Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದೇಹದ ತೂಕ ಹೆಚ್ಚು ಮಾಡುವ ಅಹಾರಗಳಿವು
ದಪ್ಪಗಿದ್ದವರಿಗೆ ಸಣ್ಣಗಾಗಬೇಕೆಂದು ಪ್ರಯತ್ನಿಸಿದರೆ ತುಂಬಾ ತೆಳ್ಳಗಿದ್ದವರು ನಾನು ಸ್ವಲ್ಪ ದಪ್ಪವಾದರೆ ಚೆನ್ನಾಗಿತ್ತು ಎಂದು ಆಸೆ ಪಡುತ್ತಾರೆ. ತುಂಬಾ ದಪ್ಪಗಿದ್ದರೆ ಮಾತ್ರವಲ್ಲ, ತುಂಬಾ ತೆಳ್ಳಗಿದ್ದರೂ ನಾನಾ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಆರೋಗ್ಯಕರವಾಗಿರಲು ಸಮತೂಕವನ್ನು ಪಡೆಯಬೇಕು.
ನನಗೆ ಗೊತ್ತಿರುವರೊಬ್ಬರು ತುಂಬಾ ತೆಳ್ಳಗೆ ಇದ್ದರು. ಎಲ್ಲರು ಹೇಳಿದರು "ಇಷ್ಟು ತೆಳ್ಳಗಿದ್ದಿ, ಮದುವೆ ಸಮಯದಲ್ಲಾದರೂ ಸ್ವಲ್ಪ ದಪ್ಪಗಾಗಲು ಪ್ರಯತ್ನಿಸಬಾರದೇ" ಎಂದು. ಪಾಪ ಅವರು ದಪ್ಪಗಾಗಲು ಯಾವುದೋ ಪೌಡರ್ ತೆಗೆದುಕೊಂಡರು. ಈಗ ಅವರನ್ನು ನೋಡಿದರೆ ದಪ್ಪಗಾಗಿದ್ದಾರೆ ಅನ್ನುವ ಬದಲು ಊದಿಕೊಂಡಿದ್ದಾರೆ ಅನ್ನಬಹುದು. ಆದ್ದರಿಂದ ದಪ್ಪಗಾಗಲು ಪ್ರಯತ್ನಿಸುವಾಗ ನೈಸರ್ಗಿಕವಾದ ಆರೋಗ್ಯಕರ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.
ಎಣ್ಣೆ ಪದಾರ್ಥಗಳನ್ನು ತಿಂದರೆ ದೇಹದ ತೂಕ ಹೆಚ್ಚಾಗುವುದು, ಆದರೆ ಎಣ್ಣೆ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು. ಇಲ್ಲಿ ನಾವು ಕೆಲವು ಆರೋಗ್ಯಕರ ಆಹಾರಗಳ ಬಗ್ಗೆ ಹೇಳಿದ್ದೇವೆ. ಇವುಗಳನ್ನು ತಿನ್ನುವುದರಿಂದ ಕ್ರಮೇಣ ದೇಹದ ತೂಕವನ್ನು ಹೆಚ್ಚಿಸಿಕೊಂಡು ಆಕರ್ಷಕವಾಗಿ ಕಾಣಬಹುದು ಏನಂತೀರಿ?

ಅನ್ನ
ಅನ್ನದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು, ದೇಹದ ತೂಕ ಕೂಡ ಹೆಚ್ಚಾಗುವುದು. ಆರೋಗ್ಯದ ದೃಷ್ಟಿಯಿಂದ ಕೆಂಪಕ್ಕಿ ಅನ್ನ ತಿಂದರೆ ಮತ್ತಷ್ಟು ಒಳ್ಳೆಯದು.

ಇಡ್ಲಿ
ಅಕ್ಕಿ ಬಳಸಿ ಮಾಡುವ ಇಡ್ಲಿ ಆರೋಗ್ಯಕರವಾಗಿದೆ. ಇದನ್ನು ಮಾಡುವಾಗ ತರಕಾರಿ ಹಾಕಿ ಮಾಡಿದರೆ ಮತ್ತಷ್ಟು ರುಚಿಕರವಾಗಿರುತ್ತದೆ.

ಕೊಬ್ಬಿನಂಶದ ಆಹಾರ
ಪನ್ನೀರ್, ಚೀಸ್ , ಚಿಕನ್ , ಮೀನು, ಹಾಲಿನ ಉತ್ಪನ್ನಗಳು, ತುಪ್ಪ ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಚೀಸ್
ದಪ್ಪಗಾಗಲು ಪ್ರಯತ್ನಿಸುವವರು ಪ್ರತೀದಿನ ಚೀಸ್ ತಿಂದರೆ ಬೇಗನೆ ಫಲಿತಾಂಶ ದೊರೆಯುತ್ತದೆ.

ಮೊಸರು
ಕೊಬ್ಬಿನಂಶವಿರುವ ಮೊಸರು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ಮೊಸರನ್ನ ತಿನ್ನುತ್ತಾ ಬಂದರೆ ದೇಹಕ್ಕೂ ಒಳ್ಳೆಯದು, ತೂಕವೂ ಹೆಚ್ಚುವುದು.

ಬ್ರೆಡ್
ಸಣ್ಣಗಾಗಲು ಪ್ರಯತ್ನಿಸುವವರು ಗೋಧಿ ಬ್ರೆಡ್ ತಿನ್ನಬೇಕು. ದಪ್ಪಗಾಗಲು ಪ್ರಯತ್ನಿಸುವವರು ಬಿಳಿ ಬ್ರೆಡ್ ತಿನ್ನುವುದು ಒಳ್ಳೆಯದು.

ಬಾಳೆ ಹಣ್ಣು
ಬಾಳೆ ಹಣ್ಣಿನಲ್ಲಿ ಅಧಿಕ ಕ್ಯಾಲೋರಿ ಅಧಿಕವಿರುವುದರಿಂದ ದೇಹದ ತೂಕ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ದ್ರಾಕ್ಷಿ
ಪ್ರತೀದಿನ ಸ್ವಲ್ಪ ದ್ರಾಕ್ಷಿಯನ್ನು ನೆನೆ ಹಾಕಿ. ನಂತರ ಬೆಳಗ್ಗೆ ತಿನ್ನಿ. ಹೀಗೆ ಮಾಡಿದರೆ ತೂಕ ಹೆಚ್ಚಾಗುವಿರಿ. ದ್ರಾಕ್ಷಿ ಜೊತೆ ಸ್ವಲ್ಪ ಬಾದಾಮಿ ಕೂಡ ನೆನೆ ಹಾಕಿದರೆ ಒಳ್ಳೆಯದು.



Click it and Unblock the Notifications
