Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಇವುಗಳ ಬೀಜ ಬಿಸಾಡಿದರೆ ಆರೋಗ್ಯಕ್ಕೆ ನಷ್ಟ!
ಈ ಲೇಖನದಲ್ಲಿ ಕೆಲವೊಂದು ತರಕಾರಿ ಮತ್ತು ಹಣ್ಣುಗಳ ಬೀಜದ ಉಪಯೋಗವನ್ನು ನೀಡಲಾಗಿದೆ. ದೇಹದ ಆರೋಗ್ಯಕ್ಕೆ ಹೆಚ್ಚಿಸುವ ಆ ಬೀಜಗಳು ಯಾವುವು ಮತ್ತು ಅದರಿಂದ ದೊರೆಯುವ ಪ್ರಯೋಜವೇನು ಎಂದು ತಿಳಿಯಲು ಈ ಫೋಟೊ ಫೀಚರ್ ನೋಡಿ:
ಪಪ್ಪಾಯಿಯ ಬೀಜ: ಪಪ್ಪಾಯಿಯ ಬೀಜವನ್ನು ಖಂಡಿತ ಬಿಸಾಡುತ್ತೇವೆ. ಆದರೆ ಪಪ್ಪಾಯಿಯ ಬೀಜದಲ್ಲಿ ಅನೇಕ ಗುಣಗಳಿದ್ದು ಕಿಡ್ನಿಯಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸುತ್ತದೆ. ಲಿವರ್ ನಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಿ, ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವವರು ಇದರ ಬೀಜ ತಿಂದರೆ ಸಾಕು, ಗ್ಯಾಸ್ಟ್ರಿಕ್ ಕಡಿಮೆಯಾಗುವುದು. ಪಪ್ಪಾಯಿ ಬೀಜವನ್ನು ಒಣಗಿಸಿ ಉಪಯೋಗಿಸಬೇಕು. ಅಲ್ಲದೆ ಬೀಜವನ್ನು ಚೆನ್ನಾಗಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿದರೆ ಮೊಡವೆ ಕಡಿಮೆಯಾಗುತ್ತದೆ, ಮುಖದ ಹೊಳಪು ಹೆಚ್ಚುವುದು.
{photo-feature}
ದುಂಡು ಮೆಣಸಿನಕಾಯಿಯ ಬೀಜ: ಅನೇಕ ಬಗೆಯ ಮೆಣಸುಗಳಿದ್ದರೂ ದುಂಡು ಮೆಣಸು ಅನೇಕ ಪ್ರಯೋಜವನ್ನು ಹೊಂದಿದೆ. ದುಂಡುಮೆಣಸಿನಲ್ಲಿ ವಿಟಮಿನ್ ಎ, ಸಿ, ಕೆ ಇರುವುದರಿಂದ ರಕ್ತ ಸಂಚಾರ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ. ರೋಗನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ತ್ವಚೆಯ ಯೌವನವನ್ನು ಕಾಪಾಡುತ್ತದೆ. ಜೀರ್ಣಕ್ರಿಯೆ ಸರಾಗವಾಗಿ ನಡೆಯುವಂತೆ ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಉಪಕಾರವಿರುವಾಗ ಇದರ ಬೀಜವನ್ನು ಬಿಸಾಡಬೇಡಿ.
ದಾಳಿಂಬೆ ಬೀಜ: ದಾಳಿಂಬೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಹೆಚ್ಚಿನವರು ಮೃದುವಾದ ಕೆಂಪು ತಿರುಳನ್ನು ಮಾತ್ರ ತಿಂದು ಜ್ಯೂಸ್ ಅನ್ನು ಬಿಸಾಡುತ್ತದೆ. ಆದರೆ ಬೀಜ ತುಂಬಾ ಆರೋಗ್ಯಕರವಾಗಿದ್ದು, ಇದು ದೇಹದ ತೂಕ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿದೆ.
ಟೊಮೆಟೊ ಹಣ್ಣಿನ ಬೀಜ: ಟೊಮೆಟೊ ಆರೋಗ್ಯ ಮತ್ತು ಸೌಂದರ್ಯಕ್ಕೆ ಒಳ್ಳೆಯದು. ಟೊಮೆಟೊ ಬೀಜವು ದೇಹವನ್ನು ಸೇರಿದರೆ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ದೇಹದಲ್ಲಿರುವ ಕಲ್ಮಶಗಳನ್ನು ಹೊರಗೆ ಹಾಕುತ್ತದೆ. ಹೃದಯದಲ್ಲಿ ರಕ್ತ ಹೆಪ್ಪು ಗಟ್ಟದಂತೆ ನೋಡಿಕೊಳ್ಳುತ್ತದೆ. ಟೊಮೆಟೊದ ಬೀಜ ಸರಿಯಾಗಿ ಜೀರ್ಣವಾಗುವುದಿಲ್ಲ ಎಂಬ ನಂಬಿಕೆ ಅನೇಕರಲ್ಲಿದೆ. ಆದರೆ ಮಲಬದ್ಧತೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ.



Click it and Unblock the Notifications
