Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಕರ್ಬೂಜ ಹಣ್ಣಿನಲ್ಲಿರುವ ಗುಣಗಳು ಒಂದಾ ಎರಡಾ...
ಕರ್ಬೂಜ ಹಣ್ಣಿನಲ್ಲಿ ಶೇ.95% ರಷ್ಟು ನೀರಿನಂಶವನ್ನು ಹೊಂದಿದ್ದು, ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಲಾಭ ಎಂದು ಬೇರೆ ಹೇಳಬೇಕಿಲ್ಲ. ನೀರಿನಂಶದ ಜೊತೆಗೆ ಕರ್ಬೂಜ ಹಣ್ಣು ತಂಪು ಮತ್ತು ಶಮನಕಾರಿ ಗುಣವನ್ನು ಹೊಂದಿದೆ. ಇದು ಎದೆ ಉರಿಯನ್ನು ಶಮನ ಮಾಡುತ್ತದೆ ಮತ್ತು ಮೂತ್ರಕೋಶಗಳಲ್ಲಿ ಇರುವ ಕಶ್ಮಲಗಳನ್ನು ಸ್ವಚ್ಛಗೊಳಿಸುತ್ತದೆ.
ಈ ಹಣ್ಣಿನಲ್ಲಿ ಸಕ್ಕರೆಯಂಶ ಅಥವಾ ಕ್ಯಾಲೋರಿಗಳು ಅಧಿಕ ಪ್ರಮಾಣದಲ್ಲಿ ಇಲ್ಲ. ಹಾಗಾಗಿ ತೂಕವನ್ನು ಕಡಿಮೆಗೊಳಿಸಿಕೊಳ್ಳಲು ಬಯಸುವವರಿಗೆ ಇದು ಆರೋಗ್ಯಕರ ತೂಕವನ್ನು ಉಳಿಸಿಕೊಳ್ಳಲು ಮತ್ತು ಹಸಿವಾದಾಗ ತಿನ್ನಲು ಅತ್ಯಂತ ಉಪಯೋಗಕಾರಿಯಾಗಿದೆ.
ಕರ್ಬೂಜ ಹಣ್ಣು ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್‍ಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಹೊಂದಿರುತ್ತವೆ. ಇವು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ಅನ್ನು ಸಹ ನಿಯಂತ್ರಿಸುತ್ತವೆ. ಕರ್ಬೂಜವನ್ನು ಸೇವಿಸುವುದರಿಂದ ಉತ್ತಮ ಆರೋಗ್ಯದ ಲಾಭಗಳ ಜೊತೆಗೆ ನಿಮ್ಮ ತ್ವಚೆಯನ್ನು ಸಹ ಕಾಪಾಡುತ್ತದೆ. ಇದರಲ್ಲಿ ವಿಟಮಿನ್ ಎ ಸಹ ಲಭ್ಯವಿದ್ದು, ಅವು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನುವಹಿಸುತ್ತವೆ.

1. ಕ್ಯಾನ್ಸರ್ ನಿಯಂತ್ರಕ
ಕರ್ಬೂಜ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾರೊಟೆನೊಯಿಡ್ ಇದೆ. ಇದು ಕ್ಯಾನ್ಸರ್ ನಿಯಂತ್ರಿಸುತ್ತದೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದು ನಮ್ಮ ದೇಹವನ್ನು ಪ್ರವೇಶಿಸುವ ಕ್ಯಾನ್ಸರ್ ಕಾರಕಗಳನ್ನು ಕೊಂದು, ನಮ್ಮ ದೇಹಕ್ಕೆ ರಕ್ಷಣೆ ಒದಗಿಸುತ್ತದೆ.

2. ಲಕ್ವ ಮತ್ತು ಹೃದಯ ಕಾಯಿಲೆ ನಿಯಂತ್ರಕ
ಕರ್ಬೂಜ ಹಣ್ಣಿನಲ್ಲಿ ಅಡೆನೊಸೈನ್ ಎನ್ನುವ ಹೆಪ್ಪುಗಟ್ಟುವುದನ್ನು ತಡೆಯುವ ಅಂಶವಿದೆ. ಇದು ರಕ್ತದ ಕೋಶಗಳು ಹೆಪ್ಪುಗಟ್ಟುವುದನ್ನು ತಡೆದು, ಲಕ್ವ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ನಿಯಂತ್ರಿಸುತ್ತದೆ. ಕರ್ಬೂಜ ಹಣ್ಣು ರಕ್ತವನ್ನು ಮೆದುವಾಗಿಸಿ ನಮಗೆ ಲಕ್ವ ಮತ್ತು ಹೃದಯದ ಕಾಯಿಲೆ ಬರದಂತೆ ತಡೆಯುತ್ತವೆ.

3. ಜೀರ್ಣಶಕ್ತಿಗೆ ಪ್ರಯೋಜನಕಾರಿ
ಕರ್ಬೂಜವು ಜಠರದಲ್ಲಿ ಪಚನ ಕ್ರಿಯೆಯನ್ನು ಉದ್ದೀಪಿಸುತ್ತದೆ. ನಿಮಗೆ ಜೀರ್ಣಕ್ರಿಯೆಯಲ್ಲಿ ಏನಾದರು ತೊಂದರೆ ಇದ್ದಲ್ಲಿ ಕರ್ಬೂಜವನ್ನು ತಿನ್ನಿ. ಆಗ ಜೀರ್ಣಕ್ರಿಯೆ ಸರಾಗವಾಗಿ ಆಗುವುದನ್ನು ನೀವು ಗಮನಿಸುವಿರಿ. ಕರ್ಬೂಜದಲ್ಲಿರುವ ನೀರಿನಂಶವು ಜೀರ್ಣಕ್ರಿಯೆಗೆ ನೆರವು ನೀಡುತ್ತದೆ. ಇದರಲ್ಲಿರುವ ಖನಿಜಾಂಶವು ದೇಹದಲ್ಲಿನ, ಅದರಲ್ಲೂ ಮುಖ್ಯವಾಗಿ ಜಠರದಲ್ಲಿ ಜೀರ್ಣಕ್ರಿಯೆಗೆ ತಡೆಯೊಡ್ಡುವ ಆಮ್ಲೀಯತೆ (ಅಸಿಡಿಟಿ) ಯನ್ನು ನಿವಾರಿಸುತ್ತದೆ.

4.ಆರೋಗ್ಯಕರ ತ್ವಚೆಯನ್ನು ಒದಗಿಸುತ್ತದೆ
ಕರ್ಬೂಜವು ಕೊಲೆಜಿನ್ ಎಂಬ ಅಂಶವನ್ನು ಹೊಂದಿದೆ. ಇದರಲ್ಲಿರುವ ಪ್ರೊಟೀನ್ ಅಂಶಗಳು ಚರ್ಮದಲ್ಲಿರುವ ಕೋಶಗಳ ರಚನೆಯಲ್ಲಿರುವ ಐಕ್ಯತೆಯ ಮೇಲೆ ಪ್ರಭಾವ ಬೀರುತ್ತವೆ. ಕೊಲ್ಲಜೆನ್ ಗಾಯವನ್ನು ಬೇಗ ಮಾಗಿಸುತ್ತದೆ ಮತ್ತು ತ್ವಚೆಯ ಶಾಶ್ವತತೆಯ ಮೇಲೆ ಸಹ ಪ್ರಭಾವ ಬೀರುತ್ತದೆ. ನೀವು ಕರ್ಬೂಜವನ್ನು ತಿನ್ನುತ್ತಿದ್ದರೆ ನಿಮ್ಮ ತ್ವಚೆಯು ಒರಟಾಗಿ ಮತ್ತು ಒಣಗಿದಂತೆ ಕಾಣುವುದಿಲ್ಲ.

5. ಕಿಡ್ನಿ ಕಾಯಿಲೆ ಮತ್ತು ಕಜ್ಜಿ ಬರದಂತೆ ತಡೆಯುತ್ತದೆ
ಕರ್ಬೂಜ ಹಣ್ಣು ಅತ್ಯುತ್ತಮ ಮೂತ್ರವರ್ಧಕ ಶಕ್ತಿಯನ್ನು ಹೊಂದಿದೆ. ಹಾಗಾಗಿ ಇದು ಮೂತ್ರಕೋಶದ ಸಂಬಂಧಿ ಕಾಯಿಲೆ ಮತ್ತು ಇತರ ಅಪಾಯಕಾರಿ ಕಾಯಿಲೆ ಬರದಂತೆ ತಡೆಯುತ್ತವೆ. ಅಲ್ಲದೆ ಕಜ್ಜಿ ಬರುವುದನ್ನು ಸಹ ತಡೆಯುತ್ತವೆ. ನಿಂಬೆಹಣ್ಣಿನ ಜೊತೆಗೆ ಕರ್ಬೂಜ ಹಣ್ಣನ್ನು ಸೇವಿಸುವುದರಿಂದ ಸಂಧಿವಾತವನ್ನು ಸಹ ಗುಣಪಡಿಸಬಹುದು.

7. ತೂಕವಿಳಿಸಲು
ಕರ್ಬೂಜ ಹಣ್ಣು ತೂಕವಿಳಿಸಲು ಆಲೋಚಿಸುತ್ತಿರುವವರಿಗೆ ಹೇಳಿ ಮಾಡಿಸಿದ ಹಣ್ಣಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ ಅಂಶ ಮಿತವಾಗಿರುತ್ತದೆ.ಇದು ಕೊಬ್ಬು ರಹಿತ, ಕೊಲೆಸ್ಟ್ರಾಲ್ ರಹಿತ ಹಣ್ಣು ಮತ್ತು ಇದರಲ್ಲಿರುವ ಕ್ಯಾಲೋರಿಗಳು ಸಹ ಕಡಿಮೆ ( ಇಡೀ ಬಟ್ಟಲಿನ ತುಂಬ ಇರುವ ಕರ್ಬೂಜ ಹಣ್ಣು ಕೇವಲ 48 ಕ್ಯಾಲೋರಿಗಳನ್ನು ಹೊಂದಿರುತ್ತದೆ). ಇದನ್ನು ತಿಂದರೆ ಇದರಲ್ಲಿರುವ ನೀರಿನಂಶವು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಕರ್ಬೂಜ ಹಣ್ಣಿನಲ್ಲಿ ಇರುವ ಸ್ವಾಭಾವಿಕ ಸಿಹಿತನವು ನಿಮ್ಮ ಬಾಯಿಯನ್ನು ಸಿಹಿಯಾಗಿಸಿ, ನೀವು ಸಿಹಿ ಪದಾರ್ಥಗಳ ಬಗ್ಗೆ ಆಸೆ ಪಡುವುದನ್ನು ನಿಯಂತ್ರಿಸುತ್ತವೆ.

9. ಒತ್ತಡ ನಿವಾರಕ
ಕರ್ಬೂಜ ಹಣ್ಣಿನಲ್ಲಿರುವ ರಂಜಕವು ನಿಮಗೆ ಉಂಟಾಗುವ ಒತ್ತಡವನ್ನು ನಿವಾರಿಸುತ್ತದೆ. ಕರ್ಬೂಜ ಹಣ್ಣಿನ ರಸದಲ್ಲಿರುವ ರಂಜಕವು ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಕರಿಸುತ್ತದೆ. ಇದರಿಂದಾಗಿ ಮೆದುಳಿಗೆ ಅಗತ್ಯ ಪ್ರಮಾಣದ ಆಮ್ಲಜನಕವು ತಲುಪುತ್ತದೆ. ಇದರ ಪರಿಣಾಮವಾಗಿ ನಿಮ್ಮ ಮೆದುಳು ತನ್ನ ಕಾರ್ಯವನ್ನು ಸರಾಗವಾಗಿ ಮಾಡುತ್ತದೆ.

10. ಮಧುಮೇಹ
ಮಧುಮೇಹದ ರೋಗಿಗಳು ಆಗಾಗ್ಗೆ ಹಸಿವು ಎಂದು ಗೊಣಗುತ್ತಿರುತ್ತಾರೆ. ಏಕೆಂದರೆ ಅವರಲ್ಲಿ ಪಥ್ಯದ ಪರಿಣಾಮವಾಗಿ ಸಕ್ಕರೆಯ ಮಟ್ಟ ಮತ್ತು ಶಕ್ತಿಯ ಮಟ್ಟವು ಸಹ ಕುಸಿದಿರುತ್ತದೆ. ಕರ್ಬೂಜ ಹಣ್ಣಿನ ರಸವು ಇಂತಹವರಿಗೆ ಒಳ್ಳೆಯ ಪೂರಕ ಆಹಾರವಾಗಿರುತ್ತದೆ. ಪರಿಣಿತರು ಮಧುಮೇಹಿಗಳಿಗೆ ಸ್ವಲ್ಪ ಕಹಿಯಾದ ಕರ್ಬೂಜ ಹಣ್ಣಿನ ರಸವನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಏಕೆಂದರೆ ಇದು ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.



Click it and Unblock the Notifications
