Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಸಿಗರೇಟ್ ಧೂಮದಲ್ಲಿರುವ ಐದು ಭಸ್ಮಾಸುರರು
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಬರೆದಿದ್ದ ಪ್ಯಾಕೆಟ್ ಕೊಂಡು ಅದನ್ನು ಒಮ್ಮೆ ಓದಿ ಸಿಗರೇಟ್ ಅನ್ನು ತೆಗೆದು ಸ್ಟೈಲ್ ಗಿ ಸುರುಳಿ ಸುತ್ತಿ ಬಿಡುತ್ತಾರೆ. ಹೆಚ್ಚಿನವರು ಸಿಗರೇಟ್ ಅಭ್ಯಾಸವನ್ನು ತಮ್ಮ ಟೇನೇಜ್ ನಲ್ಲಿ ಸಹವಾಸ ದೋಷದಿಂದ ಕಲಿಯುತ್ತಾರೆ.
ತಮಾಷೆಗೆ ಕಲಿತ ಈ ಚಟ ದೇಹದ ಶಕ್ತಿಯನ್ನೇ ಹೀರಿಬಿಡುತ್ತದೆ. ಸಿಗರೇಟ್ ನಲ್ಲಿ ತಂಬಾಕು ಇರುವುದರಿಂದ ಆರೋಗ್ಯಕ್ಕೆ ಹಾನಿಕಾರಕ ಎಂದು ಮಾತ್ರ ಹೆಚ್ಚಿನವರಿಗೆ ಗೊತ್ತಿರುವ ವಿಷಯವಾಗಿದೆ. ಆದರೆ ಬರೀ ತಂಬಾಕು ಅಲ್ಲದೆ ಮತ್ತೆ ಕೆಲವು ರಾಸಾಯನಿಕಗಳಿವೆ, ಅವುಗಳು ತಂಬಾಕಿಗಿಂತ ಹಾನಿಕಾರಕವಾಗಿವೆ.

1. ಬೆಂಜಿನ್ (Benzene):
ಈ ಅಂಶ ಅಧಿಕವಾಗಿ ಸಿಗರೇಟ್ ನಲ್ಲಿ ಕಂಡು ಬರುತ್ತದೆ. ಈ ರಾಸಾಯನಿಕವನ್ನು ಕೀಟನಾಶಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸಿಗರೇಟ್ ಸೇದಿದಾಗ ಈ ರಾಸಾಯನಿಕವು ದೇಹವನ್ನು ಸೇರಿ ದೇಹದ ಆರೋಗ್ಯವನ್ನು ಕ್ರಮೇಣ ಶೋಚನೀಯ ಸ್ಥಿತಿಗೆ ತರುತ್ತದೆ.

2. ಕಾರ್ಬನ್ ಮೋನೋಕ್ಸೈಡ್ (Carbon Monoxide):
ಕಾರ್ಬನ್ ಮೋನೋಕ್ಸೈಡ್ ತುಂಬಾ ವಿಷಕಾರವಾದ ಅನಿಲವಾಗಿದೆ. ಒಂದು ರೂಮಿನಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಕಾರ್ಬನ್ ಮೋನೋಕ್ಸೈಡ್ ಅನಿಲವನ್ನು ಆ ರೂಮಿನಲ್ಲಿ ತುಂಬಿ ಆ ರೂಮಿನಲ್ಲಿ 5 ನಿಮಿಷ ನಿಂತರ ಸಾಕು. ವ್ಯಕ್ತಿ ಉಸಿರುಕಟ್ಟಿ ಸತ್ತು ಹೋಗುತ್ತಾನೆ. ಅಂತಹ ವಿಷಕಾರಕ ಅನಿಲವನ್ನು ಸ್ವಲ್ಪ-ಸ್ವಲ್ಪ ತೆಗೆದುಕೊಳ್ಳುತ್ತಾ ಬಂದರೆ ಒಂದು 10 ವರ್ಷಗಳ ಬಳಿಕ ಉಸಿರಾಟದ ತೊಂದರೆ ಕಾಣಸಿಕೊಂಡು ದೇಹದ ಸ್ಥಿತಿ ತುಂಬಾ ಶೋಚನೀಯವಾಗುತ್ತದೆ. ಅಲ್ಲದೆ ಸಿಗರೇಟ್ ಎಳೆದು ಅದರ ಹೊಗೆ ಬಿಟ್ಟಾಗ ಆ ಗಾಳಿಯನ್ನು ಸೇವಿಸಿದವರೆಗೆ ಆರೋಗ್ಯ ಹಾಳಾಗಾಲು ಕಾರಣಕರ್ತರಾಗಬೇಕಾಗುತ್ತದೆ.

3.ಆರ್ಸೆನಿಕ್ (Arsenic):
ಈ ರಾಸಾಯನಿಕವನ್ನು ಇಲಿಗಳನ್ನು ಕೊಲ್ಲಲು ಉಪಯೋಗಿಸುತ್ತಾರೆ. ಸಿಗರೇಟ್ ಅನ್ನು ಸೇದುವುದರಿಂದ ಇಲಿಪಾಷಣ ತಯಾರಿಸಲು ಬಳಸುವ ಪ್ರಮುಖ ರಾಸಾಯನಿಕ ದೇಹವನ್ನು ಸೇರುತ್ತದೆ.

4. ಕೇಡಿಮಿಯಂ (cadmium):
ಇದನ್ನು ಬ್ಯಾಟರಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸಿಗರೇಟ್ ಸೇದಿದಾಗ ಸ್ವಲ್ಪ-ಸ್ವಲ್ಪ ಕೇಡಿಯಂ ರಕ್ತದಲ್ಲಿ ಸೇರಿಕೊಂಡು ಶ್ವಾಸಕೋಸ ಮತ್ತು ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ.

5.ಫಾರ್ಮಲ್ ಡಿಹೈಡ್ (formaldehyde):
ಈ ವಿಷಕಾರಕ ರಾಸಾಯನಿಕವು ಇಂಧನವನ್ನು ಉರಿಸುವಾಗ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಈ ರಾಸಾಯನಿಕ ಯಾವುದೇ ವಾಸನೆಯಾಗಲಿ, ಬಣ್ಣವಾಗಲಿ ಹೊಂದಿರುವುದಿಲ್ಲ. ಇದನ್ನು ಶವವನ್ನು ಕೆಡದಂತೆ ಸಂಗ್ರಹಿಸಲು ಉಪಯೋಗಿಸುತ್ತಾರೆ. ಈ ರಾಸಾಯನಿಕವು ಶ್ವಾಸಕೋಶಕ್ಕೆ ಹಾನಿಯನ್ನು ತರುತ್ತದೆ. ಸಿಗರೇಟ್ ಸೇದಿದಾಗ ಕಣ್ಣು, ಗಂಟಲಿನಲ್ಲಿ ಉರಿ ಕಂಡು ಬರಲು ಈ ರಾಸಾಯನಿಕ ಕಾರಣವಾಗಿದೆ.
1. ಬೆಂಜಿನ್ (Benzene): ಈ ಅಂಶ ಅಧಿಕವಾಗಿ ಸಿಗರೇಟ್ ನಲ್ಲಿ ಕಂಡು ಬರುತ್ತದೆ. ಈ ರಾಸಾಯನಿಕವನ್ನು ಕೀಟನಾಶಕಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸಿಗರೇಟ್ ಸೇದಿದಾಗ ಈ ರಾಸಾಯನಿಕವು ದೇಹವನ್ನು ಸೇರಿ ದೇಹದ ಆರೋಗ್ಯವನ್ನು ಕ್ರಮೇಣ ಶೋಚನೀಯ ಸ್ಥಿತಿಗೆ ತರುತ್ತದೆ.
2. ಕಾರ್ಬನ್ ಮೋನೋಕ್ಸೈಡ್ (Carbon Monoxide): ಕಾರ್ಬನ್ ಮೋನೋಕ್ಸೈಡ್ ತುಂಬಾ ವಿಷಕಾರವಾದ ಅನಿಲವಾಗಿದೆ. ಒಂದು ರೂಮಿನಲ್ಲಿ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಕಾರ್ಬನ್ ಮೋನೋಕ್ಸೈಡ್ ಅನಿಲವನ್ನು ಆ ರೂಮಿನಲ್ಲಿ ತುಂಬಿ ಆ ರೂಮಿನಲ್ಲಿ 5 ನಿಮಿಷ ನಿಂತರ ಸಾಕು. ವ್ಯಕ್ತಿ ಉಸಿರುಕಟ್ಟಿ ಸತ್ತು ಹೋಗುತ್ತಾನೆ. ಅಂತಹ ವಿಷಕಾರಕ ಅನಿಲವನ್ನು ಸ್ವಲ್ಪ-ಸ್ವಲ್ಪ ತೆಗೆದುಕೊಳ್ಳುತ್ತಾ ಬಂದರೆ ಒಂದು 10 ವರ್ಷಗಳ ಬಳಿಕ ಉಸಿರಾಟದ ತೊಂದರೆ ಕಾಣಸಿಕೊಂಡು ದೇಹದ ಸ್ಥಿತಿ ತುಂಬಾ ಶೋಚನೀಯವಾಗುತ್ತದೆ. ಅಲ್ಲದೆ ಸಿಗರೇಟ್ ಎಳೆದು ಅದರ ಹೊಗೆ ಬಿಟ್ಟಾಗ ಆ ಗಾಳಿಯನ್ನು ಸೇವಿಸಿದವರೆಗೆ ಆರೋಗ್ಯ ಹಾಳಾಗಾಲು ಕಾರಣಕರ್ತರಾಗಬೇಕಾಗುತ್ತದೆ.
3. ಫಾರ್ಮಲ್ ಡಿಹೈಡ್ (formaldehyde): ಈ ವಿಷಕಾರಕ ರಾಸಾಯನಿಕವು ಇಂಧನವನ್ನು ಉರಿಸುವಾಗ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಈ ರಾಸಾಯನಿಕ ಯಾವುದೇ ವಾಸನೆಯಾಗಲಿ, ಬಣ್ಣವಾಗಲಿ ಹೊಂದಿರುವುದಿಲ್ಲ. ಇದನ್ನು ಶವವನ್ನು ಕೆಡದಂತೆ ಸಂಗ್ರಹಿಸಲು ಉಪಯೋಗಿಸುತ್ತಾರೆ. ಈ ರಾಸಾಯನಿಕವು ಶ್ವಾಸಕೋಶಕ್ಕೆ ಹಾನಿಯನ್ನು ತರುತ್ತದೆ. ಸಿಗರೇಟ್ ಸೇದಿದಾಗ ಕಣ್ಣು, ಗಂಟಲಿನಲ್ಲಿ ಉರಿ ಕಂಡು ಬರಲು ಈ ರಾಸಾಯನಿಕ ಕಾರಣವಾಗಿದೆ.
4. ಕೇಡಿಮಿಯಂ (cadmium): ಇದನ್ನು ಬ್ಯಾಟರಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸಿಗರೇಟ್ ಸೇದಿದಾಗ ಸ್ವಲ್ಪ-ಸ್ವಲ್ಪವಾಗಿ ಕೇಡಿಯಂ ರಕ್ತದಲ್ಲಿ ಸೇರಿಕೊಂಡು ಶ್ವಾಸಕೋಶ ಮತ್ತು ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ.
5. ಆರ್ಸೆನಿಕ್ (Arsenic): ಈ ರಾಸಾಯನಿಕವನ್ನು ಇಲಿಗಳನ್ನು ಕೊಲ್ಲಲು ಉಪಯೋಗಿಸುತ್ತಾರೆ. ಸಿಗರೇಟ್ ಸೇದುವುದರಿಂದ ಇಲಿಪಾಷಣ ತಯಾರಿಸಲು ಬಳಸುವ ಪ್ರಮುಖ ರಾಸಾಯನಿಕವು ದೇಹವನ್ನು ಸೇರುತ್ತದೆ.



Click it and Unblock the Notifications