Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೋವಿಡ್ 19ಗೆ ಔಷಧ: ಭಾರತೀಯ ಮೂಲದ 14 ಬಾಲಕಿಯ ಸಾಧನೆ
ಮಹಾಮಾರಿ ಕೊರೊನಾಗೆ ಸೂಕ್ತ ಔಷಧಿಗಾಗಿ ದೇಶ-ವಿದೇಶದ ಅನೇಕ ಪ್ರಸಿದ್ಧ ಔಷಧ ಕಂಪನಿಗಳು ಹಗಲಿರುಳು ಶ್ರಮಿಸುತ್ತಿವೆ. ಕೊರೊನಾ ಅಟ್ಟಹಾಸ ಪ್ರಾರಂಭವಾಗಿ 11 ತಿಂಗಳು ಕಳೆದರೂ ಇದುವರೆಗೂ ಸೂಕ್ತ ಔಷಧ ಮಾರುಕಟ್ಟೆಗೆ ಬಂದಿಲ್ಲ.
ಈ ನಡುವೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ 14 ವರ್ಷದ ಬಾಲಕಿ ಅನಿಕಾ ಚೆಬ್ರೊಲು ಅಮೋಘ ಸಾಧನೆ ಮಾಡುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾಳೆ.

14ರ ಬಾಕಿಯ ಸಾಧನೆ
ಕೋವಿಡ್ -19 ಗುಣಪಡಿಸಲು ನಡೆಸಿದ ಸಂಶೋಧನೆಯಲ್ಲಿ ಕೋವಿಡ್-19ಗೆ ಸಂಭಾವ್ಯ ಚಿಕಿತ್ಸೆ ಕಂಡುಹಿಡಿಯುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಈಕೆಯ ಈ ಸಾಧನೆಗಾಗಿ $25,000 ಪ್ರಶಸ್ತಿಗಳಿಸಿದ್ದಾಳೆ.
ಪ್ರೊಟೀನ್ ಸ್ಪೈಕ್ಸ್ ಸಂಶೋಧನೆ ಮಾಡಿ ಕೋವಿಡ್ 19ಗೆ ಸಂಭಾವ್ಯ ಆ್ಯಂಟಿ ವೈರಲ್ ಡ್ರಗ್ ಕಂಡು ಹಿಡಿದಿದ್ದಾರೆ. ಅನಿಕಾ ಸಿಲಿಕೋ ಮೆಥೆಡೋಲಾಜಿ ಬಳಸಿ ಅನಿಕಾ ಈ ಔಷಧ ಕಂಡು ಹಿಡಿದಿದ್ದಾರೆ.

ಕೊರೊನಾವೈರಸ್‌ಗೆ ಸಂಭಾವ್ಯ ಚಿಕಿತ್ಸೆ ಕಂಡು ಹಿಡಿದ ಅನಿಕಾ
ಎಂ ಚಾಲೆಂಜ್ ವೆಬ್‌ಸೈಟ್‌ನ ಪ್ರಕಾರ, ಕೊರೋನವೈರಸ್ ಸಾಂಕ್ರಾಮಿಕಕ್ಕೆ ಚಿಕಿತ್ಸೆ ಕಂಡುಹಿಡಿಯುವ ಪ್ರಯತ್ನದ ಭಾಗವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಅನಿಕಾ ಬಹುಮಾನ ಗಳಿಸಿದ್ದಾರೆ.
ಸಿಎನ್‌ಎನ್ ಜೊತೆ ಮಾತನಾಡಿದ ಅನಿಕಾ ತಾನು ಕಂಡು ಹಿಡಿದಿರುವ ಔಷಧ ಸಾರ್ಸ್ - ಕೋವಿಡ್-2 ವೈರಸ್ ಗೆ ಸಂಬಂಧಿಸಿದ್ದಾಗಿದ್ದು, ಇದು ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಮ್ಮೆಲ್ಲರ ಭರವಸೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಔಷಧ ಪತ್ತೆಗೆ ಪ್ರಯತ್ನ
ಅನಿಕಾ ಫ್ಲೂಗೆ ಸಂಬಂಧಿಸಿದ ಸಂಶೋಧನೆ ನಡೆಸುತ್ತಿದ್ದರು. ಆಗ ಕೋವಿಡ್ 19 ಸಾಂಕ್ರಾಮಿಕ ರೋಗ ಶುರುವಾಯಿತು, ಅನಿಕಾ ಈ ರೋಗಕ್ಕೆ ಔಷಧ ಕಂಡು ಹಿಡಿಯುವ ಪ್ರಯತ್ನ ನಡೆಸಿದರು. ಸಂಭಾವ್ಯ ಔಷಧ ಕಂಡು ಹಿಡಿಯುವ ಮೂಲಕ ಯಂಗ್ ಸೈಟಿಂಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ವಿಜ್ಞಾನದಲ್ಲಿ ನನಗೆ ಆಸಕ್ತಿ ಮೂಡಲು ತಾತ ಕಾರಣ, ಅವರು ಕೆಮಿಸ್ಟ್ರಿ ಪ್ರೊಫೆಸರ್ ಆಗಿದ್ದರು ಎಂದು ಅನಿಕಾ ಹೇಳಿದ್ದಾರೆ.

ಕೊರೊನಾವೈರಸ್ ಅಟ್ಟಹಾಸ
2019 ಡಿಸೆಂಬರ್‌ನಲ್ಲಿ ಚೀನಾದಲ್ಲಿ ಕೊರೊನಾವೈರಸ್ ಮೊದಲಿಗೆ ಕಂಡು ಬಂತು, ನಂತರ ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿ, WHO ಪ್ರಕಾರ ಇದುವರೆಗೆ 1.1 ಮಿಲಿಯನ್ ಜನರು ಈ ವೈರಸ್‌ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.



Click it and Unblock the Notifications
