Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಬಿಪಿ ನಿವಾರಿಸುವ 5 ಸುಲಭ ತಂತ್ರ ಇಲ್ಲಿದೆ

ರಕ್ತದೊತ್ತಡ ದೂರವಿರಿಸುವ ಐದು ಸಲಹೆಗಳು:
1. ರಕ್ತದೊತ್ತಡದ ಮಟ್ಟ: ಸಾಮಾನ್ಯವಾಗಿ ರಕ್ತದೊತ್ತಡದ ಮಟ್ಟ 140/90 ಎಂಎಂ ಎಚ್ ಜಿ ಇರಬೇಕು. ಇದಕ್ಕಿಂತ ಹೆಚ್ಚಿದ್ದ ಪಕ್ಷದಲ್ಲಿ ವೈದ್ಯರಿಂದ ತಪ್ಪದೇ ಪರೀಕ್ಷೆ ಮಾಡಿಸಿಕೊಂಡು ಅವಶ್ಯಕ ಔಷಧಿ, ಆಹಾರ, ವ್ಯಾಯಾಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಊಟ ಮತ್ತು ಔಷಧಿಗೆ ನಿಗದಿತ ಸಮಯ ಮೀಸಲಿಡಬೇಕು.
2. ಆಹಾರದ ರೀತಿ: ಬೀದಿ ಬದಿಯ ಆಹಾರದ ಸೇವನೆ ತ್ಯಜಿಸಬೇಕು. ಮನೆಯಲ್ಲಿ ತಯಾರಿಸಿದ ಆಹಾರವೇ ಉತ್ತಮ. ಕರಿದ ಪದಾರ್ಥಗಳಿಗಿಂತ ಬೇಯಿಸಿದ ಆಹಾರ ಒಳ್ಳೆಯದು. ತರಕಾರಿ, ಹಣ್ಣುಗಳು ನಿಮ್ಮ ಆಹಾರದೊಂದಿಗಿರಲಿ. ತೂಕದ ಹೆಚ್ಚಳವೇ ರಕ್ತದೊತ್ತಡಕ್ಕೆ ಮೂಲವಾದ್ದರಿಂದ ದೇಹದಲ್ಲಿ ಬೊಜ್ಜು ಸೇರದಂತೆ ಎಚ್ಚರಿಕೆವಹಿಸಬೇಕು. ವ್ಯಾಯಾಮ ಮಾಡಲು ಮನೆಯಲ್ಲಿ ಸಲಕರಣೆಗಳಿಲ್ಲದಿದ್ದರೆ ನಡಿಗೆಯಾದರೂ ಇರಬೇಕು.
3. ಸಕ್ಕರೆ, ಉಪ್ಪಿನ ಅಂಶ: ಸಕ್ಕರೆ ಮತ್ತು ಉಪ್ಪಿನ ಅಂಶವನ್ನು ಆದಷ್ಟು ಕಡಿಮೆಗೊಳಿಸಬೇಕು. ಈ ಎರಡೂ ಅಂಶಗಳು ರಕ್ತದೊತ್ತಡ ಹೆಚ್ಚಿಸುವುದಾದ್ದರಿಂದ ಸೇವನೆಯಲ್ಲಿ ನಿಯಂತ್ರಣವಿರಬೇಕು. ಸಕ್ಕರೆ ಬದಲು ಜೇನನ್ನು ಬಳಸಬಹುದು. ಖಾರದ ಪದಾರ್ಥಗಳ ಸೇವನೆಯಿಂದ ಉತ್ಪತ್ತಿಯಾಗುವ ಎಂಜೈಮುಗಳು ರಕ್ತದೊತ್ತಡ ಹೆಚ್ಚಿಸುವುದರಿಂದ ಖಾರವನ್ನೂ ಹೆಚ್ಚು ತಿನ್ನಬಾರದು.
4. ಮದ್ಯದಿಂದ ದೂರವಿರಿ: ಮದ್ಯ ಮತ್ತು ಇನ್ನಿತರ ದುಶ್ಚಟಗಳಿದ್ದವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲೇಬೇಕೆಂದಿದ್ದರೆ ಮದ್ಯವನ್ನು ದೂರವಿಡುವುದು ಅತ್ಯವಶ್ಯಕ. ಮದ್ಯವನ್ನು ತಕ್ಷಣವೇ ಬಿಡಲು ಸಾಧ್ಯವಾಗದಿದ್ದರು ಕ್ರಮೇಣ ಕಡಿಮೆ ಮಾಡಬೇಕು.
5. ಒತ್ತಡ ರಹಿತರಾಗಿ: ರಕ್ತದೊತ್ತಡ ಹೆಚ್ಚಿಸುವಲ್ಲಿ ಮನಸ್ಸು, ಮೆದುಳೂ ಕೂಡ ಕಾರಣವಾಗುತ್ತದೆ. ಒತ್ತಡವೂ ಆರೋಗ್ಯವನ್ನು ದುರ್ಬಲಗೊಳಿಸುತ್ತೆ. ಆದ್ದರಿಂದ ಧ್ಯಾನ, ಉಸಿರಾಟದ ವ್ಯಾಯಾಮ, ನಡಿಗೆ ಮಾಡಿ ಆದಷ್ಟು ಒತ್ತಡರಹಿತವಾಗಿ ಬದುಕಲು ಪ್ರಯತ್ನಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
