Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕತ್ತೆ ತರಹ ದುಡಿದರೆ ಕೆಟ್ಟು ಹೋದಿರಿ ಜೋಕೆ

ಕಾಲಿಗೆ ಚಕ್ರ ಕಟ್ಟಿದಂತಹ ಜೀವನದಿಂದಾಗಿ ಅವನು ಜೀವನದ ಅನೇಕ ಸಂತೋಷದ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾನೆ ಅನಿಸುತ್ತದೆ. ಇತ್ತೀಚಿಗೆ ಅವನನ್ನು ನೋಡಿದಾಗ ತುಂಬಾ ಸೊರಗಿದಂತೆ ಕಾಣುತ್ತಿದ್ದ, ಕಾರಣ ಕೇಳಿದಾಗ ಕೆಲಸದ ಒತ್ತಡ ಅಂದ. ಯಶಸ್ವಿಗೆ ಕಠಿಣ ಪರಿಶ್ರಮ ಅಗತ್ಯ. ಹಾಗಂತ ವಿಶ್ರಾಂತಿಯಿಲ್ಲದ ಜೀವನ ದೇಹದ ಆರೋಗ್ಯವನ್ನು ಹದಗೆಡುಸುತ್ತದೆ. ಅಧಿಕ ಕೆಲಸದ ಒತ್ತಡದಿಂದ ಆರೋಗ್ಯದ ಮೇಲೆ ಹತ್ತು ಹಲವು ಕೆಟ್ಟ ಪರಿಣಾಮಗಳು ಉಂಟಾಗುತ್ತವೆ.
1. ನಿದ್ರಾ ಹೀನತೆ: ದೇಹದ ಆರೋಗ್ಯಕ್ಕೆ 6 ಗಂಟೆ ನಿದ್ರೆ ಅವಶ್ಯಕ. ಕೆಲಸದ ಒತ್ತಡವಿದ್ದರೆ ಮಲಗಿದ್ದರೂ ನಿದ್ರೆ ಬರುವುದಿಲ್ಲ. ಅಲ್ಲದಿದ್ದರೆ ಅತಿ ಕಡಿಮೆ ನಿದ್ರೆ ಮಾಡುವುದು ಇವುಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
2. ಜ್ಞಾಪಕ ಶಕ್ತಿ ಕುಂದುವುದು: ಅಧಿಕ ಒತ್ತಡದಿಂದ ಮೆದುಳಿನ ನೆನಪಿನ ಶಕ್ತಿ ಕುಂದುತ್ತದೆ. ಜ್ಞಾಪಕ ಶಕ್ತಿ ಹೆಚ್ಚಲು ನಿದ್ರೆ ಅವಶ್ಯಕ. ಇಲ್ಲದಿದ್ದರೆ ಮೆದುಳಿನ ಗ್ರಹಿಸುವ ಮತ್ತು ನೆನಪಿನ ಶಕ್ತಿ ಕುಂದುವುದು.
3. ಅಜಾಗರೂಕತೆ: ಬೆಲೆಬಾಳುವ ವಸ್ತು ಅಥವಾ ಡಾಕ್ಯೂಮೆಂಟ್ ಮುಂತಾದವುಗಳನ್ನು ಜೋಪಾನವಾಗಿ ತೆಗೆದು ಇಡದಿರುವುದು ಕೆಲವರ ಸ್ವಾಭಾವಿಕ ಗುಣ. ಆದರೆ ವಿಶ್ರಾಂತಿಯಿಲ್ಲದೆ ದುಡಿಯುವವರಿಗೆ ವಸ್ತುಗಳನ್ನು ಎಲ್ಲಿ ಇಟ್ಟದ್ದೇವೆ ಎಂದು ತಕ್ಷಣ ನೆನಪಿಗೆ ಬರುವುದದಿಲ್ಲ. ಅಲ್ಲದೆ ಡೋರ್ ಹಾಗೆ ತೆರೆದಿಟ್ಟು ಹೋಗುವುದು, ಅತ್ಯಾವಶ್ಯಕವಾದ ಡಾಕ್ಯೂಮೆಂಟ್ ಮರೆತು ಹೋಗುವುದು ಅವೆಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ದೇಹದ ಆರೋಗ್ಯ ಹದಗೆಟ್ಟಿದೆ ಎಂದು ಅರ್ಥ.
4. ಅಜೀರ್ಣ: ಅಧಿಕ ಕೆಲಸ ಒತ್ತಡದಿಂದಾಗಿ ಸರಿಯಾದ ಹೊತ್ತಿನಲ್ಲಿ ಊಟ ಮಾಡದಿರುವುದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ಎಷ್ಟೇ ಪ್ರಿಯವಾದ ಆಹಾರ ಕೂಡ ಬೇಡ ಅನಿಸುತ್ತದೆ.
5. ಆರೋಗ್ಯಕರವಲ್ಲದ ತಿಂಡಿಗಳ ಸೇವನೆ: ಕೆಲಸ ಮಾಡುತ್ತಿರುವಾಗ ಏನಾದರೂ ತಿನ್ನಬೇಕೆಂದು ಅನಿಸುವುದು ಸಹಜ. ಆಗ ಕುರುಕಲು ತಿಂಡಿಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯ ಮತ್ತಷ್ಟು ಹಾಳಾಗುತ್ತದೆ.
6. ಸಂಸಾರದಲ್ಲಿ ಬಿರುಕು: ಅಧಿಕ ಒತ್ತಡದಿಂದಾಗಿ ತೀವ್ರ ದಣಿವು ಆಗುವುದರಿಂದ ದಾಂಪತ್ಯ ಜೀವನದಲ್ಲೂ ಆಸಕ್ತಿ ಕುಂದಲಾರಂಭಿಸುತ್ತದೆ. ಇದರಿಂದ ದಂಪತಿಗಳ ನಡುವೆ ಭಾಂದವ್ಯ ಕಡಿಮೆಯಾಗಲು ಕೂಡ ಒಂದು ಕಾರಣವಾಗಿದೆ.
7. ರಕ್ತದೊತ್ತಡ: ವಿಶ್ರಾಂತಿಯಿಲ್ಲದೆ ಕೆಲಸ ಮಾಡುವುದರಿಂದ ರಕ್ತದೊತ್ತಡದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ರಕ್ತದೊತ್ತಡ ಅಧಿಕವಾದಷ್ಟು ತಾಳ್ಮೆ ಕಡಿಮೆಯಾಗಿ ಸಣ್ಣ-ಪುಟ್ಟ ವಿಷಯಕ್ಕೂ ಕೋಪ ಬರುತ್ತದೆ. ಇದರಿಂದಾಗಿ ಮನ ನೆಮ್ಮದಿ ಕೂಡ ಹಾಳಾಗುತ್ತದೆ.
ಟೆನ್ಷನ್ ಮಾಡಿಕೊಂಡು ಕೆಲಸ ಮಾಡುವುದಕ್ಕಿಂತ ಸಾವಧಾನವಾಗಿ ಕೆಲಸ ಮಾಡುವುದು ಮುಖ್ಯ. ಮನಸ್ಸಿಗೂ ದೇಹಕ್ಕೂ ಆಗಾಗ ವಿಶ್ರಾಂತಿ ಕೊಡುತ್ತ ಕೆಲಸ ಮಾಡಬೇಕು. ಇದರಿಂದ ಕೆಲಸದ ದಕ್ಷತೆಯೂ ಹೆಚ್ಚುತ್ತದೆ. ಆರೋಗ್ಯವೂ ಉಳಿಯುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
