Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಳಗ್ಗೆ ಏಳುವ ಮುನ್ನ ಪಾಲಿಸಬೇಕಾದ 3 ವಿಷಯಗಳು

ನಿದ್ದೆ ಮಾಡಿದಾಗ ದೇಹ ಮಾತ್ರವಲ್ಲ, ಮನಸ್ಸು ಕೂಡ ವಿಶ್ರಾಂತಿಯನ್ನು ತೆಗೆದುಕೊಂಡಿರುತ್ತದೆ. ಬೆಳಗ್ಗೆ ಎಚ್ಚರ ಆದ ಕೂಡಲೆ ದಡಬಡ ಅಂತ ಎದ್ದು ದಿನನಿತ್ಯದ ಕೆಲಸಕ್ಕೆ ಅಣಿಯಾಗುತ್ತೀರಿ. ಈ ರೀತಿ ಮಾಡುವುದರಿಂದ ಮನಸ್ಸಿಗೆ ವಿಶ್ರಾಂತಿ ದೊರೆಯದೆ ದಿನಪೂರ್ತಿ ಗೊಂದಲ, ಟೆನ್ಷ್ಯನ್‌ನಿಂದ ದಿನ ದೂಡ ಬೇಕಾಗುತ್ತದೆ.
ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ಮುಂದಿನ ಕೆಲಸಕ್ಕೆ ಅಣಿಯಾಗುವುದರ ಮೊದಲು ಈ ಕೆಳಗಿನ 3 ವಿಷಯಗಳನ್ನು ಪಾಲಿಸಿದ್ದೇ ಆದರೆ ದಿನಪುರ್ತಿ ಚಟುವಟಿಕೆಯಿಂದ ಕಾರ್ಯ ನಿರ್ವಹಿಸಬಹುದು. ಅದಕ್ಕಾಗಿ ಬೆಳಗ್ಗೆ ಎದ್ದ ಕೂಡಲೆ ಹೆಚ್ಚಿನ ಶ್ರಮದ ವ್ಯಾಯಾಮ ಮಾಡಿ ಅಂತ ಹೇಳುತ್ತಿಲ್ಲ, ಈ ಸರಳ ವಿಧಾನಗಳನ್ನು ಅನುಸರಿಸಿದರೆ ಅಷ್ಟೆ ಸಾಕು. ಆ ಸರಳ ವಿಧಾನಗಳ ಬಗ್ಗೆ ತಿಳಿಯಲು ಮುಂದೆ ಓದಿ.
1. ಕೈಗಳನ್ನು ನೋಡಿಕೊಳ್ಳುವುದು: ಬೆಳಗ್ಗೆ ಎಚ್ಚರ ಆದ ತಕ್ಷಣ ಹಾಗೇ ಏಳದೆ 20-30 ಸೆಕೆಂಡ್ ಹಸ್ತಗಳನ್ನು ನೋಡಬೇಕು. ಇದು ನಿಮಗೆ ತುಂಬಾ ಚಿಕ್ಕ ವಿಷಯವಾಗಿ ಕಾಣಬಹುದು. ಆದರೆ ಈ ರೀತಿ ಮಾಡಿದರೆ ದೊಡ್ಡ ಮಟ್ಟಿನ ಪ್ರಯೋನವನ್ನು ಪಡೆಯಬಹುದು. ಹೀಗೆ ಮಾಡಿದರೆ ದೇಹ ಮಾತ್ರ ಮಂಚದಿಂದ ಏಳುವುದಿಲ್ಲ, ಮನಸ್ಸು ಕೂಡ ಎಚ್ಚರವಾಗುತ್ತದೆ.
2. ನೆಲಕ್ಕೆ ಪಾದ ಮುಟ್ಟಿಸುವುದು: ಎದ್ದ ತಕ್ಷಣ ಗಡಿಬಿಡಿಯಿಂದ ಓಡಾಡುವುದರ ಬದಲು, ಎದ್ದು ನಿಧಾನಕ್ಕೆ ಕಾಲುಗಳನ್ನು ನೆಲಕ್ಕೆ ಮುಟ್ಟಿಸಬೇಕು. ನಿಮಗೆ ಪಾದ ನೆಲಕ್ಕೆ ಮುಟ್ಟಿದ ಅನುಭವ ಸಿಗಬೇಕು.
3. ನೆಲಕ್ಕೆ ಬಾಗುವುದು: ನೆಲಕ್ಕೆ ಕಾಲೂರಿದಾಗ ನೆಲದಲ್ಲಿ ಕಾಲುಗಳಿಗೆ ಸ್ಪರ್ಶಜ್ಞಾನವಾಗಿರುತ್ತದೆ. ಆದರೆ ಬೆನ್ನು ಮತ್ತು ಕುತ್ತಿಗೆ ವಿಶ್ರಾಂತಿ ಸಿಕ್ಕಿರುವುದಿಲ್ಲ. ಅದಕ್ಕಾಗಿ ಬಾಗಿ ನೆಲವನ್ನು ಮುಟ್ಟಿದಾಗ ಕುತ್ತಿಗೆ ಮತ್ತು ಭುಜದ ಸ್ನಾಯುಗಳಲ್ಲಿರುವ ಟೆನ್ಷನ್ ಕಡಿಮೆಯಾಗಿ ವಿಶ್ರಾಂತಿ ಸಿಗುವುದು.
ಈ 3 ಅಂಶಗಳನ್ನು ಸಲೀಸಾಗಿ 2 ನಿಮಿಷದಲ್ಲಿ ಮಾಡಬಹುದಾಗಿದ್ದು, ಹೀಗೆ ಮಾಡಿದ್ದೆ ಆದರೆ ದಿನಪೂರ್ತಿ ಚಟುವಟಿಕೆಯಿಂದ ಇರಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
