Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
ಕುರು (ಕಜ್ಜಿ) ಸಮಸ್ಯೆ ಹೋಗಲಾಡಿಸುವ 11 ಮನೆಮದ್ದು
ಎಸ್ಜಿಮಾಕ್ಕಿರುವ ಮನೆ ಔಷಧಿಗಳನ್ನು ಕಂಡುಕೊಳ್ಳುವದಕ್ಕಿಂತ ಮೊದಲು ನಾವು ಎಸ್ಜಿಮಾ ಎಂದರೇನು,ಅದರಿಂದ ಯಾರು ಏಕೆ ಬಾಧಿತರಾಗುತ್ತಾರೆ ಎಂಬುದನ್ನು ತಿಳಿಯುವದು ತುಂಬಾ ಅಗತ್ಯ.
ಗ್ರೀಕ ಪದವಾದ ಎಸ್ಜಿಮಾಕ್ಕೆ ಕನ್ನಡದಲ್ಲಿ "ಕುರು" ಎಂಬರ್ಥವನ್ನು ನೀಡಬಹುದು.ಕುತ್ತಿಗೆ ಮೇಲೆ,ತೋಳುಗಳ ಕೆಳಗೆ, ಬೆರಳುಗಳ-ಕೈಕಾಲುಗಳ ಸಂಧುಗಳಲ್ಲಿ ಕಂಡುಬರುವ ಕೆಂಪನೆಯ,ತುರಿಕೆಯುಳ್ಳ,ದ್ರವ ಪಸರಿಸುವ ಉರಿಯೂತಗಳನ್ನು ಕುರುಗಳು ಎನ್ನಬಹುದು.ಇದನ್ನು ಇಸುಬು,ಕಜ್ಜಿ ಎಂತಲೂ ಕರೆಯಬಹುದು. ನಾಮಧೇಯವೇನೇ ಆದರೂ ಇವು ಕೊಡುವ ಯಾತನೆ ಮಾತ್ರ ದೇವರಿಗೂ ಪ್ರಿಯವಾಗಲಾರದು.ಸಾಲದ್ದಕ್ಕೆ ಸುತ್ತಲಿನವರಿಂದ ಅಸಹ್ಯ ಎನಿಸಿಕೊಳ್ಳುವದರಿಂದ ವ್ಯಕ್ತಿ ಕೀಳರಿಮೆಯನ್ನೂ ಅನುಭವಿಸುತ್ತಾನೆ.
ಎಸ್ಜಿಮಾ ಹರಡಲು ವಿವಿಧ ಕಾರಣಗಳಾಗಿವೆ
ಪೌಷ್ಟಿಕಾಂಶದ ಕೊರತೆಗಳು:- ಧಾನ್ಯಗಳು,ಹಣ್ಣು,ತರಕಾರಿ,ಸೊಪ್ಪು ಗಳಂತಹ "ನೈಸರ್ಗಿಕ" ಆಹಾರವನ್ನು ಬಿಟ್ಟು ಜಂಕ್ ಆಹಾರಗಳು,ಬೇಕರಿ ಆಹಾರಗಳು, ಸಕ್ಕರೆ ಮತ್ತು ಕೃತಕ ಸಿಹಿಯನ್ನು ಹೆಚ್ಚಾಗಿ ಬಳಸುವದು.
ಶುಷ್ಕ ತ್ವಚೆ: ಚಳಿಗಾಲದಲ್ಲಿ ಮತ್ತು ಆರ್ದ್ರ ಹವಾಮಾನದಲ್ಲಿ ಉಂಟಾಗುವ ಶುಷ್ಕ ತ್ವಚೆಯನ್ನು ನಿರ್ಲಕ್ಷಿಸುವದರಿಂದ.
ವಿವಿಧ ಅಲರ್ಜಿ ಪ್ರತಿಕ್ರಿಯೆಗಳು:- ಮಾರ್ಜಕಗಳು,ಸೌಂದರ್ಯ ಪ್ರಸಾಧನಗಳು,ಔಷಧಿಗಳು,ಆಹಾರ ಯಾಹುದರಿಂದ ಬೇಕಾದರೂ ಅಲರ್ಜಿಯಾಗಬಹುದು. ಅದರ ಲಕ್ಷಣ ಹಾಗೂ ಗಂಭೀರತೆಯನ್ನು ಗಮನಿಸಿ ಉಪಚರಿಸಿಕೊಳ್ಳುವದೊಳ್ಳೆಯದು.
ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕುವಲ್ಲಿ ವಿಫಲತೆ.ವಿಶೇಷವಾಗಿ ಮಲ,ಮೂತ್ರಗಳ ವಿಸರ್ಜನೆಯಲ್ಲಿ ವ್ಯತ್ಯಯ ಉಂಟಾಗುವುದು.
ಉಬ್ಬಿರುವ ರಕ್ತನಾಳಗಳು.
ಯಾರಲ್ಲಿ ಹೆಚ್ಚು.
ವಯಸ್ಸಿನ ಮಿತಿಯಿಲ್ಲದೇ ಮಹಿಳೆ ಹಾಗೂ ಪುರುಷರಲ್ಲಿ ಹರಡುವ ಈ ರೋಗವು ಯಾವಾಗಲೂ ತೆವವಿರುವ ಭಾಗಗಳಲ್ಲಿ,ಗಾಳಿಯಾಡದ-ಬೆವರು ಜಿನುಗುವ ಭಾಗಗಳಲ್ಲಿ ಹೆಚ್ಚು.
ಎಸ್ಜಿಮಾ ತಡೆಗಟ್ಟಲು ಇರುವ 12 ಉತ್ತಮ ಮತ್ತು ಸುಲಭ ಮಾರ್ಗೋಪಾಯಗಳು :

1. ಸನ್ ಬಾತ್
ಸನ್ ಬಾತ್ ಮಾಡುವದರಿಂದ ಸೂರ್ಯನ ವಿಕಿರಣಗಳು ಚರ್ಮದಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ.

2. ಮಣ್ಣು
ಪೀಡಿತ ಭಾಗಕ್ಕೆ ಕಲಬೆರಕೆ ರಹಿತ ಮಣ್ಣನ್ನು ಲೇಪಿಸುವದರಿಂದ ಈ ಚರ್ಮರೋಗ ಹತೋಟಿಗೆ ಬರುವುದು.

3. ಕರ್ಪೂರ್ ಮತ್ತು ಶ್ರೀಗಂಧ
ಬಾಧಿತ ಚರ್ಮಕ್ಕೆ ಸಮಾನ ಅನುಪಾತದಲ್ಲಿ ಕರ್ಪೂರ ಮತ್ತು ಶ್ರೀಗಂಧವನ್ನು ಬೆರೆಸಿ ಲೇಪಿಸುವದು ಅತ್ಯುತ್ತಮ ಮತ್ತು ಸರಳ ಮನೆ ಪರಿಹಾರಗಳಲ್ಲೊಂದು.

4. ಬೇವಿನ ಎಲೆ ಮತ್ತು ಅರಿಶಿನ ಪುಡಿ
ಬೇವಿನ ಎಲೆ ಮತ್ತು ಅರಿಶಿನ ಪುಡಿಯ ಪೇಸ್ಟ್ ತಯಾರಿಸಿ ಬಾಧಿತ ಭಾಗಕ್ಕೆ ಲೇಪಿಸುವದರಿಂದ ಪರಿಣಾಮಕಾರಿ ಫಲಿತಾಂಶ ದೊರೆಯುವದು.

5. ಪಪ್ಪಾಯಿ ಬೀಜ
ಎಸ್ಜಿಮಾ ಮೇಲೆ ರುಬ್ಬಿದ ಪಪ್ಪಾಯಿ ಬೀಜಗಳನ್ನು ಲೇಪಿಸುವದರಿಂದ ತುರಿಕೆಯು ಕಡಿಮೆಯಾಗುವುದು.

6. ಕ್ಯಾರಟ್ ರಸ
ಮುಸ್ಕ್ಮೆಲೊನ್ ಮತ್ತು ಕ್ಯಾರಟ್ ರಸ ದಂತಹ ಜೀವಸತ್ವಪೂರಕ ಆಹಾರಗಳು ಕೂಡ ಎಸ್ಜಿಮಾ ನಿವಾರಣೆಗೆ ನೆರವಾಗುತ್ತದೆ.

7. ಪುದೀನಾ ಎಲೆ
ಎಸ್ಜಿಮಾ ಬಾಧಿತ ಪ್ರದೇಶಕ್ಕೆ ಪುದೀನಾ ಎಲೆಗಳನ್ನು ಹಚ್ಚುವುದರಿಂದಲೂ ತುರಿಕೆ,ಉರಿ ದೂರವಾಗುತ್ತದೆ.

8. ಕೋಲ್ಡ್ ಕ್ರೀಮ್
ಎಸ್ಜಿಮಾ ಬಾಧಿತರು ರಾಸಾಯನಿಕ ಪದಾರ್ಥಗಳನ್ನು ಬಳಸುವಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು.ಉದಾಹರಣೆಗೆ ಕೋಲ್ಡ ಕ್ರೀಂಗಳು.

9. ತೆಂಗಿನ ಎಣ್ಣೆ
ಚರ್ಮದ ಪೀಡಿತ ಭಾಗವನ್ನು ತೆಂಗಿನ ಎಣ್ಣೆಯಿಂದ ಮೃದುವಾಗಿ ಮಸಾಜ್ ಮಾಡಿರಿ . ತೆಂಗಿನ ಎಣ್ಣೆ ಚರ್ಮವನ್ನು ಮೃದು ಮಾಡುತ್ತದೆ.

10. ಬಾದಾಮಿ ಎಲೆ
ಬಾದಾಮಿ ಎಲೆಗಳನ್ನು ನೀರಿನಲ್ಲಿ ನೆನೆಸಿ ಗಾಯಕ್ಕೆ ಲೇಪಿಸಿ, ಇದು ಎಸ್ಜಿಮಾ ಚಿಕಿತ್ಸೆ ಮಾಡುತ್ತದೆ.

11. ಜಾಯಿಕಾಯಿ ಪೇಸ್ಟ್
ಜಾಯಿಕಾಯಿ ಪೇಸ್ಟ್ ಅನ್ನು ಕೆಲವು ಹನಿ ನೀರಿನೊಂದಿಗೆ ಬೆರೆಸಿ ಎಸ್ಜಿಮಾ ಬಾಧಿತ ಜಾಗಕ್ಕೆ ಲೇಪಿಸಿರಿ.
* ತಂಪು ನೀರಿನ ಕಂಪ್ರೆಷನ್ ಚಿಕಿತ್ಸೆಯಿಂದಲೂ ಅತ್ಯಂತ ಅನುಕೂಲಕರ ಪರಿಹಾರ ದೊರೆಯುವದು.



Click it and Unblock the Notifications
