Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಉತ್ತಮ ಬ್ರೇಕ್ ಫಾಸ್ಟ್ ಗೆ ಈ ಸಾಮಾಗ್ರಿಗಳು ಇರಬೇಕು
ಬ್ರೇಕ್ ಫಾಸ್ಟ್ ಗೆ ನಾವು ಮಾಡುವ ಆಹಾರಗಳು ಲಂಚ್ ಮತ್ತು ಡಿನ್ನರ್ ಗಿಂತ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಬ್ರೇಕ್ ಫಾಸ್ಟ್ ಗೆ ಇಡ್ಲಿ, ದೋಸೆ, ಪಲಾವ್, ಪುಳಿಯೊಗರೆ, ಚಿತ್ರಾನ್ನ, ಉಪ್ಪಿಟ್ಟು, ಬಾತ್ ಈ ರೀತಿಯ ತಿಂಡಿಗಳನ್ನು ಸಾಮಾನ್ಯವಾಗಿ ತಯಾರಿಸಲಾಗುವುದು. ಇವೆಲ್ಲಾ ಆರೋಗ್ಯಕ್ಕೂ ಒಳ್ಳೆಯದೇ.
ಆದರೆ ಇತ್ತೀಚಿನ ದಿನಗಳಲ್ಲಿ ಅಡುಗೆ ಮಾಡಲು ಪುರುಸೊತ್ತು ಇಲ್ಲ ಎಂದು ಕೆಲವರು ಫಾಸ್ಟ್ ಫುಡ್ ಕಲ್ಚರ್ ಗೆ ಬದಲಾಗುತ್ತಿದ್ದರೆ, ಮತ್ತೆ ಕೆಲವರು ತೆಳ್ಳಗಾಗಬೇಕೆಂದು ಕ್ರಾಷ್ ಡಯಟ್ ಮೊರೆ ಹೋಗುತ್ತಿದ್ದಾರೆ. ಇದರಿಂದ ದೇಹಕ್ಕೆ ಅವಶ್ಯಕವಾದ ಪೋಷಕಾಂಶಗಳು ದೊರೆಯದೆ ಪೋಷಕಾಂಶದ ಕೊರತೆ ಉಂಟಾಗುವುದು ಎಂಬುದನ್ನು ಮರೆಯದಿರಿ.
ಇಲ್ಲಿ ನಾವು ಕೆಲವು ಆಹಾರಗಳ ಬಗ್ಗೆ ಹೇಳಿದ್ದೇವೆ, ಅವುಗಳನ್ನು ನಿಮ್ಮ ಬ್ರೇಕ್ ಫಾಸ್ಟ್ ಆಹಾರವಾಗಿ ಬಳಸಿದರೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ, ಮೈ ತೂಕವೂ ಹೆಚ್ಚಾಗುವುದಿಲ್ಲ:

ತರಕಾರಿ
ಕಮ್ಮಿಯೆಂದರೂ 2-3 ಬಗೆಯ ತರಕಾರಿ ನಿಮ್ಮ ಆಹಾರಕ್ರಮದಲ್ಲಿರಲಿ. ಪಲಾವ್ ಆದರೂ ಮಾಡಿ. ದೋಸೆ ಸಾಗು ಆದರೂ ಮಾಡಿ ಇಲ್ಲ ಸ್ಯಾಂಡ್ ವಿಚ್ ಆದರೂ ಮಾಡಿ 2-3 ಬಗೆಯ ತರಕರಿ ಹಾಕುವುದನ್ನು ಮರೆಯದಿರಿ.

ಹಣ್ಣು
ಬೆಳಗ್ಗೆ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ನಿಮಗೆ ಇಷ್ಟವಾದ ಹಣ್ಣನ್ನು ತಿನ್ನಿ. ಅದರಲ್ಲೂ ಹಣ್ಣುಗಳನ್ನು ಬ್ರೇಕ್ ಫಾಸ್ಟ್ ಗೆ ಮೊದಲು ತಿನ್ನಿ.

ಹಾಲು
ಪ್ರತೀದಿನ ಒಂದು ಲೋಟ ಹಾಲು ಕುಡಿಯಲು ಮರೆಯದಿರಿ. ಹಾಲು ಇಷ್ಟಪಡದವರು ಸೋಯಾ ಮಿಲ್ಕ್ ಕುಡಿಯಬಹುದು.

ಚೀಸ್
ಚೀಸ್ ಮೈ ತೂಕವನ್ನು ಹೆಚ್ಚಿಸುತ್ತದೆ, ಆದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಚೀಸ್ ಬಳಸಿ ಬ್ರೇಕ್ ಫಾಸ್ಟ್ ರೆಡಿ ಮಾಡಿದ ದಿನ ಸ್ವಲ್ಪ ಅಧಿಕ ಹೊತ್ತು ವ್ಯಾಯಾಮ ಮಾಡಿದರೆ ಸಾಕು. ರುಚಿಯಾದ ಆರೋಗ್ಯಕರವಾದ ಆಹಾರವನ್ನು ಮೈ ತೂಕ ಹೆಚ್ಚಾಗುತ್ತದೆ ಎಂಬ ಭಯವಿಲ್ಲದೆ ತಿನ್ನಬಹುದು.

ಮಾರ್ಗ್ರೈನ್
ಬೆಣ್ಣೆ ಬದಲು ಮಾರ್ಗ್ರೈನ್ ಒಳ್ಳೆಯದು ಎಂದು ಸಂಶೋಧನೆಯೂ ಹೇಳುತ್ತದೆ. ಹೃದಯ ಸಮಸ್ಯೆ ಇರುವವರಿಗೆ, ಮಾರ್ಗ್ರೈನ್ ಉತ್ತಮವಾದ ಆಯ್ಕೆಯಾಗಿದೆ.

ನಟ್ಸ್
ಬೆಳಗ್ಗೆ 2-3 ಬಾದಾಮಿ ಅಥವಾ ನಿಮಿಗಿಷ್ಟವಾದ ನಟ್ಸ್ ತಿಂದರೆ ದೇಹಕ್ಕೆ ಉತ್ತಮವಾದ ಪೋಷಕಾಂಶ ದೊರೆಯುವುದು. ಇದರಿಂದ ದಿನಪೂರ್ತಿ ಹೆಚ್ಚು ಆಯಾಸವಿಲ್ಲದೆ ಕೆಲಸ ಮಾಡಬಹುದು.

ದವಸ ಧಾನ್ಯಗಳು
ಮೊಳಕೆ ಬರಿಸಿದ ಕಾಳುಗಳು, ಸ್ಯಾಂಡ್ ವಿಚ್ ಮಾಡುವುದಾದರೆ ವ್ಹೀಟ್ ಬ್ರೆಡ್ ಬಳಸುವುದು ಒಳ್ಳೆಯದು. ಧಾನ್ಯಗಳಲ್ಲಿ ಸಂಸ್ಕರಿಸದ ಧಾನ್ಯಗಳು ತುಂಬಾ ಒಳ್ಳೆಯದು.

ಚಕ್ಕೆ
ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡಲು, ಮೈ ತೂಕ ಹೆಚ್ಚದಿರಲು ಚಕ್ಕೆಯನ್ನು ಬಳಸವುದು ಒಳ್ಳೆಯದು.

ಮೊಸರು
ಮೊಸರಿನಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಅಲ್ಲದೆ ಬೆಳಗ್ಗೆ ಮೊಸರು ತಿನ್ನುವುದರಿಂದ ಬಾಯಿ ದುರ್ವಾಸನೆ ಬೀರುವುದನ್ನೂ ತಡೆಯಬಹುದು.

ಪೀನಟ್ ಬಟರ್
ಪೀನಟ್ ಬಟರ್ ತುಂಬಾ ಆರೋಗ್ಯಕರ. ಆದ್ದರಿಂದ ಇದನ್ನು ಸ್ಯಾಂಡ್ ವಿಚ್ ಜೊತೆ ಹಾಕಿ ತಿನ್ನಲು ಒಳ್ಳೆಯದು.

ಅಗಸೆ ಬೀಜ
ಸ್ವಲ್ಪ ಅಗಸೆ ಬೀಜವನ್ನು ನೆನೆ ಹಾಕಿ ಅದನ್ನು ಹಾಗೆಯೇ ತಿನ್ನಬಹುದು ಅಥವಾ ಆಹಾರದಲ್ಲಿ ಹಾಕಿ ತಿನ್ನಬಹುದು. ಇದು ಕೂದಲಿನ ಪೋಷಣೆಗಂತೂ ತುಂಬಾ ಸಹಕಾರಿ.

ಪ್ರೊಟೀನ್
ಪ್ರೊಟೀನ್ ಭರಿತ ಆಹಾರವು ಬೆಳಗ್ಗಿನ ಬ್ರೇಕ್ ಫಾಸ್ಟ್ ನಲ್ಲಿ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಿ.



Click it and Unblock the Notifications