Latest Updates
-
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಬಾಂದ್ರಾ ಫೇರ್ ರಶ್: ಕಪಲ್ಸ್ ಹುಷಾರ್! ಟ್ರಾಫಿಕ್ ಜಾಮ್ನಲ್ಲಿ ಸಿಲುಕದಂತೆ ಡೇಟಿಂಗ್ ಪ್ಲಾನ್ ಮಾಡುವುದು ಹೇಗೆ? -
ಅಪಾರ್ಟ್ಮೆಂಟ್ನಲ್ಲಿ ಗಣೇಶ ವಿಸರ್ಜನೆ: ಪರಿಸರ ಸ್ನೇಹಿಯಾಗಿ ಆಚರಿಸಲು ಇಲ್ಲಿವೆ 5 ಸಿಂಪಲ್ ಟಿಪ್ಸ್ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಮಾರುಕಟ್ಟೆಯಲ್ಲಿ ನಕಲಿ 'ಅನಲಾಗ್ ಪನೀರ್' ಹಾವಳಿ: ಅಸಲಿ ಪನೀರ್ ಗುರುತಿಸುವುದು ಹೇಗೆ? -
iPhone 18 ಪ್ರೀ-ಆರ್ಡರ್ ಆರಂಭ: ನಿಮ್ಮ ಫೋನ್ ಬುಕ್ ಮಾಡುವ ಮುನ್ನ ಈ 5 ವಿಷಯಗಳನ್ನು ಮಿಸ್ ಮಾಡ್ಬೇಡಿ! -
ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದೀರಾ? ಗಾಯಗಳಾಗದಂತೆ ಕೆಲಸ ಮಾಡಲು ಈ ಸುರಕ್ಷತಾ ಟಿಪ್ಸ್ ಮಿಸ್ ಮಾಡಬೇಡಿ!
ದಪ್ಪಗಾಗಬೇಕೆ? ಇಲ್ಲಿದೆ ನೋಡಿ ಅರೋಗ್ಯಕರ ವಿಧಾನ

ವ್ಯಾಯಾಮ: ದಪ್ಪಗಿರುವವರು ಮಾತ್ರ ವ್ಯಾಯಾಮ ಮಾಡಬೇಕು. ಸಣ್ಣಗಿದ್ದವರು ಮಾಡಿದರೆ ಮತ್ತಷ್ಟು ಸಣ್ಣಗಾಗುತ್ತಾರೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ದಪ್ಪಗಾಗಲು ಕೂಡ ವ್ಯಾಯಾಮ ಮುಖ್ಯ. ತೆಳ್ಳಗಿರುವವರು ತಿಂದರೆ ಮಾತ್ರ ದಪ್ಪಗಾಗುವುದಿಲ್ಲ. ದಪ್ಪಗಾಗಿಸುವ ವ್ಯಾಯಾಮ ಮಾಡಬೇಕು. ಪುಲ್ ಅಪ್, ಪುಶ್ ಅಪ್ ನಂತಹ ವ್ಯಾಯಾಮ ಸಹಕಾರಿಯಾಗುವುದು. ದಪ್ಪಗಾಗುವ ವ್ಯಾಯಾಮ ಯಾವುದೆಂದು ತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು.
ಆಹಾರ: ಆರೋಗ್ಯಕರ ಡಯಟ್ ಮಾಡಬೇಕು. ಹಣ್ಣು, ಮೊಟ್ಟೆ, ಹಾಲು , ಸೊಪ್ಪ, ತರಕಾರಿಗಳು ಆಹಾರಕ್ರಮದಲ್ಲಿ ಅಳವಡಿಸಬೇಕು. ಹೆಚ್ಚು ಪ್ರೊಟೀನ್ ಇರುವ ಆಹಾರ ತಿನ್ನಬೇಕು. ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ ತಿನ್ನುವುದು ಒಳ್ಳೆಯದು. ನಟ್ಸ್, ಬಾದಾಮಿ, ಪಿಸ್ತಾ, ಹಾಲು ಇವುಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು. ಬೆಳಿಗ್ಗೆ ಬಾಳೆಹಣ್ಣು ಹಾಗೂ ಹಾಲು ಕುಡಿಯಿರಿ. ಅಥವಾ ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಿ ಕುಡಿಯುವುದು ಒಳ್ಳೆಯದು.
ಕುರುಕಲು ತಿಂಡಿ: ಕುರುಕಲು ತಿಂಡಿರೆ ದಪ್ಪಗಾಗುತ್ತೇವೆ ಅಂತ ಹೆಚ್ಚಿನವರು ಅದನ್ನು ತಿನ್ನುವುದನ್ನು ನೋಡುತ್ತೇವೆ,. ಆದರೆ ಕುರುಕಲು ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೆಚ್ಚು ಪ್ರೋಟೀನ್ ಇರುವ ಆಹಾರ, ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಹಾಗೂ ಆರೋಗ್ಯಕರ ಕೊಬ್ಬು ಮಾತ್ರ ಸೇವಿಸಬಹುದು.
ಆರೋಗ್ಯಕರ ಕೊಬ್ಬು: ಬಹಳಷ್ಟು ಜನ ತುಪ್ಪ ಹಾಗೂ ಬೆಣ್ಣೆ ತಿಂದರೆ ಬೇಗ ದಪ್ಪಗಾಗುತ್ತಾರೆ ಎಂದು ತಿಳಿದಿರುತ್ತಾರೆ. ಆದರೆ ಇದು ಖಂಡಿತ ತಪ್ಪು. ತುಪ್ಪ ಅಥವಾ ಬೆಣ್ಣೆ ಆರೋಗ್ಯಕ್ಕೆ ಹಿತಕರವಾದ ಕೊಬ್ಬಲ್ಲ. ಇದು ಬೊಜ್ಜು ಬೆಳೆಸುತ್ತದೆ. ಹಾಗಾಗಿ ಇದರ ಹೆಚ್ಚು ಸೇವನೆ ಒಳ್ಳೆಯದೂ ಅಲ್ಲ. ಆಲೀವ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಆಹಾರದಲ್ಲಿ ಬಳಕೆ ಆರೋಗ್ಯಕರ.
ಬೀರ್: ಬೀರ್ ಕುಡಿದರೆ ದಪ್ಪಗಾಗುತ್ತಾರೆ ಅಂತ ಭಾವಿಸಿ ಬೀರ್ ಕುಡಿಯುತ್ತಿರುತ್ತಾರೆ. ಬೀರ್ ಕುಡಿದರೆ ದಪ್ಪಗಾಗುವ ಬದಲು ಬೊಜ್ಜು ಹೊಟ್ಟೆ ಮಾತ್ರ ಬರುತ್ತದೆ.
ಮಾತ್ರೆ ಬೇಡ: ಸಣ್ಣಗಾಗಲು ಮತ್ತು ದಪ್ಪಗಾಗಲು ಮಾತ್ರೆ ಮಾತ್ರ ತಿನ್ನಬೇಡಿ. ಏಕೆಂದರೆ ಇವುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಅಡ್ಡಪರಿಣಾಮ ಉಂಟಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
