Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಧ್ಯಾಹ್ನದ ನಿದ್ರೆಗೆ ಇಲ್ಲಿದೆ ಟಿಪ್ಸ್..! ಯಾವ ಸಮಯ? ಎಷ್ಟು ಸಮಯ ಮಲಗಬೇಕು?
ಮಾನವರು ಮಾತ್ರವಲ್ಲ ಪ್ರಾಣಿಗಳಿಗೂ ನಿದ್ರೆ ಎಂಬುದು ಬಹಳ ಮುಖ್ಯವಾದ ಅಂಶವಾಗಿದೆ. ನಿದ್ರೆ ಸರಿಯಾಗಿ ಆಗದಿದ್ದರೆ ಇಡೀ ದಿನ ಹಾಳಾದಂತೆ. ಜೊತೆಗೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಿದ್ರಾಹೀನತೆ ಹಾಗೂ ನಿದ್ರೆಯ ಕೊರತೆಗೂ ಅಜಗಜಾಂತರ ವ್ಯತ್ಯಾಸವಿದೆ.
ಸರಿಯಾಗಿ ನಿದ್ರೆ ಆಗದಿದ್ದರೆ ಅದು ನಿದ್ರಾಹೀನತೆ ಆಗುವುದಿಲ್ಲ ನಿದ್ರಾಹೀನತೆ ಎಂದರೆ ಅದೊಂದು ಕಾಯಿಲೆಗೆ ಸಮನಾಗುತ್ತದೆ. ಆದರೆ ನಿದ್ರೆ ಸರಿಯಾಗಿ ಆಗದಿರುವುದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ. ಇದರಲ್ಲಿ ನಿದ್ರಾಹೀನತೆ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ ನಿದ್ರೆ ಸರಿಯಾಗಿ ಆಗದಿದ್ದರೆ ಪರೋಕ್ಷವಾಗಿ ಇದು ನಮ್ಮ ಜೀವನ ಕ್ರಮಕ್ಕೆ ಸಂಬಂಧ ಹೊಂದಿರುತ್ತದೆ.

(ಫೋಟೋ ಕೃಪೆ-Freepik)
ಇನ್ನು ಹಲವರು ಮಧ್ಯಾಹ್ನ ಊಟವಾದ ಬಳಿಕ ಕೆಲ ಹೊತ್ತು ಮಲಗಿ ನಿದ್ರಿಸುತ್ತಾರೆ. ಅಂದರೆ 15 ನಿಮಿಷ 20 ನಿಮಿಷದಿಂದ ಹಿಡಿದು ಒಂದು ಗಂಟೆಯವರೆಗೂ ನಿದ್ರಿಸುವವರು ಇರಬಹುದು. ಇದು ಕೆಲವರಲ್ಲಿ ನಿತ್ಯದ ಕೆಲಸವಾದರೆ ಮತ್ತೆ ಕೆಲವರು ಆಗಾಗ ಈ ರೀತಿ ಮಧ್ಯಾಹ್ನ ಮಲಗಿ ವಿಶ್ರಾಂತಿ ಪಡೆಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ.
ಆದರೆ ಈ ರೀತಿ ಮಧ್ಯಾಹ್ನ ಮಲಗಿ ನಿದ್ರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ ಆಗಿದ್ದರೂ ಎಲ್ಲರಲ್ಲೂ ಇದು ಉತ್ತಮ ಅಭ್ಯಾಸ ಎನ್ನಲಾಗದು. ಹಾಗಾದ್ರೆ ಮಧ್ಯಾಹ್ನ ಯಾರು ಮಲಗಬಾರದು? ಮಲಗಿದರೂ ಎಷ್ಟು ಸಮಯ ನಿದ್ರೆ ಮಾಡಬೇಕು? ಇದರಿಂದ ಆಗುವ ಅನುಕೂಲ ಹಾಗೂ ಅನಾನುಕೂಲವೇನು ಎಂಬುದನ್ನು ನಾವಿಂದು ತಿಳಿಯುವ ಪ್ರಯತ್ನ ಮಾಡೋಣ.
ಮಧ್ಯಾಹ್ನ ಯಾವ ಸಮಯ ಮಲಗಬೇಕು?
ತಜ್ಞರ ಪ್ರಕಾರ ಮಧ್ಯಾಹ್ನದ ಊಟವನ್ನು 2 ಗಂಟೆಯ ಮೊದಲೇ ಮುಗಿಸಬೇಕಂತೆ. ಅಲ್ಲದೆ ಮಧ್ಯಾಹ್ನ ನೀವು ಮಲಗುವುದಾದರೆ 3 ಗಂಟೆಯ ಒಳಗೆ ಮಲಗಿ 4 ಗಂಟೆ ಒಳಗೆ ಎಚ್ಚರವಾಗಿರಬೇಕು ಎನ್ನುತ್ತಾರೆ ತಜ್ಞರು. ಏಕೆಂದರೆ ತಡವಾಗಿ ಊಟ ಮಾಡಿ ತಡವಾಗಿ ಮಲಗಿ ತಡವಾಗಿ ಏಳುವುದು ರಾತ್ರಿ ನಿದ್ರೆ ಮೇಲೆ ಪರಿಣಾಮ ಬೀರಲಿದೆ. ತಡವಾಗಿ ಮಲಗಿದರೆ ರಾತ್ರಿ ನೀವು ಮಲಗಿದ ಬಳಿಕ ನಿದ್ರೆ ಬಾರದೆ ಇರಬಹುದು. ಹೀಗಾಗಿ ಮಧ್ಯಾಹ್ನದ ಆರಂಭದಲ್ಲೇ ಮಲಗಿ 4 ಗಂಟೆಯ ಒಳಗೆ ಎದ್ದೇಳಬೇಕು. ಈ ನಿದ್ರೆ ಕೇವಲ 15ರಿಂದ 20 ನಿಮಿಷದೊಳಗೆ ಇರಬೇಕು. ಇದಕ್ಕಿಂತ ಹೆಚ್ಚು ಸಮಯ ನಿದ್ರಿಸಬಾರದು ಎನ್ನಲಾಗಿದೆ. ಏಕೆಂದರೆ ಹೆಚ್ಚು ಸಮಯ ನೀವು ನಿದ್ರಿಸಿದಾಗ ಆ ದಿನದಲ್ಲಿ ಮತ್ತೆ ಯಾವ ಕೆಲಸವನ್ನು ಮಾಡಲು ಮನಸ್ಸಿರುವುದಿಲ್ಲ ಜೊತೆಗೆ ರಾತ್ರಿ ಹೆಚ್ಚು ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.
ಎಚ್ಚರವಾದಾಗ ತಕ್ಷಣ ಎದ್ದೇಳಬೇಕು
ಇನ್ನು ಮಧ್ಯಾಹ್ನ ಮಲಗಿ ಕೆಲ ಸಮಯದಲ್ಲೇ ನಿಮಗೆ ಎಚ್ಚರವಾದರೆ ಮತ್ತೆ ಮಲಗಿ ನಿದ್ರಿಸಲು ಯತ್ನಿಸಬಾರದು. ಅದು ಕೇವಲ 5 ನಿಮಿಷದಲ್ಲಿ ಎಚ್ಚರವಾಗಿದ್ದರೂ ಸಹ ನೀವು ಎದ್ದೇಳಬೇಕು. ಏಕೆಂದರೆ ದೇಹಕ್ಕೆ ಎಷ್ಟು ವಿಶ್ರಾಂತಿ ಬೇಕು ಎಷ್ಟು ನಿದ್ರೆ ಬೇಕು ಎಂಬುದನ್ನು ನಿರ್ಧರಿಸಿರುತ್ತದೆ. ಹೀಗಾಗಿ ನೀವು ಒತ್ತಾಯಪೂರ್ವಕವಾಗಿ ನಿದ್ರಿಸಲು ಹೋದಾಗ ಕೆಲವೊಮ್ಮ ನಿದ್ರೆ ಬಾರದೆ ಸಮಯ ಹಾಳಾಗಬಹುದು, ಇಲ್ಲವೆ ಗಾಢ ನಿದ್ರೆಗೆ ಜಾರುವ ಮೂಲಕ ತಡವಾಗಿ ಎಚ್ಚರವಾಗಬಹುದು.
ಮಧ್ಯಾಹ್ನ ಅಥವಾ ರಾತ್ರಿಯೇ ಆಗಲಿ ನಿದ್ದೆ ಮಾಡುವ ಮೊದಲು ಅಲರಾಂ ಇಟ್ಟುಕೊಳ್ಳಬೇಕು. ಯಾಕಂದ್ರೆ ಪ್ರತಿನಿತ್ಯ ನೀವು ಇಂತಿಷ್ಟು ಸಮಯ ಮಾತ್ರ ನಿದ್ದೆ ಮಾಡಬೇಕು. ಆ ಸಮಯವನ್ನೇ ಪ್ರತಿನಿತ್ಯ ನೀವು ಪಾಲನೆ ಮಾಡಬೇಕು. ಹೀಗಾದಾಗ ನಿಮಗೆ ಸಮಯಕ್ಕೆ ಸರಿಯಾಗಿ ನಿದ್ರೆ ಬರಲು ಆರಂಭವಾಗುತ್ತದೆ. ಈ ರೀತಿ ನಿತ್ಯ ಮಾಡಿನೋಡಿ ಅದು ಮಧ್ಯಾಹ್ನವೇ ಆಗಿರಲಿ ಅಥವಾ ರಾತ್ರಿ ಆಗಲಿ ನಿದ್ರೆ ಮಾಡಲು ಸಹ ಸರಿಯಾದ ಸಮಯವನ್ನು ನಿಗಧಿ ಮಾಡಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications