Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಬೇಸಿಗೆಯಲ್ಲೂ ಮಧುಮೇಹ ನಿಯಂತ್ರಣದಲ್ಲಿರಬೇಕಾದರೆ ಈ ಟಿಪ್ಸ್ ಅನುಸರಿಸಿ..!
ಮಧುಮೇಹ ಒಂದು ರೀತಿಯ ಕಾಯಿಲೆ ಆಗಿದ್ದು ಇದನ್ನು ನಿಯಂತ್ರಣದಲ್ಲಿಡಲು ಸರಿಯಾದ ಡಯೇಟ್ ಹಾಗೂ ವ್ಯಾಯಾಮ ಮಾಡುವುದು ತುಂಬಾನೇ ಮುಖ್ಯ.
ಮಧುಮೇಹ ಹೊಂದಿರುವ ವ್ಯಕ್ತಿಗಳು ರಕ್ತದಲ್ಲಿ ಸಕ್ಕರೆ ಅಂಶವನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಇದಕ್ಕಾಗಿ ಉತ್ತಮ ಆರೋಗ್ಯ ಕ್ರಮವನ್ನು ಕಾಪಾಡಿಕೊಳ್ಳಲೇಬೇಕು. ನಿಮಗೆಲ್ಲಾ ಗೊತ್ತಿರುವ ಹಾಗೆ ಬೇಸಿಗೆ ಕಾಲದಲ್ಲಿ ನಮ್ಮ ಜೀವನ ಶೈಲಿ ತುಂಬಾನೇ ಬದಲಾಗುತ್ತದೆ. ಕಾಡುವ ವಿಪರೀತ ಸೆಕೆಗೆ ತಕ್ಕ ಹಾಗೆ ನಾವು ಸೇವಿಸುವ ಆಹಾರ ಕ್ರಮದಲ್ಲೂ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ.

ಆಹಾರ ಶೈಲಿ ಬದಲಾದಂತೆ ದೇಹದಲ್ಲಿ ಕೆಲವೊಂದು ಬದಲಾವಣೆಗಳು ಖಂಡಿತ ಆಗುತ್ತದೆ. ಹಾಗಾದ್ರೆ ಬೇಸಿಗೆಯಲ್ಲಿ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಡುವುದು ಹೇಗೆ? ಯಾವ ರೀತಿ ಜೀವನಶೈಲಿಯನ್ನು ಅಳವಡಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ ಅನ್ನೋದನ್ನ ಹೇಳ್ತೀವಿ.
ಬೇಸಿಗೆ ಕಾಲದಲ್ಲಿ ಡಯಾಬಿಟಿಸ್ ನಿಯಂತ್ರಣದಲ್ಲಿಡೋದು ಹೇಗೆ?
ಬೇಸಿಗೆ ಕಾಲದಲ್ಲಿ ಟ್ರಿಪ್ ಪ್ಲಾನ್ ಮಾಡಿದ್ರೆ ಅದ್ರಲ್ಲೂ ಬೀಚ್‌ಗೆ ಹೋಗ್ಬೇಕು ಅಂದುಕೊಂಡ್ರೆ ಮಧುಮೇಹ ಇರುವವರಿಗೆ ತುಂಬಾನೇ ಕಷ್ಟ. ಯಾಕಂದ್ರೆ ಬಿಸಿಲಿನ ತಾಪಕ್ಕೆ ನಮಗೆ ಜ್ಯೂಸ್, ಐಸ್‌ಕ್ರೀಮ್ ತಿನ್ನಬೇಕು ಅನ್ನಿಸೋದು ಸಹಜ. ಇಂತಹ ಸಮಯದಲ್ಲಿ ನಮ್ಮ ಜೊತೆ ಇರುವವರು ತಿನ್ನೋದಿಕ್ಕೆ ಶುರು ಮಾಡಿದ್ರೆ ನಮ್ಮ ಬಾಯಲ್ಲಿ ನೀರೂರೋದಕ್ಕೆ ಶುರುವಾಗುತ್ತೆ. ಅಪ್ಪಿ-ತಪ್ಪಿ ನೀವೇನಾದ್ರು ತಪ್ಪು ಪಾನೀಯ, ಐಸ್‌ಕ್ರೀಮ್ ಅಂತೆಲ್ಲಾ ಸೇವಿಸಿದ್ರೆ ಮುಂದೆ ಮಹಾ ಅಪಾಯವನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಬೇಸಿಗೆ ಕಾಲದಲ್ಲೂ ಸುಗರ್ ಲೆವಲ್ ನಿಯಂತ್ರಣದಲ್ಲಿಡೋದು ಹೇಗೆ ಅನ್ನೋದನ್ನ ಹೇಳ್ತೀವಿ.

1. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ
ಬೇಸಿಗೆ ಕಾಲದಲ್ಲಿ ಸಾಧ್ಯವಾದಷ್ಟು ನೀರು ಕುಡಿಯಿರಿ. ಇದರ ಜೊತೆಗೆ ಆಲ್ಕೋಹಾಲ್ ಅಂಶ ಹೊಂದಿರದ ಪಾನೀಯ, ಕೆಫಿನ್ ಹೊಂದಿರುವ ಪಾನೀಯಗಳನ್ನು ಕುಡಿಯಿರಿ. ಇದು ಬೇಸಿಗೆಯಲ್ಲಿ ಬಾಯಾರಿಕೆ, ಹಸಿವು, ನಿರ್ಜಲೀಕರಣವನ್ನು ತಪ್ಪಿಸಲು ಮತ್ತು ಬೇಸಿಗೆಯಲ್ಲಿ ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹಾಗಂತ ಎಲ್ಲವನ್ನು ಒಂದೇ ಬಾರಿಗೆ ಇಡೀ ದಿನ ಕುಡಿಯುತ್ತಿರಬೇಡಿ. ಇದು ಅಪಾಯ.

2. ಸಕ್ಕರೆ ಅಂಶ ಹೊಂದಿರುವ ಆಹಾರ ಪದಾರ್ಥಗಳನ್ನು ಆದಷ್ಟು ನಿರಾಕರಿಸಿ
ಬೇಸಿಗೆಯಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಅನಿವಾರ್ಯವಲ್ಲ ಎಂದು ಅನೇಕರು ಅಂದುಕೊಂಡಿರ್ತಾರೆ. ಆದರೆ ಆ ಕಲ್ಪನೆ ತಪ್ಪು. ಮಧುವೇಹವು ದೀರ್ಘಕಾಲಿಕ ಕಾಯಿಲೆಯಾಗಿದ್ದು ಬೇಸಿಗೆಯಲ್ಲಿ ಅದನ್ನು ನಿರ್ವಹಿಸುವುದು ಕಷ್ಟ. ಸಕ್ಕರೆ ಅಂಶ ಹೊಂದಿರುವ ಆಹಾರ, ಪಾನೀಯಗಳನ್ನು ಸೇವಿಸುವುದನ್ನು ಕಡಿಮೆ ಮಾಡುವುದರ ಮುಖಾಂತರ ಮಧುಮೇಹವನ್ನು ನಿಯಂತ್ರಣದಲ್ಲಿ ಇಡಬಹುದು.

3. ಇನ್ಸುಲಿನ್ ಕಿಟ್ ಯಾವಾಗಲ್ಲೂ ನಿಮ್ಮ ಜೊತೆಗೆ ಇರಲಿ
ತುರ್ತುಪರಿಸ್ಥಿತಿಗಾಗಿ ಇನ್ಸುಲಿನ್ ಕಿಟ್ ಯಾವಾಗಲೂ ನಿಮ್ಮ ಜೊತೆಗೆ ಇರಲಿ. ನಿರ್ದಿಷ್ಟ ಪ್ರಮಾಣದ ಆಹಾರ ಹಾಗೂ ಪಾನೀಯ ಸೇವಿಸುವುದರ ಮೂಲಕ ಇನ್ಸುಲಿನ್ ಅನ್ನು ನಿಯಂತ್ರಿಸಬಹುದು ಅನ್ನೋದು ನಿಮ್ಮ ತಪ್ಪು ಕಲ್ಪನೆ. ಏಕೆಂದರೆ ಇನ್ಸುಲಿನ್ ನಿಮ್ಮ ದೇಹವು ಗ್ಲೂಕೋಸ್ ಅನ್ನು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

4. ನಿಮ್ಮ ಪಾದಗಳ ಬಗ್ಗೆ ಜಾಗರೂಕತೆ ವಹಿಸಿ
ಮಧುಮೇಹ ಇರುವ ವ್ಯಕ್ತಿಗಳು ಪಾದದ ಆರೈಕೆಯನ್ನು ನಿರ್ಲಕ್ಷಿಸಬಾರದು. ಗಂಭೀರವಾದ ಪಾದದ ಸೋಂಕನ್ನು ತಪ್ಪಿಸಲು ಹೊರಗೆ ಹೋಗುವಾಗ ಚಪ್ಪಲಿ ಧರಿಸಲೇಬೇಕು. ನಿತ್ಯ ವ್ಯಾಯಾಮ ಮಾಡುವುದು ತುಂಬಾನೇ ಮುಖ್ಯವಾಗುತ್ತದೆ. ನಿಮಗೆ ದಣಿವು ಅಥವಾ ಅನಾರೋಗ್ಯ ಅನಿಸಿದರೂ ವ್ಯಾಯಾಮವನ್ನು ನಿಲ್ಲಿಸಬೇಡಿ. ಯಾಕಂದ್ರೆ ರಕ್ತದೊತ್ತಡ, ಗ್ಲೂಕೋಸ್ ಮಟ್ಟಗಳು ಮತ್ತು ತೂಕವನ್ನು ನಿರ್ವಹಿಸಲು ದೈಹಿಕ ಚಟುವಟಿಕೆಯು ತುಂಬಾನೇ ಮುಖ್ಯವಾಗಿದೆ.

5. ಎಲ್ಲೇ ಹೋದರೂ ಒಂದು ಬಾಟಲ್ ನೀರು ಇಟ್ಟುಕೊಳ್ಳಿ
ಯಾವಾಗಲೂ ನಿಮ್ಮೊಂದಿಗೆ ನೀರಿನ ಬಾಟಲಿಯನ್ನು ಇಟ್ಟುಕೊಳ್ಳೋದನ್ನು ಮರೀಬೇಡಿ. ಅತೀ ಹೆಚ್ಚು ದಣಿವಾದಾಗ ನೀರು ಬೇಕೇ ಬೇಕು. ಬಾಯಿಯನ್ನು ಒಣಗಲು ಬಿಡಲೇಬೇಡಿ. ಇನ್ನೂ ಅತೀ ಹೆಚ್ಚು ಬಿಸಿಲು ಇರೋ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ. ಇನ್ನೂ ಈ ಋತುವಿನಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರ ಬಗ್ಗೆ ಹೆಚ್ಚಿ ಮಾಹಿತಿ ಬೇಕಾದರೆ ವೈದ್ಯರನ್ನು ಸಂಪರ್ಕಿಸಿ.

6. ನಿಯಮಿತವಾಗಿ ಗ್ಲೂಕೋಸ್ ಪರೀಕ್ಷೆ ಮಾಡಿಸಿ
ಮಧುಮೇಹ ರೋಗಿಗಳು ಬೇಸಿಗೆಯಲ್ಲಿ ಗ್ಲೂಕೋಸ್ ಪರೀಕ್ಷೆಯನ್ನು ಮಾಡುವುದು ತುಂಬಾನೇ ಮುಖ್ಯ. ಬೇಸಿಗೆಯಲ್ಲಿ ನಾವು ಸೇವಿಸೋ ಆಹಾರದಿಂದ ಕಾರ್ಬೋಹೈಡ್ರೇಡ್ ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಬೇಸಿಗೆಯಲ್ಲಿ ಅಂತಹ ಆಹಾರವನ್ನು ಸೇವಿಸದಿರುವುದು ಮತ್ತು ದೇಹದಲ್ಲಿ ಅದೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಅಸಾಧ್ಯ. ಹೀಗಾಗಿ ನಿಯಮಿತವಾಗಿ ರಕ್ತದಲ್ಲಿನ ಗ್ಲೂಕೋಸ್ ಪರೀಕ್ಷೆಯನ್ನು ಮಾಡಿಸಿಕೊಳ್ಳಿ.
ಯಾವುದೇ ಸಂದರ್ಭದಲ್ಲೂ ಕೂಡ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಲೇಬಾರದು. ಯಾಕಂದ್ರೆ ಆರೋಗ್ಯವೇ ಭಾಗ್ಯ. ಕೊಂಚ ನಿರ್ಲಕ್ಷಿಸಿದ್ರು ನಮ್ಮ ಪ್ರಾಣಕ್ಕೆ ಆಪತ್ತು.



Click it and Unblock the Notifications
