Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ಲೈಫ್ ಬೋರಾದಾಗ ಏನು ಮಾಡಬೇಕು ಗೊತ್ತಾ?

ಖಿನ್ನತೆಯಿಂದ ಕೊರಗಿದರೆ, ಜೀವನ ಮತ್ತಷ್ಟು ನರಕವಾಗುವುದಲ್ಲದೆ ಬೇರೆ ಏನೂ ಪ್ರಯೋಜನವಿಲ್ಲ, ಆದ್ದರಿಂದ ಖಿನ್ನತೆಯಿಂದ ಹೊರಬರಲು ಪ್ರಯತ್ನಿಸಬೇಕು. ಖಿನ್ನತೆ ಉಂಟಾದರೆ, ಯಾವುದೋ ಕಾರಣಕ್ಕೆ ಬೇಜಾರು ಆದರೆ ಈ ಕೆಳಗಿನ ಸರಳ ಸಲಹೆಗಳನ್ನು ಪಾಲಿಸಿ ನೋಡಿ, ಜೀವನ ಸುಲಭವಾಗುವುದು:
1. ಸ್ವ ಚಿಂತನೆ: ಏನಾದರೂ ಸಮಸ್ಯೆ ಅಥವಾ ಕಷ್ಟ ಬಂದಾಗ ಅಯ್ಯೋ! ಹೀಗಾಯಿತಲ್ಲಾ ಎಂದು ಕೊರಗುತ್ತೇವೆ ಹೊರತು, ಈ ರೀತಿ ಆಗಲು ಕಾರಣವೇನು? ಇದರಿಂದ ಹೊರಬರುವುದು ಹೇಗೆ? ಎಂದು ಯೋಚಿಸುವುದೇ ಇಲ್ಲ. ಯಾವುದಕ್ಕೂ ಮುನ್ನೆಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲವೊಮ್ಮೆ ನಾವು ಬಯಸಿರದಂತಹ ಘಟನೆ ಉಂಟಾಗಿ ಅಘಾತ ಉಂಟಾಗಬಹುದು. ಆಗ ಹೀಗಾಯಿತಲ್ಲಾ ಅಂತ ಕೊರಗಿಕೊಂಡು ಕೂರುವುದಕ್ಕಿಂತ ಆತ್ಮವಿಶ್ವಾಸ ಬೆಳೆಸಿಕೊಂಡರೆ ನಿಮ್ಮ ಸಮಸ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ.
2. ಸಹಾಯ ಕೇಳಿ: ತುಂಬಾ ಕಷ್ಟ ಬಂದು ಖಿನ್ನತೆ ಅನುಭವಿಸಿದಾಗ ನಿಮಗೆ ಯಾರಾದರೂ ಸಹಾಯಬೇಕೆಂದು ಅನಿಸಿದರೆ ಕೇಳಲು ಹಿಂಜರಿಯಬಾರದು. ಆದರೆ ನೀವು ಸಹಾಯ ಕೇಳಿದ ತಕ್ಷಣ ಅವರು ನಿಮಗೆ ಸಹಾಯಮಾಡುತ್ತಾರೆ ಎಂಬ ಅತಿಯಾದ ನಂಬಿಕೆಯೂ ಒಳ್ಳೆಯದಲ್ಲ. ಅವರಿಲ್ಲದಿದ್ದರೆ ಮತ್ತೊಬ್ಬರು ಸಹಾಯ ಮಾಡೇ ಮಾಡುತ್ತಾರೆ. ಈ ನಂಬಿಕೆ ನಿಮ್ಮಲ್ಲಿರಲಿ.
3. ಇಷ್ಟದ ಸ್ಥಳಗಳಿಗೆ ಭೇಟಿ ನೀಡಿ: ತುಂಬಾ ಬೇಜಾರಾದರೆ ಇಷ್ಟವಿರುವ ಸ್ಥಳಗಳಿಗೆ ಹೋಗಿ ಅಥವಾ ದೂರದ ಜಾಗಕ್ಕೆ ಹೋಗಿ ಸ್ವಲ್ಪ ಕಾಲ ಇದ್ದರೆ ಸ್ಥಳ ಬದಲಾಗುವುದರಿಂದ ಮನಸ್ಸು ಕೂಡ ಸ್ವಲ್ಪ ಹಗುರವಾಗುವುದು.
4. ಡಯಟ್ ಮತ್ತು ವ್ಯಾಯಾಮ: ಹಣ್ಣುಗಳು, ಕಾರ್ಬೋಹೈಡ್ರೇಟ್ ಇರುವ ಆಹಾರ, ನಾನ್ ವೆಜ್ ಆಹಾರ ಖಿನ್ನತೆಯನ್ನು ಹೋಗಲಾಡಿಸುತ್ತದೆ. ಪ್ರಾಣಾಯಾಮ ಮನಸ್ಸನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ.
5. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು: ಬೊಜ್ಜು, ಒಬೆಸಿಟಿ ಸಮಸ್ಯೆಯಿರುವವರು ಬೇಗನೆ ಖಿನ್ನತೆಗೆ ಒಳಗಾಗುತ್ತಾರೆ. ಆದ್ದರಿಂದ ಬೊಜ್ಜನ್ನು ಕರಗಿಸಬೇಕು.
6. ಸ್ನೇಹಿತರು: ಒಳ್ಳೆಯ ಸ್ನೇಹಕ್ಕೆ ಎಂತಹ ನೋವನ್ನು ಮರೆಸುವ ಸಾಮರ್ಥ್ಯ ಇರುತ್ತದೆ. ದುಃಖ ಇರುವಾಗ ಶಕುನಿ ಬುದ್ಧಿ ಇರುವವರನ್ನು ಮಾತ್ರ ಮಾತನಾಡಿಸಬೇಡಿ. ಅಂತಹವರ ಜೊತೆ ಸಲಹೆ ಕೇಳಿದರೆ ನಿಮ್ಮನ್ನು ಮತ್ತಷ್ಟು ಕಷ್ಟಪಡುವಂತೆ ಮಾಡುತ್ತಾರೆ.
7. ಒಂಟಿಯಾಗಿ ಇರಬೇಡಿ,ಇತರರನ್ನು ಕಾರಣ ದೂರಬೇಡಿ: ಖಿನ್ನತೆ ಬಂದಾಗ ಹೆಚ್ಚಿನವರು ಒಂಟಿಯಾಗಿ ಇರಬೇಕೆಂದು ಬಯಸುತ್ತಾರೆ. ಆದರೆ ಒಂಟಿಯಾಗಿ ಇದ್ದರೆ ಅದರ ಬಗ್ಗೆ ಯೋಚಿಸಿ ಮತ್ತಷ್ಟು ಮನಸ್ಸು ಕೆಡಿಸಿಕೊಳ್ಳುತ್ತೇವೆ ಹೊರತು ಸಮಧಾನ ಸಿಗುವುದಿಲ್ಲ. ಅಲ್ಲದೆ ನಮಗೆ ಉಂಟಾದ ತೊಂದರೆಗೆ ಇತರರನ್ನು ಬೊಟ್ಟು ಮಾಡಿ ಹೇಳುವುದು ನಿಲ್ಲಿಸಬೇಕು.
8. ಮಾನಸಿಕ ತಜ್ಞರು: ಖಿನ್ನತೆಯನ್ನು ದೂರ ಮಾಡಲು ಸಾಧ್ಯವಾಗುತ್ತಿಲ್ಲ ಅಂದರೆ ಮಾನಸಿಕ ತಜ್ಞರನ್ನು ಭೇಟಿ ಮಾಡಲು ಹಿಂಜರಿಯಬಾರದು. ನಿಮಗೆ ಯಾವುದು ಸರಿ ಅನಿಸುತ್ತದೆಯೋ ಅದನ್ನು ಮಾಡಿದರೆ ಖಿನ್ನತೆಯನ್ನು ಹೋಗಲಾಡಿಸಿ ನಗುವನ್ನು ನಿಮ್ಮ ಮುಖದಲ್ಲಿ ತುಂಬಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications