Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಣ್ಣಿಗೆ ಅಲರ್ಜಿ ಆದರೆ ಏನು ಮಾಡಬೇಕು?

ಧೂಳು, ಪ್ರಾಣಿಗಳ ಕೂದಲು, ಹೊಗೆ ಮುಂತಾದುವು ಕಣ್ಣುಗಳಲ್ಲಿ ಸೇರಿಕೊಂಡು ಕಣ್ಣಿನಲ್ಲಿ ಉರಿ, ತುರಿಕೆ, ಊತ, ಕೆಂಪಗಾಗುವುದು ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಕಣ್ಣು ಮಂಜಾಗುವ ಸಮಸ್ಯೆ ಕೂಡ ಬರುತ್ತೆ.
ಈ ಕಣ್ಣಿನ ಅಲರ್ಜಿಯಿಂದ ತಪ್ಪಿಸಿಕೊಳ್ಳುವುದು ಹೇಗೆ?
1. ಕಣ್ಣುಗಳನ್ನು ಉಜ್ಜಬೇಡಿ: ಕಣ್ಣುಗಳನ್ನು ಉಜ್ಜುವುದರಿಂದ ಕಣ್ಣಿನ ಟಿಶ್ಯೂಗಳಿಗೆ ಹಾನಿಯುಂಟಾಗುತ್ತದೆ. ನಿಮ್ಮ ಕೈಯ್ಯಲ್ಲಿ ಕಾಣದ ಧೂಳಿದ್ದರೆ ಅದೂ ಕೂಡ ನಿಮ್ಮ ಕಣ್ಣಿನ ಒಳಹೊಕ್ಕುತ್ತದೆ.
2. ಕೈಗಳು ಶುದ್ಧವಾಗಿರಲಿ: ಆಗಿಂದಾಗ್ಗೆ ನಿಮ್ಮ ಕೈಗಳನ್ನು ಸೋಪ್ ಅಥವಾ ಹ್ಯಾಂಡ್ ವಾಶ್ ನಿಂದ ಸ್ವಚ್ಛಗೊಳಿಸುತ್ತಿರಿ. ನಿಮ್ಮ ಕೈಗಳು ಶುದ್ಧವಿದ್ದರೆ ನೀವು ಗೊತ್ತಿಲ್ಲದೆ ನಿಮ್ಮ ಕಣ್ಣುಗಳನ್ನು ಮುಟ್ಟಿಕೊಂಡರೂ ತೊಂದರೆಯಾಗುವುದಿಲ್ಲ.
3. ಬೆಡ್ ಶೀಟ್ ಮತ್ತು ದಿಂಬಿನ ಕವರ್ ಬದಲಿಸುತ್ತಿರಿ: ವಾರಕ್ಕೊಮ್ಮೆಯಾದರೂ ನೀವು ಮಲಗುವ ಹಾಸಿಗೆಯ ಬೆಡ್ ಶೀಟ್ ಮತ್ತು ದಿಂಬಿನ ಕವರ್ ಗಳನ್ನು ಬಿಸಿ ನೀರಿನಲ್ಲಿ ನೆನೆಸಿ ಒಗೆಯಿರಿ. ಬಿಸಿ ನೀರು ಧೂಳಿನಿಂದ ಬರುವ ಕೀಟಾಣುಗಳನ್ನು ನಿವಾರಿಸುತ್ತದೆ.
4. ಕಣ್ಣಿಗೆ ಕಾಸ್ಮೆಟಿಕ್ ಬೇಡ: ಕಣ್ಣಿನ ಶೃಂಗಾರಕ್ಕೆಂದು ಬಳಸುವ ಅನೇಕ ಕಾಸ್ಮೆಟಿಕ್ ಗಳು ಕಣ್ಣಿಗೆ ಅಲರ್ಜಿ ಉಂಟು ಮಾಡಬಹುದು ಅಥವಾ ನೀವು ಕಣ್ಣಿಗೆ ಕಾಸ್ಮೆಟಿಕ್ ಹಚ್ಚಿಕೊಂಡ ತಕ್ಷಣವೇ ಏನಾದರೂ ತುರಿಕೆ ಉಂಟು ಮಾಡಿದರೆ ಅದು ಅಲರ್ಜಿಯ ಲಕ್ಷಣವೆಂದು ದೂರವಿರಿಸಿದರೆ ಉತ್ತಮ.
5. ಕಾಸ್ಮೆಟಿಕ್ ಹಂಚಿಕೊಳ್ಳಬೇಡಿ: ನಿಮ್ಮ ಮೇಕಪ್ ವಸ್ತುಗಳನ್ನು ಇನ್ನೊಬ್ಬರಿಗೂ ನೀಡಬೇಡಿ, ನೀವೂ ಬೇರೆಯವರ ವಸ್ತುವನ್ನು ಬಳಸಬೇಡಿ. ಇದು ಸೋಂಕು ತಗುಲಬಹುದಾದ ಬ್ಯಾಕ್ಟೀರಿಯಾಗಳನ್ನು ಅತಿ ಬೇಗನೆ ರವಾನಿಸುತ್ತದೆ.
6. ತುಂಬಾ ಉರಿ ಉಂಟಾಗಿ, ಸಹಿಸಿಕೊಳ್ಳದ ನೋವುಂಟಾದರೆ ತಕ್ಷಣವೇ ನೇತ್ರ ತಜ್ಞರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಇಲ್ಲದಿದ್ದರೆ ಸಣ್ಣ ನಿರ್ಲಕ್ಷ್ಯ ದೊಡ್ಡ ತೊಂದರೆಯನ್ನು ತಂದೊಡ್ಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
