Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ರಾಜ್ಯದ ಹಲವು ಕಡೆ ಹೆಚ್ಚಾಗಿದೆ ಜ್ವರ, ಶೀತದ ಸಮಸ್ಯೆ: ಬೇಗನೆ ಚೇತರಿಸಿಕೊಳ್ಳಲು ಈ ಮನೆಮದ್ದು ಬೆಸ್ಟ್
ಈಗ ಕರ್ನಾಟಕದ ಹಲವು ಕಡೆ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ, ಕ್ಲಿನಿಕ್‌ಗಳು ರೋಗಿಗಳಿಂದ ತುಂಬಿದೆ, ಕೆಮ್ಮು, ಜ್ವರ, ಶೀತ ಅಂತ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸೊಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತಿದೆ.
ಮನೆಯಲ್ಲಿ ಒಬ್ಬರಿಗೆ ಬಂದರೆ ಸಾಕು ಎಲ್ಲರಿಗೂ ಜ್ವರ ಹರಡುತ್ತದೆ, ಹೀಗಾಗಿ ಜ್ವರ ಹರಡದಂತೆ ಮುನ್ನೆಚ್ಚರಿಕೆವಹಿಸಬೇಕು. ಹವಾಮಾನದಲ್ಲಿನ ವ್ಯತ್ಯಾಸದಿಂದಾಗಿ ವೈರಲ್ ಸೋಂಕು ಕಂಡು ಬಂದಿರುವುದಾಗಿ ವೈದ್ಯರು ಹೇಳುತ್ತಿದ್ದಾರೆ.
ಜ್ವರ ಬಂದರೆ ಬೇಗನೆ ಚೇತರಿಸಿಕೊಳ್ಳಲು ಔಷಧಿ ಜೊತೆಗೆ ಆರೈಕೆ ಕೂಡ ಮುಖ್ಯವಾಗಿರುತ್ತದೆ. ಈ ಮನೆಮದ್ದು ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ:

ಶುಂಠಿ ಟೀ:
ಶುಂಠಿ ಟೀ ಅಥವಾ ಶುಂಠಿ ಕಷಾಯ ಮಾಡಿ ಕುಡಿದರೆ ಗಂಟಲು ಕೆರೆತ, ಶೀತ ಈ ಬಗೆಯ ಸಮಸ್ಯೆ ಕಡಿಮೆಯಾಗುವುದು, ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
ತುಳಸಿ-ಶುಂಠಿ ಕಷಾಯ
ತುಳಸಿ, ಶುಂಠಿ, ಕರಿಮೆಣಸು, ಎರಡು ಎಸಳು ಬೆಳ್ಳುಳ್ಳಿ, ಒಂದು ಚಿಕ್ಕ ತುಂಡು ಅಮೃತಬಳ್ಳಿ , ಸ್ವಲ್ಪ ಕರಿಮೆಣಸು ಹಾಕಿ 2 ಲೋಟ ನೀರು ಅರ್ಧ ಲೋಟಕ್ಕೆ ಬರುವಷ್ಟು ಹೊತ್ತು ಕುದಿಸಿ, ಬಳಿಕ ಆ ನೀರನ್ನು ಒಂದು ಲೋಟಕ್ಕೆ ಸೋಸಿ, ಅದರಲ್ಲಿ ಸ್ವಲ್ಪ ಜೇನು ಹಾಕಿ ಕುಡಿದರೆ ಒಳ್ಳೆಯದು. ಈ ರೀತಿ ದಿನದಲ್ಲಿ ಎರಡು ಬಾರಿ ಕುಡಿಯಬಹುದು.
ಸೂಪು: ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಸೂಪು ಸಹಕಾರಿ. ನಾನ್ ವೆಜ್ ತಿನ್ನುವವರಾದರೆ ಚಿಕನ್ ಸೂಪ್ ಮಾಡಿ ತಿನ್ನಬಹುದು, ಅದೇ ನೀವು ಸಸ್ಯಾಹಾರಿಯಾದರೆ ತರಕಾರಿ ಸೂಪ್ ಮಾಡಿ ಸವಿಯಿರಿ. ಸೂಪ್ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಸಹಕಾರಿ. ಸೂಪ್ ತಯಾರಿಸಿ ಸ್ವಲ್ಪ ನಿಂಬೆರಸ ಹಾಕಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
ಸೂಪ್ ತಯಾರಿಸುವುದು ಹೇಗೆ?
ಚಿಕನ್: ಬ್ರೆಸ್ಟ್ ಪೀಸ್
ಸ್ವಲ್ಪ ಕಾಳು ಮೆಣಸು
2-3 ಎಸಳು ಬೆಳ್ಳುಳ್ಳು
ಕಲ್ಲುಪ್ಪು ಸ್ವಲ್ಪ
ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
ಬೀನ್ಸ್
ಕ್ಯಾರೆಟ್
(ಇತರ ತರಕಾರಿ ಬೇಕಿದ್ದರೆ ಸೇರಿಸಬಹುದು)
ಇವುಗಳನ್ನು ಹಾಕಿ ಬೇಯಿಸಿ, ನಂತರ 1 ಚಮಚ ಜೋಳದ ಹಿಟ್ಟು ಸೇರಿಸಿ ಮಿಕ್ಸ್ ಮಾಡಿ.
ನಂತರ ಕೊತ್ತಂಬರಿ ಸೊಪ್ಪು ಹಾಕಿ ಒಂದು ಚಮಚ ನಿಂಬೆರಸ ಹಾಕಿ ಸೂಪ್ ಕುಡಿಯಿರಿ.
ತರಕಾರಿ ಸೂಪ್
ಜೋಳ, ಬ್ರೊಕೋಲಿ, ಬೀನ್ಸ್, ಕ್ಯಾರೆಟ್, ಬೆಳ್ಳುಳ್ಳಿ , ಶುಂಠಿ, ಕಾಳು ಮೆಣಸು, ಟೊಮೆಟೊ ಹಾಕಿ 2 ಕಪ್ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಬೇಯಿಸಿ.
ಬೇಯಿಸುವಾಗ ಜೋಳದ ಹಿಟ್ಟು ಸೇರಿಸಿ ಬೇಯಿಸಿ
ನಂತರ ಸ್ವಲ್ಪ ನಿಂಬೆರಸ ಸೇರಿಸಿ ಸವಿಯಿರಿ.
ಬ್ರೊಬಯೋಟಿಕ್ ಆಹಾರ ಸೇವಿಸಿ
ಬ್ರೊಬಯೋಟಿಕ್ ಆಹಾರ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದು. ಮೊಸರು, ಯೋಗರ್ಟ್ ಆಹಾರ ಸೇವಿಸಿ.
ಗಂಟಲು ನೋವಿದ್ದರೆ
ಗಂಟಲು ನೋವಿದ್ದರೆ ಬಿಸಿ ನೀರಿಗೆ ಸ್ವಲ್ಪ ಉಪ್ಪು ಹಾಕಿ ಬಾಯಿ ಮುಕ್ಕಳಿಸಿ, ಇದರಿಂದ ಗಂಟಲು ನೋವು ಕಡಿಮೆಯಾಗುವುದು.
ಸಾಕಷ್ಟು ವಿಶ್ರಾಂತಿ ತೆಗೆಯಿರಿ
ಜ್ವರದಿಂದ ಚೇತರಿಸಿಕೊಳ್ಳಲು ಸಾಕಷ್ಟು ವಿಶ್ರಾಂತಿ ಪಡೆಯಿರಿ. ಸಾಕಷ್ಟು ನೀರು ಕುಡಿಯಬೇಕು, ಮಲಗಿ ನಿದ್ರಿಸಿ. ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಬೇಗನೆ
ಚೇತರಿಸಿಕೊಳ್ಳಲು ಸಾಧ್ಯವಾಗುವುದು.
ಜ್ವರ ಬಂದಾಗ ಮನೆಯಲ್ಲಿ ಹಾಗೂ ಹೊರಗಡೆ ತಿರುಗಾಡುವಾಗ ಮಾಸ್ಕ್ ಧರಿಸಿ. ಇದರಿಂದ ಮತ್ತೊಬ್ಬರಿಗೆ ರೋಗ ಹರಡುವುದನ್ನು ತಡೆಗಟ್ಟಬಹುದು. ಅಲ್ಲದೆ ಈ ಮನೆಮದ್ದು ಮಾಡಿ ಆಸ್ಪತ್ರೆಗೆ ಹೋಗದೇ ಇರಬೇಡಿ, ಹಲವು ಕಡೆ ಡೆಂಗ್ಯೂ ಕೂಡ ಇದೆ ಹಾಗಾಗಿ ಜ್ವರವನ್ನು ನಿರ್ಲಕ್ಷ್ಯ ಮಾಡಬೇಡಿ. ವೈದ್ಯರು ಸೂಚಿಸಿದ ಔಷಧ ತೆಗೆದುಕೊಳ್ಳಿ, ನಂತರ ಈ ಮನೆಮದ್ದು ಮಾಡಿ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಬೇಗನೆ ಚೇತರಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
