Latest Updates
-
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು! -
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ!
ಚಳಿಗಾಲದಲ್ಲಿ ಇವುಗಳನ್ನು ಹೆಚ್ಚು ಬಳಸಿ,
ಋತು ಬದಲಾವಣೆಯಾಗುತ್ತಿದ್ದಂತೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅಗತ್ಯ. ಋತು ಬದಲಾವಣೆಯೊಂದಿಗೆ ಸಾಮಾನ್ಯವಾಗಿ ಶೀತ, ಜ್ವರ ಮತ್ತು ಫ್ಲೂನಂತಹ ಸಮಸ್ಯೆಗಳನ್ನು ನಾವು ಎಲ್ಲೆಡೆ ಕಾಣುತ್ತೇವೆ. ಆದ್ದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕಡೆಗೆ ನೀವು ಸದಾ ಗಮನ ನೀಡಬೇಕು. ನಾವಿಲ್ಲಿ ಚಳಿಗಾಲದಲ್ಲಿ ಕೆಲವು ಆಹಾರಗಳನ್ನು ಬಳಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಕುರಿತು ಮಾಹಿತಿ ನೀಡಿದ್ದೇವೆ.
ನಿಮ್ಮ ಡಯಟ್, ನಿದ್ದೆ ಮತ್ತು ಆರೋಗ್ಯದ ಪರಿಸ್ಥಿತಿಗಳು ನಿಮ್ಮ ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಿಮ್ಮ ಜೀವನಕ್ರಮವನ್ನು ಸೂಕ್ತವಾಗಿರಿಸಿಕೊಳ್ಳುವುದು ಅತ್ಯಂತ ಮುಖ್ಯ. ಉದಾಹರಣೆಗೆ ಚಳಿಗಾಲದಲ್ಲಿ ಮಸಾಲೆ ಪದಾರ್ಥಗಳನ್ನು ಸವಿಯಲು ಚೆನ್ನಾಗಿರುತ್ತದೆ. ಇದು ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿ ದೇಹವನ್ನು ಬೆಚ್ಚಗಿರಿಸುತ್ತದೆ. ಇದು ರೋಗನಿರೋಧಕ ಶಕ್ತಿಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.
ಕೆಲವು ಮಸಾಲೆ ಪದಾರ್ಥಗಳನ್ನು ಚಳಿಗಾಲದಲ್ಲಿ ನೀವು ನಿಮ್ಮ ಆಹಾರಕ್ರಮದಲ್ಲಿ ಬಳಸುವುದು ಒಳ್ಳೆಯದು. ಇದು ಶೀತ ಮತ್ತು ಫ್ಲೂ ವಿರುದ್ಧ ಹೋರಾಡಲು ನಿಮಗೆ ಶಕ್ತಿ ನೀಡುತ್ತದೆ. ಕಪ್ಪು ಮೆಣಸು ಮತ್ತು ಶುಂಠಿ ಇವುಗಳಲ್ಲಿ ಹೆಚ್ಚು ಬಳಸುವಂತದ್ದು. ನಾವಿಲ್ಲಿ ಅಂತಹ ಕೆಲವು ಮಸಾಲೆ ಪದಾರ್ಥಗಳನ್ನು ನಿಮಗಾಗಿ ನೀಡಿದ್ದೇವೆ. ಓದಿ ನೋಡಿ.

ಅಣಬೆ
ಮಾಯ್ ತೆಕ್, ರೈಶಿ, ಕೊರಿಯೊಲಸ್, ಅಗಾರ್ಕಸ್ ಮತ್ತು ಶಿಟಕೆ ಈ ಕೆಲವು ಅಣಬೆಗಳು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿನ ಬೀಟಾ ಗ್ಲೂಕಾನ್ಸ್ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಬೆಳ್ಳುಳ್ಳಿ
ಇದನ್ನು ಸಾಮಾನ್ಯವಾಗಿ ಅಡುಗೆಯ ರುಚಿ ಮತ್ತು ಸುಗಂಧ ಹೆಚ್ಚಿಸಲು ಬಳಸುತ್ತಾರೆ. ಆದರೆ ಇವು ಶೀತ ಮತ್ತು ಫ್ಲೂ ವಿರುದ್ಧ ಹೋರಾಡಲು ಪ್ರಯೋಜನಕಾರಿ. ಬೆಳ್ಳುಳ್ಳಿ ಬಿಳಿರಕ್ತ ಕಣಗಳನ್ನು ಹೆಚ್ಚಿಸುತ್ತದೆ. ಇವು ದೇಹಕ್ಕೆ ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ತಂದುಕೊಡುತ್ತದೆ. ಇದರಲ್ಲಿ ಅಲಿಸಿನ್ , ಅಜೊಯೆನೆ ಮತ್ತು ತಿಯೊಸುಫಿನೆಟೆ ಇದ್ದು ಇದು ಸೋಂಕು ಮತ್ತು ವೈರಾಣುಗಳು ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಚಿಕನ್ ಸೂಪ್
ಚಳಿಗಾಲದಲ್ಲಿ ಒಂದು ಕಪ್ ಚಿಕನ್ ಸೂಪ್ ಕುಡಿಯುವುದು ಆಹ್ಲಾಕಕಾರಿ ಅನುಭವ ನೀಡುತ್ತದೆ. ಚಿಕನ್ ಸೂಪ್ ಹಲವು ರೀತಿಯಲ್ಲಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಇದು ತೂಕ ಕಳೆದುಕೊಳ್ಳಲು ನೆರವಾಗುವುದಲ್ಲದೆ ಹೊಟ್ಟೆ ಸದಾ ತುಂಬಿರುವಂತೆ ಮಾಡುತ್ತದೆ. ಶೀತ ಮತ್ತು ಫ್ಲೂ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.

ಸೊಪ್ಪು
ಹಸಿರೆಲೆ ತರಕಾರಿಗಳಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್ ಗಳು, ವಿಟಮಿನ್ ಗಳು ಮತ್ತು ಖನಿಜಾಂಶಗಳು ಹೆಚ್ಚಿರುತ್ತವೆ. ಇವು ನಿಮ್ಮ ದೇಹಕ್ಕೆ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ತಂದು ಕೊಡುತ್ತದೆ.

ಕ್ಯಾರೆಟ್ಸ್
ಕ್ಯಾರೆಟ್ ಚಳಿಗಾಲದ ಡಯಟ್ ಗೆ ಉತ್ತಮವಾದದ್ದು. ಇದರಲ್ಲಿ ಫೈಟೋ ನ್ಯೂಟ್ರಿಯೆಂಟ್ ಬೀಟಾ-ಕ್ಯಾರೊಟೆನೆ ಇದ್ದು ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕಿನ ವಿರುದ್ಧ ಹೋರಾಡುವ ಕಣಗಳನ್ನು ಹೆಚ್ಚಿಸುತ್ತದೆ.

ಕೋಕೋ
ಹಸಿಯಾದ ಕೊಕೊ ಬೀನ್ಸ್ ನಲ್ಲಿ ಫ್ಲಾವೊನೊಲ್ಸ್ ಹೆಚ್ಚಿದ್ದು ಇದು ದೇಹಕ್ಕೆ ಒಳ್ಳೆಯದು. ಹಾಗೆಂದು ಕೊಕೊ ಚಾಕೊಲೇಟ್ ಗಳನ್ನು ತಿನ್ನಬೇಡಿ.

ಕಪ್ಪು ಮೆಣಸು
ಮೆಣಸು ಶೀತ, ಫ್ಲೂ ಮತ್ತಿತರ ಚಳಿಗಾಲದ ತೊಂದರೆಗಳ ನಿವಾರಣೆಗೆ ಪರಿಣಾಮಕಾರಿ ಔಷದ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುವುದಲ್ಲದೆ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸಲು ಕೂಡ ನೆರವು ನೀಡುತ್ತದೆ.

ಶುಂಠಿ
ಕೆಮ್ಮು ಮತ್ತು ಶೀತಕ್ಕೆ ಶುಂಠಿ ಪರಿಣಾಮಕಾರಿ ಔಷಧಿ. ಅಡುಗೆಗೆ ಶುಂಠಿ ಸ್ವಲ್ಪ ಶುಂಠಿ ಸೇರಿಸುವುದರಿಂದ ಚಳಿಗಾಲದ ತೊಂದರೆಗಳಿಂದ ದೂರವುಳಿಯಬಹುದು.

ನೇರಳೆಹಣ್ಣು
ನೇರಳೆ ಹಣ್ಣು ಮತ್ತು ಕೆಂಪು ದ್ರಾಕ್ಷಿಗಳು ದೇಹದ ರೋಗನಿರೋಧಕ ಶಕ್ತಿ ಹೆಚ್ಚಲು ನೆರವು ನೀಡುತ್ತದೆ.

ಖಾಲೆ
ಈ ಹಸಿರೆಲೆ ತರಕಾರಿಯಲ್ಲಿ ವಿಟಮಿನ್ ಎ ಮತ್ತು ಸಿ ಹೆಚ್ಚಿರುತ್ತದೆ. ವಿಟಮಿನ್ ಎ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ದೇಹದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಒಯ್ಸಿಟರ್ಸ್
ಇವು ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ನೆರವು ನೀಡುತ್ತದೆ. ಇದರೊಂದಿಗೆ ದೇಹದಲ್ಲಿ ವೈರಾಣುಗಳ ವಿರುದ್ಧ ಹೋರಾಡುವ ಕಣಗಳನ್ನು ಕೂಡ ಹೆಚ್ಚಿಸುತ್ತದೆ.

ಯೋಗರ್ಟ್
ಯೋಗರ್ಟ್ ನಲ್ಲಿ ಲ್ಯಾಕ್ಟೊಬ್ಯಾಕ್ಸಿಲಿಸ್ ಅಸಿಡೊಫಿಲ್ಯೂಸ್ ಎನ್ನುವ ಆರೋಗ್ಯಕಾರಿ ಬ್ಯಾಕ್ಟಿರೀಯ ಇದ್ದು ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಕಾಂಪ್ಲೆಕ್ಸ್ ಕಾಂಪೌಂಡ್ ಗಳನ್ನು ಸಣ್ಣ ಸಣ್ಣದಾಗಿ ಒಡೆದು ಉಪಯೋಗಕಾರಿಯಾಗುವಂತೆ ಪರಿವರ್ತಿಸುತ್ತದೆ. ಭೇದಿಯಂತಹ ಸಮಸ್ಯೆಗೆ ಬಿಸಿ ಮಾಡಿದ ಯೋಗರ್ಟ್ ಉತ್ತಮ

ಸಲ್ಮೊನ್
ಸಲ್ಮೊನ್ ಎಣ್ಣೆಯ ಅಂಶ ಹೆಚ್ಚಿರುವ ಮೀನು. ಇದರಲ್ಲಿ ವಿಟಮಿನ್ ಡಿಯಂತಹ ವಿಟಮಿನ್ ಗಳು ಹೆಚ್ಚಿರುತ್ತದೆ. ಇದು ಸೋಂಕಿನಿಂದ ಉಂಟಾಗುವಂತಹ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಟೀ
ಹರ್ಬಲ್ ಟೀ ಆರೋಗ್ಯಕ್ಕೆ ಒಳ್ಳೆಯದು. ಹರ್ಬಲ್ ಟೀ ಕುಡಿಯುವವರಲ್ಲಿ ಬ್ಯಾಕ್ಟಿರೀಯಾ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿರುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.



Click it and Unblock the Notifications