For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯ ಹಿತ್ತಲಲ್ಲಿ ಹಿಪ್ಪಲಿಯಿದ್ದರೆ ಚೆನ್ನ!

By * ಮನಸ್ವಿನಿ, ನಾರಾವಿ
|
Long Pepper Hippali Health Benefits
ಸದಾ ಹಸಿರಾಗಿರುವ, ವೀಳ್ಯದೆಲೆ ರೀತಿಯ ಎಲೆಯುಳ್ಳ ಮೆಣಸಿನ ಬಳ್ಳಿಯ ಮಾದರಿಯ ಹಿಪ್ಪಲಿ ಮನೆಯಂಗಳದಲ್ಲಿ ಬೆಳಯಬಲ್ಲ ಸಸ್ಯ. ಸಣ್ಣಕುಂಡವೊಂದರಲ್ಲಿ ಸ್ವಲ್ಪ ನೆರಳುವ ತಾಣದಲ್ಲಿ ತೇವಾಂಶ ಕಾಯ್ದುಕೊಂಡ ವಾತಾವರಣ ಇದ್ದರೆ ಹಿಪ್ಪಲಿ ನಿಮ್ಮ ಮನೆ ಹಿತ್ತಲ ಮದ್ದಾಗಿ ಕಣ್ಣಿಗೆ ಹಸಿರು ದೇಹಕ್ಕೆ ಆರೋಗ್ಯ ತರುತ್ತದೆ.

ಸಾಮಾನ್ಯವಾಗಿ ಆಯುರ್ವೇದ ಔಷಧ ಬಳಸುವವರಿಗೆ ಹಿಪ್ಪಲಿ ಅಥವಾ ಪಿಪ್ಪಲಿ ಪರಿಚಯವಿರುತ್ತದೆ. ಪಿಪ್ಪಲಿ ರಸಾಯನ ಬಳಸದಿರುವವರು ವಿರಳ. ಆರೋಗ್ಯ ವರ್ಧನೆ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ರಸಾಯನಗಳು ಸಹಕಾರಿ. ದೇಹಾಲಸ್ಯ ಕಮ್ಮಿಮಾಡಿ, ಚುರುಕುತನ ಹೆಚ್ಚಿಸಿ, ದೀರ್ಘಾಯುಸ್ಸು ಪಡೆಯಲು ರಸಾಯನಗಳ ಬಳಕೆಯಾಗುತ್ತದೆ. ಹಿಪ್ಪಲಿ ಅಂಗಾಂಶಗಳಲ್ಲಿನ ಟಿಷ್ಯೂ ಇಂಜೈಮ್ಸ್ ಹೆಚ್ಚಿಸುತ್ತದೆ.

ಪ್ರಾಚೀನ ಕಾಲದಿಂದಲೂ ರಸಾಯನ ಚಿಕಿತ್ಸೆಯಲ್ಲಿ ಹಿಪ್ಪಲಿ ಬಳಕೆಯಾಗುತ್ತ ಬಂದಿದೆ. ಕಾಯಕಲ್ಪ ಚಿಕಿತ್ಸೆ, ವಾಟತಪಿಕ ಚಿಕಿತ್ಸೆ, ಪಂಚಕರ್ಮ ಮುಂತಾದ ಕ್ರಿಯೆಗಳಲ್ಲಿ ಹಿಪ್ಪಲಿ ಸೇರಿದಂತೆ ಹಲವಾರು ಔಷಧೀಯ ಸಸ್ಯಗಳ ಬಳಸಿ ತಯಾರಿಸಲ್ಪಟ್ಟ ರಸಾಯನಗಳ ಬಳಕೆಯಾಗುತ್ತದೆ.

ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಲ್ಲೆಡೆ ಕೇರಳ ಮೂಲದ ಪಂಚಕರ್ಮ ರಸಾಯನ ಚಿಕಿತ್ಸಾ ಕೇಂದ್ರಗಳನ್ನು ಕಾಣಬಹುದು. ಧರ್ಮಸ್ಥಳದ ಆಯುರ್ವೇದ ಕೇಂದ್ರದಲ್ಲಿ ಕುಟೀರಗಳಲ್ಲಿ ರೋಗಿಯನ್ನು ಉಳಿಯುವಂತೆ ಮಾಡಿ ಮಾನಸಿಕ, ದೈಹಿಕ ಸಮತೋಲನ ಸಾಧಿಸುವಂತೆ ಮಾಡುತ್ತಾರೆ. ಇದು ಅತ್ಯುತ್ತಮ ಕಾಯಕಲ್ಪ ಚಿಕಿತ್ಸೆ.

ವಿಷಯ ಹಿಪ್ಪಲಿಯ ಬಿಟ್ಟು ಎತ್ತಲೋ ಸಾಗಿದೆ ಎನಿಸಿದರೆ, ಕ್ಷಮಿಸಿ..ಹಿತ್ತಲಗಿಡ ಬಳ್ಳಿ ಮುರಿದು ಕ್ಷಣಾರ್ಧ ರೋಗ ಉಪಶಮನ ಮಾಡಿಕೊಳ್ಳಬಹುದಾದ ಅವಕಾಶವಿದ್ದರೂ ಬಹುಪಾಲು ಜನ ಅದೇ ಬಳ್ಳಿ ಬಳಸಿ ಚಿತ್ರ ವಿಚಿತ್ರ ಹೆಸರಿನಲ್ಲಿ ಮತ್ತೆ ನಮಗೆ ನೀಡುತ್ತಾರೆ. ವೈದ್ಯರು ಬದುಕಬೇಕು. ಔಷಧಾಲಯಗಳು ಬೆಳಗಬೇಕು ಏನು ಮಾಡಲಾಗುವುದಿಲ್ಲ.

ಶುಂಠಿ ಹಣೆಪಟ್ಟಿ ಹಾಕಿಕೊಳ್ಳುವ ಬದಲು ಇಬ್ರೂಫೆನ್ ಅಥವಾ ಪ್ಯಾರಸಿಟಿಮೊಲ್(ಹಲವು ದೇಶಗಳಲ್ಲಿ ನಿಷೇಧಿತ ಮಾತ್ರೆ) ತೆಗೆದುಕೊಳ್ಳುವುದು ಈಸಿ ಎನ್ನುವವರಿಗೆ ಏನು ಹೇಳಲಾರೆ.

ಹಿಪ್ಪಲಿಯ ಕೆಲಮುಖ್ಯಗುಣಗಳು:
* ದೀರ್ಘಾಯುಷ್ಯಕ್ಕೆ ಸಹಕಾರಿ. ಶರೀರವನ್ನು ಚೈತನ್ಯದಾಯಕವಾಗಿರಿಸಿ, ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕಲು ಹಿಪ್ಪಲಿ ಬಳಸಲಾಗುತ್ತದೆ.

* ಮಲಬದ್ಧತೆ, ಆಮಶಂಕೆ ಬೇಧಿ, ಸರಿಯಾದ ಪಚನ ಕ್ರಿಯೆಗೆ ಹಿಪ್ಪಲಿ ಬೇಕು, ರಾತ್ರಿ ವೇಳೆ ಒಳ್ಳೆ ಗಾಢನಿದ್ದೆ ಮಾಡಬಯಸಿದರೆ ಹಿಪ್ಪಲಿ ಬಳಸಿ.

* ಸಾಮಾನ್ಯ ಕಾಯಿಲೆಗಳಾದ ನೆಗಡಿ, ಕೆಮ್ಮು, ಗಂಟಲುಬೇನೆ, ಬಿಕ್ಕಳಿಕೆ ನಿವಾರಣೆಗೆ ಹಿಪ್ಪಲಿ ಸಹಕಾರಿ.

* ಸರಾಗವಾದ ರಕ್ತ ಪರಿಚಲನೆಗೆ ಸಹಕಾರಿಯಾಗಿದ್ದು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

* ಜ್ವರ, ಮೂಲವ್ಯಾಧಿ, ರಕ್ತಹೀನತೆ,ಅಪಸ್ಮಾರ ಮುಂತಾದ ಕಾಯಿಲೆಗಳ ಗುಣಪಡಿಸಲು ಹಿಪ್ಪಲಿ ರಸಾಯನ ಬಳಸಲಾಗುತ್ತದೆ.

ಸೂಚನೆ: ಬಹುಶಃ ಹಿಪ್ಪಲಿ ಬಗ್ಗೆ ಗೂಗಲ್ ನಲ್ಲಿ ಸರ್ಚ್ ಮಾಡಿದವರು. ಹಿಪ್ಪಲಿ(Long Pepper) ಎಂದು ಸರ್ಚ್ ಕೀ ವರ್ಡ್ ಕೊಟ್ಟರೆ ಸಿಗುವುದು. ಪಿಪ್ಪಲಿ(ಸಂಸ್ಕೃತ) ಪದ ಹೆಚ್ಚು ಬಳಕೆಯಲ್ಲಿದೆ. ಹಿಪ್ಪಲಿ ಅಥವಾ ತಿಪ್ಪಲಿ ಬಳ್ಳಿ ಎಂದು ಕರೆಯಲ್ಪಡುವ ಮೆಣಸಿನ ಮಾದರಿ ಸಸ್ಯ. ಆಯುರ್ವೇದದಲ್ಲಿ ಮಹತ್ವದ ಔಷಧಿಯಾಗಿ ಬಳಕೆಯಲ್ಲಿದೆ.

Story first published: Wednesday, June 30, 2010, 10:09 [IST]
X
Desktop Bottom Promotion