Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿದ್ರಾಹೀನತೆ ನಿವಾರಣೆಗೆ ಪರಿಣಾಮಕಾರಿ ಮನೆಮದ್ದು

ಈ ರೀತಿ ನಿದ್ದೆ ಬಾರದಿರುವುದನ್ನು ವೈದ್ಯಕೀಯ ಭಾಷೆಯಲ್ಲಿ ಇನ್ಸೋಮ್ನಿಯಾ(ನಿದ್ರಾ ಹೀನತೆ)ಎಂದು ಕರೆಯುತ್ತಾರೆ. ಈ ಸಮಸ್ಯೆಯನ್ನು ಕೆಲವೊಂದು ಥೆರಪಿಗಳ ಮುಖಾಂತರ ಗುಣಪಡಿಸಬಹುದು. ಈ ರೀತಿಯ ಥೆರಪಿಗೆ ಅಧಿಕ ಹಣ ವ್ಯಯ ಮಾಡಬೇಕಾಗಿಲ್ಲ, ಮನೆಯಲ್ಲಿ ಮಾಡಬಹುದು. ಅವುಗಳ ಬಗ್ಗೆ ಮಾಹಿತಿ ನೋಡಿ ಇಲ್ಲಿದೆ.
ಒತ್ತಡ ಮತ್ತು ಚಿಂತೆಯಿಂದ ನಿದ್ದೆ ಬರದಿದ್ದರೆ ಈ ಕೆಳಗಿನ ಥೆರಪಿ ಅನುಸರಿಸಬಹುದು.
ಬೆಂಜೋಯಿನ್ ಎಣ್ಣೆ: ಇದನ್ನು ಹಚ್ಚಿದಾಗ ವಿಶ್ರಾಂತಿ ದೊರೆಯುವುದು. ಟೆನ್ಷ್ಯನ್, ಚಿಂತೆ, ಮಾನಸಿಕ ಒತ್ತಡದ ಕಾರಣಗಳಿಂದ ನಿದ್ದೆ ಬರದಿದ್ದರೆ ಇದನ್ನು ಹಚ್ಚಿದರೆ ಸಾಕು ಎಲ್ಲಾ ಸಮಸ್ಯೆಗಳಿಂದ ಮನಸ್ಸು ನಿರರ್ಗಳವಾಗುವುದು ಮತ್ತು ಸುಖವಾದ ನಿದ್ದೆ ಬರುತ್ತದೆ.
ಜಾಸ್ಮಿನ್ ಎಣ್ಣೆ: ಖಿನ್ನತೆ ಅಥವಾ ಉಸಿರಾಟದ ತೊಂದರೆಗಳಿಂದ ನಿದ್ದೆ ಬರದಿದ್ದರೆ ಮಲುಗುವ ಮುಂಚೆ ಜಾಸ್ಮಿನ್ ಎಣ್ಣೆ ಹಚ್ಚಿದರೆ ಸಾಕು. ಅದರ ಸುವಾಸನೆಗೆ ಮನಸ್ಸಿಗೆ ವಿಶ್ರಾಂತಿ ಸಿಕ್ಕಿದಂತೆ ಭಾಸವಾಗುವುದರಿಂದ ಚೆನ್ನಾಗಿ ಬರುತ್ತದೆ.
ಲ್ಯಾವೆಂಡರ್ ಎಣ್ಣೆ: ನೋವು ನಿವಾರಣೆಯಲ್ಲಿ ಈ ಎಣ್ಣೆ ತುಂಬಾ ಪರಿಣಾಮಕಾರಿಯಾಗಿದೆ. ತಲೆನೋವಿನಿಂದ ನಿದ್ದೆ ಬರದಿದ್ದರೆ ಈ ಎಣ್ಣೆ ಬಳಸಿದರೆ ಸಾಕು, ತಲೆನೋವು ಕಡಿಮೆಯಾಗಿ ನಿದ್ದೆ ತಕ್ಷಣ ಬರುತ್ತದೆ.
ಯೋಗ: ನಿದ್ದೆ ಸಮಸ್ಯೆ ಹೋಗಲಾಡಿಸುವಲ್ಲಿ ಯೋಗ ತುಂಬಾ ಪರಿಣಾಮಕಾರಿಯಾದ ವಿಧಾನವಾಗಿದೆ. ಯೋಗದಲ್ಲಿ ಅಂಗಾತ ಮಲಗಿಕೊಂಡು 20 ನಿಮಿಷ ಕಾಲವಿದ್ದರೆ ಒತ್ತಡಗಳು ಕಡಿಮೆಯಾಗುತ್ತದೆ. ಈ ರೀತಿ ಯೋಗಾಭ್ಯಾಸದಿಂದ ದೇಹದ ಪ್ರತಿಯೊಂದು ಭಾಗಕ್ಕೆ ವಿಶ್ರಾಂತಿ ದೊರೆಯುವುದರಿಂದ ನಿದ್ರಾ ಹೀನತೆ ಸಮಸ್ಯೆ ನಿವಾರಣೆಯಾಗುವುದು.
ಗಿಡಮೂಲಿಕೆಗಳು: ಲ್ಯಾವೆಂಡರ್ ಟೀ ಮಾಡಿ ಕುಡಿಯುವುದರಿಂದ ಕೂಡ ನಿದ್ದೆ ಬರದಿರುವ ಸಮಸ್ಯೆಯನ್ನು ಹೋಗಲಾಡಿಸಬಹುದು.
ನಿದ್ದೆ ಮಾತ್ರೆ ನುಂಗಿ ಆರೋಗ್ಯ ಹಾಳು ಮಾಡುವುದಕ್ಕಿಂತ ಈ ಮೇಲಿನ ಮನೆ ಮದ್ದುಗಳು, ವ್ಯಾಯಾಮ ಇವುಗಳನ್ನು ಪಾಲಿಸಿದರೆ ಸುಖ ನಿದ್ದೆಯನ್ನು ಪಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
