Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜಿಮ್‌ಗೆ ಹೋಗಲಿಲ್ಲ.. ಆಹಾರ ಬಿಡಲಿಲ್ಲ.. 30 ಕೆಜಿ ತೂಕ ಇಳಿಸಿಕೊಂಡ ಮಹಿಳೆ! ಈಕೆ ಮಾಡಿದ್ದೇನು?
ಜಿಮ್‌ಗೆ ಹೋಗಲಿಲ್ಲ.. ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸಲಿಲ್ಲ.. ಬರೋಬ್ಬರಿ 30 ಕೆಜಿ ತೂಕ ಇಳಿಸಿಕೊಂಡ (weight loss) ಮಹಿಳೆ. ಇದು ಊಹಿಸಲೂ ಅಸಾಧ್ಯವಾದ ಸಾಧನೆ. ಹೌದು, ಇತ್ತೀಚಿನ ದಿನಗಳಲ್ಲಿ ಬೊಜ್ಜು ಅನೇಕರನ್ನು ಕಾಡುತ್ತಿರುವ ಸಮಸ್ಯೆ. ಇಂದಿನ ಪೀಳಿಗೆ ಅಧಿಕ ತೂಕದಿಂದ ಬಳಲುತ್ತಿದ್ದು, ಹೊಟ್ಟೆಯನ್ನು ಕರಗಿಸಲು ವಿವಿಧ ಪ್ರಯತ್ನ ಮಾಡುತ್ತಿದ್ದಾರೆ. ಜಿಮ್‌ಗೆ ಹೋಗುವುದು, ಕಟ್ಟುನಿಟ್ಟಾದ ಆಹಾರ ಸೇವಿಸುವುದು ಸೇರಿದಂತೆ ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಅಂತವರಿಗೆ ಈ ಮಹಿಳೆ ಮಾದರಿಯೇ ಸರಿ. ಜೀವನಶೈಲಿಯಲ್ಲಿ (lifestyle) ಸಣ್ಣ ಬದಲಾವಣೆಯಿಂದ ಪವಾಡ ಮಾಡಿದ್ದಾರೆ.
ನೈಸರ್ಗಿಕ ವಿಧಾನಗಳ ಮೂಲಕ ಕೇವಲ 8 ತಿಂಗಳಲ್ಲಿ 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಈ ಮಹಿಳೆ. ಅವರು ಬೇರೆ ಯಾರು ಅಲ್ಲ, ಇವರೇ ನೋಡಿ. ಹೆಸರು ಉದಿತಾ ಅಗರ್ವಾಲ್ (Udita Agarwal). ಭಾರೀ ವ್ಯಾಯಾಮ ಮತ್ತು ನಿಮ್ಮ ಫೇವರಿಟ್ ಆಹಾರ ಸಂಪೂರ್ಣವಾಗಿ ತ್ಯಜಿಸುವುದು ತೂಕ ಇಳಿಕೆಗೆ ಇರುವ ಏಕೈಕ ಮಾರ್ಗ ಅಲ್ಲ. ಜಿಮ್‌ಗೆ ಹೋಗದೆ ಅಥವಾ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸದೆ, ಇವರು ತೂಕ ಇಳಿಸಿಕೊಂಡಿದ್ದಾರೆ. ಉದಿತಾ ಅಗರ್ವಾಲ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ತಮ್ಮ ಫಿಟ್‌ನೆಸ್ ಯಶಸ್ಸಿಗೆ ಕಾರಣವಾದ ಕೆಲವು ಪ್ರಮುಖ ಅಭ್ಯಾಸಗಳನ್ನು ಹಂಚಿಕೊಂಡಿದ್ದಾರೆ. ಇವುಗಳನ್ನು ತಿಳಿಯಲು ಮುಂದೆ ಓದಿ.

ಈ ಅಭ್ಯಾಸಗಳೇ ಉದಿತಾ ಅಗರ್ವಾಲ್ ತೂಕ ಇಳಿಕೆ ಆಯುಧ!
ಮನೆಯಲ್ಲಿ ತಯಾರಿಸಿದ ಡಿಟಾಕ್ಸ್ ಮ್ಯಾಜಿಕ್
ಉದಿತಾ ಅಗರ್ವಾಲ್ ಮನೆಯಲ್ಲಿ ತಯಾರಿಸಿದ ಡಿಟಾಕ್ಸ್ ಪಾನೀಯದೊಂದಿಗೆ ತನ್ನ ದಿನವನ್ನು ಪ್ರಾರಂಭಿಸುತ್ತಾರೆ. ಜೀರಿಗೆ, ಕೊತ್ತಂಬರಿ, ಸೋಂಪು ಮತ್ತು ಮೆಂತ್ಯ ಇತ್ಯಾದಿ ಮಸಾಲೆಗಳನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಈ ಪಾನೀಯವು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಇದು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಒಂದು ಸಣ್ಣ ತಪ್ಪಿನ ಬಗ್ಗೆ ಚಿಂತೆ ಬೇಡ
ನಾವು ಆಹಾರ ಕ್ರಮದಲ್ಲಿ ಮಾರ್ಗ ತಪ್ಪುವುದು ಸಹಜ. ಆದರೆ, ಉದಿತಾ ಅಗರ್ವಾಲ್ ಅವರು ಒಂದು ಸಣ್ಣ ತಪ್ಪು ಮಾಡಿದ್ದಾರೆ. ಆ ದಿನ ಅನಾರೋಗ್ಯಕರ ಆಹಾರವನ್ನು ಸೇವಿಸಬಾರದು ಎಂದು ಹೇಳಿದ್ದಾರೆ. ಉದಿತಾ ಅವರು ತಪ್ಪು ಮಾಡಿದರೂ ಸಹ, ತಕ್ಷಣವೇ ಚೇತರಿಸಿಕೊಳ್ಳುತ್ತಿದ್ದರು. ಮುಂದಿನ ಊಟದಿಂದ ತಮ್ಮ ಯೋಜನೆಗೆ ಬದ್ಧರಾಗುತ್ತಿದ್ದರು. ಈ ಮಾನಸಿಕ ದೃಢತೆಯೇ ಅವರನ್ನು ಸಾಧನೆಯತ್ತ ಕರೆದುಕೊಂದು ಹೋಗಿದೆ.
ನಿತ್ಯ ಧೈರ್ಯದಿಂದಲೇ ತೂಕ ಪರಿಶೀಲಿಸಿ
ಸಾಕಷ್ಟು ಜನರಿಗೆ ಈ ವಿಷಯದಲ್ಲಿ ಭಯ. ಆದರೆ, ಉದಿತಾ ಅಗರ್ವಾಲ್ ಅವರಿಗೆ ಇದೇ ಸಕಾರಾತ್ಮಕ ವಿಷಯ. ಸಾಂದರ್ಭಿಕವಾಗಿ ತೂಕ ಸ್ವಲ್ಪ ಹೆಚ್ಚಾದರೂ, ಅವರು ಉತ್ಸಾಹ ಕಳೆದುಕೊಳ್ಳಲಿಲ್ಲ. ಬದಲಿಗೆ ತಮ್ಮ ಪ್ರಯತ್ನಗಳಲ್ಲಿ ವಿಶ್ವಾಸದಿಂದ ತಮ್ಮ ದಿನಚರಿಯನ್ನು ಮುಂದುವರಿಸಿದರು. ಇದು ತನ್ನ ಪ್ರಗತಿಯನ್ನು ನಿರ್ಣಯಿಸಲು ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಲು ಸಹಾಯ ಮಾಡಿತು ಎಂದು ಉದಿತಾ ಹೇಳಿದ್ದಾರೆ.
ಮನೆಯ ಊಟವೇ ಉದಿತಾಗೆ ವರದಾನ
ಉದಿತಾ ಅಗರ್ವಾಲ್ ಅವರಿಗೆ ಮನೆಯ ಊಟವೇ ವರದಾನವಾಗಿದೆ. ಹೊರಗೆ ಹೋದಾಗ ಅನಾರೋಗ್ಯಕರ ಆಹಾರ ಪದ್ಧತಿ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ಉದಿತಾ ಅಗರ್ವಾಲ್ ಇದನ್ನು ನಿವಾರಿಸಲು ಸುಲಭವಾದ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಕೆಲಸಕ್ಕಾಗಿ ಹೊರಗಡೆ ಹೋದಾಗ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹಾಜರಾಗಿರಲಿ, ಮನೆಯಲ್ಲಿ ತಯಾರಿಸಿದ ಊಟವನ್ನು ಡಬ್ಬಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಇದು ಹೊರಗಿನ ಆಹಾರ ಅವಲಂಬಿಸುವ ಅಗತ್ಯವನ್ನು ನಿವಾರಿಸಿದೆ. ಆರೋಗ್ಯಕರ ಆಹಾರವನ್ನು ಸೇವಿಸುವ ತೃಪ್ತಿ ನೀಡುತ್ತದೆ.
ದೇಹಕ್ಕೆ ಚಿಯಾ ಬೀಜದ ನೀರು ಬಹಳ ಮುಖ್ಯ. ಉದಿತಾ ಅವರು ನಿತ್ಯ 3 ರಿಂದ 4 ಲೀಟರ್ ನೀರು ಕುಡಿಯುತ್ತಿದ್ದರು. ಜೊತೆಗೆ ಚಿಯಾ ಬೀಜಗಳನ್ನು ಅರ್ಧ ಲೀಟರ್ ನೀರಿನಲ್ಲಿ ನೆನೆಸಿ ದಿನವಿಡೀ ತಿನ್ನುತ್ತಿದ್ದರು. ಚಿಯಾ ಬೀಜಗಳು ಹೆಚ್ಚಿನ ಪ್ರಮಾಣದ ಫೈಬರ್ ಅಂಶ ಹೊಂದಿರುತ್ತವೆ. ಇದು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ದೇಹಕ್ಕೆ ಹೆಚ್ಚುವರಿ ಪೋಷಕಾಂಶಗಳನ್ನು ಒದಗಿಸುತ್ತದೆ.
ಈ ಅಭ್ಯಾಸ ಸಂಪೂರ್ಣವಾಗಿ ಬದಲಾವಣೆ
ಬಹುತೇಕರು ಟೀ ಅಥವಾ ಕಾಫಿಯೊಂದಿಗೆ ಕರಿದ ಆಹಾರಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಉದಿತಾ ಅವರು ಈ ಅಭ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸಿದರು. ಜೊತೆಗೆ ಮೈದಾಗೆ ವಿದಾಯ ಹೇಳಿದ್ದಾರೆ. ಉದಿತಾ ತನ್ನ ಆಹಾರದಲ್ಲಿ ಮೈದಾಗೆ ಸಂಪೂರ್ಣವಾಗಿ ವಿದಾಯ ಹೇಳಿದ್ದಾರೆ. ಆದಾಗ್ಯೂ, ಸಕ್ಕರೆ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರಲಿಲ್ಲ. ಮಿತವಾಗಿ ತೆಗೆದುಕೊಳ್ಳುತ್ತಿದ್ದರು. ಇದು ಸಂಪೂರ್ಣ ನಿಷೇಧಕ್ಕಿಂತ ನಿಯಂತ್ರಣ ಉತ್ತಮ ಎಂದು ಉದಿತಾ ಅಗರ್ವಾಲ್ ಅವರು ತಮ್ಮ ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











