Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳ್ಳುಳ್ಳಿ ದಂಟನ್ನು ತಿನ್ನಲು ಮಿಸ್ ಮಾಡ್ಕೋಬೇಡಿ
ಸೀಸನ್ ಫುಡ್ಸ್ (ಆಯಾ ಕಾಲದಲ್ಲಿ ದೊರೆಯುವ ಆಹಾರ) ತಿನ್ನುವುದು ಒಳ್ಳೆಯದೆಂದು ಸಾಕಷ್ಟು ಬಾರಿ ಹೇಳಿದ್ದೇವೆ. ಈ ಗಿಡ ಬೆಳ್ಳುಳ್ಳಿಯಷ್ಟು ಘಾಟು ವಾಸನೆಯನ್ನು ಹೊಂದಿರುವುದಿಲ್ಲ. ಈರುಳ್ಳಿಯ ದಂಟು ಹಾಗೂ ಬೆಳ್ಳುಳ್ಳಿಯ ದಂಟು ಸಾಮಾನ್ಯವಾಗಿ ನೋಡಲು ಒಂದೇ ರೀತಿಯಿದ್ದರೂ ರುಚಿಯಲ್ಲಿ, ವಾಸನೆಯಲ್ಲಿ ಭಿನ್ನವಾಗಿರುತ್ತದೆ.
ಬೆಳ್ಳುಳ್ಳಯ ದಂಟು ಬಳಸಿ ಅಡುಗೆ ಮಾಡಿದರೆ, ಘಮ್ಮೆನ್ನುವ ಅಡುಗೆಯ ಜೊತೆ ಈ ಕೆಳಗಿನ ಆರೋಗ್ಯಕರ ಗುಣಗಳನ್ನು ಪಡೆಯಬಹುದು:

ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
ಬೆಳ್ಳುಳ್ಳಿಯ ದಂಟಿನಲ್ಲಿ ಎಲಿಸಿನ್(allicin), ಗಂಧಕದ ಅಂಶವಿದ್ದು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಮ್ಮನ್ನು ಕಾಯಿಲೆ ಬೀಳದಂತೆ ತಡೆಯುತ್ತದೆ.

ಸೋಂಕು ನಿವಾರಕ ಗುಣ ಹೊಂದಿದೆ
ಬೆಳ್ಳುಳ್ಳಿಯ ದಂಟಿಗೆ ಬ್ಯಾಕ್ಟೀರಿಯಾ ಹಾಗೂ ಸೋಂಕಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಇದೆ. ಇದರಿಂದ ಆರೋಗ್ಯಕ್ಕೆ ಒಳ್ಳೆಯದು.

ಕಬ್ಬಿಣದಂಶ ಅಧಿಕವಿದೆ
ರಕ್ತ ಕಣಗಳ ಕಡಿಮೆಯಾದರೆ ಸೊಪ್ಪನ್ನು ಅಧಿಕ ತಿನ್ನಬೇಕು. ಈ ಬೆಳ್ಳುಳ್ಳಿ ದಂಟು ಕೂಡ ದೇಹದಲ್ಲಿ ರಕ್ತ ಹೆಚ್ಚು ಮಾಡಲು ಸಹಕಾರಿಯಾಗಿದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಬೆಳ್ಳುಳ್ಳಿ ಹಾಗೂ ಬೆಳ್ಳುಳ್ಳಿಯ ದಂಟಿನಲ್ಲಿ ಪಾಲಿಸಲ್ಪೈಡ್ (polysulfides) ಹಾಗೂ ಮ್ಯಾಗ್ನಿಸೆ ಇರುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೈದಯಕ್ಕೆ ಯಾವುದೇ ಕಾಯಿಲೆ ಬರದಂತೆ ರಕ್ಷಣೆ ಮಾಡುತ್ತದೆ.

ಶೀತಕ್ಕೆ ತುಂಬಾ ಒಳ್ಳೆಯದು
ಶೀತ, ಕೆಮ್ಮು ಕಾಣಿಸಿದರೆ ಇದನ್ನು ತಿಂದರೆ ಬೇಗನೆ ಗುಣ ಮುಖವಾಗುತ್ತದೆ. ಇದು ಮತ್ತೊಬ್ಬರಿಂದ ನಮಗೆ ಶೀತ, ಕೆಮ್ಮು ಹರಡದಂತೆ ನಮ್ಮ ದೇಹವನ್ನು ರಕ್ಷಣೆ ಮಾಡುತ್ತದೆ.

ಬಳಸುವ ವಿಧಾನ
ಇದನ್ನು ಸಲಾಡ್ ನಲ್ಲಿ ಬಳಸಬಹುದು, ಅಥವಾ ಗ್ರೇವಿಯಲ್ಲಿ ಬಳಸಬಹುದು.



Click it and Unblock the Notifications
