Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಸಸ್ಯಾಹಾರಿಗಳಲ್ಲಿ 9 ವಿಟಮಿನ್ಸ್ ಕೊರತೆ ಕಂಡುಬರುವುದು
ಸಸ್ಯಾಹಾರ ಒಳ್ಳೆಯದಾ? ಮಾಂಸಾಹಾರ ಒಳ್ಳೆಯಾದಾ? ಎಂಬ ಚರ್ಚೆ ನಡೆಯುತ್ತಲೇ ಇರುತ್ತದೆ. ಸಸ್ಯಹಾರ ತಿನ್ನುವವರು ನಾನ್ ವೆಜ್ ತಿನ್ನಬಾರದೆಂದು ವಾದಿಸಿದರೆ, ನಾನ್ ವೆಜ್ ರುಚಿ ನೋಡಿರುವವರು ಆ ಮಾತನ್ನು ಒಪ್ಪಲು ಸಿದ್ಧವಿರುವುದಿಲ್ಲ.
ಆದರೆ ಅಪ್ಪಟ ಸಸ್ಯಹಾರಿ ಆದರೆ ಕೂಡ ಕೆಲವೊಂದು ಪೋಷಕಾಂಶಗಳ ಕೊರತೆ ಉಂಟಾಗುವುದು! ಅಧಿಕ ಕೊಬ್ಬಿನಂಶವಿರುವ ನಾನ್ ವೆಜ್ ಅನ್ನು ತುಂಬಾ ತಿಂದರೆ ಕೊಲೆಸ್ಟ್ರಾಲ್ ಉಂಟಾಗುವುದು, ಕಡಿಮೆ ಕೊಬ್ಬಿನಂಶವಿರುವ ಮಾಂಸಾಹಾರ ಆರೋಗ್ಯಕ್ಕೆ ಒಳ್ಳೆಯದು.
ಮಾಂಸಾಹಾರಿಗಳಿಗಿಂತ ಸಸ್ಯಾಹಾರಿಗಳಲ್ಲಿ ವಿಟಮಿನ್ಸ್ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ. ಅದರಲ್ಲಿ ಬಹುಮುಖ್ಯವಾಗಿ ಸತು, ಒಮೆಗಾ 3 ಕೊಬ್ಬಿನಂಶದ ಪೋಷಕಾಂಶದ ಕೊರತೆ ಕಂಡು ಬರುತ್ತದೆ. ಅಲ್ಲದೆ ಈ ಕೆಳಗಿನ ವಿಟಮಿನ್ಸ್ ಕೊರತೆಯೂ ಕಂಡು ಬರುತ್ತದೆ:

ಕ್ಯಾಲ್ಸಿಯಂ
ಹಾಲು ಹಾಗೂ ಅದರ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಅಧಿಕವಿದೆ. ಆದರೆ ಸಸ್ಯಾಹಾರಿಗಳಾಗಿದ್ದು ಹಾಲು, ಹಾಲಿನ ಉತ್ಪನ್ನಗಳನ್ನು ತಿನ್ನದವರಾದರೆ ಕ್ಯಾಲ್ಸಿಯಂ ಕೊರತೆ ಕಂಡು ಬರುವುದು. ಹಾಲು ಕುಡಿಯದವರು ಸೊಪ್ಪನ್ನು ಹೆಚ್ಚು ತಿನ್ನುವುದು ಒಳ್ಳೆಯದು.

ಪ್ರೊಟೀನ್
ವೆಜ್ ಗೆ ಹೋಲಿಸಿದರೆ ನಾನ್ ವೆಜ್ ನಲ್ಲಿ ಪ್ರೊಟೀನ್ ಅಧಿಕವಿರುತ್ತದೆ. ಕೆಲ ಸಸ್ಯಾಹಾರಿಗಳು ಮೊಟ್ಟೆ ತಿನ್ನುತ್ತಾರೆ. ಮೊಟ್ಟೆ ತಿಂದರೆ ಪ್ರೊಟೀನ್ ಕೊರತೆ ಉಂಟಾಗದಂತೆ ತಡೆಯಬಹುದು.

ಸತು
ಕೆಲವೇ ಕೆಲವು ತರಕಾರಿಗಳಲ್ಲಿ ಸತುವಿನಂಶವಿದೆ, ಉದಾಹರಣೆಗೆ ಕುಂಬಳಕಾಯಿ ಬೀಜ. ಆದರೆ ಮೊಟ್ಟೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ಸತುವಿನಂಶವಿದೆ.

ಕಬ್ಬಿಣದಂಶ
ಸೊಪ್ಪಿನಲ್ಲಿ ಕಬ್ಬಿಣದಂಶ ಅಧಿಕವಿದೆ. ಆದರೆ ಸೊಪ್ಪಿಗೆ ಹೋಲಿಸಿದರೆ ಮೃದ್ವಂಗಿ(ನಾನ್ ವೆಜ್) ನಲ್ಲಿ ಜಾಸ್ತಿ ಇರುತ್ತದೆ. ಆದ್ದರಿಂದ ತಮ್ಮ ದೇಹದಲ್ಲಿ ಕಬ್ಬಿಣದಂಶದ ಕೊರತೆ ಉಂಟಾಗದಿರಲು ಸೊಪ್ಪನ್ನು ಅಧಿಕ ತಿನ್ನಿ.

ಒಮೆಗಾ 3 ಕೊಬ್ಬಿನಂಶ
ಈ ಕೊಬ್ಬಿನಂಶ ಮೀನಿನಲ್ಲಿ ಹೆಚ್ಚಾಗಿ ಇರುತ್ತದೆ. ತರಕಾರಿಯಲ್ಲಿ ಅಗಸದ ಬೀಜದಲ್ಲಿ ಕಂಡು ಬರುತ್ತದೆ. ಇದರ ಕೊರತೆ ತುಂಬಾ ಉಂಟಾದರೆ ಫಿಶ್ ಆಯಿಲ್ ತೆಗೆದುಕೊಳ್ಳುವುದು ಒಳ್ಳೆಯದು.

ವಿಟಮಿನ್ ಬಿ 12
ವಿಟಮಿನ್ ಬಿ 12 ಮಾಂಸಾಹಾರದಲ್ಲಿ ಹೆಚ್ಚು ಕಂಡು ಬಂದರೂ, ಕೆಲವೊಂದು ದವಸ ಧಾನ್ಯಗಳಲ್ಲೂ ಕಂಡು ಬರುತ್ತದೆ. ಆದ್ದರಿಂದ ಮೊಳಕೆ ಬರಿಸಿದ ಕಾಳುಗಳನ್ನು ಹೆಚ್ಚಾಗಿ ತಿನ್ನಿ.

ಟೌರೈನ್(taurine)
ಇದು ಪ್ರಮುಖವಾಗಿ ಮಾಂಸಾಹಾರದಲ್ಲಿ ಮಾತ್ರ ಇರುತ್ತದೆ.

EPA ಮತ್ತು DHA
ಇವುಗಳು ಮೀನಿನಲ್ಲಿ ಮಾತ್ರ ಇರುತ್ತದೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ಆಗಿದ್ದು, ಇದರ ಕೊರತೆ ನಿಮ್ಮ ದೇಹದಲ್ಲಿ ಉಂಟಾದರೆ ಪೂರಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಕ್ರಿಯಾಟೈನ್
ಇದು ಸ್ನಾಯುಗಳನ್ನು ಬಲ ಪಡಿಸಲು ಸಹಾಯ ಮಾಡುತ್ತದೆ. ಇದರ ಅಗತ್ಯವಿಲ್ಲದೆ ಜೀವನ ಮಾಡಬಹುದು, ಆದರೆ ಒಬ್ಬ ಕ್ರೀಡಾಪಟು ಆಗಬೇಕೆಂದು ಬಯಸುವುದಾದರೆ ಈ ಅಂಶ ಅವಶ್ಯಕ.



Click it and Unblock the Notifications
