Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಣ್ಣುಗಳಿಂದ ಅಜೀರ್ಣ ಸಮಸ್ಯೆ ಉಂಟಾಗದಿರಲು ಈ ವಿಧಾನ
ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿರುವ ವಿಷಯ. ಆದರೆ ಹಣ್ಣುಗಳನ್ನು ಮಿತಿಮೀರಿ ತಿಂದರೆ ಅಜೀರ್ಣ ಸಮಸ್ಯೆ ಉಂಟಾಗುವುದು. ಕೆಲವೊಂದು ಹಣ್ಣುಗಳನ್ನು ತಿಂದರೆ ಅದು ಗ್ಯಾಸ್ ಸಮಸ್ಯೆಯನ್ನು ಉತ್ಪತ್ತಿ ಮಾಡುತ್ತದೆ! ಇದು ಮಾವಿನ ಹಣ್ಣಿನ ಕಾಲವಾಗಿದ್ದು ಅದನ್ನು ಮಿತಿಯಲ್ಲಿ ತಿನ್ನಬೇಕು. ಮಿತಿ ಮೀರಿ ತಿಂದರೆ ಅಜೀರ್ಣ ಸಮಸ್ಯೆ, ಹೊಟ್ಟೆ ನೋವು ಮುಂತಾದ ತೊಂದರೆಗಳು ಕಾಣಿಸಿಕೊಳ್ಳವುದು. ಆದ್ದರಿಂದ ಹಣ್ಣುಗಳನ್ನು ತಿಂದು ಆರೋಗ್ಯ ಕಳೆದು ಕೊಳ್ಳದೆ ಆರೋಗ್ಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ:

ಮಾವಿನ ಹಣ್ಣು: ಮಾವಿನ ಹಣ್ಣು ನೋಡುವಾಗ ಬಾಯಲ್ಲಿ ನೀರೂರುವುದು ಸಹಜ. ಹಾಗಂತ ಮಿತಿಮೀರಿ ತಿಂದರೆ ಅಜೀರ್ಣ ಸಮಸ್ಯೆ ಉಂಟಾಗುವುದು. ಏಕೆಂದರೆ ಇದರಲ್ಲಿ ಅಧಿಕ ನಾರಿನಂಶವಿರುವುದರಿಂದ ಜೀರ್ಣಕ್ರಿಯೆಗೆ ಕಷ್ಟವಾಗುತ್ತದೆ. ಜೀರ್ಣಕ್ರಿಯೆಗೆ ನಾರಿನಂಶ ಅಗತ್ಯ, ಆದರೆ ಮಿತಿಮೀರಿ ನಾರಿನಂಶ ಹೊಟ್ಟೆಯನ್ನು ಸೇರಿದರೆ ತೊಂದರೆ ಉಂಟಾಗುವುದ ಖಚಿತ.
ಮಾವಿನ ಹಣ್ಣು ತಿಂದಾಗ ಈ ಮೇಲೆ ಹೇಳಿದಂತಹ ತೊಂದರೆ ಉಂಟಾಗದಿರಲು ಈ ರೀತಿ ಮಾಡಿ:
ಮಾವಿನ ಹಣ್ಣಿನ ತುದಿಯಲ್ಲಿ ಮತ್ತು ತೊಟ್ಟಿನ ಕಡೆ ಸ್ವಲ್ಪ ಕತ್ತರಿಸಿ ನಂತರ ನೀರಿನಲ್ಲಿ 10-15 ನಿಮಿಷ ಮುಳುಗಿಸಿ ಇಡಬೇಕು. ಈ ರೀತಿ ಮಾಡಿದರೆ ಹಣ್ಣಿನಿಂದ ಹಾನಿಕಾರಕ ಗ್ಯಾಸ್ ಉತ್ಪತ್ತಿಯಾಗುವುದನ್ನು ತಡೆಯಬಹುದು.
ಸೇಬು: ದಿನಾ ಒಂದು ಸೇಬು ತಿಂದು ಕಾಯಿಲೆ ದೂರವಿಡಿ ಅನ್ನುವ ಸ್ಲೋಗನ್ ಇದೆ. ಆದರೆ ಕಾಯಿಲೆಯನ್ನು ದೂರವಿಡುವ ಗುಣವಿರುವ ಸೇಬು ಕೆಲವೊಮ್ಮೆ ಅಜೀರ್ಣ ಉಂಟಾಗಲು ಕಾರಣವಾಗುವುದು! ಸೇಬಿನಲ್ಲಿ ಅಧಿಕ ನಾರಿನಂಶ ಮತ್ತು ಕಾರ್ಬೋಹೈಡ್ರೇಟ್ ಅಂಶವಿದ್ದು ಜೀರ್ಣಕ್ರಿಯೆ ಸುಲಭವಾಗಿ ಆಗುವುದಿಲ್ಲ. ಸೇಬು ಹಾಗೇ ತಿನ್ನಬಹುದು, ಆದರೆ ಮಕ್ಕಳಲ್ಲಿ ಅಜೀರ್ಣ ತರಬಹುದು. ಆದ್ದರಿಂದ ಸೇಬನ್ನು ಬೇಯಿಸಿ ತಿಂದರೆ ತಿಂದು ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.
ಪೀಚ್, ಪಿಯರ್ಸ್ ಹಣ್ಣು: ಈ ಹಣ್ಣುಗಳು ಸ್ವಾಭಾವಿಕವಾಗಿ ಸಿಹಿಯಾಗಿರುತ್ತದೆ. ಇದರಲ್ಲಿ ನಾರಿನಂಶವಿದ್ದು ಅದು ಈ ಆಹಾರಗಳನ್ನು ತಿಂದಾಗ ಹೊಟ್ಟೆಯನ್ನು ಸೇರಿ ಜೀರ್ಣಕ್ರಿಯೆ ಸುಲಭವಾಗಿ ನಡೆಯುವುದಿಲ್ಲ. ಆದ್ದರಿಂದ ಈ ಹಣ್ಣುಗಳನ್ನು ತಿನ್ನುವ ಮೊದಲು ಸಾಕಷ್ಟು ನೀರು ಕುಡಿದು ನಂತರ ತಿಂದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
