Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಸಂತ ಮಾಸದಲ್ಲಿ ಈ 11 ಆಹಾರಗಳನ್ನು ಮಿಸ್ ಮಾಡಬೇಡಿ
ಕಾಲಕ್ಕೆ ತಕ್ಕಂತೆ ನಮ್ಮ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅದರಲ್ಲೂ ಸೀಸನ್ ಫುಡ್ಸ್ ತಿನ್ನಲು ಮಿಸ್ ಮಾಡಿಕೊಳ್ಳಬಾರದು. ಏಕೆಂದರೆ ಆಹಾ ಕಾಲದಲ್ಲಿ ನಮ್ಮ ದೇಹಕ್ಕೆ ಏನೂ ಅವಶ್ಯಕವಿದೆಯೋ ಅದಕ್ಕೆ ತಕ್ಕಂತೆ ಆಯಾ- ಆಯಾ ಕಾಲದಲ್ಲಿ ದೊರೆಯುವ ಪದಾರ್ಥಗಳ ಗುಣ ಲಕ್ಷಣಗಳಿರುತ್ತದೆ.
ಚಳಿಗಾಲದಲ್ಲಿ ಮೈಯನ್ನು ಬಿಸಿ ಮಾಡುವ ಚಳಿಯ ವಿರುದ್ಧ ಹೋರಾಡುವ ಆಹಾರಗಳನ್ನು ತಿನ್ನಬೇಕು. ಉದಾಹರಣೆಗೆ ಕಿತ್ತಳೆ ಹಣ್ಣು ಚಳಿಗಾಲದಲ್ಲಿ ದೊರೆಯುತ್ತದೆ. ಇದು ಚಳಿಗಾಲಕ್ಕೆ ಸೂಕ್ತವಾದ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಸಿ ಅಧಿಕವಿರುವುದರಿಂದ ಶೀತ, ಕೆಮ್ಮು ಬರದಂತೆ ತಡೆಯುವ ಸಾಮರ್ಥ್ಯ ಹೊಂದಿದೆ. ಬೇಸಿಗೆ ಕಾಲದಲ್ಲಿ ನೀರಿನಂಶ ಅಧಿಕವಿರುವ ಆಹಾರಗಳನ್ನು ತಿನ್ನಬೇಕು. ಬೇಸಿಗೆಯಲ್ಲಿ ದೊರೆಯುವ ಸೀಸನ್ ಫುಡ್ಸ್ ನೀರಿನಂಶವನ್ನು ಅಧಿಕ ಹೊಂದಿರುತ್ತದೆ.
ಇದೀಗ ವಸಂತ ಕಾಲ. ಅತ್ತ ಚಳಿಯೂ ಇಲ್ಲ, ಇತ್ತ ಬಿಸಿಯೂ ಇಲ್ಲ. ಈ ಸಮಯದಲ್ಲಿ ಹೊಸ ಪಸಲಿಗಾಗಿ ಹೂ ಬಿಟ್ಟು ಸುಂದರವಾಗಿ ಕಾಣುತ್ತಿರುತ್ತದೆ. ವಸಂತ ಕಾಲದಲ್ಲಿ ಕಾಯಿಲೆ ಬೀಳದೆ ಆರೋಗ್ಯದಿಂದರಲು ಈ ಆಹಾರಗಳನ್ನು ತಿನ್ನಲು ಮಿಸ್ ಮಾಡಿಕೊಳ್ಳಬೇಡಿ ಓಕೆ?

ಪಲ್ಲೆ ಹೂ (artichokes)
ಇದರಲ್ಲಿ ಅಧಿಕ ನಾರಿನಂಶ, ಕ್ಯಾಲ್ಸಿಯಂ, ಪೊಟಾಷ್ಯಿಯಂ, ರಂಜಕದಂಶವಿದ್ದು ಇದು ವಸಂತಕಾಲದಲ್ಲಿ ದೊರೆಯುವ ತರಕಾರಿಯಾಗಿದೆ.

ಚಿಕ್ಕ ಬೀನ್ಸ್
ಬೀನ್ಸ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ತೆಳ್ಳಗಿನ, ಚಿಕ್ಕ ಗಾತ್ರದ ಬೀನ್ಸ್ ವಸಂತ ಕಾಲದಲ್ಲಿ ಹೆಚ್ಚಾಗಿ ದೊರೆಯುತ್ತದೆ.

ಮೂಲಂಗಿ
ಕೆಂಪು ಹಾಗೂ ಬಿಳಿ ಬಣ್ಣದ ಮೂಲಂಗಿ ಹಾಗೂ ಅದರ ಸೊಪ್ಪನ್ನು ಈ ಸಮಯದಲ್ಲಿ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು. ಇದರಲ್ಲಿ ನಾರಿನಂಶ ಹಾಗೂ antioxidants ಅಧಿಕವಿದೆ.

ಹೊಸ ಆಲೂಗಡ್ಡೆ
ಈ ಸಮಯದಲ್ಲಿ ದೊರೆಯುವ ಹೊಸ ಆಲೂಗಡ್ಡೆ ಕೂಡ ಆರೋಗ್ಯಕರವಾದ ಆಹಾರವಾಗಿದೆ. ಇದನ್ನು ಫ್ರೈ ಮಾಡಿ ತಿನ್ನುವ ಬದಲು ಸಾರು ಮಾಡಿ ತಿನ್ನುವುದು ಒಳ್ಳೆಯದು.

ಲೈಟ್ ಬ್ರೌನ್ ಬಣ್ಣದ ಈರುಳ್ಳಿ
ಇದರಲ್ಲಿ ರಂಜಕದ ಅಂಶ ಅಧಿಕವಿದೆ. ಇದನ್ನು ಉಸಿರಾಟದ ತೊಂದರೆ ಇರುವವರು ತಿನ್ನುವುದು ತುಂಬಾ ಒಳ್ಳೆಯದು. ಏಕೆಂದರೆ ಅಸ್ತಮಾ ಕಾಯಿಲೆ ಉಲ್ಬಣವಾಗದಂತೆ ತಡೆಯುತ್ತದೆ.

ನಿಂಬೆ ಹಣ್ಣು
ನಿಂಬೆ ಹಣ್ಣಿನ ರಸವನ್ನು ಎಲ್ಲಾ ಕಾಲದಲ್ಲೂ ಬಳಸುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ.

ಸೌತೆಕಾಯಿ
ಸೌತೆಕಾಯಿಯಲ್ಲಿ ಅನೇಕ ಆರೋಗ್ಯಕರ ಗುಣಗಳಿದ್ದು ಪ್ರಮುಖವಾಗಿ ವಸಂತಕಾಲದಲ್ಲಿ ಹಾಗೂ ಬೇಸಿಗೆಯಲ್ಲಿ ತಿನ್ನಲೇಬೇಕಾದ ಆಹಾರಗಳಲ್ಲಿ ಇದು ಕೂಡ ಒಂದಾಗಿದೆ.

ನೆಲ್ಲಿಕಾಯಿ
ಈ ಸಮಯದಲ್ಲಿ ನೆಲ್ಲಿಕಾಯಿ ಕೂಡ ಹೆಚ್ಚಾಗಿ ದೊರೆಯುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇದ್ದು ರಕ್ತವನ್ನು ಶುದ್ಧೀಕರಿಸುತ್ತದೆ, ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಪೈನಾಪಲ್
ಪೈನಾಪಲ್ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಶೀತ, ಕೆಮ್ಮನ್ನು ದೂರವಿಡುತ್ತದೆ. ವಸಡುಗಳ ಆರೋಗ್ಯ ಹೆಚ್ಚಿ, ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪಿನಲ್ಲಿ ಕೂಡ ಅನೇಕ ಆರೋಗ್ಯಕರ ಅಂಶಗಳಿರುವುದರಿಂದ, ಇದರಿಂದ ಸಾರು, ಪಲ್ಯವನ್ನು ಅಲಂಕರಿಸಲು ಮರೆಯಬೇಡಿ.

ಕ್ಯಾರೆಟ್
ಕ್ಯಾರೆಟ್ ಎಲ್ಲಾ ಕಾಲದಲ್ಲಿ ದೊರೆಯುವುದಾದರೂ ಈ ಸಮಯದಲ್ಲಿ ದೊರೆಯುವಂತಹ ಹಣ್ಣಾಗಿದೆ. ಇದನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿ ತಿನ್ನುವುದು ಒಳ್ಳೆಯದು.



Click it and Unblock the Notifications
