Latest Updates
-
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್! -
'ವೆಡ್ ಇನ್ ಇಂಡಿಯಾ': ಕಡಿಮೆ ಬಜೆಟ್ನಲ್ಲಿ ಅದ್ಧೂರಿ ಮದುವೆಗೆ ಇಲ್ಲಿದೆ 3 ದಿನಗಳ ಮಾಸ್ಟರ್ ಪ್ಲಾನ್! -
ನಿಮ್ಮ ಮನೆಯ ಫ್ಯಾನ್ ಸುರಕ್ಷಿತವೇ? ದೊಡ್ಡ ಅವಘಡ ತಪ್ಪಿಸಲು ಈ 5 ನಿಮಿಷದ ಚೆಕ್ ಮರೆಯದಿರಿ
ಪುರುಷರ ಮೇಲೆ ಕಾಫಿಯ ದುಷ್ಪರಿಣಾಮಗಳು
ಪ್ರಪಂಚದಾದ್ಯಂತ ಕಾಫಿ ಬಹಳ ಜನಪ್ರಿಯವಾದ ಪಾನೀಯ. ಪುರುಷರು ಕೆಲಸದಲ್ಲಿ ಮನಸ್ಸನ್ನು ಏಕಾಗ್ರಗೊಳಿಸಲು ಮತ್ತು ದಣಿವನ್ನು ಮರೆಯಲು ಕಾಫಿ ಕುಡಿಯುತ್ತಾರೆ. ಸಾಮಾನ್ಯವಾಗಿ ಕಾಫಿ ಕುಡಿಯುವುದು ಕೆಟ್ಟದೇನಲ್ಲ. ಕಾಫಿಯಿಂದ ಆರೋಗ್ಯದ ಮೇಲೆ ಹಲವು ಒಳ್ಳೆಯ ಪರಿಣಾಮಗಳು ಕೂಡ ಉಂಟಾಗುತ್ತವೆ. ಆದರೆ ಪುರುಷರಲ್ಲಿ ಕಾಫಿ ಸೇವನೆಗೆ ದಾಸರಾದಲ್ಲಿ ಹಲವು ತೊಂದರೆಗಳುಂಟಾಗುತ್ತವೆ. ಇದರಿಂದ ಆತಂಕ, ಹೃದಯಬಡಿತದಲ್ಲಿ ಅನಿಯಮಿತತೆ, ಹೆದರಿಕೆ, ಸ್ನಾಯು ಸೆಳೆತದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಕಾಫಿಯಲ್ಲಿರುವ ಕೆಫೇನ್ ಅಡೋನಿಸನ್ ಎನ್ನುವ ಕೆಮಿಕಲ್ ಕೆಲಸ ಮಾಡುವುದನ್ನು ತಡೆಯುತ್ತದೆ. ಇದು ನಿಮಗೆ ನಿದ್ರೆ ಉಂಟುಮಾಡುವಂತಹ ಕೆಮಿಕಲ್. ಇದನ್ನು ತಡೆದು ನಿಮ್ಮಲ್ಲಿ ಏಕಾಗ್ರತೆ ಮತ್ತು ಪ್ರತಿಕ್ರಿಯಿಸುವ ವೇಗವನ್ನು ಹೆಚ್ಚಿಸುತ್ತದೆ. ಕಾಫಿಯನ್ನು ನಿಯಮಿತವಾಗಿ ಕುಡಿಯುವುದರಿಂದ ಪುರುಷರು ತಮ್ಮ ಮೂಡ ಬದಲಾಯಿಸಿಕೊಳ್ಳುವ ಅಭ್ಯಾಸಕ್ಕೆ ಅಂಟಿಕೊಂಡುಬಿಡುತ್ತಾರೆ. ಈವತ್ತಿನ ಜೀವನ ಶೈಲಿಯಲ್ಲಿ ಹೆಚ್ಚು ಮಂದಿ ಪುರುಷರು ಕಾಫಿಗೆ ದಾಸರಾಗಿ ತಮ್ಮ ನಿಯಮಿತ ಅವಧಿಯ ನಿದ್ದೆಯನ್ನು ತಪ್ಪಿಸುವ ಮೂಲಕ ದೇಹ ಮತ್ತು ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ಸಿಗದ ಹಾಗೆ ಮಾಡಿಕೊಂಡಿದ್ದಾರೆ. ಮುಂಜಾನೆಯಲ್ಲಿ ಶಕ್ತಿವರ್ಧಿಸುತ್ತದೆ ಎಂಬುದು ಕಾಫಿಯ ಬಗೆಗಿನ ತಪ್ಪು ತಿಳುವಳಿಕೆ. ಇದು ಕೇವಲ ಹಿಂದಿನ ರಾತ್ರಿಯ ಬಾಕಿ ಉಳಿದ ನಿದ್ದೆಯನ್ನಷ್ಟೇ ನಿವಾರಿಸುತ್ತದೆ.

ಕೆಫೇನ್ ಗೆ ದಾಸರಾಗುವುದೇ ಕಾಫಿಯ ದುಷ್ಟರಿಣಾಮಗಳಲ್ಲಿ ಒಂದು. ಪ್ರತಿ ನಿತ್ಯ ಕಾಫಿ ಸೇವನೆ 300 ಗ್ರಾಂಗಿಂತ ಅಧಿಕವಾಯಿತೆಂದರೆ ದೀರ್ಘಾವಧಿಯ ದುಷ್ಟರಿಣಾಮಗಳನ್ನುಂಟುಮಾಡುತ್ತದೆ. ಕಾಫಿ ಕುಡಿಯುವುದನ್ನು ನಿಲ್ಲಿಸಿದಾಗ ಮೆದುಳಿನ ಸೆಲ್ ಗಳು ತಮ್ಮನ್ನು ತಾವು ಉತ್ತೇಜಿತಗೊಳಿಸಿಕೊಳ್ಳಲು ಕೆಫೇನ್ ಬೇಡಲಾರಂಭಿಸುತ್ತದೆ ಮತ್ತು ಇದ್ದಕ್ಕಿದ್ದಂತೆ ನರಗಳು ನಿಶ್ಚೇತಗೊಳ್ಳುತ್ತವೆ. ದೀರ್ಘಾವಧಿಯಿಂದ ಕಾಫಿಗೆ ಅಂಟಿಕೊಂಡಿರುವ ಪುರುಷರು ನಿದ್ರಾಹೀನತೆಯಿಂದ ಬಳಲುತ್ತಾರೆ.
ಪುರುಷರ ಮೇಲಾಗುವ ದುಷ್ಪರಿಣಾಮಗಳಲ್ಲಿ ಕೆಲವು ಹೀಗಿವೆ:
1. ಹುಣ್ಣು
ಕಾಫಿಯಲ್ಲಿರುವ ಕೆಫೇನ್ ಮತ್ತಿತರ ಆಸಿಡ್ ಗಳು ಹೊಟ್ಟೆಗೆ ಹಾನಿಕಾರವಾದವು. ಇವು ಸಣ್ಣ ಕರುಳಿನ ಮೇಲೆ ದುಷ್ಪರಿಣಾಮವುಂಟುಮಾಡುತ್ತದೆ. ಕಾಫಿ ಕುಡಿಯುವ ಮುಂಚೆ ಅಥವ ನಂತರ ನೀರು ಕುಡಿಯದಿದ್ದರೆ ಅಥವ ಹೆಚ್ಚು ಕಾಫಿ ಕುಡಿಯುವುದರಿಂದ ಇದು ಅಲ್ಸರ್ ಮತ್ತು ಅಸಿಡಿಟಿಗೆ ಕಾರಣವಾಗುತ್ತದೆ. ಇದಲ್ಲದೆ ಹೊಟ್ಟೆಯಲ್ಲಿ ಸೆಳೆತ, ಮಲಬದ್ಧತೆ ಮತ್ತು ಭೇದಿಯಾಗುವ ಸಾಧ್ಯತೆಗಳು ಹೆಚ್ಚುತ್ತದೆ.
2. ಎದೆಯುರಿ
ಅಸಿಡಿಟಿಯಿಂದಾಗಿ ಎದೆಯುರಿ ಹೆಚ್ಚಾಗಬಹುದು. ಅನ್ನನಾಳದ ಬಳಿಯಿರುವ ಸಣ್ಣ ಸ್ನಾಯು ಹೊಟ್ಟೆಯಿಂದ ನೀವು ತಿಂದ ಆಹಾರ ಮರಳಿ ಅನ್ನನಾಳಕ್ಕೆ ಬರದಂತೆ ತಡೆಯುತ್ತದೆ. ಆದರೆ ಕೆಫೆನ್ ನ ಪರಿಣಾಮವಾಗಿ ಉಂಟಾಗುವ ಹೈಡ್ರೋಕ್ಲೋರಿಕ್ ಆಸಿಡ್ ನಿಂದ ಈ ಸ್ನಾಯು ಹಾನಿಗೊಳಗಾಗುತ್ತದೆ. ಇದರಿಂದಲೇ ಅಸಿಡಿಟಿ ಕಾಣಿಸಿಕೊಳ್ಳುವುದು.
3. ಲ್ಯಾಕ್ಸಟೀವ್
ಹಲವರಿಗೆ ಪ್ರತಿ ದಿನ ಬೆಳಗ್ಗೆ ಕಾಫಿ ಕುಡಿಯಲೇ ಬೇಕು ಎನ್ನಿಸುತ್ತದೆ. ಇದನ್ನು ಕುಡಿಯುವುದರಿಂದ ಮಲವಿಸರ್ಜನೆ ಸರಾಗವಾಗುತ್ತದೆ ಎನ್ನಿಸುತ್ತದೆ. ಏಕೆಂದರೆ ಕಾಫಿಯಿಂದಾಗಿ ಹೊಟ್ಟೆಯಲ್ಲಿರುವ ಜೀರ್ಣವಾದ ಜೀರ್ಣವಾಗದ ಆಹಾರವೆಲ್ಲ ತಟ್ಟನೆ ಕರುಳಿನಿಂದ ಹೊರಬರುತ್ತದೆ.
4. ಖನಿಜಾಂಶ ಕೊರತೆ
ಕಾಫಿ ನಿಮ್ಮ ಹೊಟ್ಟೆ ಅದರಲ್ಲಿಯೂ ಮುಖ್ಯವಾಗಿ ನಿಮ್ಮ ಮೂತ್ರಪಿಂಡಗಳ ಕ್ಯಾಲ್ಸಿಯಂ, ಜಿಂಕ್, ಮ್ಯಾಗ್ನೀಶಿಯಂ ಮತ್ತಿತರ ಖನಿಜಾಂಶಗಳನ್ನು ಹಿಡಿದಿಡುವ ಶಕ್ತಿಯನ್ನು ಕುಂದಿಸುತ್ತದೆ. ಜೀರ್ಣಕ್ರಿಯೆಯ ದೃಷ್ಟಿಯಿಂದ ನೋಡಿದಾಗ ಇದು ಆತಂಕಕಾರಿ ಸ್ಥಿತಿ. ಚಯಾಪಚಯ ಕ್ರಿಯೆ ಖನಿಜಾಂಶಗಳು ಅತ್ಯಗತ್ಯ.
5. ಆಮ್ಲದ ಮಟ್ಟ
ಬರಿಹೊಟ್ಟೆಯಲ್ಲಿ ಕಾಫಿಯನ್ನು ಕುಡಿಯುವುದರಿಂದ ಇದು ಹೈಡ್ರೋಕ್ಲೊರಿಕ್ ಆಸಿಡ್ ಉತ್ಪಾದಿಸುತ್ತದೆ. ಇದರಿಂದ ತೊಂದರೆ ಹೆಚ್ಚು ಏಕೆಂದರೆ HCL ಕೇವಲ ಆಹಾರ ಜೀರ್ಣಗೊಳಿಸಲು ಮಾತ್ರ ಬಳಕೆಯಾಗುವಂತದ್ದು. ಜೀರ್ಣಕ್ರಿಯೆಗೆ ಅವಶ್ಯಕವಾದ ಆಮ್ಲಗಳ ಉತ್ಪಾದನೆಗೆ ತೊಂದರೆಯಾಗುವುದರಿಂದ ಜೀರ್ಣಾಂಗಗಳು ಮತ್ತದರ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
6. ಒತ್ತಡ ಮತ್ತು ಆತಂಕ
ಹೆಚ್ಚು ಕಾಫಿ ಕುಡಿಯುವುದರಿಂದ ಒತ್ತಡದ ಹಾರ್ಮೋನುಗಳಾದ ಕೊರ್ಟಿಸೊಲ್, ಎಪಿನೆಫ್ರೈನೆ ಮತ್ತು ನೊರೆಪೈನೆಫ್ರೈನೆಯು ಹೆಚ್ಚಾಗಿ ಬಿಡುಗಡೆಯಾಗುತ್ತದೆ. ಇವು ಹೃದಯದ ಬಡಿತ, ರಕ್ತದೊತ್ತಡ ಮತ್ತು ಆತಂಕವನ್ನು ಹೆಚ್ಚಿಸುತ್ತದೆ.
7. ಮೂಳೆಗಳಲ್ಲಿ ಖನಿಜಾಂಶದ ಕೊರತೆ ಉಂಟಾಗುತ್ತದೆ
ಕುಡಿಯಬಹುದಾದ್ದಕ್ಕಿಂತ ಹೆಚ್ಚಿನ ಕಾಫಿಯನ್ನು ಕುಡಿಯುವುದರಿಂದ ಮೂಳೆಗಳಲ್ಲಿ ಖನಿಜಾಂಶದ ಕೊರತೆ ಉಂಟಾಗುತ್ತದೆ. ಕೆಫೇನ್ ಮೂತ್ರದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದ ಕ್ಯಾಲ್ಸಿಯಂ ಮೂತ್ರದ ಮೂಲಕ ಹೆಚ್ಚಾಗಿ ಹೊರಗೆ ಹೋಗುತ್ತದೆ. ದೀರ್ಘಾವಧಿಯಲ್ಲಿ ಇದು ಒಸ್ಟೊಪೊರೊಸಿಸ್ ಗೆ ಕಾರಣವಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications