Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬ್ಲ್ಯಾಕ್ ಟೀ ಗ್ರೀನ್ ಟೀಗಿಂತ ಆರೋಗ್ಯಕರವೇ?
ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು, ದೇಹದ ತೂಕವನ್ನು ನಿಯಂತ್ರಣದಲ್ಲಿಡುತ್ತದೆ, ತ್ವಚೆ ಸೌಂದರ್ಯವನ್ನು ಹೆಚ್ಚಿಸುತ್ತದ, ಹೀಗೆ ಇದರಿಂದ ನಾನಾ ಪ್ರಯೋಜನವನ್ನು ಪಡೆಯಬಹುದು. ಆದರೆ ಭಾರತದಲ್ಲಿ ಗ್ರೀನ್ ಟೀಗಿಂತ ಬ್ಲ್ಯಾಕ್ ಟೀಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಅದರಲ್ಲೂ ಕೇರಳದಲ್ಲಿ ಬ್ಲ್ಯಾಕ್ ಟೀಯನ್ನು ಹೆಚ್ಚಾಗಿ ಕುಡಿಯಲಾಗುವುದು.
ಹೆಚ್ಚಿನವರು ಬ್ಲ್ಯಾಕ್ ಟೀ ಕುಡಿಯುವುದಿಲ್ಲ. ಆದರೆ ಆರೋಗ್ಯಕ್ಕೆ ಹಾಲು ಟೀಗಿಂತ ಬ್ಲ್ಯಾಕ್ ಟೀ ಒಳ್ಳೆಯದು. ಗ್ರೀನ್ ಟೀ ಕಹಿ ಇರುವುದರಿಂದ ಹೆಚ್ಚಿನರು ಕುಡಿಯಲು ಇಷ್ಟ ಪಡುವುದಿಲ್ಲ. ಅಂತಹವರು ಲೈಟಾಗಿ ಬ್ಲ್ಯಾಕ್ ಟೀ ಮಾಡಿ ಕುಡಿಯುವುದರಿಂದ ಈ ಕೆಳಗಿನ ಪ್ರಮುಖ ಪ್ರಯಜನಗಳನ್ನು ಪಡೆಯಬಹುದು.

* ಬ್ಲ್ಯಾಕ್ ಟೀ ಕುಡಿಯುವವರೆಗೆ ಹೃದಯ ಸಂಬಂಧಿ ಕಾಯಲೆಗಳು ಬರುವುದು ಕಡಿಮೆ.
* ಈ ಟೀಯಲ್ಲಿರುವ ಫ್ಲೇವೈನೋಯ್ಡ್ಸ್ (flavinoids) ಅಂಶ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುತ್ತದೆ. ಇದರಿಂದಾಗಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
* ಹೃದಯದಲ್ಲಿ ರಕ್ತ ಹೆಪ್ಪುಟ್ಟುವುದನ್ನು ತಡೆಯುತ್ತದೆ.
* ಈ ಟೀ ಜೀರ್ಣಶಕ್ತಿ ಹೆಚ್ಚಿಸುವಲ್ಲಿ ತುಂಬಾ ಸಹಕಾರಿ, ಅಲ್ಲದೆ ಹೊಟ್ಟೆ ಹಸಿವನ್ನು ನಿಯಂತ್ರಣದಲ್ಲಿಡುತ್ತದೆ.
* ಅಲ್ಲದೆ ಈ ಟೀ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಬ್ಲ್ಯಾಕ್ ಟೀಗೆ ಸಕ್ಕರೆ ಬದಲು ಜೇನು ಹಾಕಿ ಕುಡಿದರೆ ದೇಹದ ಬೊಜ್ಜನ್ನು ಬೇಗನೆ ಕರಗಿಸಬಹುದು.
* ಬ್ಲ್ಯಾಕ್ ಟೀ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಡೈ ಮಾಡುವವರು ಬ್ಲ್ಯಾಕ್ ಟೀಗೆ ಮೆಹಂದಿ ಪುಡಿ ಹಾಕಿ ಕಲೆಸಿಟ್ಟು ಒಂದು ರಾತ್ರಿ ಇಟ್ಟು ಬೆಳಗ್ಗೆ ತಲೆಗೆ ಹಚ್ಚಿದರೆ ಕೂದಲು ಕಪ್ಪಾಗುವುದು, ತಲೆಕೂದಲಿಗೂ ಒಳ್ಳೆಯದು.
ಕೆಫೀನ್ ಅಂಶ: ಗ್ರೀನ್ ಟೀಯಲ್ಲಿ ಇರುವ ಕೆಫೀನ್ ಅಂಶಕ್ಕಿಂತ ಬ್ಲ್ಯಾಕ್ ಟೀಯಲ್ಲಿ 3 ಪಟ್ಟು ಅಧಿಕವಿರುತ್ತದೆ. ಆದ್ದರಿಂದ ಮೈ ತೂಕ ಇಳಿಸಬೇಕೆಂದು ಅತೀ ಹೆಚ್ಚು ಬ್ಲ್ಯಾಕ್ ಟೀ ಕುಡಿಯಬೇಡಿ, ದಿನಕ್ಕೆ ಎರಡು ಲೋಟ ಕುಡಿದರೆ ಸಾಕು ದೇಹದ ಬೊಜ್ಜನ್ನು ನಿಧಾನಕ್ಕೆ ಕರಗಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
