Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಚಿಕ್ಕ ಪ್ರಾಯದಲ್ಲಿಯೇ ಕಾಡದಿರಲಿ ಮೆನೋಪಸ್ !
ಮಹಿಳೆಯರಿಗೆ 50 ವರ್ಷದ ನಂತರ ಮೆನೋಪಸ್ ಬರುವುದು ಸಹಜ. ಆದರೆ ಕೆಲವರಿಗೆ ತುಂಬಾ ಚಿಕ್ಕ ಪ್ರಾಯ ಅಂದರೆ 30-35 ವರ್ಷದಲ್ಲಿಯೇ ಮೆನೋಪಸ್ ಬಂದು ಬಿಡುತ್ತದೆ. ಮೆನೋಪಸ್ ಬಂದರೆ ಮಕ್ಕಳಾಗುವ ಸಾಮರ್ಥ್ಯ ಇಲ್ಲದಾಗುತ್ತದೆ. ಆದರೆ ಅನಿಯಮಿತ ಮುಟ್ಟು ಕಂಡು ಬರುತ್ತಿದ್ದರೆ ಒಂದು ವೇಳೆ ಅದು ಮೆನೋಪಸ್ ನ ಸೂಚನೆ ಆಗಿರಬಹುದು.
ಮೆನೋಪಸ್ ಬಂದರೆ ಕೆಲವರಿಗೆ ಸೊಂಟ ನೋವು, ಮೈಕೈ ನೋವು, ಖಿನ್ನತೆ, ಲೈಂಗಿಕ ವಿಷಯಗಳಲ್ಲಿ ಆಸಕ್ತಿ ಇಲ್ಲದಿರುವುದು ಮುಂತಾದ ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ಮೆನೋಪಸ್ 50 ವರ್ಷದ ನಂತರ ಬರುವಂತೆ ನೋಡಿಕೊಳ್ಳುವುದು ಒಳ್ಳೆಯದು. ಈ ಕೆಳಗಿನ ಅಂಶಗಳು ಮೆನೋಪಸ್ ಅನ್ನು ಮುಂದೂಡಲು ಸಹಕಾರಿಯಾಗಿವೆ:

ವ್ಯಾಯಾಮ:
ವ್ಯಾಯಾಮ ಮಾಡಿದರೆ ಸಾಕಷ್ಟು ಕಾಯಿಲೆಗಳನ್ನು ದೂರವಿಡಬಹುದು. ಪ್ರತಿದಿನ ವ್ಯಾಯಾಮ ಮಾಡಿದರೆ ಮನಸ್ಸು ಮತ್ತು ದೇಹ ಚಟುವಟಿಕೆಯಿಂದ ಇರುವುದು.ಪ್ರತಿದಿನ 30 ನಿಮಿಷ ವ್ಯಾಯಾಮಕ್ಕಾಗಿ ಮೀಸಲಿಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

ಯೋಗ ಅಥವಾ ಪ್ರಾಣಯಾಮ:
ಒತ್ತಡ ಬೇಗನೆ ಮೆನೋಪಸ್ ಬರುವಂತೆ ಮಾಡುತ್ತದೆ. ಯೋಗ ಅಥವಾ ಪ್ರಾಣಾಯಾಮ ಮಾಡಿದರೆ ಆರೋಗ್ಯಕರ ದೇಹವನ್ನು ಪಡೆಯಬಹುದು ಹಾಗೂ ಮನಸ್ಸು ಕೂಡ ಶಾಂತ ರೀತಿಯುಲ್ಲಿರುವುದರಿಂದ ಖಿನ್ನತೆ ಹಾಗೂ ಮೆನೋಪಸ್ ಸಮಸ್ಯೆ ಕಾಡುವುದಿಲ್ಲ.

ಧೂಮಪಾನ:
ಧೂಮಪಾನ ಚಟವಿದ್ದರೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಹಾಗೂ ಬೇಗನೆ ಮೆನೋಪಸ್ ಬಂದು ಬಿಡುತ್ತದೆ. ಆದ್ದರಿಂದ ಧೂಮಪಾನ ಚಟ ಒಳ್ಳೆಯದಲ್ಲ.

Antioxidants ಇರುವ ಆಹಾರಗಳು
Antioxidants ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಅದರಲ್ಲೂ ಸೋಯಾದಂತಹ ಆಹಾರಗಳು ಮೆನೋಪಸ್ ಮುಂದೂಡಲು ಸಹಕಾರಿಯಾಗಿದೆ.

ಸೈಟೋಈಸ್ಟ್ರೋಜನ್ ಇರುವ ಆಹಾರ:
ದೇಹದಲ್ಲಿ ಈಸ್ಟ್ರೋಜನ್ ಕಡಿಮೆಯಾದರೆ ಮೆನೋಪಸ್ ಸಮಸ್ಯೆ ಕಂಡು ಬರುತ್ತದೆ ಅಲ್ಲದೆ ಬೇಗನೆ ವಯಸ್ಸಾದಂತೆ ಕಾಣುವುದು. ಸ್ಟ್ರಾಬರಿ, ಆಲೀವ್ ಎಣ್ಣೆ, ಬ್ರೊಕೋಲಿ, ದುಂಡು ಮೆಣಸಿನಕಾಯಿ ಇವುಗಳು ಮೆನೋಪಸ್ ಅನ್ನು ಮುಂದೂಡಿ ಯೌವನವನ್ನು ಕಾಪಾಡುತ್ತದೆ.



Click it and Unblock the Notifications
