For Quick Alerts
ALLOW NOTIFICATIONS  
For Daily Alerts

ಹೈಪೋಥೈರಾಯ್ಡಿಸಂನ್ನು ಗುಣಪಡಿಸಲು 15 ಮಾರ್ಗಗಳು

By Super
|

ಥೈರಾಯ್ಡ್ ಎನ್ನುವುದು ನಿಮ್ಮ ಕುತ್ತಿಗೆಯಿಂದ ಕೆಳಗೆ ಇರುವ ಆಡಮ್ಸ್ ಆಪಲ್ ಎಂದು ಕರೆಯುವ ಭಾಗದ ಕೆಳಗೆ ಇರುವ ಒಂದು ಗ್ರಂಥಿಯಾಗಿದೆ. ಇದು ನಿಮ್ಮ ಶಕ್ತಿ ಮತ್ತು ಜೈವಿಕ ಕ್ರಿಯೆಗೆ ಸಹಾಯಕವಾಗುವ ಒಂದು ಪ್ರಮುಖ ಗ್ರಂಥಿಯಾಗಿದೆ. ಅಲ್ಲದೆ ಇದು ಒಂದು ಪ್ರಮುಖ ಕರುಳಿನಂತೆ ಕೆಲಸ ಮಾಡುತ್ತದೆ. ಇದು ಪ್ರತಿ ಕೋಶಗಳು ತಮ್ಮ ತಮ್ಮ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹೈಪೊ ಥೈರಾಯ್ಡಿಸಂ ಅಥವಾ ಲೋ ಥೈರಾಯ್ಡ್ ಎಂಬುದು ಒಂದು ಗುಪ್ತ ಸೊಂಕುರೋಗ. ಇದು ಬಂದ ಮೇಲೆ ಜನರು ಇದರಿಂದ ತುಂಬಾ ವರ್ಷ ನೋವನ್ನು ಅನುಭವಿಸುತ್ತಾರೆ. ಏಕೆಂದರೆ ಇದಕ್ಕೆ ವೈದ್ಯಕೀಯ ಶಾಸ್ತ್ರದಲ್ಲಿ ಯಾವುದೇ ಶಾಶ್ವತ ಪರಿಹಾರ ಇನ್ನೂ ಸಿಕ್ಕಿಲ್ಲ.

ಹಾಗಾದರೆ ಇದು ಅಷ್ಟು ಅಪಾಯಕಾರಿಯೇ? ಇಲ್ಲ. ಅಪಾಯ ಅಡಗಿರುವುದು ಥೈರಾಯ್ಡ್ ಸಮಸ್ಯೆಯಲ್ಲಿ ಅಲ್ಲ. ಬದಲಿಗೆ ಈ ಸಮಸ್ಯೆ ಬಂದರೆ ಅದು ನೇರವಾಗಿ ಥೈರಾಯ್ಡ್ ಮೇಲೆ ಪ್ರಭಾವ ಬೀರುವುದಿಲ್ಲ. ಬದಲಿಗೆ ನಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಅದು ಆಕ್ರಮಣ ಮಾಡುತ್ತದೆ. ಹಲವಾರು ವೈದ್ಯರು ಈ ರೋಗ ನಿರೋಧಕ ಶಕ್ತಿಯ ಕುಸಿತಕ್ಕೆ ಕಾರಣವನ್ನು ಹುಡುಕುವಲ್ಲಿ ಎಡವಿದರೆ ಈ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗುತ್ತದೆ.

ನಿಮ್ಮ ಪಥ್ಯದಲ್ಲಿಯೇ ಅಡಗಿದೆ ನಿಮ್ಮ ರಕ್ಷಣೆ

ಹೈಪೊ ಥೈರಾಯ್ಡಿಗೆ ಚಿಕಿತ್ಸೆ ಪಡೆಯುವಾಗ ಮಾಡಬೇಕಾದ ಮೊದಲ ಕೆಲಸವೆಂದರೆ ಅದು ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ತರಬೇಕಾದುದು ಅನಿವಾರ್ಯ. ಸಕ್ಕರೆ ಮತ್ತು ಕೇಫಿನ್‍ನಿಂದ ತೀವ್ರತರವಾದ ಆಯಾಸ ಮತ್ತು ಮನಸ್ಸಿಗೆ ಮಂಕು ಕವಿದಂತಹ ಅನುಭವವುಂಟಾಗುತ್ತದೆ.

ಆದ್ದರಿಂದ ನಿಮಗೆ ಬಂದಿರುವ ಥೈರಾಯ್ಡ್ ಸಮಸ್ಯೆ ಅಥವಾ ರೋಗ ನಿರೋಧಕ ಶಕ್ತಿಯ ಕುಸಿತದ ಪರಿಸ್ಥಿತಿಯನ್ನು ಸುಧಾರಿಸಲು ನೀವು ಅದರ ಮೂಲವನ್ನು ತಿಳಿದು, ಅದಕ್ಕೆ ತಕ್ಕ ಪರಿಹಾರವನ್ನು ಹುಡುಕಿಕೊಳ್ಳಬೇಕು. ಅದಕ್ಕಾಗಿ ನಾವು ಇಲ್ಲಿ ನಿಮಗಾಗಿ ಕೆಲವು ಪ್ರಾಕೃತಿಕ ಪರಿಹಾರ ಮಾರ್ಗಗಳನ್ನು ಸೂಚಿಸಿದ್ದೇವೆ ಓದಿ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

1. ಮೊದಲು ನಿಮ್ಮ ಆಹಾರದಲ್ಲಿ ಕೇಫಿನ್ ಮತ್ತು ಸಕ್ಕರೆಯನ್ನು ಕಡಿಮೆ ಮಾಡಿ ಅಥವಾ ಇವುಗಳನ್ನು ಸಂಪೂರ್ಣವಾಗಿ ತೊರೆದು ಬಿಡಿ. ಸಂಸ್ಕರಿಸಿದ ಕಾರ್ಬೋಹೈಡ್ರೇಟ್ಸ್ ಗಳಾದ ಮೈದಾ, ಗೋಧಿಯಂತಹ ಹಿಟ್ಟುಗಳನ್ನು ಸಹ ತ್ಯಜಿಸಿ. ಏಕೆಂದರೆ ಇವು ದೇಹಕ್ಕೆ ಸಕ್ಕರೆಯ ಅಂಶವನ್ನು ಒದಗಿಸುತ್ತವೆ. ಧಾನ್ಯಗಳ ಆಧಾರಿತ ಕಾರ್ಬೋಹೈಡ್ರೆಟ್‍ಗಳ ಮೇಲೆ ಅವಲಂಭಿತರಾಗುವುದನ್ನು ಬಿಡಿ. ಸ್ಟಾರ್ಚ್ ರಹಿತವಾದ ತರಕಾರಿಗಳನ್ನು ಸೇವಿಸುವುದು ನಿಮ್ಮ ಹೃದಯಕ್ಕೆ ಒಳ್ಳೆಯದು.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

2. ಪ್ರೋಟಿನ್‍ಗಳು ಥೈರಾಯ್ಡ್ ಹಾರ್ಮೋನುಗಳನ್ನು ನಿಮ್ಮ ದೇಹದ ಪ್ರತಿ ಕೋಶಗಳಿಗು ವರ್ಗಾವಣೆ ಮಾಡುತ್ತವೆ. ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಥೈರಾಯ್ಡ್ ನ ಚಟುವಟಿಕೆಯು ಸುಲಲಿತವಾಗಿ ನಡೆಯುತ್ತದೆ. ಒಣ ಕಾಳುಗಳು ಮತ್ತು ಬೆಣ್ಣೆ ಆಹಾರದಲ್ಲಿದ್ದರೆ ಉತ್ತಮ. ಹಾರ್ಮೋನ್ ಮತ್ತು ಆಂಟಿ ಬಯೋಟೀಕ್ ರಹಿತ ಪ್ರಾಣಿ ಜನ್ಯ ಉತ್ಪನ್ನಗಳು ( ಸಾವಯವ, ಮಾಂಸ, ಮೊಟ್ಟೆ ಮತ್ತು ಮೀನುಗಳು) ಮತ್ತು ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

3. ಹಾರ್ಮೋನುಗಳ ಸಾಗಣಿಕೆಗೆ ಕೊಬ್ಬು ನಿಮ್ಮ ಮಿತ್ರ ಮತ್ತು ಕೊಲೆಸ್ಟ್ರಾಲ್‍ಗಳು ಹಾರ್ಮೋನಿನ ಮುಂದಿನ ನಡೆಯನ್ನು ನಿರ್ಧರಿಸುವ ಪೂರ್ವಗಾಮಿಗಳು. ನೀವು ಅಗತ್ಯ ಪ್ರಮಾಣದಷ್ಟು ಕೊಬ್ಬು ಮತ್ತು ಕೊಲೆಸ್ಟ್ರಾಲನ್ನು ಸೇವಿಸದಿದ್ದರೆ ನಿಮ್ಮ ಹಾರ್ಮೋನ್ ಅಸಮತೋಲನಕ್ಕೆ ನೀವೆ ಹೊಣೆಯಾಗುತ್ತೀರಿ. ಪ್ರಾಕೃತಿಕವಾಗಿ ಆಲೀವ್ ಆಯಿಲ್, ತುಪ್ಪ, ಅವೊಕಾಡೊಗಳು,ಅಗಸೆ ಬೀಜಗಳು, ಮೀನು, ಒಣ ಹಣ್ಣುಗಳು ಮತ್ತು ಬೆಣ್ಣೆಗಳು ಹಾಗು ಚೀಸ್, ಮೊಸರು ಮತ್ತು ತೆಂಗಿನ ಹಾಲಿನ ಉತ್ವನ್ನಗಳಂತಹ ಆರೋಗ್ಯಕಾರಿ ಕೊಬ್ಬಿನಂಶದ ಉತ್ಪನ್ನಗಳು ನಿಮ್ಮ ಥೈರಾಯ್ಡಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುತ್ತವೆ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

4. ಪೋಷಕಾಂಶಗಳನ್ನು ಸೇವಿಸಿ. ಯಾವಾಗ ನೀವು ಅಗತ್ಯ ಪ್ರಮಾಣದಷ್ಟು ಪೋಷಕಾಂಶಗಳನ್ನು ಸೇವಿಸುವುದಿಲ್ಲವೊ, ಆಗ ಕುಪೋಷಣೆಯಿಂದ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ವಿಟಮಿನ್ ಡಿ, ಕಬ್ಬಿಣಾಂಶ, ಒಮೇಗಾ- 3 ಕೊಬ್ಬಿನ ಆಮ್ಲಗಳು, ಸೆಲೆನಿಯಂ, ಸತು, ತಾಮ್ರ, ವಿಟಮಿನ್ ಎ, ಬಿ ವಿಟಮಿನ್ ಮತ್ತು ಐಯೋಡಿನ್‍ಗಳಂತಹ ಮೈಕ್ರೊ ನ್ಯೂಟ್ರಿಯೆಂಟ್ಸ್ ಮತ್ತು ಖನಿಜಾಂಶಗಳನ್ನು ಅಗತ್ಯ ಪ್ರಮಾಣದಲ್ಲಿ ಸೇವಿಸಿ ಮೂಲದಲ್ಲಿ ಥೈರಾಯ್ಡ್ ಸಮಸ್ಯೆ ಬರದಂತೆ ಕಾಪಾಡಿಕೊಳ್ಳಿ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

5. ಎಲ್ಲರು ನಂಬುವಂತೆ ಹೈಪೋ ಥೈರಾಯ್ಡಿಸಂ ಬರಲು ಕಾರಣ ಐಯೋಡಿನ್‍ನ ಕೊರತೆಯೇ ಕಾರಣ. ಹಾಗಾಗಿ ಮುಖ್ಯವಾಗಿ ಸಮುದ್ರದ ತರಕಾರಿಗಳು ಮತ್ತು ಸಾಗರೋತ್ವನ್ನಗಳನ್ನು ಸೇವಿಸಿ. ಎರಡನೆಯದಾಗಿ ಮೊಟ್ಟೆಗಳು, ಹುರುಳಿ, ಅಣಬೆ, ಪಾಲಕ್ ಸೊಪ್ಪು, ಸಾಸಿವೆ ಕಾಳು ಮತ್ತು ಬೆಳ್ಳುಳ್ಳಿಗಳನ್ನು ತಿನ್ನಿ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹಾರ್ಮೋನುಗಳ ನಿರ್ಮಾಣಕ್ಕೆ ಮೂಲವಾದ ಒಮೆಗಾ -3ಗಳು ಮೀನಿನಲ್ಲಿ , ಮತ್ತು ಹುಲ್ಲು ತಿನ್ನುವ ಪ್ರಾಣಿಗಳ ಮಾಂಸದಲ್ಲಿ, ವಾಲ್‍ನಟ್ಸ್ ಮತ್ತು ಅಗಸೆ ಬೀಜಗಳಲ್ಲಿ ದೊರೆಯುತ್ತದೆ. ಇವುಗಳು ಜೀವಕೋಶಗಳ ಬೆಳವಣಿಗೆಗೆ ಮತ್ತು ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಿಸಲು ಪ್ರಮುಖ ಪಾತ್ರವಹಿಸುತ್ತವೆ. ಇವುಗಳು ಥೈರಾಯ್ಡ್ ಕೆಲಸ ಮಾಡಲು ಮತ್ತು ಥೈರಾಯ್ಡ್ ಹಾರ್ಮೋನುಗಳ ಚಟುವಟಿಕೆಗಳ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರುತ್ತವೆ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

7. ಶೇ100%ರಷ್ಟು ಗ್ಲುಟೆನ್‍ನಿಂದ ಮುಕ್ತರಾಗಿರಿ. ಥೈರಾಯ್ಡ್ ಕೋಶಗಳು ಗ್ಲುಟೆನ್‍ಗಳನ್ನು ಹೋಲುತ್ತವೆ. ಇವುಗಳನ್ನು ಸೇವಿಸುವುದರಿಂದ ಥೈರಾಯ್ಡ್ ಮೇಲೆ ರೋಗಕಾರಕ ಕಣಗಳು ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗುತ್ತವೆ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

8. ಗಳಗಂಡದ ಬಗ್ಗೆ ಎಚ್ಚರಿಕೆಯಿಂದಿರಿ. ಇದಕ್ಕೆ ಕಾರಣ ಗಾಯಿಟ್ರೊಜೆನ್ ಎಂಬುವ ಅಂಶ. ಇವುಗಳು ಬ್ರೊಕೊಲಿ, ಹೂಕೋಸು, ಎಲೆ ಕೋಸು, ಪಾಲಕ್, ಸ್ಟಾಬೆರಿಗಳು, ಮೂಲಂಗಿ, ಕಡಲೆ ಬೀಜ ಮತ್ತು ಸೋಯಾಬೀನ್‍ಗಳಲ್ಲಿ ಇರುತ್ತವೆ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

10. ನಿಮಗೆ ಒಗ್ಗದ ಆಹಾರದ ಬಗ್ಗೆ ಎಚ್ಚರಿಕೆಯಿಂದಿರಿ. ಉದಾಹರಣೆಗೆ ಹಸಿ ಟೊಮೊಟೊ ನಂತಹ ಆಹಾರವನ್ನು ಸೇವಿಸದಿರಿ. ಒಗ್ಗದ ಆಹಾರವು ಥೈರಾಯ್ಡ್ ಸಮಸ್ಯೆಯು ಹೇಳದೆ ಕೇಳದೆ ಬಂದು ನಿಮ್ಮ ದೇಹವನ್ನು ಪ್ರವೇಶಿಸುವಂತೆ ಮಾಡುತ್ತವೆ. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯು ಕುಂದುತ್ತದೆ. ಕಿವಿ ಹಣ್ಣನ್ನು ಥೈರಾಯ್ಡ್ ಇರುವವರು ತಿನ್ನುವುದು ತುಂಬಾ ಒಳ್ಳೆಯದು.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

11. ನಿಮ್ಮ ಕರುಳನ್ನು ಆಗಾಗ ಪರೀಕ್ಷಿಸಿಕೊಳ್ಳಿ. ಹಲವಾರು ಥೈರಾಯ್ಡ್ ಸಮಸ್ಯೆಗಳು ಮೂಲತಃ ಕರುಳಿನ ಸಮಸ್ಯೆಯಿಂದ ಆರಂಭವಾಗುತ್ತವೆ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

12. ಉರಿಯೂತಗಳನ್ನು ಕಡೆಗಣಿಸದಿರಿ. ಹಲವಾರು ಉರಿಯೂತಗಳು ಮತ್ತು ಆಹಾರದ ಏರುಪೇರುಗಳಿಂದ ಉಂಟಾಗುತ್ತವೆ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

13. ತೀವ್ರತರವಾದ ಸುಸ್ತಾದಾಗ ವೈಧ್ಯರ ಬಳಿ ತಪಾಸಣೆ ಮಾಡಿಸಿ. ಸುಸ್ತುಗೂ ನಿಮ್ಮ ಥೈರಾಯ್ಡ್ ಸಮಸ್ಯೆಗೆ ನೇರ ಸಂಬಂಧವಿರುತ್ತದೆ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

14. ನಿಮ್ಮ ಮೇಲೆ ಉಂಟಾಗುತ್ತಿರುವ ಒತ್ತಡದ ಕುರಿತು ನಿಗಾ ಇಡಿ. ಧ್ಯಾನ ಮತ್ತು ವಿಶ್ರಾಂತಿಗೆ ಸಮಯ ಮೀಸಲಿಡಿ. ಥೈರಾಯ್ಡ್ ಎನ್ನುವುದು ಒಂದು ಸೂಕ್ಷ್ಮ ಗ್ರಂಥಿಯಾಗಿದ್ದು, ಒತ್ತಡದ ಸಂದರ್ಭದಲ್ಲಿ ಇದು ಅಧಿಕವಾಗಿ ಪ್ರತಿಕ್ರಿಯಿಸುತ್ತದೆ.

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

ಹೈಪೋಥೈರಾಯ್ಡ್ ಗೆ ನೈಸರ್ಗಿಕ ಚಿಕಿತ್ಸೆ

15. ಥೈರಾಯ್ಡ್ ಕಾಲರ್ ಅನ್ನು ಕೇಳಿ ಪಡೆಯಿರಿ. ಥೈರಾಯ್ಡ್ ವಿಕಿರಣಕ್ಕೆ ಅತ್ಯಂತ ಸೂಕ್ಷ್ಮವಾಗಿ ಸಂವೇದನೆಯನ್ನು ತೋರುತ್ತದೆ. ಮುಂದಿನ ಬಾರಿ ನೀವು ನಿಮ್ಮ ದಂತ ವೈದ್ಯರನ್ನು ಸಂಪರ್ಕಿಸಿದಾಗ, ಥೈರಾಯ್ಡ್ ಕಾಲರ್ ಅನ್ನು ಕೇಳಿರಿ. ಥೈರಾಯ್ಡ್ ಅನ್ನು ಅಲಕ್ಷಿಸಬೇಡಿ.

English summary

15 Ways to Treat Hypothyroidism Naturally | Health Tips

Hypothyroidism, or low thyroid function, is a silent epidemic. People can suffer for years with symptoms that our conventional medical system frequently doesn’t know how to treat? Therefore, to cure thyroid disease, or any autoimmune condition, you have to get to the source of the imbalance.
X
Desktop Bottom Promotion