Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಾವ್, ಹಸಿ ಮಾವಿನಕಾಯಿಯ ಸಲಾಡ್!
ಸಲಾಡ್ ಒಂದಿದ್ದರೆ ಸಾಕು ಊಟಕ್ಕೆ, ಹಪ್ಪಳ, ಸಂಡಿಗೆ ಇಲ್ಲದಿದ್ದರೂ ಊಟ ರುಚಿಯೆನಿಸುವುದು. ಅದರಲ್ಲೂ ಮಾವಿನಕಾಯಿಯ ಸಲಾಡ್ ಇದ್ದರೆ ಹೇಳಬೇಕೆ? ಒಂದು ಹಿಡಿ ಅನ್ನ ಹೆಚ್ಚೇ ಉಣ್ಣುತ್ತೇವೆ.
ಉಪ್ಪು, ಹುಳಿ, ಖಾರ ಮಿಶ್ರಿತ ಈ ಸಲಾಡ್ ತುಂಬಾ ರುಚಿಕರವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
* 1-2 ಹಸಿ ಮೆಣಸಿನಕಾಯಿ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಸ್ವಲ್ಪ ಖಾರದ ಪುಡಿ
* 1 ಹಸಿ ಮಾವಿನಕಾಯಿ
* 1 ಈರುಳ್ಳಿ
* ಚಿಟಿಕೆಯಷ್ಟು ಅರಿಶಿಣ
* ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
* ಹಸಿ ಮಾವಿನಕಾಯಿಯನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಿ.
* ನಂತರ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ, ನಂತರ ಅರಿಶಿಣ ಪುಡಿ ಹಾಗೂ ಸ್ವಲ್ಪ ಖಾರದ ಪುಡಿ ಹಾಕಿ , ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ, ರುಚಿಗೆ ತುಪ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮಾವಿನಕಾಯಿಯ ಸಲಾಡ್ ರೆಡಿ.
ಸಲಹೆ:
* ಈ ಸಲಾಡ್ ಊಟ ಬಡಿಸುವ 2 ನಿಮಿಷ ಮುನ್ನ ತಯಾರಿಸಿ, ಇಲ್ಲದಿದ್ದರೆ ಮಾವಿನಕಾಯಿ ನೀಡು ಬಿಡುತ್ತದೆ.
* ಈ ಸಲಾಡ್ ಗೆ ಬೇಕಿದ್ದರೆ ಸ್ವಲ್ಪ ಸಕ್ಕರೆ ಸೇರಿಸಿ ಮಾಡಬಹುದು.
* ಮಾವಿನ ಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಹಾಕಬಹುದು, ಸಿಪ್ಪೆ ಸ್ವಲ್ಪ ಕಹಿಯಾಗಿದ್ದರೆ ಸಿಪ್ಪೆ ತೆಗೆದು, ಅದರ ತಿರುಳಿನಿಂದ ಮಾತ್ರ ತಯಾರಿಸಬಹುದು.



Click it and Unblock the Notifications
