್ ಕೆಲವೊಂದು ಅಸ್ವಾಭಾವಿಕ ಕಾರಣಗಳಿಂದಲೂ ಬರುತ್ತದೆಯಂತೆ. ಅವುಗಳಲ್ಲೊಂದು ನೈಟ್ ಶಿಫ್ಟ್ ಮಾಡಿದರೆ ಕ್ಯಾನ್ಸರ್ ಬರುವುದು ಎಂದು ಇದರ ಬಗ್ಗೆ ನಡೆಸಿದ ಅಧ್ಯಯನ ಹೇಳಿರುವುದು. ಆಶ್ಚರ್ಯವಾಗುತ್ತಿದೆ ಅಲ್ಲವೇ? ಕ್ಯಾನ್ಸರ್ ತರುವ ಇನ್ನಿತರ ಅಚ್ಚರಿಯ ಕಾರಣಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ.
ಆ ಕಾರಣಗಳ ಬಗ್ಗೆ ಓದುತ್ತಾ ಹೋದಂತೆ 'ಅಯ್ಯೋ ಇವುಗಳಿಂದೆಲ್ಲಾ ಕ್ಯಾನ್ಸರ್ ಬರುವುದಾದರೆ, ಈ ಲೈಫ್ ಸ್ಟೈಲ್ ಬಿಟ್ಟು ಆದಿ ಮಾನವನಂತೆ ಬದುಕಬೇಕೆ?' ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದಂತು ಖಚಿತ.

ಏರ್ ಫ್ರೆಶ್ ನರ್
ಏರ್ ಫ್ರೆಶ್ ನರ್ ಬಳಸುವುದು ನಮಗೊಂದು ಪ್ರೆಸ್ಟೇಜ್ ವಿಷಯವೆಂದು ಹೇಳಿದರೆ ತಪ್ಪಾಗಲಾರದು. ಫಳ-ಫಳ ಹೊಳೆಯುವ ಎಸಿ ರೂಂ ಇರುವ ಮನೆ ಅಥವಾ ಆಫೀಸ್ ಗೆ ಏರ್ ಫ್ರಶ್ ನರ್ ಹೊಡೆದು ಸುವಾಸನೆಯಿಂದ ಇರುವಂತೆ ಮಾಡುತ್ತವೆ. ಆದರೆ ಇದರಲ್ಲಿರುವ phthalates ಕೆಮಿಕಲ್ಸ್ ಕ್ಯಾನ್ಸರ್ ತರುವುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಟೇನಿಂಗ್ ಬೆಡ್( Indoor Tanning Bed)
30 ವರ್ಷಕ್ಕೆ ಒಳಗಿನವರು ಇನ್ ಡೊರ್ ಟೇನಿಂಗ್ ಬೆಡ್ ಬಳಸಿದರೆ ಸ್ಕಿನ್ ಕ್ಯಾನ್ಸರ್ ಬರುವ ಸಾಧ್ಯತೆ ಶೆ. 75ರಷ್ಟಿದೆ.

ಗರ್ಭನಿರೋಧಕ ಮಾತ್ರೆಗಳು
ಗರ್ಭನಿರೋಧಕ ಮಾತ್ರೆಗಳು ಹಾರ್ಮೋನ್ ಗಳಲ್ಲಿ ವ್ಯತ್ಯಾಸ ತಂದು ಕ್ಯಾನ್ಸರ್ ತರುವ ಸಾಧ್ಯತೆ ಹೆಚ್ಚು, ಅಲ್ಲದೆ ಇಂತಹ ಮಾತ್ರೆಗಳು ಮಹಿಳೆಯರ ಮಾನಸಿಕ ಸ್ಥಿತಿಯ ಮೇಲೂ ಪರಿಣಾಮ ಬೀರುವುದು.

ತುಂಬಾ ಹೊತ್ತು ಕೆಲಸ ಮಾಡಿದರೆ
ನೈಟ್ ಶಿಫ್ಟ್ ಮಾಡುವವರಿಗೆ ನೈಟ್ ನಲ್ಲಿ ನಿದ್ದೆ ಮಾಡುವವರಿಗಿಂತ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ತಿಳಿದುಬಂದಿದೆ. ಸುಖ ನಿದ್ದೆ ಅನೇಕ ಆರೋಗ್ಯಕರ ಸಮಸ್ಯೆಯನ್ನು ದೂರವಿಡುವುದು.

ಮೌತ್ ವಾಶ್
ಮೌತ್ ವಾಶ್ ನಲ್ಲಿ ಎಥೆನೋಲ್ ಎಂಬ ರಾಸಾಯನಿಕವಿದ್ದು ಅದು ಬಾಯಿ ಕ್ಯಾನ್ಸರ್ ಗೆ ಕಾರಣವಾಗುವುದು ಎಂದು ಅಧ್ಯನದಿಂದ ತಿಳಿದುಬಂದಿದೆ.

ಬಿಗಿಯಾದ ಬ್ರಾ
ಬಿಗಿಯಾದ ಬ್ರಾ ರಕ್ತ ಸಂಚಾರಕ್ಕೆ ಅಡಚಣೆ ಉಂಟು ಮಾಡಿ ಸ್ತನ ಕ್ಯಾನ್ಸರ್ ಗೆ ಕಾರಣವಾಗುವುದು. ಆದ್ದರಿಮದ ತುಂಬಾ ಬಿಗಿಯಾದ ಬ್ರಾ ಧರಿಸುವುದು ಒಳ್ಳೆಯದಲ್ಲ.

1. ವೈನ್
ಡೈಲಿ ಮೇಲ್ ಕ್ಯಾನ್ಸರ್ ಬರಲು ಕಾರಣವಾದ ಇನ್ನೂ ಕೆಲವು ಅಚ್ಚರಿಯ ಕಾರಣಗಳ ಬಗ್ಗೆ ಪಬ್ಲಿಷ್ ಮಾಡಿತ್ತು. ಅವುಗಳ ಬಗ್ಗೆ ಇಲ್ಲಿ ನೀಡಲಾಗಿದೆ.
ದಿನಾ ವೈನ್ ಕುಡಿದರೆ ತುಂಬಾ ಒಳ್ಳೆಯದು ಎಂದು ಸಾಕಷ್ಟು ಓದಿದ್ದೇವೆ. ಆದರೆ ಡೈಲಿ ಮೇಲ್ ದಿನಾ ವೈನ್ ಕುಡಿದರೆ ಕ್ಯಾನ್ಸರ್ ಬರುವ ಸಾಧ್ಯತೆ ಅಧಿಕವೆಂದು ಪ್ರಕಟಿಸಿದೆ.

2. ಶೀತ
ಸಾಮಾನ್ಯವಾದ ಶೀತ ಮಕ್ಕಳಲ್ಲಿ ಮತ್ತು ಗರ್ಭಿಣಿಯರಲ್ಲಿ ಲುಕೋಮಿಯಾದಂತಹ ಕ್ಯಾನ್ಸರ್ ಮತ್ತು ಬ್ರೈನ್ ಟ್ಯೂಮರ್ ಗೆ ಕಾರಣವಾಗುವುದು ಎಂದು ಅಧ್ಯಯನವು ತಿಳಿಸಿದೆ.

3. ಡಿಯೋಡ್ರೆಂಟ್
ಡಿಯೋಟ್ರೆಂಡ್ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ತರುವ ಸಾಧ್ಯತೆ ಹೆಚ್ಚು ಎಂದು ಇದರ ಬಗ್ಗೆ ನಡೆಸಿದ ಅಧ್ಯಯನವೂ ತಿಳಿಸಿದೆ.

4. ಚಿಪ್ಸ್
ಮಿತಿ ಮೀರಿ ಚಿಪ್ಸ್ ತಿನ್ನುವುದರಿಂದ ಕೂಡ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೆ. 27 ರಷ್ಟಿದೆ. ಆದ್ದರಿಂದ 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಚಿಪ್ಸ್ ಕೊಡಬೇಡಿ.

5. ಓರಲ್ ಸೆಕ್ಸ್
ಓರಲ್ ಸೆಕ್ಸ್ ಪುರುಷ ಮತ್ತು ಮಹಿಳೆಯರಲ್ಲಿ ಬಾಯಿ ಕ್ಯಾನ್ಸರ್ ಗೆ ಕಾರಣವಾಗಬಹುದೆಂದು ವಿಜ್ಞಾನಿಗಳು ಇದರ ಬಗ್ಗೆ ಎಚ್ಚರಿಸಿದ್ದಾರೆ.

7. ವಿಟಮಿನ್ ಇ ಸಪ್ಲಿಮೆಂಟ್
ವಿಟಮಿನ್ ಇ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದರ ಸಪ್ಲಿಮೆಂಟ್ ತೆಗೆಯುವುದರಿಂದ ಕ್ಯಾನ್ಸರ್ ಬರಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಆದ್ದರಿಂದ ವಿಟಮಿನ್ ಇ ಅನ್ನು ಆಹಾರಗಳ ಮೂಲಕ ತೆಗೆದುಕೊಳ್ಳುವುದು ಒಳ್ಳೆಯದು.

8. ಸೂಪ್
ಪ್ರತೀದಿನ ಉಪ್ಪಿನಂಶ ಅಧಿಕವಿರುವ ಸೂಪ್ ಕುಡಿಯುವವರಿಗೆ ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆ ಎಂದು ತಿಳಿದುಬಂದಿದೆ.

9. ಹೇರ್ ಡೈ
ನಿರಂತರ 15 ವರ್ಷಗಳಿಂದ ಹೇರ್ ಡೈ ಬಳಸುತ್ತಿರುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು, ಅದಕ್ಕೆ ಕಾರಣ ಇದರಲ್ಲಿರುವ ರಾಸಾಯನಿಕಗಳು.

10. ಸನ್ ಕ್ರೀಮ್
ಸೂರ್ಯನ ನೇರಳಾತೀತ ಕಿರಣಗಳನ್ನು ತಡೆಯಲು ಸನ್ ಸ್ಕ್ರೀನ್ ಬಳಸುತ್ತೇವೆ, ಆದರೆ ಸನ್ ಸ್ಕ್ರೀನ್ ಲೋಷನ್ ಸ್ಕಿನ್ ಟ್ಯಾನ್ ಆಗುವುದನ್ನು ತಡೆದರೂ ಕ್ಯಾನ್ಸರ್ ತರುವ ಅಪಾಯಕಾರಿ ಕಿರಣಗಳನ್ನು ತಡೆಯುವ ಸಾಮರ್ಥ್ಯ ಹೊಂದಿಲ್ಲ ಎಂದು ಕೂಡ ಸಂಶೋಧನೆಯಿಂದ ತಿಳಿದುಬಂದಿದೆ.

11. ಕ್ಷ ಕಿರಣಗಳು
ಕ್ಷ ಕಿರಣಗಳು ಮೈ ಮೇಲೆ ಬಿದ್ದಾಗ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಸಾಬೀತಾಗಿದೆ.

12. ಪೌಡರ್
ಪೌಡರ್ ನಲ್ಲಿ ಬಳಸುವ ರಾಸಾಯನಿಕಗಳು ಕ್ಯಾನ್ಸರ್ ತರುವ ಸಾಧ್ಯತೆ ಇದೆ ಎಂದು ಅಮೇರಿಕದಲ್ಲಿ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

13. ಮಾಯಿಶ್ಚರೈಸರ್
ಮಾಯಿಶ್ಚರೈಸರ್ ಅನ್ನು ಮಿಲಿಯನ್ ಗಿಂತಲೂ ಅಧಿಕ ಜನರು ದಿನನಿತ್ಯ ಬಳಸುತ್ತಿದ್ದಾರೆ, ಆದರೆ ಇವುಗಳಲ್ಲೂ ಕ್ಯಾನ್ಸರ್ ತರುವ ಅಂಶವಿದೆಯಂತೆ.

14. ಮೊಬೈಲ್ ಫೋನ್
ಮೊಬೈಲ್ ಫೋನ್ ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳ ಜೊತೆ ಕ್ಯಾನ್ಸರ್ ತರುವ ಅಪಾಯ ಕೂಡ ಇದೆ.

15. ರೆಡ್ ಮೀಟ್
ಅತೀ ಹೆಚ್ಚು ರೆಡ್ ಮೀಟ್ ತಿನ್ನುವವರಿಗೆ ಕರಳಿನ ಕ್ಯಾನ್ಸರ್ ಬರುತ್ತದೆಯಂತೆ, ಆದ್ದರಿಂದ ರೆಡ್ ಮೀಟ್ ತಿನ್ನುವುದು ಕಮ್ಮಿ ಮಾಡುವುದು ಒಳ್ಳೆಯದು.

16. ಟೂತ್ ವೈಟ್ನರ್
ಇದರಲ್ಲಿರುವ ಅಧಿಕ ಸಾಂದ್ರತೆಯ ಬ್ಲೀಚ್ ಕ್ಯಾನ್ಸರ್ ಕಣಗಳನ್ನು ಉತ್ಪತ್ತಿ ಮಾಡುವ ಸಾಧ್ಯತೆ ಅಧಿಕವಂತೆ.

17. ಚಾಕಲೇಟ್
ಚಾಕಲೇಟ್, ಸ್ನ್ಯಾಕ್ಸ್ ಇವುಗಳನ್ನು ತಯಾರಿಸಿ ತುಂಬಾ ಸಮಯದವರೆಗೆ ಶಾಪ್ ನಲ್ಲಿ ಇಡಲಾಗುವುದು. ಇವುಗಳನ್ನು ತಿನ್ನುವುದರಿಂದಲೂ ಕ್ಯಾನ್ಸರ್ ಬರುವುದಂತೆ.



Click it and Unblock the Notifications