Latest Updates
-
ಫ್ಲಿಪ್ಕಾರ್ಟ್-ಅಮೆಜಾನ್ ಸೇಲ್: ದಂಪತಿಗಳ ಶಾಪಿಂಗ್ಗೆ 10 ಮನಿ ರೂಲ್ಸ್ಗಳು! -
ಡೆಂಗ್ಯೂ ಭೀತಿ: ಮಳೆಗಾಲದ ಮುನ್ನ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 20 ನಿಮಿಷದ ಈ ಕೆಲಸ ಮಾಡಿ -
ನಂದಿನಿ ಹಾಲಿನ ದರ ಏರಿಕೆ: ಲೀಟರ್ಗೆ ₹8 ಹೆಚ್ಚಳ, ನಿಮ್ಮ ತಿಂಗಳ ಬಜೆಟ್ ಮೇಲೆ ಎಂತಹ ಪರಿಣಾಮ? -
'ದೃಶ್ಯಂ' ಆಡಿಯೋ ಟ್ರೆಂಡ್: ನಿಮ್ಮ ರೀಲ್ಸ್ ವೈರಲ್ ಮಾಡಲು ಈ ಸಿಂಪಲ್ ಟಿಪ್ಸ್ ಮಿಸ್ ಮಾಡ್ಬೇಡಿ! -
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ!
ಮಳೆಗಾಲದಲ್ಲಿ ಮೈ ಮನ ಮರುಗದಿರಲಿ

ಮಳೆಗಾಲದಲ್ಲಿ ಅನುಸರಿಸಬೇಕಾದ ಆಹಾರ ನಿಯಮಗಳು:
1. ತಾಜಾ ಆಹಾರವನ್ನೇ ಸೇವಿಸಿ. ಹಣ್ಣು ಮತ್ತು ತರಕಾರಿಗಳನ್ನು ಬಿಸಿ ನೀರಿನಲ್ಲಿ ಶುದ್ಧವಾಗಿ ತೊಳೆದ ನಂತರವಷ್ಟೇ ಸೇವನೆ ಮಾಡಿ.
2. ಅತಿಯಾದ ಎಣ್ಣೆಯಿರುವ ಆಹಾರವನ್ನು ಸೇವಿಸಬೇಡಿ. ಹೊಟ್ಟೆಗೆ ಲಘುವಾಗಿ ಮಾತ್ರ ಆಹಾರವಿರಲಿ ಮತ್ತು ಧಾನ್ಯಗಳು ನಿಮ್ಮ ಆಹಾರದಲ್ಲಿ ಭಾಗಿಯಾಗಿರಲಿ.
3. ಕಹಿ ತರಕಾರಿಗಳಾದ ಬೇವು, ಹಾಗಲಕಾಯಿ, ಅರಿಶಿನ, ಪಡುವಲಕಾಯಿ, ಗೋರಿಕಾಯಿ, ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚು ಬೆಳೆಸಿದರೆ ರೋಗಗಳನ್ನು ತಡೆಗಟ್ಟುವ ಮತ್ತು ಅವುಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.
4. ಸಾಸಿವೆ, ಕಡಲೆಕಾಯಿ ಮತ್ತು ಎಳ್ಳೆಣ್ಣೆಯನ್ನು ಈ ಕಾಲದಲ್ಲಿ ಆದಷ್ಟು ತ್ಯಜಿಸಿದರೆ ಒಳಿತು.
5. ಅತಿಯಾಗಿಯೂ ತಿನ್ನಬೇಡಿ, ತಿನ್ನದೆಯೂ ಇರಬೇಡಿ. ಸಮತೋಲನವಾಗಿ ಆಹಾರ ಸೇವನೆ ನಿಮ್ಮದಿರಲಿ.
6. ಹೆಚ್ಚು ಕಾಫಿ ಮತ್ತು ಟೀ ಕುಡಿಯದೆ, ಟೀ ನಲ್ಲಿ ವಿಶೇಷವಾಗಿರುವ ಶುಂಠಿ ಮತ್ತು ಮಿಂಟ್ ಟೀ ಸೇವನೆ ಈ ಕಾಲಕ್ಕೆ ನಿಮ್ಮ ಆರೋಗ್ಯವನ್ನು ವೃದ್ದಿಸುತ್ತದೆ.
7. ಬೆಳ್ಳುಳ್ಳಿ, ಮೆಣಸು, ಇಂಗು, ಶುಂಠಿ, ಜೀರಿಗೆ, ಅರಿಶಿನ ಮತ್ತು ಕೊತ್ತಂಬರಿಯನ್ನು ಅಡುಗೆಗೆ ಹೆಚ್ಚು ಬಳಸಿ.
8. ಮಾಂಸಾಹಾರಿಗಳು ಸೂಪ್ ಗಳ ಸೇವನೆ ಮಾಡಿದರೆ ಉತ್ತಮ, ಹುರಿದ ಮಾಂಸ, ಮೀನು ಮಳೆಗಾಲದ ಆಹಾರವಾಗದಿರಲಿ.
9. ತೊಳೆದಿದ್ದರೂ ಕೂಡ ತರಕಾರಿಗಳಲ್ಲಿ ಕೀಟಾಣುಗಳು ಉಳಿದುಕೊಂಡಿರುವ ಸಾಧ್ಯತೆ ಹೆಚ್ಚಿರುವುದರಿಂದ ಬೇಯಿಸಿದ ಆಹಾರವನ್ನೇ ಸೇವಿಸಿ.
10. ಉಪ್ಪಿನಕಾಯಿ, ಹುಣಸೆ, ಚಟ್ನಿ ಇಂತಹವುಗಳ ಸೇವನೆ ಕಡಿಮೆ ಮಾಡಿ. ಇದು ದೇಹವನ್ನು ಭಾರವೆನಿಸುವಂತೆ ಮಾಡುತ್ತದೆ.
11. ಶೀತ ಮತ್ತು ಕೆಮ್ಮಿನ ವಿರುದ್ಧ ಹೋರಾಡಲು ಮೂಲಂಗಿ ರಸ ಸೇವಿನೆ ನಿಮ್ಮದಿರಲಿ.
12. ಮಳೆಗಾಲದಲ್ಲಿ ಬಿಸಿ ನೀರನ್ನು ಕುಡಿಯುವುದೇ ಒಳಿತು. ಹೊರಗೆ ಹೋದಾಗಲೂ ಬಿಸಿ ನೀರು ನಿಮ್ಮೊಂದಿಗಿರಲಿ.
ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮಳೆಗಾಲದ ಆನಂದವನ್ನು ಅನುಭವಿಸಲು ಸಾಧ್ಯ. ಆದ್ದರಿಂದ ಆರೋಗ್ಯ ಕೆಡಿಸಿಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ ರೋಗಗಳಿಂದ ದೂರವುಳಿದು ಮಳೆಗಾಲದ ಸಂತಸವನ್ನು ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
